ನಮ್ಮ ದೇಹಾರೋಗ್ಯಕ್ಕೆ ಕ್ಯಾಲ್ಸಿಯಂ ಅಗತ್ಯ. ಹಾಲು ಮತ್ತು ಹಾಲಿನ ಉತ್ಪನ್ನಗಳು ಕ್ಯಾಲ್ಸಿಯಂ ಹೊಂದಿರುತ್ತವೆಯಾದರೂ, ಇವುಗಳಿಗಿಂತ ಇನ್ನೂ ಹಲವು ಆಹಾರ ಪದಾರ್ಥಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿರುತ್ತದೆ.
ಕ್ಯಾಲ್ಸಿಯಂ ಕೊರತೆಯಿಂದ ದೇಹದಲ್ಲಿ ಸಾಕಷ್ಟು ಸಮಸ್ಯೆಗಳಾಗುವುದು ಗೊತ್ತೇ ಇದೆ. ಮುಖ್ಯವಾಗಿ, ಮೂಳೆಗಳು ದುರ್ಬಲವಾಗುತ್ತ ಸಾಗುತ್ತವೆ. ಈ ಸಮಸ್ಯೆ ವಯಸ್ಸಾಗುತ್ತಿದ್ದಂತೆ ಹೆಚ್ಚಾಗುವುದು ಕಂಡುಬರುತ್ತದೆ. ಹೀಗಾಗಿ, ದೈನಂದಿನ ಆಹಾರದಲ್ಲಿ ಕ್ಯಾಲ್ಸಿಯಂ ಅಂಶವುಳ್ಳ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕಾಗುತ್ತದೆ. ಹಾಲು, ಬೆಣ್ಣೆ, ಮೊಸರು, ತುಪ್ಪಗಳಂತಹ ಡೈರಿ ಉತ್ಪನ್ನಗಳನ್ನು ಅತ್ಯುತ್ತಮ ಕ್ಯಾಲ್ಸಿಯಂ ಅಂಶವುಳ್ಳ ಆಹಾರ ಪದಾರ್ಥಗಳೆಂದು ಹೇಳಲಾಗುತ್ತದೆ. ಅದು ನಿಜವೂ ಹೌದು. ಆದರೆ, ಇವುಗಳಿಗಿಂತ ಇನ್ನೂ ಹಲವು ಆಹಾರ ಪದಾರ್ಥಗಳಿವೆ, ಇವುಗಳಲ್ಲಿ ಡೈರಿ ಉತ್ಪನ್ನಗಳಿಗಿಂತ ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುತ್ತದೆ. ಅವುಗಳನ್ನು ದಿನವೂ ಬಳಕೆ ಮಾಡುವ ಮೂಲಕ ಕ್ಯಾಲ್ಸಿಯಂ ಕೊರತೆಯನ್ನು ನಿಭಾಯಿಸಬಹುದು. ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಎಷ್ಟು ಅತ್ಯಗತ್ಯವೆಂದರೆ, ಈ ಅಂಶ ನಮ್ಮ ಹೃದಯ ಬಡಿತ ಹಾಗೂ ಮಾಂಸಖಂಡಗಳ ಸಂಕುಚನವನ್ನು ಸಹ ನಿಯಂತ್ರಿಸುತ್ತದೆ. ಹೀಗಾಗಿ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಾದರೆ ಹೈಪೋಕ್ಯಾಲ್ಸಿಮಿಯಾದಂತಹ ಹಲವು ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ಇದರ ಪ್ರಮುಖ ಲಕ್ಷಣವೆಂದರೆ, ಗೊಂದಲವಾಗುವುದು, ಮಾಂಸಖಂಡಗಳಲ್ಲಿ ನೋವು, ಮೂಳೆಗಳ ದೌರ್ಬಲ್ಯ ಇತ್ಯಾದಿ ಕಂಡುಬರುತ್ತವೆ. ಇಂಥ ಸಮಸ್ಯೆ ಉಂಟಾಗದಿರಲು ಡೈರಿ ಉತ್ಪನ್ನಗಳೊಂದಿಗೆ ಇತರ ಕೆಲವು ಪದಾರ್ಥಗಳನ್ನು ಸಹ ದಿನವೂ ಸೇವನೆ ಮಾಡುವುದು ಉತ್ತಮ.
• ಸೋಯಾ ಮಿಲ್ಕ್ (Soya Milk)
ಕೆಲವರಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ (Diary Products)) ಬಳಕೆ ಮಾಡುವುದರಿಂದ ವಿವಿಧ ರೀತಿಯ ಅಲರ್ಜಿ (Allergy) ಉಂಟಾಗಬಹುದು. ಅದರ ಬದಲಿಗೆ ಸೋಯಾ ಹಾಲಿನ್ನು ಬಳಕೆ ಮಾಡಬಹುದು. ಸೋಯಾ ಹಾಲಿನಲ್ಲಿ ಸಾಕಷ್ಟು ಉತ್ತಮ ಪ್ರಮಾಣದಲ್ಲಿ ಕ್ಯಾಲ್ಸಿಯಂ (Calcium) ಅಂಶವಿರುತ್ತದೆ. ಹಾಗೆಯೇ ಬಾದಾಮಿ ಹಾಲನ್ನು ಸಹ ಸೇವಿಸಬಹುದು.
