ಒಂದು ಐವತ್ತು – ಆರವತ್ತು ವರ್ಷ ಯಾವುದೇ ರೋಗ ಇಲ್ಲದೆ ಆರೋಗ್ಯವಾಗಿದ್ರೆ ಸಾಕು ಅಂತಾ ಭಾರತೀಯರು ಬೇಡಿಕೊಳ್ತಾರೆ. ಆದ್ರೆ ಜಪಾನಿನ ಈ ಪ್ರದೇಶದಲ್ಲಿ ಜನರು ಆರಾಮವಾಗಿ ಸೆಂಚುರಿ ಬಾರಿಸ್ತಾರೆ. ಅದಕ್ಕೆ ಕಾರಣ ಏನು ಗೊತ್ತಾ?
ಅರೆ ವಯಸ್ಸಿನಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ವಯಸ್ಸು 50 ದಾಟುವ ಮೊದಲೇ ಅನೇಕರು ಇಹಲೋಕ ತ್ಯಜಿಸ್ತಿದ್ದಾರೆ. ಆದ್ರೆ ಜಪಾನ್‌ನ ಓಕಿನಾವಾನ್ ದ್ವೀಪ ಇದಕ್ಕೆ ಭಿನ್ನವಾಗಿದೆ. ಇಲ್ಲಿ 100 ವರ್ಷಕ್ಕಿಂತ ಮೇಲ್ಪಟ್ಟ ಜನರ ಸಂಖ್ಯೆ ಹೆಚ್ಚಿದೆ. ನೂರು ವರ್ಷ ದಾಟಿದ ಜನರು ಕೂಡ ಹಾಸಿಗೆ ಹಿಡಿದಿಲ್ಲ. ಗಟ್ಟಿಮುಟ್ಟಾಗಿದ್ದು ತಮ್ಮ ಕೆಲಸ ತಾವೇ ಮಾಡಿಕೊಳ್ತಾರೆ.
ನಮ್ಮ ದೇಶದಲ್ಲಿ ನೂರು ವರ್ಷ ಮೀರಿದವರ ಸಂಖ್ಯೆ ಬಹಳ ಕಡಿಮೆ ಇದೆ. ಆದ್ರೆ ಓಕಿನಾವಾ (Okinawa) ದಲ್ಲಿ ನೂರು ವರ್ಷ ಮೀರಿದೆ ಜನರ ಸಂಖ್ಯೆ 400 ಕ್ಕೂ ಹೆಚ್ಚಿದೆ. ಇದೇ ಕಾರಣಕ್ಕೆ ಓಕಿನಾವಾ ಅನ್ನು ವಿಶ್ವದ ಅತ್ಯಂತ ಆರೋಗ್ಯ (Health) ಕರ ಸ್ಥಳವೆಂದು ಪರಿಗಣಿಸಲಾಗುತ್ತದೆ.
ಓಕಿನಾವಾ ಮಹಿಳೆಯ ಸರಾಸರಿ ಜೀವಿತಾವಧಿ 86 ವರ್ಷವಾದ್ರೆ ಪುರುಷರ ಜೀವಿತಾವಧಿ 78 ವರ್ಷವಾಗಿದೆ. ಓಕಿನಾವಾ ಜನರು ಆಹಾರದ ಜೊತೆ ದೈಹಿಕ ವ್ಯಾಯಾಮಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಅಲ್ಲಿನ ಜನರು ಒಂದೇ ಕಡೆ ನೆಲೆ ನಿಲ್ಲೋದಿಲ್ಲ ಎನ್ನುವುದು ಇನ್ನೊಂದು ವಿಶೇಷ.
ದಕ್ಷಿಣ ಕೊರಿಯಾ ಜನ ನಾಯಿ ಮಾಂಸ ತಿನ್ನೋದೇಕೆ?
ಓಕಿನಾವಾ ಜನರ ಆಹಾರವೇನು? : ಓಕಿನಾವಾನಲ್ಲಿ ನೂರು ವರ್ಷ ಮೀರಿದ ನಾಲ್ಕು ನೂರಕ್ಕೂ ಹೆಚ್ಚು ಮಂದಿ ಇರಲು ಕಾರಣ ಅವರ ಆಹಾರ. ಅವರು ಅಕ್ಕಿಯನ್ನು ಸೇವನೆ ಮಾಡ್ತಾರೆ. ಜೊತೆಗೆ ಮೀನು ಮತ್ತು ತರಕಾರಿ ಆಧಾರಿತ ಆಹಾರವನ್ನು ತೆಗೆದುಕೊಳ್ತಾರೆ. ಅವರ ಜನಪ್ರಿಯ ಭಕ್ಷ್ಯಗಳಲ್ಲಿ ಒಂದಾದ ಮಿಮಿಗಾವನ್ನು ಅವರು ಹೆಚ್ಚು ಸೇವನೆ ಮಾಡ್ತಾರೆ. ಮಿಮಿಗಾವವನ್ನು ಹಂದಿ ಕಿವಿಗಳಿಂದ ತಯಾರಿಸಲಾಗುತ್ತದೆ. ಇದು ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಕ್ಯಾಲ್ಸಿಯಂ ಹೊಂದಿರುತ್ತದೆ.
