ಹಾರ್ಟ್ ಅಟ್ಯಾಕ್ ಇತ್ತೀಚಿಗೆ ವಯಸ್ಸಿನ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಕಾಡುತ್ತಿರುವ ಆರೋಗ್ಯ ಸಮಸ್ಯೆ.ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ, ಡ್ಯಾನ್ಸ್ ಮಾಡುವಾಗ, ವಾಕಿಂಗ್ ಮಾಡುವಾಗ ಹೀಗೆ ಎಲ್ಲೆಂದರಲ್ಲಿ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಅದರಲ್ಲೂ ವಾಕಿಂಗ್ ಮಾಡುವಾಗ ಹೃದಯಾಘಾತವಾಗಲು ಕಾರಣವೇನು ? ಅಪಾಯವನ್ನು ಮೊದಲೇ ಗುರುತಿಸುವುದು ಹೇಗೆ ತಿಳಿಯೋಣ.
ಹೃದಯವು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ದೇಹದ ಉತ್ತಮ ಕಾರ್ಯನಿರ್ವಹಣೆಗೆ ಹೃದಯವನ್ನು ಆರೋಗ್ಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಕಳಪೆ ಆಹಾರ ಪದ್ಧತಿ, ಜಡ ಜೀವನಶೈಲಿ ಮತ್ತು ಒತ್ತಡದ ಜೀವನವು ಹೃದಯದ ಆರೋಗ್ಯವನ್ನು ಹಾಳುಮಾಡುತ್ತದೆ. ಮಾತ್ರವಲ್ಲ ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್, ಕುಟುಂಬದ ಇತಿಹಾಸದಂತಹ ಅಂಶಗಳು ಹೃದಯದ ಆರೋಗ್ಯವನ್ನು ಹದಗೆಡಿಸಬಹುದು. ಅದರೆ ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಸಾಮಾನ್ಯವಾಗಿದೆ. ಹಿಂದೆಯೆಲ್ಲಾ ವಯಸ್ಸಾದವರಿಗೆ ಹೃದಯಾಘಾತವಾಗುವ ಅಪಾಯ (Danger) ಹೆಚ್ಚಿತ್ತು. ಆದರೆ ಈಗ ಹಾಗಲ್ಲ, 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತವು ಅತ್ಯಂತ ಸಾಮಾನ್ಯವಾಗಿದೆ.
ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ, ಡ್ಯಾನ್ಸ್ ಮಾಡುವಾಗ, ವಾಕಿಂಗ್ ಮಾಡುವಾಗ ಹೀಗೆ ಎಲ್ಲೆಂದರಲ್ಲಿ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಅದರಲ್ಲೂ ವಾಕಿಂಗ್ ಮಾಡುವಾಗ ಹೃದಯಾಘಾತ (Heartattack)ವಾಗಲು ಕಾರಣವೇನು ? ಅಪಾಯವನ್ನು ಮೊದಲೇ ಗುರುತಿಸುವುದು ಹೇಗೆ ತಿಳಿಯೋಣ.
undefined
ಹೃದಯಾಘಾತವು ಹೃದಯ ಸ್ನಾಯುವಿನ ರಕ್ತದ ಹರಿವು ಅನಿರೀಕ್ಷಿತವಾಗಿ ಕಡಿತಗೊಂಡಾಗ ಮತ್ತು ಹೃದಯ ಸ್ನಾಯುಗಳಿಗೆ ಹಾನಿಯನ್ನುಂಟುಮಾಡಿದಾಗ ಸಂಭವಿಸುವ ಗಂಭೀರ ಸ್ಥಿತಿಯಾಗಿದೆ. ಹೀಗಾಗಿಯೇ ಆರೋಗ್ಯವಾಗಿರಬೇಕೆಂದು ಹೆಚ್ಚಿನವರು ಬೆಳಗ್ಗೆದ್ದು ವಾಕ್ ಮಾಡುತ್ತಾರೆ. ಬೆಳಗ್ಗಿನ ವಾಕಿಂಗ್ ಅಥವಾ ರನ್ನಿಂಗ್ ಸಾಮಾನ್ಯವಾಗಿ ಫಿಟ್ ಆಗಿರಲು ಸುಲಭವಾದ ಮಾರ್ಗವೆಂದು ನೋಡಲಾಗುತ್ತದೆ. ಇದು ಆರೋಗ್ಯಕ್ಕೆ (Health) ಉತ್ತಮವಾಗಿದ್ದರೂ, ಮಾರ್ನಿಂಗ್ ವಾಕಿಂಗ್ ಸಂದರ್ಭದಲ್ಲೂ ಕೆಲವೊಬ್ಬರಿಗೆ ಹೃದಯಾಘಾತವಾಗುತ್ತದೆ. ಅದಕ್ಕೇನು ಕಾರಣ.
