ನಗರಗಳ ಮಕ್ಕಳಲ್ಲಿ ಅಸ್ತಮಾ ಸೇರಿದಂತೆ ಉಸಿರಾಟದ ಸಮಸ್ಯೆಗಳು ಅತಿ ಸಾಮಾನ್ಯ. ಕೆಲವು ಮಕ್ಕಳಲ್ಲಿ ಅಸ್ತಮಾ ಕಂಡು ಬರದಿದ್ದರೂ ಇತರ ಕಿರಿಕಿರಿಗಳು ಕಾಣಿಸುತ್ತವೆ. ಅನೇಕ ಮಕ್ಕಳು ಇದೇ ಕಾರಣಕ್ಕೆ ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ವಾಹನಗಳ ಹೊಗೆಯಲ್ಲಿರುವ ನೈಟ್ರೋಜನ್ ಡೈಯಾಕ್ಸೈಡ್ ಇದಕ್ಕೆ ಕಾರಣ.
ನಗರಗಳ ವಾಯುಮಾಲಿನ್ಯ (Air Pollution) ಆರೋಗ್ಯಕ್ಕೆ ಹಾನಿ (Problem) ತರುವುದು ಆಗಾಗ ಅನುಭವಕ್ಕೆ ಬರುತ್ತಲೇ ಇರುತ್ತದೆ. ಹೊಗೆ (Smoke) ಮತ್ತು ಧೂಳಿ (Dust)ನಲ್ಲಿ ಅಡ್ಡಾಡಿ ಬಂದಾಗ ತಲೆನೋವು (Headache), ಕಣ್ಣುರಿ (Eye Irritation), ಉಸಿರಾಟದಲ್ಲಿ ಕಿರಿಕಿರಿ (Breathing Problem) ಉಂಟಾಗುವುದು ಸಾಮಾನ್ಯ. ವಯಸ್ಕರಿಗೇ ಇಷ್ಟೆಲ್ಲ ಸಮಸ್ಯೆಯಾಗುವಾಗ ಮಕ್ಕಳಿಗೆ ವಾಯುಮಾಲಿನ್ಯದ ಪರಿಣಾಮಗಳು ಸಹಜವಾಗಿ ಹೆಚ್ಚು. ಹೌದು, ನಗರಗಳಲ್ಲಿನ ವಾಯುಮಾಲಿನ್ಯದಿಂದಾಗಿ ಪ್ರತಿವರ್ಷ ಸರಿಸುಮಾರು 20 ಲಕ್ಷ ಮಕ್ಕಳು (Children) ಅಸ್ತಮಾ (Asthma) ಕ್ಕೆ ತುತ್ತಾಗುತ್ತಿದ್ದಾರೆ. ಅದೂ ಸಹ ಟ್ರಾಫಿಕ್ (Traffic) ಸಂಬಂಧಿ ವಾಯುಮಾಲಿನ್ಯದ ಪಾತ್ರ ಇಲ್ಲಿ ಅಧಿಕವಾಗಿದೆ.
ಲಾಸ್ ಏಂಜೆಲೀಸ್ (Los Angeles) ನಿಂದ ನಮ್ಮ ದೇಶದ ಮುಂಬೈ(Mumbai) ವರೆಗೆ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ (George Washington University) ನಡೆಸಿದ್ದ ಅಧ್ಯಯನದಲ್ಲಿ ಮಕ್ಕಳಿಗೆ ಅಸ್ತಮಾ ಉಂಟಾಗಲು ನಗರಗಳಲ್ಲಿನ ಟ್ರಾಪಿಕ್ ಸಂಬಂಧಿ ವಾಯುಮಾಲಿನ್ಯ ಅತಿ ಹೆಚ್ಚು ಕೊಡುಗೆ ನೀಡುತ್ತಿದೆ ಎನ್ನುವುದು ತಿಳಿದುಬಂದಿದೆ. ವಾಹನಗಳ ಹೊಗೆಯಿಂದ ಹೊರಸೂಸುವ ಮಾಲಿನ್ಯಕಾರಕ ಅಂಶಗಳಿಂದಾಗಿ ವಿಶ್ವದ 13 ಸಾವಿರ ನಗರಗಳ 20 ಲಕ್ಷ ಮಕ್ಕಳಲ್ಲಿ ಅಸ್ತಮಾ ಕಂಡುಬಂದಿರುವುದು ಕಳವಳಕಾರಿಯಾಗಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಈ Flirting styleಗಳು ಹಳತಾದ್ರೂ, ಬಳಸಿದ್ರೆ ಮಿಸ್ಸಾಗೋ ಚಾನ್ಸೇ ಇಲ್ಲ!
'ವಾಹನಗಳಿಂದ ಹೊರಸೂಸುವ ನೈಟ್ರೋಜನ್ ಡೈಯಾಕ್ಸೈಡ್ (Nitrogen Dioxide) ನಗರಗಳ ಮಕ್ಕಳಿಗೆ ಅತಿ ಹೆಚ್ಚು ಅಪಾಯಕಾರಿ ಎನಿಸಿದೆ’ ಎಂದು ಜಾರ್ಜ್ ವಾಷಿಂಗ್ಟನ್ ವಿವಿಯ ಸುಸಾನ್ ಅನೆನ್ ಬರ್ಗ್ ಹೇಳಿದ್ದಾರೆ.
ಮಕ್ಕಳು ಆರೋಗ್ಯವಾಗಿರಲು ಶುದ್ಧ ಗಾಳಿ (Clean Air) ಬೇಕು. ಅದಿಲ್ಲವಾದರೆ ಉಸಿರಾಟದ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಸ್ತಮಾ ಕೂಡ ಶ್ವಾಸಕೋಶದ ಕೊಳವೆಗಳಲ್ಲಿ ಉಂಟಾಗುವ ಒಂದು ಮಾದರಿಯ ಉರಿಯೂತ. ನೈಟ್ರೋಜನ್ ಡೈಯಾಕ್ಸೈಡ್ ಅಂದರೆ NO2 ವಾಹನಗಳ ಹೊಗೆಯಲ್ಲಿ, ವಿದ್ಯುತ್ (Power) ಸ್ಥಾವರಗಳಲ್ಲಿ, ಕೈಗಾರಿಕಾ (Industrial) ಪ್ರದೇಶಗಳಲ್ಲಿ ಉತ್ಸರ್ಜನೆಯಾಗುತ್ತದೆ. ವಿಜ್ಞಾನಿಗಳ ಪ್ರಕಾರ, ಹೊಸ ಅಸ್ತಮಾ ಪ್ರಕರಣಗಳು 2000 ರಿಂದ 2019ರ ಅವಧಿಯಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಕೆಯಾಗಿವೆ.
ಅಧ್ಯಯನದಲ್ಲಿ ಕಂಡುಬಂದಿರುವ ಕೆಲವು ಅಂಶಗಳು ಹೀಗಿವೆ.
• 2019ರಲ್ಲಿ ನೈಟ್ರೋಜನ್ ಡೈಯಾಕ್ಸೈಡ್ ನಿಂದ ಕಂಡುಬಂದಿರುವ ಅಸ್ತಮಾ ಪ್ರಕರಣಗಳ ಪೈಕಿ ಮೂರನೇ ಎರಡು ಭಾಗದಷ್ಟು ಅಸ್ತಮಾ ನಗರಗಳಲ್ಲಿ ಕಂಡುಬಂದಿವೆ.
• ಅಮೆರಿಕ (America) ಸೇರಿದಂತೆ ಕೆಲವು ಶ್ರೀಮಂತ ರಾಷ್ಟ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಾಳಿಯಲ್ಲಿರುವ ನೈಟ್ರೋಜನ್ ಡೈಯಾಕ್ಸೈಡ್ ಪ್ರಮಾಣ ಇಳಿಕೆಯಾಗಿದೆ. ಇದಕ್ಕೆ ಅಲ್ಲಿ ಜಾರಿಗೆ ತಂದಿರುವ ಕಟ್ಟುನಿಟ್ಟಿನ ಕ್ರಮಗಳು ಕಾರಣವಾಗಿವೆ.
• ದಕ್ಷಿಣ ಏಷ್ಯಾ (South Asia), ಮಧ್ಯ ಪ್ರಾಚ್ಯ ಹಾಗೂ ಆಫ್ರಿಕಾದ ಸಹಾರಾ ಉಪವಲಯದಲ್ಲಿ ನೈಟ್ರೋಜನ್ ಡೈಯಾಕ್ಸೈಡ್ ಹೊರಸೂಸುವಿಕೆ ಹೆಚ್ಚಾಗಿದೆ.
