ಮಕ್ಕಳು ಚಳಿಯಿಂದ ನಡುಗೋದು ಬೇಡ, ಹೀಗೆ ಡ್ರೆಸ್ ಮಾಡಿ, ಬೆಚ್ಚಗಿರುವಂತೆ ಮಾಡಿ

By Suvarna NewsFirst Published Nov 15, 2022, 12:51 PM IST
Highlights

ಚಳಿಗಾಲ ಶುರುವಾಗಿದೆ. ತಣ್ಣಗಿನ ವಾತಾವರಣಕ್ಕೆ ಎಲ್ಲರೂ ಗಡಗಡ ನಡುಗುತ್ತಿದ್ದಾರೆ. ಹೀಗಿರುವಾಗ ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನಹರಿಸಬೇಕು. ಮೈ ನಡುಗಿಸೋ ಚಳಿಯಲ್ಲಿ ಮಕ್ಕಳ ಆರೋಗ್ಯದ ಕಾಳಜಿ ವಹಿಸೋದು ಹೇಗೆ ?

ಚಳಿಗಾಲದ (Winter) ಶೀತ ಹವಾಮಾನ ಎಲ್ಲರನ್ನೂ ಕಂಗೆಡಿಸಿದೆ. ಹೀಗಾಗಿ ಪುಟ್ಟ ಮಕ್ಕಳ ಆರೋಗ್ಯವನ್ನು (Childrens health) ಜೋಪಾನವಾಗಿ ನೋಡಿಕೊಳ್ಳಬೇಕಿದೆ. ನಿಮ್ಮ ಮಗುವಿಗೆ ಹೊಸ ಜಾಕೆಟ್‌ಗಳು ಮತ್ತು ವಾರ್ಮರ್‌ಗಳನ್ನು ಖರೀದಿಸುವ ಸಮಯ ಬಂದಿದೆ. ಚಳಿಗಾಲದಲ್ಲಿ ನಿಮ್ಮ ಮಗುವಿಗೆ ಡ್ರೆಸ್ಸಿಂಗ್ ಮಾಡುವುದು ಒಂದು ಟ್ರಿಕಿ ಕೆಲಸವಾಗಿದೆ. ವಿಶೇಷವಾಗಿ ಮಕ್ಕಳಿಗೆ ಶೀತ (Cold) ಅಥವಾ ಬಿಸಿಯ ಅನುಭವವನ್ನು ಹೇಳಲು ಗೊತ್ತಾಗುವುದಿಲ್ಲ. ಹೀಗಾಗಿ ಮಕ್ಕಳ ದೇಹ (Body) ಬೆಚ್ಚಗಾಗುವಂತೆ ಉತ್ತಮವಾದ, ಬೆಚ್ಚಗಾಗಿಸುವ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. 

ಮಕ್ಕಳಿಗೆ ಬೆಚ್ಚಗಿನ ಬಟ್ಟೆಗಳನ್ನು ತೊಡಿಸಿ: ಮಕ್ಕಳ ಚರ್ಮ ತುಂಬಾ ಸೆನ್ಸಿಟಿವ್ ಆಗಿರುವುದರಿಂದ ಬೇಗ ಚಳಿಯಾಗುತ್ತದೆ. ಹೀಗಾಗಿ ಅವರಿಗೆ ಯಾವಾಗಲೂ ಬೆಚ್ಚಗಿನ ಬಟ್ಟೆಗಳನ್ನು ತೊಡಿಸಿ. ಬಟ್ಟೆಗಳನ್ನು (Dress) ಲೇಯರ್ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಇದು ಸುಲಭವಾಗಿ ಚಳಿಯನ್ನು ತಡೆಯುತ್ತದೆ. ಚಳಿ ಹೆಚ್ಚಾದಾಗ, ಕಡಿಮೆಯಾದಾಗ ಅಗತ್ಯವಿರುವಂತೆ ನೀವು ಸುಲಭವಾಗಿ ಹೆಚ್ಚಿನದನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು.

ಚಳಿಗಾದಲ್ಲಿ ಬೆಚ್ಚಗಿರಬೇಕು ನಿಜ. ಹಾಗಂಥ ಇವೆಲ್ಲಾ ಮಾಡಬೇಡಿ ಜೋಪಾನ

ನಿಮ್ಮ ಮಗುವಿಗೆ ನಿಖರವಾಗಿ ಎಷ್ಟು ಲೇಯರ್‌ ಬಟ್ಟೆಗಳು ಬೇಕು ಎಂದು ನಿರ್ಧರಿಸಿಕೊಳ್ಳಿ. ಶಿಶುಗಳಿಗೆ, ನೀವು ತೆಳುವಾದ ಒಂದು ಬಟ್ಟೆಯಿಂದ ಪ್ರಾರಂಭಿಸಬಹುದು. ನಂತರ ಉದ್ದ ತೋಳಿನ ಅಂಗಿ ಮತ್ತು ಪ್ಯಾಂಟ್ ಸೇರಿಸಿಕೊಳ್ಳಬಹುದು. ಜೊತೆಗೆ ಸ್ವೆಟರ್ ಅಥವಾ ಸ್ವೆಟ್‌ಶರ್ಟ್‌ ಸೇರಿಸಬಹುದು. ಮನೆ (Home)ಯಿಂದ ಹೊರಹೋಗುವಾಗ ಕೋಟ್ ಅಥವಾ ಪಫರ್ ಜಾಕೆಟ್ ಹಾಕುವುದನ್ನು ಮರೆಯಬೇಡಿ.

