ಕಿಡ್ನಿ ಕಸಿ ನಂತ್ರ ಡ್ಯಾಮೇಜ್ ಅದ ಕಿಡ್ನಿಯನ್ನು ಏನು ಮಾಡುತ್ತಾರೆ?

By Suvarna News  |  First Published Nov 15, 2022, 1:41 PM IST

ಮನೆಯಲ್ಲಿರುವ ವಸ್ತು ಹಾಳಾದ್ರೆ ಅದನ್ನು ಕಸಕ್ಕೆ ಹಾಕಿ ಹೊಸ ವಸ್ತು ತರ್ತೇವೆ. ದೇಹದಲ್ಲಿರುವ ಅಂಗಗಳು ಹಾನಿಗೊಳಗಾದಾಗ ಕೂಡ ಅದನ್ನು ಕಸಿ ಮಾಡುವಷ್ಟು ವೈದ್ಯಲೋಕ ಮುಂದುವರೆದಿದೆ. ಕಿಡ್ನಿ ವೈಫಲ್ಯಗೊಂಡ್ರೂ ಅದನ್ನು ಕಸಿ ಮಾಡಲಾಗುತ್ತದೆ. ಆಗ ನಿರುಪಯುಕ್ತ ಕಿಡ್ನಿಯನ್ನು ವೈದ್ಯರು ಏನು ಮಾಡ್ತಾರೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೆ ಉತ್ತರ ಇಲ್ಲಿದೆ.
 


ನಮ್ಮ ದೇಹದ ಅತಿ ಮುಖ್ಯ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಕಿಡ್ನಿ ಆರೋಗ್ಯ ಬಹಳ ಮುಖ್ಯ. ಮೂತ್ರಪಿಂಡ ಕೈಕೊಟ್ಟರೆ ಜೀವ ಉಳಿಸೋದು ಬಹಳ ಕಷ್ಟ. ಇಂಥ ಸಂದರ್ಭದಲ್ಲಿ ಮೂತ್ರಪಿಂಡದ ಕಸಿ ಮಾಡಲಾಗುತ್ತದೆ. ಮೂತ್ರಪಿಂಡ ಕಸಿಯಲ್ಲಿ ವೈದ್ಯರು ಸತ್ತ ಅಥವಾ ಜೀವಂತ ವ್ಯಕ್ತಿಯಿಂದ ಮೂತ್ರಪಿಂಡವನ್ನು ತೆಗೆದುಕೊಂಡು ಅದನ್ನು ರೋಗಿಗೆ ಕಸಿ ಮಾಡುತ್ತಾರೆ. ಆದರೆ ಮೂತ್ರಪಿಂಡ ಕಸಿ ಮಾಡಿದ ನಂತರ ನಿರುಪಯುಕ್ತ ಮೂತ್ರಪಿಂಡವನ್ನು ವೈದ್ಯರು ಏನು ಮಾಡುತ್ತಾರೆ ಎಂಬ ಪ್ರಶ್ನೆ ಕಾಡುವುದು ಸಹಜ. ನಾವಿಂದು ಮೂತ್ರಪಿಂಡದ ವೈಫಲ್ಯ, ಅದ್ರ ಲಕ್ಷಣ ಹಾಗೂ ನಿರುಪಯುಕ್ತ ಮೂತ್ರಪಿಂಡವನ್ನು ಏನು ಮಾಡ್ತಾರೆ ಎನ್ನುವ ಬಗ್ಗೆ ಮಾಹಿತಿ ನೀಡ್ತೇವೆ. 

ಮೂತ್ರಪಿಂಡ (Kidney) ವೈಪಲ್ಯವಾದ ನಂತರ ಮೂತ್ರಪಿಂಡ ಕಸಿ ಮಾಡಲಾಗುತ್ತದೆ. ಎನ್ಐಡಿಡಿಕೆ ಪ್ರಕಾರ, ಮಧುಮೇಹ (Diabetes) ಮತ್ತು ಅಧಿಕ ರಕ್ತದೊತ್ತಡ (BP) ವು ಮೂತ್ರಪಿಂಡ ವೈಫಲ್ಯಕ್ಕೆ ಎರಡು ಪ್ರಮುಖ ಕಾರಣಗಳಾಗಿವೆ. ಬಿಪಿ ಹಾಗೂ ಮಧುಮೇಹ ಮೂತ್ರಪಿಂಡಗಳ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ ಮೂತ್ರಪಿಂಡವು ತನ್ನ ಕೆಲಸವನ್ನು ನಿಲ್ಲಿಸುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಹೊರತಾಗಿ ದೀರ್ಘಕಾಲದಿಂದ ಕಾಡುವ ಮೂತ್ರಪಿಂಡ ಕಾಯಿಲೆ ಮತ್ತು ಮದ್ಯಪಾನ (Alcohol) ದಂತಹ ದುಷ್ಚಟಗಳು ಕೂಡ ಮೂತ್ರಪಿಂಡದ ಹಾನಿಗೆ ಕಾರಣವಾಗುತ್ತವೆ.

Latest Videos

undefined

ಮೂತ್ರಪಿಂಡ ವೈಫಲ್ಯದ ಲಕ್ಷಣಗಳು ಯಾವುವು ಗೊತ್ತಾ? : ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಮೂತ್ರಪಿಂಡ ವೈಫಲ್ಯದ ಮೊದಲ ಹಂತದಲ್ಲಿ ಸಾಮಾನ್ಯವಾಗಿ ಯಾವುದೇ ರೋಗ ಲಕ್ಷಣ ಕಾಣಿಸುವುದಿಲ್ಲ. ವಿಪರೀತ ಆಯಾಸ, ವಾಕರಿಕೆ ಮತ್ತು ವಾಂತಿ, ಕಿರಿಕಿರಿ, ಆಗಾಗ್ಗೆ ಮೂತ್ರ ವಿಸರ್ಜನೆ, ಕೈ ಕಾಲು ಮತ್ತು ಮುಖದ ಊತ, ಸ್ನಾಯು ಸೆಳೆತ, ಕಡಿಮೆ ಹಸಿವು ಇತ್ಯಾದಿ ಲಕ್ಷಣಗಳು ನಿಧಾನವಾಗಿ ಕಾಣಿಸಿಕೊಳ್ಳಲು ಶುರುವಾಗುತ್ತದೆ. 

ಯಾವಾಗ್ಲೂ ಮೂಡಿಲ್ಲ ಅನ್ನೋರು ತಿನ್ನಲೇ ಬೇಕಾದ ಆಹಾರಗಳಿವು!

ಮೂತ್ರಪಿಂಡ ಕಸಿ ಮಾಡೋದು ಹೇಗೆ ? :  ಮೂತ್ರಪಿಂಡ ವೈಪಲ್ಯಗೊಂಡಾಗ ಮೂತ್ರಪಿಂಡ ಕಸಿ ಮಾಡಲಾಗುತ್ತದೆ. ಮೂತ್ರ ಪಿಂಡ ಕಸಿ ಅಂದ್ರೆ ಹೊಸ ಮತ್ತು ಆರೋಗ್ಯಕರ ಮೂತ್ರಪಿಂಡವನ್ನು ನಿಮ್ಮ ದೇಹಕ್ಕೆ ಕಸಿ ಮಾಡಲಾಗುತ್ತದೆ. ಹೊಸ ಮೂತ್ರಪಿಂಡವನ್ನು ಮೃತ ವ್ಯಕ್ತಿಯ ದೇಹದಿಂದ ಅಥವಾ ದಾನ ಮಾಡಲು ಸಿದ್ಧರಿರುವ ಜೀವಂತ ಆರೋಗ್ಯವಂತ ವ್ಯಕ್ತಿಯ ದೇಹದಿಂದ ತೆಗೆದುಕೊಳ್ಳಲಾಗುತ್ತದೆ. ಮೂತ್ರಪಿಂಡ ಕಸಿಗೆ ಒಳಗಾದ ರೋಗಿ ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಎಂದು ವರದಿಗಳು ಹೇಳಿವೆ.  

ನಿಷ್ಪ್ರಯೋಜಕ ಮೂತ್ರಪಿಂಡ ಏನಾಗುತ್ತೆ? :  ವೈದ್ಯರು ವೈಪಲ್ಯಗೊಂಡ ಮೂತ್ರಪಿಂಡವನ್ನು ದೇಹದಿಂದ ತೆಗೆಯುವುದಿಲ್ಲ. ದೇಹದಲ್ಲಿಯೇ ಹಳೆ ಮೂತ್ರಪಿಂಡ ಇರುತ್ತದೆ.  ಯುಸಿಎಸ್ ಎಫ್ ಶಸ್ತ್ರಚಿಕಿತ್ಸಾ ವಿಭಾಗದ ಪ್ರಕಾರ,  ಹೊಸ ಮೂತ್ರಪಿಂಡವನ್ನು ಕೆಳ ಹೊಟ್ಟೆಯಲ್ಲಿ ಮುಂದಕ್ಕೆ ಸ್ಥಳಾಂತರಿಸಲಾಗುತ್ತದೆ. ಒಂದ್ವೇಳೆ ನಿಷ್ಪ್ರಯೋಜಕ ಮೂತ್ರಪಿಂಡದ ಗಾತ್ರ ದೊಡ್ಡದಾದರೆ ಅಥವಾ ಮೂತ್ರಪಿಂಡದ ಸೋಂಕು ಕಾಣಿಸಿಕೊಂಡ್ರೆ ಅದನ್ನು ಆಗ ದೇಹದಿಂದ ಹೊರ ತೆಗೆಯಲಾಗುತ್ತದೆ.

ಮೂತ್ರಪಿಂಡ ಕಸಿಗೆ ಆಗುವ ವೆಚ್ಚ : ಮೂತ್ರಪಿಂಡ ಕಸಿ ವೆಚ್ಚ ನೀವು ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀರಿ, ಶಸ್ತ್ರಚಿಕಿತ್ಸೆ ವೆಚ್ಚ ಹೇಗಿದೆ ಹಾಗೂ ಮೆಡಿಕ್ಲೈಮ್ ಕವರ್ ಅವಲಂಬಿಸಿರುತ್ತದೆ. ಒಂದು ಅಂದಾಜಿನ ಪ್ರಕಾರ, ಕಿಡ್ನಿ ಕಸಿ ವೆಚ್ಚ ಸರ್ಕಾರಿ ಆಸ್ಪತ್ರೆಯಲ್ಲಿ 4 ರಿಂದ 7 ಲಕ್ಷ ರೂಪಾಯಿಯಾದ್ರೆ ಖಾಸಗಿ ಆಸ್ಪತ್ರೆಯಲ್ಲಿ 20 ಲಕ್ಷ ರೂಪಾಯಿವರೆಗೆ ಪಾವತಿ ಮಾಡಬೇಕಾಗುತ್ತದೆ.

Dragon fruit ಆರೋಗ್ಯಕ್ಕೇನೋ ಒಳ್ಳೆಯದೇ, ಆದ್ರೆ ಹೆಚ್ಚಾದ್ರೆ ಡೇಂಜರಸ್

ಮೂತ್ರಪಿಂಡದ ಹಾನಿಗೆ ಇವು ಕಾರಣ : ಆರೋಗ್ಯವಾಗಿರಲು ಆರೋಗ್ಯಕರ ಜೀವನ ಶೈಲಿ ಬಹಳ ಮುಖ್ಯ. ಹೆಚ್ಚಿನ ಪ್ರಮಾಣದಲ್ಲಿ ನೋವಿನ ಮಾತ್ರೆ ಸೇವನೆ ಮಾಡಿದ್ರೆ,  ಅತಿಯಾದ ಉಪ್ಪು ಮತ್ತು ಸಿಹಿ ಸೇವನೆ ಮಾಡಿದ್ರೆ, ಸೂಕ್ತ ಪ್ರಮಾಣದಲ್ಲಿ ನೀರು ಸೇವನೆ ಮಾಡದೆ ಹೋದ್ರೆ ಹಾಗೂ ಮದ್ಯಪಾನ ಮೂತ್ರಪಿಂಡದ ಹಾನಿಗೆ ಮುಖ್ಯ ಕಾರಣವಾಗುತ್ತದೆ. 
 

click me!