ಕ್ಯಾನ್ಸರ್, ಈ ಹೆಸರು ಕೇಳಿದರೇನೇ ಭಯವಾಗುತ್ತೆ. ಈ ರೋಗದ ಬಗ್ಗೆ ಮುಂಚೆಯೇ ತಿಳುವಳಿಕೆ ಇದ್ದರೆ ರೋಗದ ಪರಿಣಾಮವನ್ನು ತಡೆಯಬಹುದು. ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯಬಹುದು.
ಹೊಟ್ಟೆಯ ಕ್ಯಾನ್ಸರ್ (stomach cancer) ಅಪಾಯಕಾರಿಯಾದ ಕ್ಯಾನ್ಸರಿನ ಒಂದು ವಿಧ. ಇದನ್ನು ಪ್ರಾರಂಭಿಕ ಹಂತದಲ್ಲಿಯೇ (first stage) ಗುರುತಿಸಿದರೆ ಇದರ ಪರಿಣಾಮವನ್ನು ಕಡಿಮೆ ಮಾಡಬಹುದು.
ಆದರೆ ವಿಪರ್ಯಾಸ ಎಂದರೆ ಹೆಚ್ಚಿನವರು ಕೊನೆಯ (final) ಹಂತದ ತನಕ ಬರುವವರೆಗೂ ಇದರ ಬಗ್ಗೆ ಹೆಚ್ಚು ಗಮನ ಹರಿಸುವುದೇ ಇಲ್ಲ. ಹೀಗಾಗುವುದಕ್ಕೂ ಕಾರಣವಿದೆ, ಪ್ರಾರಂಭಿಕ ಹಂತದಲ್ಲಿ ರೋಗ ಲಕ್ಷಣಗಳು (symptoms) ಕಡಿಮೆ ಮಟ್ಟದಲ್ಲಿ ಕಂಡುಬರುತ್ತದೆ. ಅವನ್ನು ಸಾಮಾನ್ಯ ಸಮಸ್ಯೆ ಎಂದು ಇಗ್ನೋರ್ ಮಾಡುವವರೇ ಹೆಚ್ಚು. ಹಾಗಾದರೆ ಯಾವೆಲ್ಲಾ ಲಕ್ಷಣಗಳು ಹೊಟ್ಟೆಯ ಕ್ಯಾನ್ಸರ್ ಅನ್ನು ಸೂಚಿಸಿತ್ತವೆ ಎಂದು ನಾವಿಲ್ಲಿ ತಿಳಿಸುತ್ತೇವೆ.
ಹೊಟ್ಟೆಯ ಕ್ಯಾನ್ಸರ್
ಹೊಟ್ಟೆಯ ಕ್ಯಾನ್ಸರ್ ಪ್ರಕರಣಗಳು ಪುರುಷರು ಮತ್ತು ಮಹಿಳೆಯರಲ್ಲಿ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ ಮುಖ್ಯವಾಗಿ 60 ರಿಂದ 75 ವರ್ಷಗಳ ವಯಸ್ಸಿನ ಪುರುಷರಲ್ಲಿ ಇದು ಕಂಡುಬರುತ್ತದೆ. ಆದರೆ ಮಹಿಳೆಯರಲ್ಲಿ 75 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
Relationship Tips: ಸಂಬಂಧ ಚೆನ್ನಾಗಿರಬೇಕಾದ್ರೆ ಈ ಕ್ರಿಯೆಗಳು ಬೇಕೇ ಬೇಕು!
ಹೊಟ್ಟೆಯ ಕ್ಯಾನ್ಸರ್ ಸಾಮಾನ್ಯವಾಗಿ ಗಮನಕ್ಕೆ ಬರುವುದಿಲ್ಲ.
ಇದನ್ನು ಆರಂಭದಲ್ಲಿ ಕಡೆಗಣಿಸಲಾಗುತ್ತದೆ. ಆದರೆ ಅದೃಷ್ಟವಶಾತ್ ಇದು ಪ್ರಾರಂಭದಲ್ಲಿಯೇ ಗಮನಕ್ಕೆ ಬಂದರೆ ರೋಗಕ್ಕೆ ಚಿಕಿತ್ಸೆ ನೀಡಬಹುದು.
ಲಕ್ಷಣಗಳು
ಆರಂಭಿಕ ಹಂತದಲ್ಲಿ ಈ ಸ್ಥಿತಿಯು ಹೊಟ್ಟೆಯಲ್ಲಿ ಗೆಡ್ಡೆ ಎಲ್ಲಿದೆ ಎಂಬುದನ್ನು ಅವಲಂಬಿಸಿ ಕೆಲವು ಲಕ್ಷಣಗಳನ್ನು ಉಂಟು ಮಾಡುತ್ತದೆ. ಅಂತಹ ರೋಗ ಲಕ್ಷಣಗಳು ಈ ಕೆಳಗಿನಂತಿವೆ.
ನಿಮ್ಮ ವೈದ್ಯರನ್ನು ಸಂಪರ್ಕಿಸಿ (Consult your doctor)
ಈ ಮೇಲಿನ ರೋಗ ಲಕ್ಷಣಗಳು ಕಂಡು ಬಂದರೆ ಏನಾದರೂ ತಪ್ಪಾಗಿರಬಹುದು ಎಂದು ಅನುಮಾನ (suspect) ಬಂದಾಗ ಹೆಚ್ಚು ಚಿಂತೆ ಮಾಡಬೇಡಿ. ಏಕೆಂದರೆ ಕ್ಯಾನ್ಸರ್ ಬಹಳ ಅಪರೂಪದ ಕಾಯಿಲೆ. ಇವು ಹೊಟ್ಟೆಗೆ ಸಂಬಂಧ ಪಟ್ಟ ಬೇರೆ ಬೇರೆ ರೋಗದ ಲಕ್ಷಣಗಳೂ ಆಗಿರಬಹುದು. ಕೆಲವೊಮ್ಮೆ ಒತ್ತಡದ ಕಾರಣದಿಂದಲೂ ಕೂಡ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆ ಕಂಡು ಬರಬಹುದು. ಆದರೆ ಬಹಳ ದಿನಗಳ ಬಳಿಕವೂ ಈ ಲಕ್ಷಣಗಳು ಮುಂದುವರಿದರೆ ಆಗ ವೈದ್ಯರನ್ನು ಭೇಟಿ ಮಾಡಿ. ಮಲ (stool) ಅಥವಾ ವಾಂತಿಯಲ್ಲಿ ರಕ್ತ ಕಾಣಿಸುತ್ತಿದೆ ಎಂದಾದರೆ ಇದು ಹೊಟ್ಟೆಯ ಕ್ಯಾನ್ಸರ್ ಗೆ ಸಂಬಂಧಪಟ್ಟ ಲಕ್ಷಣ ಎನ್ನುವ ದೊಡ್ಡ ಸಾಧ್ಯತೆ ಇದೆ. ಹೆಚ್ಚು ಭಯಭೀತರಾಗದೆ ನಿಮಗೆ ತಿಳಿದಿರುವ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳಿ.