ಹೈ ವಾಲ್ಯೂಮ್ ಇಟ್ಕೊಂಡು ಸುತ್ತಲಿನ ಪರಿವೆಯೇ ಇಲ್ಲದೆ ಮ್ಯೂಸಿಕ್ ಕೇಳ್ತಾ ಇದ್ರೆ ಏನ್ ಮಜಾ ಗೊತ್ತಾ ? ಯಾವ ಟೆನ್ಶನ್ ಕೂಡಾ ಇರಲ್ಲ, ಮೈಂಡ್ ಫುಲ್ ರಿಲ್ಯಾಕ್ಸ್ ಆಗುತ್ತೆ ಅನ್ನೋರು ಹಲವರು. ಅದೆಲ್ಲಾ ಸರಿಬಿಡಿ, ಆದ್ರೆ ಈ ರೀತಿ ಯಾವಾಗ್ಲೂ ಇಯರ್‌ಫೋನ್, ಹೆಡ್‌ಫೋನ್ ಹಾಕೋದ್ರಿಂದ ಕಿವಿ ಕೇಳದ ಹಾಗೆ ಆಗುತ್ತೆ ಅನ್ನೋದು ನಿಮ್ಗೆ ಗೊತ್ತಾ ?
ಇವತ್ತಿನ ಜನರೇಷನ್‌ನ ಯೂತ್ಸ್ ಇಯರ್‌ಫೋನ್, ಏರ್‌ಪಾಡ್ಸ್‌ಗಳಿಲ್ಲದ ಜೀವನವನ್ನು ಊಹಿಸೋದು ಕಷ್ಟ. ಬಸ್, ಮೆಟ್ರೋದಲ್ಲಿ ಓಡಾಡುವಾಗ, ಮಾಲ್, ಪಾರ್ಕ್‌ನಲ್ಲಿ ರೌಂಡ್ ಹಾಕುವಾಗ ಕಿವಿಯಲ್ಲಿ ಇಯರ್‌ಫೋನ್ ಅಂತೂ ಬೇಕೇ ಬೇಕು. ಸಾಂಗ್ಸ್, ಮೂವಿ ಅಂತ ದಿನಪೂರ್ತಿ ಇಯರ್‌ಫೋನ್‌ಗಳಲ್ಲೇ ಸಮಯ ಕಳೆಯುತ್ತಿರುತ್ತಾರೆ. ಆದರೆ ಹೀಗೆ ಸತತವಾಗಿ ಇಯರ್ ಪೋನ್, ಹೆಡ್ ಫೋನ್ ಹಾಕ್ಕೊಳ್ತಿದ್ರೆ ಕಿವುಡತನದ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಅಷ್ಟೇ ಅಲ್ಲ ಉತ್ತರ ಪ್ರದೇಶದ ಗೋರಖ್‌ಪುರದ 18 ವರ್ಷದ ಯುವಕ ಇಯರ್‌ಬಡ್‌ಗಳನ್ನು ದೀರ್ಘ ಗಂಟೆಗಳ ಕಾಲ ಬಳಸಿದ ನಂತರ ತನ್ನ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾನೆ.
ವರದಿಯ ಪ್ರಕಾರ, ಇಯರ್‌ಫೋನ್‌ಗಳನ್ನು ಅತಿಯಾಗಿ ಮತ್ತು ದೀರ್ಘಕಾಲದ ವರೆಗೆ ಬಳಸಿದ ಪರಿಣಾಮ ಉಂಟಾದ ಸೋಂಕಿನಿಂದಾಗಿ ಹುಡುಗನಿಗೆ ಕಿವಿ (Ear) ಕೇಳದಂತಾಗಿದೆ. ನಂತರ ಸರ್ಜರಿ (Operation) ಮಾಡಿದ ಬಳಿಕ ಹುಡುಗ ಶ್ರವಣ ಶಕ್ತಿಯನ್ನು ಮರಳಿ ಪಡೆದಿದ್ದಾನೆ.
ವ್ಯಕ್ತಿಯ ಕಿವಿಯಿಂದ ಹೊರಬಂತು ಜೇಡ, ವಿಡಿಯೋ ನೋಡಿ ದಂಗಾದ ಜನ!
