ತಲೆನೋವು ಎಲ್ಲರಲ್ಲೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಆದ್ರೆ ಎಲ್ಲರಲ್ಲೂ ಕಾಣಿಸಿಕೊಳ್ಳುವ ತಲೆನೋವು ಒಂದೇ ಅಲ್ಲ. ತಲೆನೋವಿನಲ್ಲೂ ಹಲವು ವಿಧಗಳಿವೆ. ಆದ್ದರಿಂದ, ತಲೆನೋವನ್ನು ಲಘುವಾಗಿ ತೆಗೆದುಕೊಳ್ಳಬಾರದು ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಮುಖ್ಯ.
ಆಧುನಿಕ ಜೀವನವು ಹೆಚ್ಚು ಒತ್ತಡದಿಂದ ಕೂಡಿದೆ. ಪ್ರತಿಯೊಬ್ಬರೂ ಹಲವು ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿಯೇ ಎಲ್ಲಾ ರೀತಿಯ ಒತ್ತಡಗಳನ್ನು ನಿಭಾಯಿಸಬೇಕಾಗುತ್ತದೆ. ಇದು ಸಾಮಾನ್ಯವಾಗಿ ತಲೆನೋವಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಯಸ್ಕ ಜನಸಂಖ್ಯೆಯ ಸುಮಾರು 50 ಪ್ರತಿಶತದಷ್ಟು ಜನರು ವರ್ಷಕ್ಕೊಮ್ಮೆಯಾದರೂ ವಿಪರೀತ ತಲೆನೋವು ಅನುಭವಿಸುತ್ತಾರೆ. ಆದರೆ ತಲೆನೋವಿನಲ್ಲಿ ಹಲವು ವಿಧಗಳಿಗೆ. ಹಾಗಾಗಿಯೇ ಇದು ವ್ಯಕ್ತಿಯಿಂದ ವ್ಯಕ್ತಿಗೆ (Person) ವಿಭಿನ್ನವಾಗಿರುತ್ತದೆ. ಹಾಗಿದ್ರೆ ವಿವಿಧ ರೀತಿಯ ತಲೆನೋವುಗಳು ಯಾವುವು ? ಆ ಪ್ರಕಾರಕ್ಕೆ ಅನುಗುಣವಾಗಿ ಹೇಗೆ ಚಿಕಿತ್ಸೆ (Treatment) ನೀಡಬೇಕು ಎಂಬುದನ್ನು ತಿಳಿಯೋಣ
ವಿವಿಧ ರೀತಿಯ ತಲೆನೋವು ಮತ್ತು ಅವುಗಳಿಗೆ ಚಿಕಿತ್ಸೆ ಪಡೆಯುವ ವಿಧಾನಗಳು
1. ಹಣೆಯಲ್ಲಿ ನೋವು: ಹಣೆಯ ಪ್ರದೇಶದಲ್ಲಿ ನೋವು ಕಾಣಿಸಿಕೊಂಡರೆ ಇದು ನಿದ್ರೆಯ (Sleep) ಕೊರತೆಯ ಸಂಕೇತವಾಗಿದೆ. ಈ ರೀತಿಯ ತಲೆನೋವಿನಲ್ಲಿ, ನೀವು ಹಣೆಯಲ್ಲಿ ಇರಿದ ನೋವನ್ನುಅನುಭವಿಸುತ್ತೀರಿ. ಈ ರೀತಿಯ ತಲೆನೋವು (Headache) ಕಾಣಿಸಿಕೊಂಡಾಗ ನೀವು ಸ್ಪಲ್ಪ ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಬೇಕು. ಹೀಗೆ ನಿದ್ದೆ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ. ಈ ರೀತಿಯ ತಲೆನೋವು ಬಾರದಿರಲು ದಿನಕ್ಕೆ ಕನಿಷ್ಠ 6-8 ಗಂಟೆಗಳ ನಿದ್ದೆ ಮಾಡಬೇಕಾದುದು ಅಗತ್ಯವಾಗಿದೆ.
ತಲೆಸ್ನಾನ ಆದ ಕೂಡ್ಲೇ ಸಿಕ್ಕಾಪಟ್ಟೆ ತಲೆನೋವಾ ? ಕಾರಣವೇನು ತಿಳ್ಕೊಳ್ಳಿ
2. ತಲೆಯ ಮೇಲ್ಭಾಗ ನೋವು: ನೀವು ತಲೆಯ ಮೇಲ್ಭಾಗದಲ್ಲಿ ನೋವನ್ನು ಅನುಭವಿಸುತ್ತಿದ್ದರೆ, ಇದು ನಿಮ್ಮ ದೇಹದಲ್ಲಿ ಆಹಾರದ (Food) ಕೊರತೆ ಅಥವಾ ನಿರ್ಜಲೀಕರಣದಿಂದ ಉಂಟಾಗಿರುವ ಸಮಸ್ಯೆಯಾಗಿದೆ. ನಿಮಗೆ ಈ ರೀತಿಯ ಸಮಸ್ಯೆ ಕಂಡುಬಂದರೆ ಹೊಟ್ಟೆ ತುಂಬಾ ತಿನ್ನಿರಿ ಮತ್ತು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರನ್ನು (Water) ಕುಡಿಯಿರಿ.
