ನಿದ್ರೆ ಬಾರದೇ ರಾತ್ರಿ ಒದ್ದಾಡುತ್ತೀರಾ? ಮಂತ್ರ ಪಠಿಸಿ

By Suvarna NewsFirst Published Feb 10, 2023, 6:15 PM IST
Highlights

ಈಗಿನ ದಿನಗಳಲ್ಲಿ ನಿದ್ರೆ ಮಾಡೋದು ಕೂಡ ಒಂದು ಸವಾಲಿನ ಕೆಲಸವಾಗಿದೆ. ಅನೇಕರು ನಿದ್ರೆಯಿಲ್ಲದ ಅನೇಕ ರಾತ್ರಿಗಳನ್ನು ಕಳೆಯುತ್ತಾರೆ. ಇದು ಅವರ ಆರೋಗ್ಯವನ್ನು ಹಾಳು ಮಾಡುತ್ತದೆ. ನಿದ್ರೆ ಸರಿಯಾಗ್ಬೇಕೆಂದ್ರೆ ಹೀಗೂ ಮಾಡ್ಬಹುದು.
 

ನಿದ್ರೆ ಮನುಷ್ಯನ ದೇಹಕ್ಕೆ ಅತ್ಯಗತ್ಯ. ಒಬ್ಬ ವ್ಯಕ್ತಿ ಆರೋಗ್ಯವಂತನಾಗಿರಬೇಕೆಂದರೆ ಆತ 7-8 ಗಂಟೆಯಾದರೂ ನಿದ್ರೆ ಮಾಡಲೇಬೇಕು. ಅನಿದ್ರೆಯ ಕಾರಣದಿಂದಲೇ ಎಷ್ಟೋ ಖಾಯಿಲೆಗಳು ಬರುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಎಂತಹ ದಣಿವು, ಸುಸ್ತುಗಳೇ ಇದ್ದರೂ ನಿದ್ದೆ ಚೆನ್ನಾಗಿ ಬಂತೆಂದರೆ ಆಯಾಸಗಳೆಲ್ಲ ದೂರವಾಗುತ್ತದೆ. ಮೈಯಲ್ಲಿ ಹುಷಾರಿಲ್ಲ ಎಂದಾಗಲೂ ಕೂಡ ಔಷಧಿ, ಮಾತ್ರೆಗಳನ್ನು ಸೇವಿಸಿ ಚೆನ್ನಾಗಿ ನಿದ್ದೆ ಮಾಡಿದರೆ ಬೇಗ ಚೇತರಿಸಿಕೊಳ್ಳಬಹುದು. ಒಂದು ಒಳ್ಳೆಯ ನಿದ್ದೆ ಮರುದಿನದ ನಮ್ಮ ದಿನಚರಿ ಸಲೀಸಾಗಿ ನಡೆಯುವಂತೆ ಮಾಡುತ್ತದೆ. 

ಮಲಗಿದಾಕ್ಷಣ ಎಲ್ಲರಿಗೂ ನಿದ್ದೆ (Sleep) ಬರುವುದಿಲ್ಲ. ಕೆಲವರು ಮಲಗಿ ಗಂಟೆಗಟ್ಟಲೇ ಆದರೂ ನಿದ್ದೆ ಬರದೇ ಒದ್ದಾಡುತ್ತಾರೆ. ವಯಸ್ಸಾದವರಿಗಂತೂ ನಿದ್ದೆ ಬಹಳ ಕಡಿಮೆ. ಇನ್ನೂ ಕೆಲವರಿಗೆ ಮಲಗಿದಾಕ್ಷಣ ಕೆಟ್ಟ ವಿಚಾರಗಳು, ಚಿಂತೆಗಳು ತಲೆಯಲ್ಲಿ ತುಂಬಿಕೊಳ್ಳುತ್ತದೆ. ಅದರಿಂದಾಗಿ ಅವರು ನೆಮ್ಮದಿಯ ನಿದ್ದೆ ಮಾಡುವುದಿಲ್ಲ. ಇತ್ತೀಚೆಗೆ ಹಲವರು ಕೆಲಸ (Work ) ದ ಒತ್ತಡದಿಂದ ಸರಿಯಾಗಿ ನಿದ್ರಿಸುವುದಿಲ್ಲ. ಇಂತಹ ನಿದ್ರೆಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಹಾಯವಾಗುವಂತ ಕೆಲವು ಉಪಾಯಗಳಿವೆ. ಅವುಗಳನ್ನು ನೀವು ರಾತ್ರಿ ಹಾಸಿಗೆಯಲ್ಲಿ ಅನುಸರಿಸಿದ್ರೆ ನಿದ್ರೆ ತಾನಾಗಿಯೇ ಬರುತ್ತದೆ.