ಅಷ್ಟೇ ಅಲ್ಲ ಇಲ್ಲಿನ ಜನರು ಸೋಯಾ ಹಾಲಿನಿಂದ ತಯಾರಿಸಿದ ತೋಫವನ್ನು ತಿನ್ನುತ್ತಾರೆ. ಹಾಗಲಕಾಯಿ, ಸಿಹಿ ಆಲೂಗಡ್ಡೆ ಇವರ ಮೆಚ್ಚಿನ ಆಹಾರ. ಈ ಆಹಾರ ಅತ್ಯಂತ ಪೌಷ್ಟಿಕವಾಗಿದೆ. ಓಕಿನಾವಾನಲ್ಲಿರುವ ಹಿರಿಯರ ಮೇಲೆ ಸಮೀಕ್ಷೆ, ಸಂಶೋಧನೆ ನಡೆದಿದೆ. ಅವರ ದೀರ್ಘಾಯಸ್ಸಿಗೆ ಆನುವಂಶಿಕತೆ ಒಂದು ಕಾರಣ ಎಂಬುದು ಪತ್ತೆಯಾಗಿದೆ. ಅಲ್ಲದೆ ಅಲ್ಲಿನವರ ಜೀವನಶೈಲಿ. ವಯಸ್ಸಾದವರು ಕೂಡ ಶಿಸ್ತುಬದ್ಧ ಜೀವನಶೈಲಿ ರೂಢಿಸಿಕೊಂಡು ಬಂದಿದ್ದಾರೆ. ಬೆಳಿಗ್ಗೆ ಎದ್ದ ತಕ್ಷಣ ಬಹುತೇಕ ವೃದ್ಧರು ಒಂದಲ್ಲ ಒಂದು ದೈಹಿಕ ವ್ಯಾಯಾಮದಲ್ಲಿ ನಿರತರಾಗ್ತಾರೆ. ಕರಾಟೆಯನ್ನು ಬಹುತೇಕ ಜನರು ಪ್ರಾಕ್ಟೀಸ್ ಮಾಡ್ತಾರೆ. ಅಲ್ಲದೆ ತಮ್ಮ ಸಂಬಂಧಿಕರು, ಸ್ನೇಹಿತರ ಜೊತೆ ಬೆರೆಯುತ್ತಾರೆ. ಮಾತುಕತೆ ಹಾಗೂ ಬೆರೆಯುವ ಸ್ವಭಾವ ಅವರನ್ನು ಆರೋಗ್ಯವಾಗಿಟ್ಟಿರುತ್ತದೆ. ಅವರು ನಿಸರ್ಗಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಜೊತೆಗೆ ಸದಾ ಸಂತೋಷದಿಂದಿರಲು ಬಯಸ್ತಾರೆ. ಅವರ ಕೆಲಸವನ್ನು ಪ್ರೀತಿಸ್ತಾರೆ. ಇದೆಲ್ಲವೂ ಅವರ ದೀರ್ಘಾಯಸ್ಸಿಗೆ ಕಾರಣ ಎನ್ನಲಾಗಿದೆ.
ರಸ್ತೆಯೇ ಇಲ್ಲದ ಊರಿದು, ಓಡಾಡಬೇಕು ಅಂದ್ರೆ ದೋಣಿಯೇ ನಿಮಗಿರೋ ಆಯ್ಕೆ!
ಓಕಿನಾವಾ ಜನರು ಕಡಿಮೆ ಕೊಲೆಸ್ಟ್ರಾಲ್ ಮತ್ತು ಕಡಿಮೆ ಹೋಮೋಸಿಸ್ಟೈನ್ ಮಟ್ಟವನ್ನು ಹೊಂದಿದ್ದಾರೆ. ಇದ್ರಿಂದಾಗಿ ಅವರಿಗೆ ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಕಾಡುವುದು ಬಹಳ ಅಪರೂಪ. ಅಲ್ಲದೆ ಇಲ್ಲಿನ ಜನರಿಗೆ ಸ್ತನ, ಪ್ರಾಸ್ಟೇಟ್, ಅಂಡಾಶಯ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ಹಾರ್ಮೋನ್-ಅವಲಂಬಿತ ಕ್ಯಾನ್ಸರ್ ಕೂಡ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ.
ಓಕಿನಾವಾ ನಲ್ಲಿ ವಾಸಿಸುವ ನೂರು ವರ್ಷ ಮೇಲ್ಪಟ್ಟ ಮಹಿಳೆಯೊಬ್ಬಳು ಮನೆ ಕೆಲಸವನ್ನೆಲ್ಲ ಮಾಡ್ತಾಳೆ ಅಂದ್ರೆ ನೀವು ನಂಬೋದು ಕಷ್ಟವಾಗ್ಬಹುದು. ಇಷ್ಟೇ ಅಲ್ಲ ಮನೆಯಲ್ಲಿಯೇ ಒಂದು ಮಷನ್ ಇಟ್ಕೊಂಡು ವ್ಯಾಯಾಮ ಮಾಡೋದಾಗಿ ಆಕೆ ಹೇಳಿದ್ದಾಳೆ. ಓಕಿನಾವಾ ಜಪಾನಿನ ಬೇರೆ ನಗರಗಳಿಗಿಂತ ಭಿನ್ನವಾಗಿದೆ. ಇಲ್ಲಿ ಪರಿಸರ ಮಾಲಿನ್ಯ ಕೂಡ ತುಂಬಾ ಕಡಿಮೆ. ಇಲ್ಲಿನ ವಾತಾವರಣ ಹಾಗೂ ಸಮುದ್ರ ಕಿನಾರೆ ತುಂಬಾ ಸುಂದರವಾಗಿದ್ದು, ಇಲ್ಲಿನ ಜನರು ಹೆಚ್ಚು ಮಾತನಾಡ್ತಾರೆ.