Healthy Food: ನಿಮ್ಮ ಪ್ಲೇಟ್‌ನಲ್ಲಿ ಈ ಆಹಾರಗಳಿರಲಿ, ಟೆನ್ಶನ್ ಕಡಿಮೆಯಾಗಿ ರಿಲ್ಯಾಕ್ಸ್ ಆಗುತ್ತೆ

Suvarna News   | Asianet News
Published : Dec 21, 2021, 11:03 AM ISTUpdated : Dec 21, 2021, 11:12 AM IST
Healthy Food: ನಿಮ್ಮ ಪ್ಲೇಟ್‌ನಲ್ಲಿ ಈ ಆಹಾರಗಳಿರಲಿ, ಟೆನ್ಶನ್ ಕಡಿಮೆಯಾಗಿ ರಿಲ್ಯಾಕ್ಸ್ ಆಗುತ್ತೆ

ಸಾರಾಂಶ

ಮನೆಕೆಲಸ, ಆಫೀಸ್ ಕೆಲಸ..ಗಂಡ-ಮಕ್ಕಳು, ಅತ್ತೆ ಮಾವನ ಕಿರಿಕಿರಿ. ದಿನಪೂರ್ತಿ ಬಿಝಿ. ಲೈಫ್ (LIfe) ಕಂಪ್ಲೀಟ್ ಸ್ಟ್ರೆಸ್ ಫುಲ್ ಅನಿಸ್ತಿದ್ಯಾ..ಹಾಗಾದ್ರೆ ನಿಮ್ಮ ದಿನದ ಫುಡ್ ಲಿಸ್ಟ್‌ನಲ್ಲಿ ಈ ಆಹಾರ (Food)ಗಳಿರಲಿ..ಇವು ನಿಮ್ಮ ಒತ್ತಡವನ್ನು ಕಡಿಮೆ ಮಾಡಿ ರಿಲ್ಯಾಕ್ಸ್ (Relax) ಮಾಡೋದು ಖಂಡಿತ. 

ಪ್ರತಿನಿತ್ಯದ ಜೀವನದಲ್ಲಿ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಮಾಸಿಕ ಮುಟ್ಟಿನ ನೋವು, ಹೆರಿಗೆ, ಪಿಸಿಒಎಸ್‌ನಿಂದ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಾರೆ. ಇವಿಷ್ಟೇ ಅಲ್ಲದೆ, ಜೀವನ ಮತ್ತು ವೃತ್ತಿಪರ ಜೀವನವನ್ನು ನಿರ್ವಹಿಸುವುದು ಅವರಿಗೆ ಒತ್ತಡವನ್ನು ಉಂಟುಮಾಡುವ ಪ್ರಮುಖ ಸಮಸ್ಯೆಯಾಗಿದೆ. ಆಫೀಸು, ಮನೆ, ಗಂಡ, ಮಕ್ಕಳು, ಮನೆ ಮಂದಿಯನ್ನೆಲ್ಲಾ ನಿಭಾಯಿಸುವ ಪತ್ನಿ, ಸೊಸೆ, ತಾಯಿ ಮೊದಲಾದ ಪಾತ್ರಗಳನ್ನೆಲ್ಲಾ ನಿರ್ವಹಿಸುವ ಮಹಿಳೆ ಅದೆಷ್ಟೋ ಬಾರಿ ಮಾನಸಿಕವಾಗಿ ಬಳಲುತ್ತಿರುತ್ತಾಳೆ. ಎಲ್ಲಾ ಗೊಂದಲ, ಸಮಸ್ಯೆಗಳಿಂದ ಒತ್ತಡಕ್ಕೊಳಗಾಗಿ ಖಿನ್ನತೆಗೆ ಒಳಗಾಗುತ್ತಾಳೆ. 