ದೀರ್ಘಕಾಲ ಇಯರ್‌ಫೋನ್ ಬಳಸೋದ್ರಿಂದ ಕಿವಿಸೋಂಕಿನ ಸಮಸ್ಯೆ
ಗಂಟೆಗಟ್ಟಲೆ ಇಯರ್‌ಫೋನ್ ಬಳಸುವ ಅಭ್ಯಾಸದ ಪರಿಣಾಮಗಳು ತುಂಬಾ ಗಂಭೀರವಾಗಬಹುದು, ಇದು ಕಿವಿಗಳಿಗೆ ಹಾನಿಯನ್ನುಂಟುಮಾಡಬಹುದು, ಏಕೆಂದರೆ ಹೆಚ್ಚಿನ ಇಯರ್‌ಫೋನ್‌ಗಳು ಕಿವಿ ಕಾಲುವೆಗಳಲ್ಲಿ ಆಳವಾಗಿ ಕುಳಿತುಕೊಳ್ಳುತ್ತವೆ. ಹೀಗೆ ಜನರು ದೀರ್ಘಾವಧಿಯವರೆಗೆ ಇಯರ್‌ಬಡ್‌ಗಳನ್ನು ಧರಿಸಿದಾಗ, ಕಿವಿ ಕಾಲುವೆಯಲ್ಲಿ ತೇವಾಂಶವು ಹೆಚ್ಚಾಗುತ್ತದೆ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಗೆ ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ. ದೇಹ (Body)ದಂತೆಯೇ, ಕಿವಿ ಕಾಲುವೆಗೆ ವಾತಾಯನ ಅಗತ್ಯವಿದೆ ಎಂದು ವೈದ್ಯರು ವಿವರಿಸಿದ್ದಾರೆ. ದೀರ್ಘಕಾಲದವರೆಗೆ ಅದನ್ನು ಮುಚ್ಚುವುದು ಬೆವರು ಮತ್ತು ನಂತರದ ಸೋಂಕಿಗೆ ಕಾರಣವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ನೀವು ಸಹ ಇಯರ್‌ಬಡ್‌ಗಳನ್ನು ಹೆಚ್ಚು ಹೊತ್ತು ಬಳಸುತ್ತಿದ್ದರೆ, ಜಾಗರೂಕರಾಗಿರಬೇಕು ಮತ್ತು ನಿಮ್ಮ ಕಿವಿಗಳಿಗೆ ಹಾನಿಯಾಗದಂತೆ ತಡೆಯಲು ಕೆಳಗಿನ ವಿಧಾನವನ್ನು ಅನುಸರಿಸಬಹುದು.
ಕಿವಿಯ ಮೇಲಿಡುವ ಹೆಡ್‌ಫೋನ್ ಬಳಸಿ
ಯಾವತ್ತೂ ಕಿವಿಯ ಮೇಲಿರುವ ಹೆಡ್‌ಫೋನ್‌ಗಳನ್ನು ಬಳಸಿ. ಇನ್ಸರ್ಟ್ ಇಯರ್ ಫೋನ್‌ಗಳನ್ನು ಬಳಸುವುದನ್ನು ತಪ್ಪಿಸಿ. ವಿಶೇಷವಾಗಿ ಬಿಗಿಯಾಗಿ ಹೊಂದಿಕೊಳ್ಳುವ ಇಯರ್ ಫೋನ್‌ಗಳನ್ನು ಬಳಸಬೇಡಿ. ಕಿವಿಯ ಮೇಲೆ ಹೆಡ್‌ಫೋನ್‌ಗಳನ್ನು ಬಳಸುವುದರಿಂದ ಶ್ರವಣೇಂದ್ರಿಯವನ್ನು ನೇರವಾಗಿ ಸಂಪರ್ಕಿಸುವ ಧ್ವನಿಯ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಒಳಇಯರ್ ಬಡ್‌ಗಳನ್ನು ಬಳಸುವುದರಿಂದ 7-8 ಡೆಸಿಬಲ್‌ಗಳಷ್ಟು ಶಬ್ದ ಹೆಚ್ಚಾಗುತ್ತದೆ. ಇದಲ್ಲದೆ, ಕಿವಿಯ ಮೇಲಿರುವ ಹೆಡ್‌ಫೋನ್‌ಗಳು ಧ್ವನಿಯನ್ನು ಕಿವಿಯಾದ್ಯಂತ ಹೆಚ್ಚು ಸಮವಾಗಿ ಹರಡುತ್ತವೆ ಮತ್ತು ಕಡಿಮೆ ಹಾನಿ (Effects)ಯನ್ನುಂಟುಮಾಡುತ್ತವೆ.
ಪೇನ್ ಕಿಲ್ಲರ್ ಬಿಡಿ, ಕಿವಿ ನೋವನ್ನು ನಿವಾರಿಸಲು ಇದನ್ನ ಟ್ರೈ ಮಾಡಿ
ವ್ಯಾಲ್ಯೂಮ್ ಕಡಿಮೆಯಿರಲಿ
ಯಾವಾಗಲೂ ಹೆಡ್‌ಫೋನ್‌ನಲ್ಲಿ ಸೂಚಿಸಲಾದ, ಶಿಫಾರಸು ಮಾಡಲಾದ ಆಲಿಸುವ ಹಂತಗಳಲ್ಲಿ ವಾಲ್ಯೂಮ್‌ನೊಂದಿಗೆ ಹೆಡ್‌ಫೋನ್‌ಗಳ ಮೂಲಕ ಆಲಿಸಿ. ವಾಲ್ಯೂಮ್ ಮಿತಿಯನ್ನು ಒಟ್ಟು ವಾಲ್ಯೂಮ್‌ನ ಸುಮಾರು 60% ಕ್ಕಿಂತ ಕಡಿಮೆ ಹೊಂದಿಸಬೇಕು. ಗರಿಷ್ಠ ಶ್ರವಣದ ಪ್ರಮಾಣವು 60 ಡೆಸಿಬಲ್‌ಗಳಾಗಿರಬೇಕು.
ಮಧ್ಯೆ ರೆಸ್ಟ್ ತೆಗೆದುಕೊಳ್ಳಿ
ಹೆಡ್‌ಫೋನ್, ಇಯರ್ ಪೋನ್ನ್ನು ಯಾವತ್ತೂ ದೀರ್ಘಾವಧಿಯ ವರೆಗೆ ಕೇಳಬೇಡಿ. ಆಲಿಸುವ ನಡುವೆ ವಿರಾಮಗಳನ್ನು ತೆಗೆದುಕೊಳ್ಳಿ. ಕೆಲವು ಸಂಶೋಧಕರು ಶ್ರವಣ ಹಾನಿಯನ್ನು ತಡೆಗಟ್ಟಲು ಹೆಡ್‌ಫೋನ್‌ಗಳನ್ನು ಬಳಸುವಾಗ 60/60 ನಿಯಮವನ್ನು ಬಳಸುವುದನ್ನು ಪ್ರತಿಪಾದಿಸುತ್ತಾರೆ. ಈ ನಿಯಮವು ಗರಿಷ್ಠ 60 ನಿಮಿಷಗಳವರೆಗೆ ಗರಿಷ್ಠ ಪರಿಮಾಣದ 60%ರಷ್ಟು ಧ್ವನಿಯನ್ನು ಕೇಳಲು ಶಿಫಾರಸು ಮಾಡುತ್ತದೆ. ಸುಮಾರು 5 ನಿಮಿಷಗಳ ವಿರಾಮ (Rest)ವನ್ನು ತೆಗೆದುಕೊಳ್ಳುವುದರಿಂದ ಹಾನಿ ಕಡಿಮೆಯಾಗುತ್ತದೆ.
ಹೆಡ್‌ಫೋನ್ ಸ್ವಚ್ಛಗೊಳಿಸಿ
ಹೆಡ್‌ಫೋನ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದನ್ನು ಮರೆಯದಿರಿ. ಇದು ಬೆವರು, ಬ್ಯಾಕ್ಟೀರಿಯಾದ ಶೇಖರಣೆಯನ್ನು ತಡೆಯುತ್ತದೆ. ನಿರಂತರ ಕಿವಿ ಸೋಂಕು ಶ್ರವಣ ದೋಷಕ್ಕೆ ಕಾರಣವಾಗಬಹುದು. ಹೆಡ್‌ಫೋನ್‌ಗಳನ್ನು ಬೇರೆಯವರ ಜತೆ ಹಂಚಿಕೊಳ್ಳಬೇಡಿ.