ಹಲ್ಲಿನ ಸ್ವಚ್ಛತೆಗೆ ಟೂತ್ ಪೇಸ್ಟ್ ಬಳಕೆ ಸಾಮಾನ್ಯವಾಗಿದೆ. ಕೆಲ ಟೂತ್ ಪೇಸ್ಟ್ ಉಪ್ಪಿನ ಗುಣವನ್ನು ಹೊಂದಿರುತ್ತದೆ. ಅದ್ರ ಬಗ್ಗೆ ಈಗಿನ ದಿನಗಳಲ್ಲಿ ಜಾಹೀರಾತು ಕೂಡ ಜೋರಾಗಿ ನಡೆದಿದೆ. ಈ ಉಪ್ಪಿರೋ ಟೂತ್ ಪೇಸ್ಟ್ ನಮ್ಮ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.
ನಿಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪಿದ್ಯೇ? ಟಿವಿ ನೋಡ್ತಿದ್ದರೆ ಪದೇ ಪದೇ ಕಾಣಿಸಿಕೊಳ್ಳುವ ಜಾಹೀರಾತುಗಳಲ್ಲಿ ಇದೂ ಒಂದು. ಟೂತ್ ಪೇಸ್ಟ್ ಕಂಪನಿಗಳು ನಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪಿದೆ, ಅದನ್ನು ಬಳಸಿ ನಿಮ್ಮ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಿ ಎನ್ನುವುದನ್ನು ಜನರಿಗೆ ತಿಳಿಸಲು ಈ ಮಾರ್ಗ ಬಳಸ್ತಿವೆ. ಇದು ಸ್ಪರ್ಧಾ ಯುಗ. ಮಾರುಕಟ್ಟೆಗೆ ಅನೇಕ ಟೂತ್ ಪೇಸ್ಟ್ ಕಂಪನಿಗಳು ಲಗ್ಗೆ ಇಟ್ಟಿವೆ. ಅದ್ರಲ್ಲಿ ಯಾವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು, ಯಾವುದು ಹಾನಿಕರ ಎಂಬುದನ್ನು ಪತ್ತೆ ಹಚ್ಚೋದೇ ಕಷ್ಟವಾಗಿದೆ. ಉಪ್ಪಿರುವ ಟೂತ್ ಪೇಸ್ಟ್ ಬಳಸಿದ್ರೆ ನಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡಬಹುದಾ ಎಂಬ ಗೊಂದಲ ಕೂಡ ಗ್ರಾಹಕರಲ್ಲಿದೆ.
ಟೂತ್ ಪೇಸ್ಟ್ ನಲ್ಲಿದೆ ಈ ಎಲ್ಲ ರಾಸಾಯನಿಕ : ನಿಮಗೆ ತಿಳಿದಿರುವಂತೆ ಟೂತ್ ಪೇಸ್ಟ್ ಬಳಸಲು ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ರಾಸಾಯನಿಕಗಳು ನಮ್ಮ ಹಲ್ಲಿನ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತವೆ. ಟೂತ್ ಪೇಸ್ಟ್ ನಲ್ಲಿ ನೀವು ಅಬ್ರೆಸಿವ್ಸ (Abrasives) ಫ್ಲೋರೈಡ್ (Fluorides), ಮಾರ್ಜಕ ( Detergents) and ಹ್ಯೂಮೆಕ್ಟಂಟ್ (Humectants) ರಾಸಾಯನವನ್ನು ನೋಡ್ಬಹುದು. ಹಲ್ಲಿನಲ್ಲಿರುವ ಪ್ಲೇಕ್ ಹಾಗೂ ಕೊಳಕನ್ನು ತೆಗೆದು ಹಾಕಲು ಅಬ್ರೆಸಿವ್ಸ್ ಸಹಕಾರಿಯಾಗಿವೆ. ಫ್ಲೋರೈಡ್ ದಂತಕವಚವನ್ನು ಬಲಪಡಿಸುವ ಮೂಲಕ ಕುಳಿಗಳು ಆಗದಂತೆ ತಡೆಯುತ್ತವೆ. ಟೂತ್ ಪೇಸ್ಟ್ ನಲ್ಲಿರುವ ಹ್ಯೂಮೆಕ್ಟಂಟ್‌ಗಳು ಟೂತ್‌ಪೇಸ್ಟ್ ಒಣಗದಂತೆ ಕಾಪಾಡುವ ಕೆಲಸವನ್ನು ಮಾಡುತ್ತವೆ.
undefined
HEALTH TIPS: ದಿನವಿಡೀ ಗಡಿಬಿಡಿ ಯಾಕ್ಮಾಡ್ತೀರಿ, ಬೆಳಗ್ಗೆ ಬೇಗ ಎದ್ದು ನೋಡಿ ಟೆನ್ಶನ್ನೇ ಇರಲ್ಲ
ಟೂತ್ ಪೇಸ್ಟ್ ಮತ್ತು ಉಪ್ಪು : ಈ ರಾಸಾಯನಿಕಗಳ ಜೊತೆ ಟೂತ್ ಪೇಸ್ಟ್ ನಲ್ಲಿ ಉಪ್ಪು ಇರುವುದು ಕೂಡ ಮುಖ್ಯವಾಗುತ್ತದೆ. ಉಪ್ಪು ನಿಮ್ಮ ಹಲ್ಲುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉಪ್ಪಿನ ದೊಡ್ಡ ಕಾರ್ಯವೆಂದರೆ ಬಾಯಿಯಲ್ಲಿ ಲಾಲಾರಸವನ್ನು ಹೆಚ್ಚಿಸುವುದು. ಇದರಿಂದ ಬಾಯಿಯಲ್ಲಿರುವ ರೋಗಾಣುಗಳು ನಿವಾರಣೆಯಾಗುತ್ತವೆ. ದೀರ್ಘಕಾಲದವರೆಗೆ ಬಾಯಿಯನ್ನು ಮುಚ್ಚುವುದರಿಂದ, ಬಾಯಿಯಲ್ಲಿ ಶಿಲೀಂಧ್ರದ ಪ್ರಮಾಣವು ಹೆಚ್ಚಾಗುತ್ತದೆ ಮತ್ತು ಬಾಯಿಯಿಂದ ವಾಸನೆ ಬರಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಉಪ್ಪಿನಲ್ಲಿರುವ ಮೆಗ್ನೀಸಿಯಮ್ ಕ್ಲೋರೈಡ್ ಲಾಲಾರಸವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಈ ಲಾಲಾರಸ ರೋಗಾಣುಗಳಿಂದ ರಕ್ಷಿಸುತ್ತದೆ. ಇದಲ್ಲದೆ, ಉಪ್ಪು ಹಲ್ಲುಗಳಲ್ಲಿರುವ ನೈಸರ್ಗಿಕ ದಂತಕವಚವನ್ನು ಕ್ಯಾಲ್ಸಿಯಂ ಮತ್ತು ಫ್ಲೋರೈಡ್ ಗಳಿಂದ ಹೆಚ್ಚು ಸಂವೇದನಾಶೀಲವಾಗಿಸುತ್ತದೆ. ಒಸಡುಗಳ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುವ ಶಕ್ತಿಯನ್ನು ಉಪ್ಪು ಹೊಂದಿದೆ. ನಮ್ ಟೂತ್ ಪೇಸ್ಟ್ ನಲ್ಲಿ ಉಪ್ಪಿರುವುದು ಬಹಳ ಒಳ್ಳೆಯದು.
ಟೂತ್ ಪೇಸ್ಟ್ ತಯಾರಿಸಲು ಯಾವ ಉಪ್ಪನ್ನು ಬಳಸಲಾಗುತ್ತದೆ ? : ಟೂತ್ ಪೇಸ್ಟ್ ಗೆ ಟೇಬಲ್ ಉಪ್ಪಿನ ಬಳಕೆ ಮಾಡಲಾಗುತ್ತದೆ. ಇದು ಸೌಮ್ಯವಾಗಿದ್ದು, ಅಪಘರ್ಷಕವಾಗಿ ಕೆಲಸ ಮಾಡುತ್ತದೆ. ಹಲ್ಲುಗಳ ಕಲೆಯನ್ನು ತೆಗೆಯಲು ಸಹಕಾರಿ. ಕೆಲ ಉಪ್ಪಿರುವ ಟೂತ್ ಪೇಸ್ಟ್ ನಲ್ಲಿ ಬೇಕಿಂಗ್ ಸೋಡಾವನ್ನು ನೀವು ಕಾಣಬಹುದು. ಇದು ಮತ್ತೊಂದು ರೀತಿಯ ಉಪ್ಪಾಗಿದೆ. ಅದರಲ್ಲಿ ಸೋಡಿಯಂ ಬೈಕಾರ್ಬನೇಟ್ ಇರುತ್ತದೆ.
ರಾತ್ರಿ ಮಲಗೋ ಮುಂಚೆ ಹಾಲು ಕುಡೀತೀರಾ? ತೂಕ ಹೆಚ್ಚಳದ ಜೊತೆ ಇಷ್ಟೆಲ್ಲಾ ಸಮಸ್ಯೆಯಾಗುತ್ತೆ
ಸಾಮಾನ್ಯ ಟೂತ್ ಪೇಸ್ಟ್ ಗೆ ಉಪ್ಪು ಹಾಕಿ ಹಲ್ಲುಜ್ಜಬಹುದೇ? : ಹಿಂದಿನ ಕಾಲದಲ್ಲಿ ಜನರು ಹಲ್ಲುಜ್ಜಲು ಅನೇಕ ವಸ್ತುಗಳನ್ನು ಬಳಸುತ್ತಿದ್ದರು. ಕಲ್ಲಿದ್ದಲು, ಮಾವಿನ ದಂಟು, ಬೇವಿನ ದಂಟು, ಬೂದಿ ಹೀಗೆ ನಾನಾ ವಸ್ತುಗಳನ್ನು ಬಳಸಿ ಹಲ್ಲುಜ್ಜುತ್ತಿದ್ದರು. ಈಜಿಪ್ಟ್ ನಲ್ಲಿ ಮೊದಲ ಬಾರಿ ಹಲ್ಲುಜ್ಜಲು ಒಂದು ರೀತಿಯ ಪೇಸ್ಟ್ ಬಳಸುತ್ತಿದ್ದರು. ಆದರೆ ಅದಕ್ಕೆ ಪೇಸ್ಟ್ ಎಂದು ಕರೆಯುತ್ತಿರಲಿಲ್ಲ. ನಂತ್ರ ಗ್ರೀಕರು ಮತ್ತು ರೋಮನ್ನರು ಪೇಸ್ಟ್ ಬಳಕೆ ಶುರು ಮಾಡಿದ್ರು ಎನ್ನಲಾಗುತ್ತದೆ.
ಈಗ ಸಾಕಷ್ಟು ಟೂತ್ ಪೇಸ್ಟ್ ಮಾರುಕಟ್ಟೆಯಲ್ಲಿದೆ. ಲವಣಯುಕ್ತ ಟೂತ್ ಪೇಸ್ಟ್ ಬೆಲೆ ಹೆಚ್ಚು. ಹಾಗಾಗಿ ಸಾಮಾನ್ಯ ಟೂತ್ ಪೇಸ್ಟ್ ಮೇಲೆ ಉಪ್ಪು ಹಾಕಿ ಹಲ್ಲುಜ್ಜಿದ್ರೆ ಹಣ ಉಳಿಯುತ್ತದೆ ಎಂದು ನೀವು ಭಾವಿಸಿದ್ರೆ ಇದು ನಿಮ್ಮ ಆರೋಗ್ಯ ಹಾಳು ಮಾಡುತ್ತದೆ. ಲವಣಯುಕ್ತ ಪೇಸ್ಟ್ ