ಮಗಳ ಮದ್ವೆಯ ದಿನ ಹೃದಯಾಘಾತ, ತಂದೆ ಸಾವು; ಹೆಚ್ಚು ಖುಷಿಯಾದ್ರೂ ಹಾರ್ಟ್‌ಅಟ್ಯಾಕ್‌ ಆಗುತ್ತಾ?

By Vinutha Perla  |  First Published Sep 5, 2023, 9:21 AM IST

ಮಗಳ ಮದುವೆ ಅಂದ್ಮೇಲೆ ತಂದೆ-ತಾಯಿಗಂತೂ ಒಂಚೂರು ಬಿಡುವಿರುವುದಿಲ್ಲ. ಎಲ್ಲಾ ಕಾರ್ಯಕ್ರಮ ಮುಗಿದು ಮಗಳನ್ನು ಅತ್ತೆ ಕಳುಹಿಸಿದ ನಂತರವೇ ತಂದೆ-ತಾಯಿ ನಿರಾಳವಾಗುತ್ತಾರೆ. ಆದರೆ ಈ ಮದುವೆ ಮನೆಯಲ್ಲಿ ಮಾತ್ರ ಮಗಳ ಮದುವೆ ಸಂಭ್ರಮದಲ್ಲಿ ದುರಂತವೊಂದು ನಡೆದುಹೋಗಿದೆ.


ಮನೆಯಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿದ್ದರೆ ಅಲ್ಲಿ ಗಲಾಟೆ, ನೂಕುನುಗ್ಗಲು ಮಾಮೂಲಿಯಾಗಿರುತ್ತದೆ. ಇಡೀ ಮನೆ ಬಂಧು ಮಿತ್ರರಿಂದ ತುಂಬಿರುತ್ತದೆ. ಎಲ್ಲರೂ ಸೇರಿ ಮದುವೆ ಕೆಲಸ ಮಾಡುತ್ತಿರುತ್ತಾರೆ. ಮನೆಗೆ ಬಣ್ಣ ಬಳಿಯುವುದರಿಂದ ಶುರುವಾಗಿ ಮದುವೆ, ಆರತಕ್ಷತೆ ತನಕ ಎಲ್ಲಾ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಯುತ್ತಿರುತ್ತದೆ. ಮಗಳ ಮದುವೆ ಅಂದ್ಮೇಲೆ ತಂದೆ-ತಾಯಿಗಂತೂ ಒಂಚೂರು ಬಿಡುವಿರುವುದಿಲ್ಲ. ಎಲ್ಲಾ ಕಾರ್ಯಕ್ರಮ ಮುಗಿದು ಮಗಳನ್ನು ಅತ್ತೆ ಕಳುಹಿಸಿದ ನಂತರವೇ ತಂದೆ-ತಾಯಿ ನಿರಾಳವಾಗುತ್ತಾರೆ. ಆದರೆ ಈ ಮದುವೆ ಮನೆಯಲ್ಲಿ ಮಾತ್ರ ಮಗಳ ಮದುವೆ ಸಂಭ್ರಮದಲ್ಲಿ ದುರಂತವೊಂದು ನಡೆದುಹೋಗಿದೆ.

ಖುಷಿಯಿಂದ ಓಡಾಡಬೇಕಿದ್ದ ಅಪ್ಪ, ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ದಾರುಣ ಘಟನೆ ನಡೆದಿರುವುದು ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ. ಮದುವೆ (Marriage) ಸಂಭ್ರಮದ ಖುಷಿಯಲ್ಲಿ ತೇಲಾಡುತ್ತಿದ್ದ ಮನೆಯಲ್ಲಿ ಕೆಲವೇ ಗಂಟೆಗಳಲ್ಲಿ ಸೂತಕದ ಛಾಯೆ ಆವರಿಸಿದೆ.

Tap to resize

Latest Videos

40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೃದಯಾಘಾತ ಆಗೋದಕ್ಕೆ ಇದುವೇ ಕಾರಣ!

ಮಗಳ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕ
ಕರೀಂನಗರ ಜಿಲ್ಲೆಯ ಶಂಕರಪಟ್ಟಣ ಮಂಡಲದ ಅಂಬಲಪುರ ಗ್ರಾಮದ ಎರ್ರಾಳ ರಾಮುಲು ಟ್ರ್ಯಾಕ್ಟರ್ ಮೆಕ್ಯಾನಿಕ್ ಆಗಿರುವ ರಾಮುಲು-ಮಂಜುಳಾ ದಂಪತಿಗೆ ಮೂವರು ಹೆಣ್ಣು ಮಕ್ಕಳು. ಇದರಲ್ಲಿ ಹಿರಿಯ ಮಗಳು ಲಾವಣ್ಯಳ ಮದುವೆ ನಿಶ್ಚಯವಾಗಿತ್ತು. ಸೆಪ್ಟೆಂಬರ್ 3ರ ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ಮದುವೆ ಸಮಾರಂಭ ನಡೆಯುತ್ತಿತ್ತು. ಸಮೀಪದ ಕೊತಗಟ್ಟು ಮತ್ಸ್ಯಗಿರಿಂದ್ರಸ್ವಾಮಿ ಗುತ್ತದಲ್ಲಿ ಮದುವೆ ನಡೆಯುತ್ತಿರುವಾಗಲೇ ಅನಿರೀಕ್ಷಿತ ದುರಂತವೊಂದು ನಡೆದಿದೆ. ಇನ್ನೆರಡು ಗಂಟೆಯಲ್ಲಿ ಮಗಳ ಮದುವೆ ನಡೆಯಲಿದೆ ಅನ್ನೋವಾಗ್ಲೇ ರಾಮುಲು ಹಠಾತ್ ಹೃದಯಾಘಾತಕ್ಕೆ (Heartattack) ಒಳಗಾಗಿ ಕುಸಿದು ಬಿದ್ದಿದ್ದಾರೆ. 

ಎದೆ ನೋವು ಕಾಣಿಸಿಕೊಂಡು ಕೆಳಗೆ ಬಿದ್ದಿದ್ದು, ರಾಮುಲು ಸಂಬಂಧಿಕರು ಅವರನ್ನು ಗಮನಿಸಿ ಹುಜೂರಾಬಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಮು ಅವರನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ರಾಮುಲು ನಿಧನಕ್ಕೆ ಪತ್ನಿ, ಮಕ್ಕಳು, ಸಂಬಂಧಿಕರು ಕಣ್ಣೀರಿಟ್ಟಿದ್ದು, ಮದುವೆ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಅಲ್ಲಿಯವರೆಗೂ ಮೋಜು ಮಸ್ತಿಯಲ್ಲಿದ್ದ ತಂದೆ ಕುಸಿದು ಬಿದ್ದದ್ದನ್ನು ಕಂಡು ವರ ಹಾಗೂ ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಹೃದಯಾಘಾತದಿಂದ ರಾಮುಲು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ಅಧಿಕ; ಯಾಕೆ ಹೀಗೆ?

ಅತಿಯಾದ ಸಂತೋಷದಿಂದಲೂ ಹೃದಯಾಘಾತವಾಗುತ್ತಾ? 
ಕೇವಲ ಸಡನ್‌ ಶಾಕ್‌ ಆದಾಗಲೋ, ಹೆಚ್ಚು ದುಃಖವಾದಗಲೋ ಮಾತ್ರವಲ್ಲ ಹೃದಯಾಘಾತವಾಗುವುದು. ಅತಿಯಾದ ಸಂತೋಷ (Happiness)ದಿಂದಲೂ ಹೃದಯಾಘಾತವಾಗುತ್ತೆ ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ. ಮಗುವಿನ ಜನನ, ಮದುವೆ, ಪಾರ್ಟಿ, ಕ್ರೀಡೆಯಲ್ಲಿ ದೊಡ್ಡ ಗೆಲುವು ಮೊದಲಾದ ಸಮಾರಂಭಗಳಲ್ಲಿ ಹಾರ್ಟ್‌ ಅಟ್ಯಾಕ್ ಆದ ಬಗ್ಗೆ ನೀವು ಕೇಳಿರಬಹುದು. ಇದನ್ನು 'ಬ್ರೋಕನ್ ಹಾರ್ಟ್ ಸಿಂಡ್ರೋಮ್' ಅಥವಾ ಟಕೋಟ್ಸುಬೊ ಸಿಂಡ್ರೋಮ್ ಎಂದು ಕರೆಯುತ್ತಾರೆ. 

ಇದು ಸಂತೋಷದಾಯಕ ಘಟನೆಯು ಹೃದಯ ಸ್ನಾಯುಗಳ ಹಠಾತ್ ದುರ್ಬಲಗೊಳ್ಳುವಿಕೆಗೆ ಹೇಗೆ ಕಾರಣವಾಗಬಹುದು ಎಂಬುದನ್ನು ತಿಳಿಸುತ್ತದೆ, ಇದರಿಂದಾಗಿ ದೇಹದಾದ್ಯಂತ ಆಮ್ಲಜನಕ-ಸಮೃದ್ಧ ರಕ್ತವನ್ನು ಪಂಪ್ ಮಾಡುವ ಎಡ ಕುಹರವು ಕೆಳಭಾಗದಲ್ಲಿ ಅಸಹಜವಾಗಿ ಸ್ಫೋಟಗೊಳ್ಳುತ್ತದೆ. ತೀವ್ರವಾದ ಎದೆ ನೋವು (Chest pain) ಮತ್ತು ಉಸಿರಾಟದ ತೊಂದರೆಯ ಜೊತೆಗೆ, ಈ ಸ್ಥಿತಿಯು ಹೃದಯಾಘಾತ ಮತ್ತು ಸಾವಿಗೆ ಕಾರಣವಾಗಬಹುದು. 

click me!