ಸಾಕ್ಸ್ ಮತ್ತು ಕೈವಗಸುಗಳು: ಕೇವಲ ಮೈಗೆ ಧರಿಸುವ ಬಟ್ಟೆಗಳ ಬಗ್ಗೆ ಮಾತ್ರ ಗಮನಹರಿಸಿದರೆ ಸಾಲದು ಕೈ, ಕಾಲುಗಳು ಬೆಚ್ಚಗಿರುವಂತೆಯೂ ನೋಡಿಕೊಳ್ಳಿ. ಸಾಕ್ಸ್, ಅಥವಾ ಕೈಗವಸುಗಳು, ಉಣ್ಣೆಯ ಟೋಪಿಗಳು, ಬೂಟುಗಳು ಮತ್ತು ಸ್ಕಾರ್ಫ್ ಧರಿಸಲು ಮರೆಯಬೇಡಿ. ಬೆಚ್ಚಗಿನ ಟೋಪಿಗಳು ಬಹಳ ಮುಖ್ಯವಾದವು. ಏಕೆಂದರೆ ತಲೆ (Head) ಅಥವಾ ಕಿವಿ (Ear)ಗಳನ್ನು ತೆರೆದಿಡುವುದರಿಂದ ಹೆಚ್ಚು ಶೀತದ ಅನುಭವವಾಗುತ್ತದೆ. ಆದರೆ ಕೈ, ಕಾಲುಗಳಿಗೆ ಸಾಕ್ಸ್ ಮತ್ತು ಕೈವಗಸುಗಳನ್ನು ಧರಿಸುವುದರಿಂದ ಚಳಿಯ ಅನುಭವ ಸಾಕಷ್ಟು ಮಟ್ಟಿಗೆ ಕಡಿಮೆಯಾಗುತ್ತದೆ.

Winter Diet: ಚಳಿಗಾಲದಲ್ಲಿ ನಿಮ್ಮ ದಿನದ ಡಯಟ್‌‌ಗೆ ಸೇರಿಸಬೇಕಾದ ತರಕಾರಿಗಳಿವು

ಪ್ರಯಾಣದ ಸಂದರ್ಭದಲ್ಲಿ ಹೀಗೆ ಮಾಡಿ: ಬಟ್ಟೆಯ ಹೊರತಾಗಿ, ಹೊರಗೆ ಹೋಗುವಾಗ, ಕಾರಿನಲ್ಲಿ ಈ ಹಂತಗಳನ್ನು ಅನುಸರಿಸುವುದರಿಂದ ಪ್ರಯಾಣವು ಹೆಚ್ಚು ಆರಾಮದಾಯಕ ಮತ್ತು ಬೆಚ್ಚಗಿರುತ್ತದೆ. ಮಗುವನ್ನು ಕರೆದೊಯ್ಯುವ ಕೆಲವು ನಿಮಿಷಗಳ ಮೊದಲು ಹೀಟರ್ ಅನ್ನು ಆನ್ ಮಾಡಿ. ಇದರಿಂದ ಕಾರು ಹೆಚ್ಚು ಬೆಚ್ಚಗಿರುತ್ತದೆ. ಹೆಚ್ಚುವರಿ ಉಷ್ಣತೆಗಾಗಿ ನೀವು ಮೃದುವಾದ (Soft) ಕಂಬಳಿಯನ್ನು ಒಯ್ಯುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ಮಗು ಧರಿಸಿರುವ ಯಾವುದಾದರೂ ಬಟ್ಟೆ ಒದ್ದೆಯಾದರೆ ಬಳಸಲು ಹೆಚ್ಚುವರಿ ಬಟ್ಟೆಗಳು, ಟೋಪಿಗಳು, ಕೈಗವಸುಗಳು ಮತ್ತು ಸಾಕ್ಸ್‌ಗಳನ್ನು ಒಯ್ಯಿರಿ.

ಮಕ್ಕಳ ದೇಹ ಹೆಚ್ಚು ಬಿಸಿಯಾಗುವಂತೆ ಮಾಡಬೇಡಿ: ಮಗುವನ್ನು ಬೆಚ್ಚಗಿಡುವ ಪ್ರಯತ್ನದಲ್ಲಿ, ನೀವು ಅವರ ದೇಹ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಬೇಕು. ಉದಾಹರಣೆಗೆ, ಕಾರ್ ಸೀಟಿನಲ್ಲಿ ಕುಳಿತಾಗ, ನೀವು ಅವರ ಮೇಲಿನ ಹೆಚ್ಚುವರಿ ಬಟ್ಟೆಯನ್ನು ಹೊರತೆಗೆಯಬಹುದು, ಕೋಟ್ ಅಥವಾ ಪಫರ್ ಜಾಕೆಟ್ ತೆಗೆದು ಮೃದುವಾದ ಹೊದಿಕೆಯನ್ನು ಒದಗಿಸಬಹುದು. ಮಗು ಸ್ಪರ್ಶಿಸಲು ಬೆಚ್ಚಗಿದ್ದರೆ ಅಥವಾ ಮಗುವಿನ ಚರ್ಮವು ಕೆಂಪಾಗಿದ್ದರೆ ಇದು ಅವರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂದು ಅರ್ಥ ಮಾಡಿಕೊಳ್ಳಿ.

Winter Blues: ಇದು ಆರೋಗ್ಯ ಸಮಸ್ಯೆ ಅಲ್ವೇ ಅಲ್ಲ, ಬರೀ ಚಳಿಗಾಲದ ಕಿರಿಕಿರಿ

click me!