3. ತಲೆಯ ಹಿಂಭಾಗ ನೋವು: ಕೆಲವೊಮ್ಮೆ ತಲೆಯ ಹಿಂಭಾಗದಲ್ಲಿ ಅಂದರೆ ನಿಮ್ಮ ಕುತ್ತಿಗೆಯ ಮೇಲಿನ ಪ್ರದೇಶದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನೀವು ಹೀಗೆ ನೋವನ್ನು ಅನುಭವಿಸುತ್ತಿದ್ದರೆ, ಅದು ನೀವು ಹೆಚ್ಚು ಒತ್ತಡ (Pressure)ವನ್ನು ತೆಗೆದುಕೊಳ್ಳುತ್ತಿರುವ ಸಂಕೇತವಾಗಿದೆ. ಹೀಗಾದಾಗ ಹೆಚ್ಚು ಒತ್ತಡವನ್ನುಂಟು ಮಾಡುವ ಕೆಲಸ ಮಾಡುವುದನ್ನು ಬಿಟ್ಟುಬಿಡಿ. ಬದಲಿಗೆ ಧ್ಯಾನ ಮಾಡುವುದು, ಆಳವಾದ ಉಸಿರಾಟದ ವ್ಯಾಯಾಮ (Exercise)ಗಳನ್ನು ಅಭ್ಯಾಸ ಮಾಡುವುದು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.
4. ಮೂಗು ಮತ್ತು ಕಣ್ಣುಗಳ ಸುತ್ತಲೂ ನೋವು: ನಿಮ್ಮ ಹುಬ್ಬುಗಳ ನಡುವೆ, ನಿಮ್ಮ ಮೂಗು ಮತ್ತು ಕಣ್ಣುಗಳ ಸುತ್ತಲೂ ನೋವು ಕೆಲವು ಅಲರ್ಜಿ ಅಥವಾ ಸೈನಸ್‌ನ ಪರಿಣಾಮವಾಗಿದೆ. ಇದನ್ನು ಸೈನಸ್ ತಲೆನೋವು ಎಂದು ಕರೆಯಲಾಗುತ್ತದೆ. ಅದನ್ನು ನಿಭಾಯಿಸಲು ನೀವು ಔಷಧಿಗಳನ್ನು ತೆಗೆದುಕೊಳ್ಳಬಹುದು, ಕೆಲವು ವ್ಯಾಯಾಮ ಮಾಡಿ ಅಥವಾ ಬೆಚ್ಚಗಿನ ಶವರ್ ತೆಗೆದುಕೊಳ್ಳಬಹುದು.
ಕೋವಿಡ್ ಸೋಂಕಿನ ನಂತ್ರ ಹೆಚ್ತಿದೆ ಸರ್ವಿಕೋಜೆನಿಕ್ ತಲೆನೋವು, ನಿಮ್ಮನ್ನೂ ಕಾಡ್ತಿದ್ಯಾ ?.
5. ವಿಪರೀತ ತಲೆನೋವು: ಹಣೆಯ ಸುತ್ತ ಬಿಗಿಯಾದ ಬ್ಯಾಂಡ್ ಹಾಕಿದಂತೆ ತಲೆ ನೋಯುತ್ತಿದ್ದರೆ ನೀವು ಮೊಬೈಲ್, ಕಂಪ್ಯೂಟರ್ ಮೊದಲಾದವುಗಳನ್ನು ಹೆಚ್ಚು ಬಳಸುತ್ತಿದ್ದೀರಿ ಎಂದರ್ಥ. ಈ ರೀತಿಯ ತಲೆನೋವಿಗೆ ಚಿಕಿತ್ಸೆ ನೀಡಲು, ನಿಮ್ಮ ಪರದೆಯ ಸಮಯವನ್ನು ನೀವು ಕಡಿಮೆ ಮಾಡಬೇಕಾಗುತ್ತದೆ. ನೀವು ಪರದೆಯಿಂದ ವಿರಾಮಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬಹುದು ಅಥವಾ ನೀವು ಬ್ಲೂ ರೇ ಬ್ಲಾಕರ್ ಗ್ಲಾಸ್‌ಗಳನ್ನು ಬಳಸಬಹುದು. ಬಿಸಿ ಶವರ್ ತೆಗೆದುಕೊಳ್ಳುವುದು ಸಹ ಸಹಾಯ ಮಾಡುತ್ತದೆ.
6. ಕಣ್ಣಿನ ಸುತ್ತ ನೋವು: ಕಣ್ಣಿನ ಸುತ್ತಲೂ ನೀವು ಅಸಹನೀಯ ನೋವನ್ನು ಅನುಭವಿಸುತ್ತಿದ್ದರೆ, ನಿಮಗೆ ಕ್ಲಸ್ಟರ್ ತಲೆನೋವು ಇದೆ ಎಂದು ಅರ್ಥ ಮಾಡಿಕೊಳ್ಳಬಹುದು. ಕಣ್ಣಿನಲ್ಲಿ ಕೆಲವು ಕೆಂಪು ಬಣ್ಣವನ್ನು ನೀವು ಗಮನಿಸಬಹುದು. ಈ ರೀತಿಯ ತಲೆನೋವಿದ್ದಾಗ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.