ಕನ್ನಡೀಲಿ ಕಾಣಿಸೋದಕ್ಕಿಂತಲೂ ನಾನು ಚೆಂದವಾಗಿದ್ದೇನೆಂದು ಕೊಳ್ತಾರಂತೆ ಮಂದಿ!

By Suvarna News  |  First Published Nov 20, 2023, 3:43 PM IST

ನಮ್ಮ ಬಗ್ಗೆ ನಮಗೆ ಪ್ರೀತಿ ಇರುವುದು ಸಹಜ. ಹೆಮ್ಮೆಯೂ ಇರುತ್ತದೆ. ಅಷ್ಟೇ ಅಲ್ಲ, ನಾವು ಇರುವುದಕ್ಕಿಂತ ತುಸು ಹೆಚ್ಚಾಗಿಯೇ ಚೆನ್ನಾಗಿದ್ದೇವೆಂದು ಭಾವಿಸುತ್ತೇವೆ. ಇದು ಒಬ್ಬಿಬ್ಬರ ಭಾವನೆಯಲ್ಲ, ಸಾಮಾನ್ಯವಾಗಿ ಎಲ್ಲರೂ ತಮ್ಮ ಬಗ್ಗೆ ಹೀಗೆಯೇ ಅಂದುಕೊಳ್ಳುತ್ತಾರೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.
 


ಕನ್ನಡಿಯಲ್ಲಿ ಮುಖ ನೋಡಿಕೊಂಡಾಗ ನಿಮಗೆ ಏನನ್ನಿಸುತ್ತೆ? ಕನ್ನಡಿಯಲ್ಲಿ ಯಾಕೋ ಡಲ್ ಆಗಿ ಕಾಣಿಸ್ತಾ ಇದೀನಿ, ಯಾಕೋ ಸ್ವಲ್ಪ ಬಣ್ಣ ಪೇಲವವಾದಂತೆ ಕಾಣಿಸ್ತಿದೆ ಎಂದೆನಿಸುತ್ತಾ? ಬೆಳಕಿನಲ್ಲಿ ನೋಡಿದಾಗ ಒಂದು ರೀತಿ, ಮಂದ ಬೆಳಕಿನಲ್ಲಿ ನೋಡಿದಾಗ ಮತ್ತೊಂದು ರೀತಿಯಲ್ಲಿ ಮುಖವನ್ನು ನೋಡಿಕೊಂಡಿದ್ದೀರಾ? ಯಾವುದರಲ್ಲಿ ಚೆನ್ನಾಗಿರುವಂತೆ ಭಾಸವಾಗುತ್ತೆ? ಕನ್ನಡಿಯಲ್ಲಿ ಕಾಣಿಸ್ತಾ ಇರೋದಕ್ಕಿಂತ ಇನ್ನಷ್ಟು ಆಕರ್ಷಕವಾಗಿ ಇದ್ದೇನೆ ಎನ್ನುವ ಭಾವನೆ ಬರುತ್ತಾ? ಇರಿ, ಇದು ನಿಮ್ಮೊಬ್ಬರಿಗೇ ಅಲ್ಲ, ಜಗತ್ತಿನ ಬಹಳಷ್ಟು ಜನರಲ್ಲಿ ಇದೇ ಭಾವನೆಯಿದೆ. ಕನ್ನಡಿಯಲ್ಲಿ ಕಾಣಿಸುವುದಕ್ಕಿಂತ ನಾವು ಆಕರ್ಷಕವಾಗಿ, ಚೆಂದವಾಗಿದ್ದೀವಿ ಎನ್ನುವ ಒಂದು ಬೆಚ್ಚಗಿನ ಭಾವನೆ ಎಲ್ಲರ ಎದೆಯಲ್ಲೂ ಇದ್ದೇ ಇರುತ್ತದೆಯಂತೆ. ಬಾರ್ಸಿಲೋನಾ ವಿಶ್ವವಿದ್ಯಾಲಯದ ಸಂಶೋಧಕರ ಅಧ್ಯಯನದ ಪ್ರಕಾರ, ಜನರಿಗೆ ತಮ್ಮ ಚಿತ್ರಣದ ಬಗ್ಗೆ ಸ್ಪಷ್ಟತೆ, ನಿಖರತೆ ಇರುವುದಿಲ್ಲ. ನಿಜವಾಗಿ ನಾವು ಹೇಗಿದ್ದೇವೆಯೋ ಅದಕ್ಕಿಂತ ಹೆಚ್ಚು ಚೆನ್ನಾಗಿ ನಮ್ಮನ್ನು ನಾವು ಕಂಡಿರುತ್ತೇವೆ. ಹೀಗಾಗಿ, ಕನ್ನಡಿಯ ಚಿತ್ರಣ ಸ್ವಲ್ಪ ಡಲ್ ಆಗಿ ನಮಗೆ ಕಂಡುಬರುತ್ತದೆ! ನಾವಿರುವುದೇ ಹಾಗೆ ಎನ್ನುವುದನ್ನು ಮನಸ್ಸು ಒಪ್ಪಿಕೊಳ್ಳುವುದಿಲ್ಲ. 
ಬಾರ್ಸಿಲೋನಾ ವಿಶ್ವವಿದ್ಯಾಲಯ (Barcelona University) ಈ ಬಗ್ಗೆ ಒಂದು ಕುತೂಹಲಕಾರಿ ಅಧ್ಯಯನ ಮಾಡಿದೆ. ಅದರ ಪ್ರಕಾರ, ಪ್ರತಿಯೊಬ್ಬರೂ ತಾವು ಹೇಗಿರುತ್ತೇವೆಯೋ ಅದಕ್ಕಿಂತ ಹೆಚ್ಚು ಸುಂದರವಾಗಿ (Beautiful) ತಮ್ಮ ಕುರಿತು ಕಲ್ಪನೆ ಇಟ್ಟುಕೊಂಡಿರುತ್ತಾರೆ. ತಮ್ಮನ್ನು ತಾವು ನೋಡುವುದಕ್ಕಿಂತ ಹೆಚ್ಚಾಗಿ ಮೂರನೇ ವ್ಯಕ್ತಿಯಾಗಿ ನೋಡಿಕೊಂಡಾಗ ಈ ಭಾವನೆ (Feelings) ಹೆಚ್ಚು ಪ್ರಖರವಾಗಿರುತ್ತದೆ!

ಡಿವೋರ್ಸ್ ತೆಗೆದುಕೊಳ್ಳೋ ಮುಂಚೆ ಸಾವಿರ ಸಲ ಯೋಚಿಸಿದರೆ ಸಾಲಲ್ಲ, ಈ ಕೆಲ್ಸಾನೂ ಮಾಡ್ಬೇಕು!

Latest Videos

undefined

ಅಧ್ಯಯನದಲ್ಲಿ (Study) ಪಾಲ್ಗೊಂಡ ಅಭ್ಯರ್ಥಿಗಳಿಗೆ ಕೆಲವು ಪ್ರಶ್ನೆಗಳನ್ನು ನೀಡಲಾಗಿತ್ತು. ಅದರಲ್ಲಿ ಆಹಾರ ಸೇವನೆ ಸಮಸ್ಯೆಯಿಂದ ಹಿಡಿದು ದೇಹದ ಆಕಾರದ (Body Shape) ದೃಷ್ಟಿಕೋನದವರೆಗೆ ಹಲವು ಪ್ರಶ್ನೆಗಳಿದ್ದವು. ಜತೆಗೆ, ಸಂಶೋಧಕರು ಮೂರು ವರ್ಚ್ಯುವಲ್ (Virtual) ಬಾಡಿ ಶೇಪ್ ಸೃಷ್ಟಿಸಿದ್ದರು. ಪ್ರತಿ ಅಭ್ಯರ್ಥಿಯೂ ಇದನ್ನು ವರ್ಚ್ಯುವಲ್ ರಿಯಾಲಿಟಿಯ ಮೂಲಕ ಬಳಕೆ ಮಾಡಿ ನೋಡಬೇಕಾಗಿತ್ತು. ಒಂದು ಚಿತ್ರ ಅವರ ದೇಹದ್ದು, ಎರಡನೆಯ ಚಿತ್ರ ಆದರ್ಶವಾದ (Ideal) ದೇಹದ ಚಿತ್ರ (ಪ್ರತಿಯೊಬ್ಬರೂ ಹೇಗಿರಬೇಕು ಎಂದು ಅಂದುಕೊಂಡಿರುತ್ತೇವೋ ಅಂಥದ್ದು), ಮೂರನೆಯ ಚಿತ್ರ ದೇಹದ ಅಸಲಿ (Original) ಅಳತೆಯನ್ನು ಹೊಂದಿರುವ ಚಿತ್ರ. ಈ ಚಿತ್ರಗಳನ್ನು ಅವರು ಎರಡು ಮಾದರಿಯಲ್ಲಿ ನೋಡಬೇಕಾಗಿತ್ತು. ತಾವು ತಾವಾಗಿ ಆ ಚಿತ್ರವನ್ನು ನೋಡುವ ಜತೆಗೆ, ಮೂರನೇ ವ್ಯಕ್ತಿ (Third Person) ಯಾಗಿ (ಬಾಹ್ಯ ಜಗತ್ತಿನಲ್ಲಿ ಬೇರೆಯವರು ನಮ್ಮನ್ನು ಹೇಗೆ ನೋಡುತ್ತಾರೆ ಎನ್ನುವ ಚಿತ್ರಣ) ನೋಡಬೇಕಿತ್ತು. ಈ ದೇಹದ ಆಕರ್ಷಣೆಗೆ (Attractive) ಸಂಬಂಧಿಸಿ ಅಭ್ಯರ್ಥಿಗಳು ರೇಟ್ ನೀಡಬೇಕಿತ್ತು. 

ಮಹಿಳೆಯರೇ (Women) ಭಿನ್ನ
ಹಲವು ಅಭ್ಯರ್ಥಿಗಳು ಇತರರ ದೃಷ್ಟಿಕೋನಕ್ಕಿಂತ ತಮ್ಮದೇ ದೃಷ್ಟಿಕೋನದಲ್ಲಿ ತಮ್ಮ ದೇಹವನ್ನು ಋಣಾತ್ಮಕವಾಗಿ ರೇಟ್ (Rate) ಮಾಡಿದ್ದರು. ಮಹಿಳಾ ಅಭ್ಯರ್ಥಿಗಳ ಅಭಿಪ್ರಾಯ ಇದಕ್ಕೆ ಭಿನ್ನವಾಗಿತ್ತು. ಅವರು ತಮ್ಮ ದೃಷ್ಟಿಕೋನಕ್ಕಿಂತ ಇತರರ ದೃಷ್ಟಿಕೋನದಲ್ಲಿ ತಾವು ಹೆಚ್ಚು ಆಕರ್ಷಕವಾಗಿದ್ದೇವೆ ಎನ್ನುವಂತೆ ರೇಟ್ ನೀಡಿದ್ದರು! ಆದರೆ, ಇಲ್ಲಿ ಗುರುತಿಸಲಾದ ಒಂದು ಸಮಾನ ಅಂಶವೆಂದರೆ, ಯಾರಿಗೂ ತಮ್ಮ ದೇಹದ ಬಗ್ಗೆ ನಿಖರತೆ (Perfect) ಇರಲಿಲ್ಲ ಎನ್ನುವುದು.

ಈ ಮಸಾಲೆ ಪದಾರ್ಥದ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿದ್ರೆ… ರೋಗ ದೂರವಾಗುತ್ತೆ!

ನಾನು ಚೆನ್ನಾಗಿಲ್ಲ
ಸಂಶೋಧಕರ ಪ್ರಕಾರ, ಜನರಿಗೆ ತಮ್ಮ ಆಕರ್ಷಣೆಯ ಬಗ್ಗೆ ಸತ್ಯಕ್ಕೆ (Truth) ದೂರವಾದ ದೃಷ್ಟಿಕೋನವಿರುತ್ತದೆ. ಅಂದರೆ, ಕೆಲವರು ಚೆನ್ನಾಗಿದ್ದರೂ ಚೆನ್ನಾಗಿಲ್ಲ ಎಂದು ಭಾವಿಸುವುದು, ಆಕರ್ಷಣೆ ಇಲ್ಲದಿದ್ದರೂ ಭಾರೀ ಚೆನ್ನಾಗಿದ್ದೇನೆ ಎಂದು ಭಾವಿಸುವುದು ಇದೇ ಕಾರಣಕ್ಕೆ. ಈ ಭ್ರಮೆಗೆ ಹಲವು ಅಂಶಗಳನ್ನು ಗುರುತಿಸಲಾಗಿದೆ. ಆತ್ಮವಿಶ್ವಾಸ (Self Esteem) ಇಲ್ಲದಿರುವುದು, ದೇಹದ ಚಿತ್ರಣದ ಬಗ್ಗೆ ಹೆಮ್ಮೆ ಇಲ್ಲದಿರುವುದು ಅಥವಾ ಅತಿಯಾದ ಹೆಮ್ಮೆ, ಸಾಮಾಜಿಕ ಕಾರಣಗಳಿಂದಾಗಿ ಪ್ರತಿಯೊಬ್ಬರಿಗೂ ತಮ್ಮ ದೇಹದ ಬಗ್ಗೆ ಏನೇನೋ ಕಲ್ಪನೆಗಳು ಮೂಡುತ್ತವೆ.  ಜನರು ತಮ್ಮ ಕೆಟ್ಟ ಗ್ರಹಿಕೆಯನ್ನು ತಮ್ಮದೇ ದೇಹದ ಮೂರು ಆಯಾಮದ ಚಿತ್ರಣ ಅರ್ಥಾತ್ ವರ್ಚ್ಯುವಲ್ ರಿಯಾಲಿಟಿಯ ಮೂಲಕ ನಿವಾರಿಸಿಕೊಳ್ಳಲು ಸಾಧ್ಯ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.

 

click me!