• ದಕ್ಷಿಣ ಏಷ್ಯಾದಲ್ಲಿ ಮಕ್ಕಳ ಅಸ್ತಮಾ ಪ್ರಕರಣಗಳಿಂದಾಗಿ ಆರೋಗ್ಯ ವ್ಯವಸ್ಥೆ ಹಾಗೂ ಕೌಟುಂಬಿಕ ವ್ಯವಸ್ಥೆಯ ಮೇಲೆ ಹೊರೆಯಾಗಿದೆ.
ಈ ಹಿಂದೆ, ಇದೇ ವಿವಿಯ ತಜ್ಞರು ನಡೆಸಿದ್ದ ಅಧ್ಯಯನದಲ್ಲಿ ನೈಟ್ರೋಜನ್ ಡೈಯಾಕ್ಸೈಡ್ ಜಾಗತಿಕವಾಗಿ ಶೇ.13ರಷ್ಟು ಅಸ್ತಮಾಕ್ಕೆ ಕಾರಣವಾಗಿದ್ದರೆ, ಜನಸಂಖ್ಯೆ ಹೆಚ್ಚಾಗಿರುವ ನಗರಗಳಲ್ಲಿ ಶೇ.50ರಷ್ಟು ಅಸ್ತಮಾ ಪ್ರಕರಣಗಳಿಗೆ ಕಾರಣವಾಗಿದೆ ಎನ್ನುವುದನ್ನು ಬಹಿರಂಗಪಡಿಸಿತ್ತು. ಅಂದರೆ ಇದರ ಗಂಭೀರತೆಯನ್ನು ಅರ್ಥೈಸಿಕೊಳ್ಳಬಹುದು.
Polished Rice ತಿನ್ನೋದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಗ್ಯಾರಂಟಿ!
ಪಳೆಯುಳಿಕೆ ಇಂಧನ(Fossil Fuel) ದ ಬಳಕೆ ಕಡಿಮೆ ಮಾಡುವುದರಿಂದ ಹವಾಮಾನ ಸುಧಾರಿಸುತ್ತದೆ. ಗಾಳಿ ಶುದ್ಧವಾದಷ್ಟೂ ಉಸಿರಾಟಕ್ಕೆ ಅನುಕೂಲವಾಗುತ್ತದೆ. ಆಗ ಮಕ್ಕಳಲ್ಲಿ ಅಸ್ತಮಾ ಉಂಟಾಗುವುದಿಲ್ಲ ಹಾಗೂ ಮಕ್ಕಳ ಮರಣ ಪ್ರಮಾಣವೂ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತಡೆಯಲು ಸಹ ಸಾಧ್ಯವಾಗುತ್ತದೆ ಎನ್ನಲಾಗಿದೆ.
ನಾವೇನು ಮಾಡಬಹುದು?
ಸಾಧ್ಯವಾದಷ್ಟು ಚಿಕ್ಕ ಮಕ್ಕಳನ್ನು ಟ್ರಾಫಿಕ್ ಜಾಮ್ ಸಮಯದಲ್ಲಿ ರಸ್ತೆಯ ಬದಿ ಕರೆದೊಯ್ಯಬೇಡಿ. ಟ್ರಾಫಿಕ್ ಇರುವ ವೇಳೆಯಲ್ಲಿ ಮಕ್ಕಳನ್ನು ಬೈಕ್ ಮೇಲೆ ಕೂರಿಸಿಕೊಂಡು ಅಡ್ಡಾಡಬೇಡಿ. ಅನಿವಾರ್ಯವಾದರೆ ಮುಖಕ್ಕೆ, ಮೂಗಿಗೆ ನೇರವಾಗಿ ಗಾಳಿ ಹೋಗದಂತೆ ಮಾಸ್ಕ್ ಹಾಕಿ ಅಥವಾ ಬಟ್ಟೆಯನ್ನು ಅಡ್ಡ ಮಾಡಿ. ಸದಾ ಟ್ರಾಫಿಕ್ ಇರುವ ರಸ್ತೆಯ ಅಕ್ಕಪಕ್ಕ ಮನೆ ಮಾಡಿಕೊಳ್ಳಬೇಡಿ. ಚಿಕ್ಕಪುಟ್ಟ ಕೆಲಸಗಳಿಗೂ ಬೈಕ್, ಕಾರು ಒಯ್ಯುವುದನ್ನು ಬಿಟ್ಟು ವಾಹನಗಳ ಬಳಕೆ ಕಡಿಮೆ ಮಾಡುವುದೊಳಿತು.