ಹೆಲ್ದೀ ಆರ್ಗಿಬೇಕು ಅಂದ್ರೆ ಊಟ ಆದ ತಕ್ಷಣ ಸ್ನಾನ ಮಾಡ್ಲೇಬೇಡಿ
• ಹಸಿರು ಸೊಪ್ಪು (Green Leafy Vegetabbles)
ಪಾಲಕ್ (Palak) ಸೇರಿದಂತೆ ಹಲವು ರೀತಿಯ ಹಸಿರು ಸೊಪ್ಪುಗಳಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುತ್ತದೆ. ಅಲ್ಲದೆ, ಈ ಹಸಿರು ತರಕಾರಿಗಳು ಕ್ಯಾಲ್ಸಿಯಂ ಅಂಶವನ್ನು ಸರಿಯಾಗಿ ಹೀರಿಕೊಳ್ಳಲು (Absorb) ನೆರವಾಗುತ್ತವೆ. ಮೂಳೆಗಳು (Bones) ಮತ್ತು ದಂತದ ಆರೋಗ್ಯಕ್ಕೆ ಇವು ಅತ್ಯುತ್ತಮವಾಗಿ ನೆರವಾಗುತ್ತವೆ. ಇವುಗಳಲ್ಲಿ ವಿಟಮಿನ್ ಎ (Vitamins), ವಿಟಮಿನ್ ಕೆ, ವಿಟಮಿನ್ ಇ, ವಿಟಮಿನ್ ಸಿ, ಬೀಟಾ ಕೆರೊಟಿನ್, ಫೋಲೇಟ್ (Folate), ವಿಟಮಿನ್ ಬಿ1, ಬಿ2, ಬಿ3, ಬಿ5, ಹಾಗೂ ಬಿ6 ಅಂಶಗಳಿರುತ್ತವೆ. ಹೀಗಾಗಿ, ಹಸಿರು ಸೊಪ್ಪುಗಳನ್ನು ದಿನವೂ ಬಳಕೆ ಮಾಡುವುದರಿಂದ ಎಲ್ಲ ರೀತಿಯಿಂದಲೂ ಆರೋಗ್ಯಕ್ಕೆ (Health) ಅನುಕೂಲವಾಗುತ್ತದೆ.
• ಬೀನ್ಸ್ (Beans) ಹಾಗೂ ಬೇಳೆ
ಡೈರಿ ಉತ್ಪನ್ನಗಳನ್ನು ಹೊರತಾಗಿ ಬಳಕೆ ಮಾಡಬಹುದಾದ ಮತ್ತೊಂದು ಅತ್ಯುತ್ತಮ ಕ್ಯಾಲ್ಸಿಯಂ ಮೂಲವೆಂದರೆ, ಬೀನ್ಸ್ ಹಾಗೂ ಬೇಳೆಗಳು (Pulses). ಇವುಗಳಲ್ಲಿ ಕ್ಯಾಲ್ಸಿಯಂ ಅಂಶದೊಂದಿಗೆ ಪ್ರೊಟೀನ್ (Protein) ಹಾಗೂ ನಾರಿನಂಶವೂ (Fibre) ಗರಿಷ್ಠ ಮಟ್ಟದಲ್ಲಿ ಲಭಿಸುತ್ತದೆ. ಇವು ನಮ್ಮ ಜೀರ್ಣಾಂಗ (Digestion) ವ್ಯವಸ್ಥೆಗೂ ಅನುಕೂಲ. ಹೀಗಾಗಿ, ನಮ್ಮ ಎನರ್ಜಿ (Energy) ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿವೆ.
ಗರ್ಭಿಣಿಯರು ಈ ಅಭ್ಯಾಸ ಬಿಟ್ಬಿಡಿ, ಇಲ್ಲಾಂದ್ರೆ ಮಗುವಿಗೆ ಬೆಳವಣಿಗೆ ಕುಂಠಿತವಾಗುತ್ತೆ
• ಟೋಫು (Tofu)
ಟೋಫುವಿನಲ್ಲಿ ಸಹ ಕ್ಯಾಲ್ಸಿಯಂ ಉತ್ತಮ ಮಟ್ಟದಲ್ಲಿ ಇರುತ್ತದೆ. 100 ಗ್ರಾಮ್ ಟೋಫುವಿನಲ್ಲಿ 176 ಮಿಲಿಗ್ರಾಮ್ ಕ್ಯಾಲ್ಸಿಯಂ ಲಭಿಸುತ್ತದೆ. ಇದನ್ನು ಸೋಯಾಬೀನ್ ನಿಂದ ಸಿದ್ಧಪಡಿಸಲಾಗುತ್ತದೆ. ಹೀಗಾಗಿ, ಇದನ್ನು ವೇಗಾನ್ ಡಯೆಟ್ (Vegan Diet) ಅನುಸರಿಸುವವರೂ ಸೇವನೆ ಮಾಡಬಹುದು. ನಾರಿನಂಶ, ವಿಟಮಿನ್ಸ್ ಗಳು ಹಾಗೂ ಮಿನರಲ್ (Minerals) ಗಳನ್ನು ಸಹ ಇದು ಹೊಂದಿದ್ದು, ಪ್ರೊಟೀನ್ ಅಂಶವೂ ಇರುತ್ತದೆ.
• ಬೀಜಗಳು (Nuts)
ವಿವಿಧ ರೀತಿಯ ಬೀಜಗಳನ್ನು ಆರೋಗ್ಯಕ್ಕೆ ಅತ್ಯಂತ ಉಪಯುಕ್ತ ಎಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಬಾದಾಮಿಯಲ್ಲಿ (Almond) ಕ್ಯಾಲ್ಸಿಯಂ ಪ್ರಮಾಣ ಹೆಚ್ಚು. ನಾರಿನಂಶ, ಆರೋಗ್ಯಕರ ಕೊಬ್ಬು, ಪ್ರೊಟೀನ್ ಕೂಡ ಇರುವುದರಿಂದ ಮಧುಮೇಹಿಗಳಿಗೂ ಇದು ಉತ್ತಮ.