ಹಾರ್ಟ್ ಅಟ್ಯಾಕ್ ಸೂಚನೆ ಒಂದು ತಿಂಗಳ ಮೊದ್ಲೇ ಸಿಗುತ್ತೆ !
ವಾಕಿಂಗ್ ಹೆಚ್ಚಾಗಿ ಆರೋಗ್ಯಕರ ಮತ್ತು ಸಕ್ರಿಯ ಜೀವನಶೈಲಿಯೊಂದಿಗೆ ಸಂಬಂಧಿಸಿದೆ. ವಾಕಿಂಗ್ ದೇಹಕ್ಕೆ (Body) ರಕ್ತವನ್ನು ಪಂಪ್ ಮಾಡಲು ಉತ್ತಮ ಮಾರ್ಗವಾಗಿದೆ. ಹೀಗಾಗಿಯೇ ಇವತ್ತಿನ ದಿನಗಳಲ್ಲಿ ಹೆಚ್ಚಿನವರು ವಾಕಿಂಗ್ ಅಥವಾ ರನ್ನಿಂಗ್ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ವಾಕ್ ಆರೋಗ್ಯಕ್ಕೆ ಒಳ್ಳೆಯದಾಗಿದ್ದರೂ ಕೆಲವೊಬ್ಬರಿಗೆ ವಾಕಿಂಗ್ ಸಮಯದಲ್ಲೇ ಹೃದಯಾಘಾತ ಆಗೋದಿದೆ. ಇದಕ್ಕೇನು ಕಾರಣ, ಹೃದಯಾಘಾತದ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಹೇಗೆ ? ನವದೆಹಲಿಯ ವಸಂತ್ ಕುಂಜ್‌ನ ಲೆಫ್ಟಿನೆಂಟ್ ರಾಜನ್ ಧಾಲ್ ಆಸ್ಪತ್ರೆಯ ಕಾರ್ಡಿಯಾಲಜಿ ನಿರ್ದೇಶಕ ಡಾ.ತಪನ್ ಘೋಸ್ ಈ ಬಗ್ಗೆ ಮಾಹಿತಿ ನೀಡುತ್ತಾರೆ.
ವಾಕಿಂಗ್ ಮಾಡುವವರು ನಿರ್ಲಕ್ಷಿಸಬಾರದ ಹೃದಯಾಘಾತದ ಕೆಲವು ಚಿಹ್ನೆಗಳು
ಯಾವುದೇ ಎದೆನೋವು, ಅತಿಯಾದ ಉಸಿರಾಟದ ತೊಂದರೆ ಮತ್ತು ನಿಯಮಿತ ವ್ಯಾಯಾಮಕ್ಕೆ ಅಸಮಂಜಸವಾದ ಬೆವರುವುದು ಮೊದಲ ಹೃದಯಾಘಾತದ ಲಕ್ಷಣಗಳಾಗಿರಬಹುದು ಎಂದು ಡಾ ಘೋಸ್ ಎಚ್ಚರಿಸಿದ್ದಾರೆ. ವಿಪರೀತ ಹೃದಯ ಬಡಿತ, ತಲೆತಿರುಗುವಿಕೆ, ಹಗುರವಾದ ಭಾವನೆ, ಎದೆಯ ಮಧ್ಯ ಭಾಗದಲ್ಲಿ ಸ್ನಾಯುಗಳಲ್ಲಿ ಅಸ್ವಸ್ಥತೆ ಉಂಟಾಗುತ್ತದೆ. ಇದು ಬೆವರುವಿಕೆಯೊಂದಿಗೆ ಎಡ ಅಥವಾ ಬಲಗೈ ನೋವು ಆಗಿರಬಹುದು. ಆರೋಗ್ಯದಲ್ಲಿ ಈ ರೀತಿಯ ತೊಂದರೆ ಕಂಡು ಬಂದಾಗ ತಕ್ಷಣ ಎಚ್ಚೆತ್ತುಕೊಳ್ಳಬೇಕು. ವೈದ್ಯರ ನೆರವು ಪಡೆಯಬೇಕು.
ಈ ಬ್ಲಡ್ ಗ್ರೂಪ್ ಜನರ ಹಾರ್ಟ್ ತುಂಬಾ ವೀಕ್, ಹುಷಾರಾಗಿರಿ
ಹೃದಯಾಘಾತದ ಕೆಲವು ಸಾಮಾನ್ಯ ಲಕ್ಷಣಗಳು ಆಯಾಸ, ಉಸಿರಾಟದ ತೊಂದರೆ, ದವಡೆ, ಕುತ್ತಿಗೆ ಅಥವಾ ಮೇಲಿನ ಬೆನ್ನು ನೋವು, ಎದೆಯ ಕೆಳಭಾಗದಲ್ಲಿ ಒತ್ತಡ ಕಂಡುಬರುವುದಾಗಿದೆ. ಆದರೆ ಬಹುತೇಕರನ್ನು ಇದನ್ನು ವಾಕ್ ಮಾಡಿದರ ಪರಿಣಾಮ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಜಡ ಜೀವನಶೈಲಿಯನ್ನು ಹೊಂದಿರುವ ಮಹಿಳೆಯರಲ್ಲಿ ಈ ಲಕ್ಷಣಗಳು ಕಂಡುಬಂದಾಗ ಎಚ್ಚರಿಕೆ ವಹಿಸುವುದು ಒಳ್ಳೆಯದು. ಬೆವರುವುದು ಮತ್ತು ಉಸಿರಾಟದ ತೊಂದರೆಯು ಹೃದಯಾಘಾತದ ಕೆಲವು ಲಕ್ಷಣಗಳಾಗಿವೆ. ತರಬೇತಿ ಪಡೆದ ಮಹಿಳೆಯರು ಸೇರಿದಂತೆ ಹೆಚ್ಚಿನ ಜನರಲ್ಲಿ ವ್ಯಾಯಾಮವು ಆರಂಭದಲ್ಲಿ ಬಡಿತ, ಬೆವರುವಿಕೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಈ ರೋಗಲಕ್ಷಣಗಳು ಹೆಚ್ಚು ಅಥವಾ ಅಸಮವಾದ ಅಥವಾ ಕಡಿಮೆ ಮಟ್ಟದ ವ್ಯಾಯಾಮದಲ್ಲಿ ಸಂಭವಿಸಿದಾಗ ಹೃದಯಾಘಾತದ ಸೂಚನೆಯೂ ಆಗಿರಬಹುದು.
ಹೃದಯಾಘಾತ ತಡೆಯಲು ಏನು ಮಾಡಬಹುದು ?
• ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನ ಬಗ್ಗೆ ಗಮನಹರಿಸಿ
• ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ
• ಹೃದಯ-ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡಿ
• ಧೂಮಪಾನ ಮಾಡುತ್ತಿದ್ದರೆ ಬಿಟ್ಟುಬಿಡಿ
ಎಲ್ಲಾ ದುಶ್ಚಟಗಳನ್ನು ಬಿಟ್ಟು ಕಾಲ ಕಾಲಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ನಡೆಸಿದಾಗ ಮಾತ್ರ ದಿಢೀರ್ ಹೃದಯಾಘಾತದಿಂದ ದೂರವಿರಬಹುದು.