ದೀರ್ಘಾವಧಿಯ ಒತ್ತಡವು ಕಾರ್ಟಿಸೋಲ್‌ನ ಬಿಡುಗಡೆಗೆ ಕಾರಣವಾಗುವುದರಿಂದ ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚುತ್ತದೆ. ಇದು ಸ್ಥೂಲಕಾಯಕ್ಕೂ ಕಾರಣವಾಗಬಹುದು. ಒತ್ತಡದಿಂದ ಉಂಟಾಗುವ ಸೈಟೊಕಿನ್‌ಗಳು ಪ್ರೊಇನ್‌ಫ್ಲಮೇಟರಿ ಪ್ರೋಟೀನ್‌ಗಳ ಉಲ್ಬಣಕ್ಕೆ ಕಾರಣವಾಗಬಹುದು. ಈ ಸೈಟೊಕಿನ್‌ಗಳು, ಅಧಿಕವಾಗಿ ಬಿಡುಗಡೆಯಾದಾಗ, ಟೈಪ್ 2 ಮಧುಮೇಹಕ್ಕೆ ತುತ್ತಾಗುವ ಸಾಧ್ಯತೆಯಿದೆ. ಮತ್ತು ಇದು ವಯಸ್ಸಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. 

Winter Food: ಚಳಿಗಾಲದಲ್ಲಿ ಸೇವಿಸಲು ಆಯುರ್ವೇದ ಶಿಫಾರಸು ಮಾಡಿರುವ ಆಹಾರಗಳು

ಆರೋಗ್ಯಕರ ಜೀವನಶೈಲಿ (Lifestyle), ದೇಹಕ್ಕೆ ಅಗತ್ಯವಾದ ಪ್ರೊಟೀನ್‌ (Protein)ಯುಕ್ತ ಆಹಾರ ತಿನ್ನುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಅಗತ್ಯವಾದಷ್ಟು ನಿದ್ದೆ ಮಾಡುವುದು ಇಂಥಹಾ ಒತ್ತಡದ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಹಾಗಂತ ಒತ್ತಡ ನಿಮ್ಮ ಜೀವನವನ್ನು ಬದಲಾಯಿಸುವ ವರೆಗೂ ನೀವು ಕಾಯಬೇಕಿಲ್ಲ. ಇಂಥಹಾ ಆಹಾರಗಳನ್ನು ಸೇವಿಸುವುದರಿಂದ ನೀವು ಒತ್ತಡದಲ್ಲಿದ್ದರೂ ಸುಲಭವಾಗಿ ಇಂಥಹಾ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗುತ್ತದೆ. ಒತ್ತಡವು ನಿಮ್ಮನ್ನು ಆವರಿಸಿದಾಗ ನೀವು ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುವ ಕೆಲವು ಆಹಾರಗಳಿವು.

ಸೊಪ್ಪು ತರಕಾರಿಗಳು: ಹೆಚ್ಚು ಸಸ್ಯ ಆಧಾರಿತ ಆಹಾರ (Food)ಗಳನ್ನು ಸೇವಿಸಿ. ಇವು ಉರಿಯೂತವನ್ನು ಕಡಿಮೆ ಮಾಡುತ್ತದೆ. ಆಹಾರದಲ್ಲಿ ಸೊಪ್ಪು ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುವುದರಿಂದ ಜೀವಕೋಶಗಳ ಆರೋಗ್ಯವೂ ಚೆನ್ನಾಗಿರುತ್ತದೆ.

ಬಾದಾಮಿ: ಡ್ರೈಫ್ರೂಟ್ಸ್‌ಗಳ ಸೇವನೆ ಆರೋಗ್ಯಕ್ಕೆ ಉತ್ತಮವಾಗಿದೆ. ಬಾದಾಮಿ (Almond)ಯಲ್ಲಿ ಮೆಗ್ನೀಸಿಯಮ್‌ ಅಂಶ ಸಮೃದ್ಧವಾಗಿವೆ. ಇದು ದೇಹದಲ್ಲಿ ಕಂಡುಬರುವ ದೀರ್ಘಕಾಲದ ಬಳಲಿಕೆ, ನಿದ್ರಾಹೀನತೆ, ಆತಂಕ, ಖಿನ್ನತೆ ಮೊದಲಾದ ಸಮಸ್ಯೆಗಳನ್ನು ನಿವಾರಿಸುತ್ತದೆ.

Weight Loss Diet Plan: ಫಿಟ್ ಆಗಿರೋಕೆ ತಿನ್ನೋದೆಲ್ಲಾ ಬಿಟ್ಟು ಕಷ್ಟಪಡಬೇಕಾಗಿಲ್ಲ..!

ಬೆರಿ ಹಣ್ಣುಗಳು: ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಬೆರಿಹಣ್ಣುಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿದೆ. ಬೆರಿಹಣ್ಣುಗಳ ಸೇವನೆ ಒತ್ತಡದಿಂದ ಉಂಟಾಗುವ ಸೆಲ್ಯುಲಾರ್ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

ಗೋಡಂಬಿ: ಗೋಡಂಬಿ (Cashew Nuts) ಬೀಜಗಳು ಸತುವಿನ ಉತ್ತಮ ಮೂಲವಾಗಿದೆ ಮತ್ತು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸಲು ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಬಾಳೆಹಣ್ಣು: ಫೈಬರ್ ಮತ್ತು ಪೋಷಕಾಂಶಗಳ ಪ್ರಮಾಣ ಬಾಳೆಹಣ್ಣಿನಲ್ಲಿ ಅಧಿಕವಾಗಿರುತ್ತದೆ. ಬಾಳೆಹಣ್ಣಿನಲ್ಲಿರುವ ಅಮೈನೊ ಆಸಿಡ್ ಟ್ರಿಪ್ಟೊಫಾನ್‌ನಲ್ಲಿ ಸಮೃದ್ಧವಾಗಿವೆ, ಇದು ಒತ್ತಡದ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿರುವ ಸಿರೊಟೋನಿನ್‌ ಅಂಶ ಖಿನ್ನತೆಗೊಳಗಾದ ಮನಸ್ಥಿತಿಯನ್ನು ಸುಧಾರಿಸುತ್ತದೆ.

ಸಿಹಿ ಗೆಣಸು: ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಬಿ 6 ಮತ್ತು ಅಮೈನೋ ಆಮ್ಲ ಸಿಹಿಗೆಣಸು (Sweet Potato) ಗಳಲ್ಲಿ ಸಮೃದ್ಧವಾಗಿವೆ. ಇದು ಸ್ವಾಭಾವಿಕವಾಗಿ ಖಿನ್ನತೆಯನ್ನು ಕಡಿಮೆ ಮಾಡುತ್ತದೆ., ಜೊತೆಗೆ ಬಾಳೆಹಣ್ಣಿನಂತೆಯೇ ಅವು ಟ್ರಿಪ್ಟೊಫಾನ್‌ನ ಉತ್ತಮ ಮೂಲವಾಗಿದೆ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ.

ಕಪ್ಪು ಬೀನ್ಸ್: ಕಪ್ಪು ಬೀನ್ಸ್ ಪರಿಪೂರ್ಣ ಆರಾಮದಾಯಕ ಆಹಾರವಾಗಿದೆ. ಅವುಗಳು ಮೆಗ್ನೀಸಿಯಮ್‌ನಲ್ಲಿ ಸಮೃದ್ಧವಾಗಿದ್ದು, ನರಮಂಡಲವನ್ನು ಸಡಿಲಗೊಳಿಸುತ್ತದೆ ಮತ್ತು ಒತ್ತಡದ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ.

ಕಪ್ಪು ಎಳ್ಳು ಬೀಜಗಳು: ವಿಟಮಿನ್ ಬಿ 1ನಲ್ಲಿ ಕಪ್ಪು ಎಳ್ಳು ಬೀಜಗಳು ಸಮೃದ್ಧವಾಗಿವೆ. ಇದು ನರಮಂಡಲ ಮತ್ತು ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?