Latest Videos

ಧ್ಯಾನ (Meditation) ಮತ್ತು ನಿದ್ರೆಯ ನಡುವೆ ಹೀಗೊಂದು ಕನೆಕ್ಷನ್ :  ವಜ್ರಾಸನದಲ್ಲಿ ಕುಳಿತುಕೊಳ್ಳಿ. ನಂತ್ರ ನಿಮ್ಮ ಕೈಗಳನ್ನು ಮೊಣಕಾಲಿನ ಮೇಲೆ ಇರಿಸಿ ಧ್ಯಾನ ಮಾಡಿ. ಧ್ಯಾನದ ಈ ಪ್ರಕ್ರಿಯೆಯಿಂದ ಮನಸ್ಸು ಅನಗತ್ಯ ಯೋಚನೆಯಿಂದ ದೂರವಾಗಿ ಶಾಂತಗೊಳ್ಳುತ್ತದೆ. ರಾತ್ರಿ ಮಲಗುವ ಮುನ್ನ ಕೂಡ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನ ಮಾಡಿದರೆ ಚೆನ್ನಾಗಿ ನಿದ್ರೆ ಮಾಡಬಹುದು.

HUG DAY : ತಬ್ಬಿ ಕೊಳ್ಳಲೂ ದಿನವೊಂದಿದೆ, ದಿನಾ ತಬ್ಬಿಕೊಂಡ್ರೆ ಲಾಭ ಅಪಾರ!

ಉಸಿರಾಟ (Breathing) ದ ಕಡೆ ನಿಮ್ಮ ಗಮನವಿರಲಿ : ರಾತ್ರಿ ಹಾಸಿಗೆಯ ಮೇಲೆ ಮಲಗಿದಾಕ್ಷಣ ಕೆಟ್ಟ ವಿಚಾರಗಳು ತಲೆಯಲ್ಲಿ ಬಿರುಗಾಳಿ ಎಬ್ಬಿಸುತ್ತವೆ. ಅದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಅಂತಹ ಸಮಯದಲ್ಲಿ ನೀವು ನೇರವಾಗಿ ಮಲಗಿ ನಿಮ್ಮ ಉಸಿರಾಟದ ಮೇಲೆ ಗಮನಹರಿಸಬೇಕು. ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ ಉಸಿರಾಟದ ಕಡೆ ಗಮನಕೊಟ್ಟು ದೀರ್ಘವಾದ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಉಸಿರನ್ನು ಬಿಡಬೇಕು. ಮನಸ್ಸು ಉಸಿರಾಟದ ಕಡೆ ಕೇಂದ್ರೀಕೃತವಾದಾಗ ಯಾವ ವಿಚಾರಗಳೂ ತಲೆಗೆ ಹೋಗುವುದಿಲ್ಲ. ಆಗ ನಿದ್ದೆ ಕೂಡ ಚೆನ್ನಾಗಿ ಬರುತ್ತದೆ.

ಮಂತ್ರ (Mantra) ಪಠನೆ ಮಾಡಿ : ಮಂತ್ರ, ಭಜನೆಗಳನ್ನು ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಮಲಗುವ ಮುನ್ನ ನೀವು ಯಾವುದಾದರೂ ಒಂದು ಮಂತ್ರವನ್ನು ಜಪಿಸಬೇಕು. ಆರಂಭದ ಹಂತದಲ್ಲಿ ಮನಸ್ಸು ಮಂತ್ರದ ಮೇಲೆ ಕೇಂದ್ರಿತವಾಗದಿದ್ದರೂ ನಂತರದಲ್ಲಿ ಅಭ್ಯಾಸವಾಗುತ್ತದೆ. ಹೀಗೆ ಮನಸ್ಸು ಒಂದೇ ಕಡೆ ನಿಲ್ಲುವುದರಿಂದ ಮೆದುಳು ವಿಶ್ರಾಂತಿ ಪಡೆದು ಬಹಳ ಬೇಗ ನಿದ್ದೆ ಬರುತ್ತೆ.

ಶವಾಸನ ಮಾಡಿ :ಶವಾಸನ ಮಾಡುವುದರಿಂದಲೂ ಕೂಡ ಮನಸ್ಸಿಗೆ ಶಾಂತಿ ಸಿಗುತ್ತದೆ. ಶವಾಸನ ಮಾಡುವಾಗ ನೀವು ನೇರವಾಗಿ ಮಲಗಬೇಕು. ಮಲಗುವಾಗ ನಿಮ್ಮ ಕಾಲುಗಳ ಮಧ್ಯೆ ಒಂದು ಅಡಿಯಷ್ಟಾದರೂ ಅಂತರವಿರಬೇಕು. ನಿಮ್ಮ ಕೈಗಳು ಕೂಡ ಶರೀರದಿಂದ ದೂರವಿರಬೇಕು. ಈ ಸ್ಥಿತಿಯಲ್ಲಿ ಮಲಗಿ ನಿಮ್ಮ ಗಮನವನ್ನು ಸಂಪೂರ್ಣವಾಗಿ ಉಸಿರಾಟದ ಕಡೆ ಇಡಬೇಕು. ಹೀಗೆ ಮಾಡಿದ ಸ್ವಲ್ಪ ಸಮಯದಲ್ಲೇ ನಿಮಗೆ ನಿದ್ರೆ ಬರುತ್ತದೆ.

ತೂಕ ಇಳಿಸೋದು ಮಾತ್ರ ಅಲ್ಲ ಟೆನ್ಶನ್ ಕೂಡ ದೂರ ಮಾಡುತ್ತೆ ರೋಸ್ ಟೀ

ಮಿತವಾದ ಆಹಾರ ಸೇವನೆ : ನೀವು ಸೇವಿಸುವ ಆಹಾರದ ಮೇಲೂ ನಿಮ್ಮ ನಿದ್ದೆ ಅವಲಂಬಿತವಾಗಿದೆ. ರಾತ್ರಿಯ ಸಮಯದಲ್ಲಿ ಹಗುರವಾದ ಆಹಾರವನ್ನು ಸೇವಸಬೇಕು. ರಾತ್ರಿ ಎಂಟು ಗಂಟೆಯ ಒಳಗೇ ಊಟ ಮಾಡುವುದು ಶರೀರಕ್ಕೆ ಬಹಳ ಒಳ್ಳೆಯದು. ರಾತ್ರಿ ಊಟ  ಮಿತವಾಗಿಯೇ ಇರಬೇಕು. ಊಟ ಮಾಡಿದ ಕೆಲವು ಗಂಟೆಗಳ ನಂತರ ಬಿಸಿಯಾದ ನೀರನಿಂದ ಸ್ನಾನ ಮಾಡಿದರೂ ಕೂಡ ಚೆನ್ನಾಗಿ ನಿದ್ದೆ ಬರುತ್ತೆ.
 

click me!