
ಆಹಾರದಲ್ಲಿ ಕಡಿಮೆ ಉಪ್ಪು ಬಳಸುವುದು ಕೆಲವರ ಅಭ್ಯಾಸವಾಗಿದ್ದರೆ, ಇನ್ನು ಕೆಲವರಿಗೆ ಆಹಾರದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿರಬೇಕು. ಆದರೆ ಇವೆರಡೂ ಅಲ್ಲದೆಯೂ ಕೆಲವೊಂದು ಸಾರಿ ಪ್ರಮಾದದಿಂದ ಆಹಾರದಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾಗಿ ಹೋಗುತ್ತದೆ. ಉಪ್ಪಿನಲ್ಲಿರುವ ಖನಿಜ, ಸೋಡಿಯಂ, ದೇಹದ ಸರಿಯಾದ ಸಮತೋಲನವನ್ನು ಕಾಪಾಡಿಕೊಳ್ಳಲು ಮಾನವ ದೇಹಕ್ಕೆ ಅಗತ್ಯವಾಗಿರುತ್ತದೆ. ಆದರೆ ಅತಿಯಾದ ಉಪ್ಪಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಅಥವಾ ಹೃದಯ ಕಾಯಿಲೆಗಳಂತಹ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಅಧಿಕ ಸೋಡಿಯಂನ ಲಕ್ಷಣಗಳು
ಆಹಾರದಲ್ಲಿ ಹೆಚ್ಚು ಉಪ್ಪಿನ ಪ್ರಮಾಣ, ಸೋಡಿಯಂ ಹೊಂದಿದ್ದರೆ, ಅತಿಯಾದ ಬಾಯಾರಿಕೆ, ಹೊಟ್ಟೆ ಉಬ್ಬುವುದು, ಆಗಾಗ ಮೂತ್ರ ವಿಸರ್ಜನೆ, ಅತಿಸಾರ, ತೂಕ ಹೆಚ್ಚಾಗುವುದು, ವಾಂತಿ ಮೊದಲಾದ ಸಮಸ್ಯೆ ಕಂಡು ಬರುತ್ತದೆ.
ಸೋಡಿಯಂ ದೇಹಕ್ಕೆ ಏನು ಮಾಡಬಹುದು ?
ಸೋಡಿಯಂ ಕೂಡಾ ಒಂದು ಪ್ರಮುಖ ಖನಿಜವಾಗಿದ್ದು, ಅದು ನರಗಳ ಪ್ರಚೋದನೆಯನ್ನು ನಡೆಸುವಾಗ ವಿವಿಧ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ. ಯುಎಸ್‌ಡಿಎ ಅಧ್ಯಯನದ ಪ್ರಕಾರ ದೈನಂದಿನ ಬಳಕೆಯಲ್ಲಿ ವಯಸ್ಕರು ಸೇವಿಸಬಹುದಾದ ಉಪ್ಪು (Salt) ದಿನಕ್ಕೆ 2,300 ಮಿಗ್ರಾಂಗಿಂತ ಕಡಿಮೆಯಿರಬೇಕು. ಇದು ಸುಮಾರು 1 ಟೀ ಚಮಚ ಉಪ್ಪಿಗೆ ಸಮಾನವಾಗಿರುತ್ತದೆ. ದೇಹದ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ವಯಸ್ಕರು ದಿನಕ್ಕೆ ಇಷ್ಟು ಉಪ್ಪನ್ನು ಸೇವಿಸುವುದು ಮುಖ್ಯ.
Salt Water : ಉಪ್ಪು ನೀರಿನ 5 ಅದ್ಭುತ ಪ್ರಯೋಜನಗಳನ್ನು ತಿಳಿದುಕೊಳ್ಳಿ
ಆದರೆ, ಉಪ್ಪನ್ನು ಅತಿಯಾಗಿ ಸೇವಿಸಿದರೆ, ಅದು ಹೈಪರ್ನಾಟ್ರೀಮಿಯಾ ಎಂಬ ಸ್ಥಿತಿಗೆ ಕಾರಣವಾಗಬಹುದು. ಇದು ದೇಹದಲ್ಲಿ ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಮೆದುಳಿನ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗುತ್ತದೆ. ಹೆಚ್ಚುವರಿ ಸೋಡಿಯಂನಿಂದ ಸ್ನಾಯು ಸೆಳೆತ, ಮನಸ್ಸಿನಲ್ಲಿ ಗೊಂದಲ, ಕೋಮ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಹೆಚ್ಚುವರಿ ಸೋಡಿಯಂ (Sodium) ಎಂದರೆ ನೀವು ನಿಮ್ಮ ಆಹಾರ (Food)ದಲ್ಲಿ ಹೆಚ್ಚು ಉಪ್ಪನ್ನು ಸೇರಿಸುತ್ತಿದ್ದೀರಿ ಎಂದು ಮಾತ್ರ ಅರ್ಥವಲ್ಲ. ಬದಲು ಪಿಜ್ಜಾಗಳಿಗೆ ಲೋಡ್ ಮಾಡಿದ ಸ್ಯಾಂಡ್‌ವಿಚ್‌ಗಳಂತಹ ಹಲವಾರು ಆಹಾರಗಳು ಸೋಡಿಯಂನಲ್ಲಿ ಅಧಿಕವಾಗಿರುತ್ತವೆ. ಹೀಗಾಗಿ ನೀವು ಅಧಿಕ ಉಪ್ಪಿರುವ ಆಹಾರಗಳನ್ನು ತಿಂದಾದ ಮೇಲೆ ಇತರ ಯಾವ ಆಹಾರವನ್ನು ತಿನ್ನುವುದು ಉತ್ತಮ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಅಡುಗೆಗೆ ರುಚಿ ನೀಡೋದು ಮಾತ್ರವಲ್ಲ ಉಪ್ಪಿನಿಂದ ಅನನ್ಯ ಉಪಯೋಗಳಿವೆ!
ಬಾಳೆಹಣ್ಣು
ಪೊಟ್ಯಾಸಿಯಮ್ ಅಂಶವಿರುವ ಬಾಳೆಹಣ್ಣು (Banana) ಸೇವನೆ, ಹೆಚ್ಚು ಉಪ್ಪಿರುವ ಆಹಾರದ ಸೇವನೆಯ ನಂತರ ನಿಮ್ಮ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದು ಕಾಲಾನಂತರದಲ್ಲಿ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಬಾಳೆಹಣ್ಣಿನಲ್ಲಿ ನಾರಿನಂಶವೂ ಸಮೃದ್ಧವಾಗಿರುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೊಸರು
ಮೊಸರು (Yoghurt), ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿರುವ ಮತ್ತೊಂದು ಆಹಾರವಾಗಿದೆ. ಹೀಗಾಗಿ ಇದು ಅಧಿಕ ಉಪ್ಪನ್ನು ಸೇವಿಸುವುದರಿಂದಾಗುವ ಅಪಾಯವನ್ನು ಇಲ್ಲವಾಗಿಸುತ್ತದೆ. ಅಷ್ಟೇ ಅಲ್ಲ, ಅಧಿಕ ಉಪ್ಪು ಸೇವಿಸಿದ ಕೂಡಲೇ ಮೊಸರಿನ ಸೇವನೆ ಕರುಳನ್ನು ಆರೋಗ್ಯವಾಗಿಡಲು ನೆರವಾಗುತ್ತದೆ.
ಕಿವಿಹಣ್ಣು
ಹೆಚ್ಚು ಉಪ್ಪನ್ನು ಸೇವಿಸಿದರೆ ಕೂಡಲೇ ಕಿವಿಹಣ್ಣ (Kiwifruit)ನ್ನು ಸೇವನೆ ಮಾಡಿ. ಸಿಹಿ ಮತ್ತು ಹುಳಿ ರುಚಿಯ ಕಿವಿ ಹಣ್ಣನ್ನು ಸೇವಿಸುವುದರಿಂದ ಇದು ಬಾಯಿಯ ರುಚಿ ಬದಲಾಯಿಸಲು ನೆರವಾಗುತ್ತದೆ. ಕಿವಿ ಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಪ್ರಮಾಣವು ಶಿಫಾರಸು ಮಾಡಲಾದ ದೈನಂದಿನ ಮೌಲ್ಯದ ಸುಮಾರು 5% ಆಗಿದೆ. ಹೀಗಾಗಿ ಹೆಚ್ಚಿನ ಸೋಡಿಯಂನ ಪರಿಣಾಮವನ್ನು ತಟಸ್ಥಗೊಳಿಸಲು ಇದು ಸಹಾಯ ಮಾಡುತ್ತದೆ.
ಶುಂಠಿ ಚಹಾ
ದೇಹದಲ್ಲಿ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸಲು ಶುಂಠಿ (Ginger) ಚಹಾ ಸೇವನೆ ಅತ್ಯುತ್ತಮ ಆಯ್ಕೆಯಾಗಿದೆ. ಇದು ಹರ್ಬಲ್ ಟೀ (Tea) ಆಗಿದ್ದು, ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಊತವನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.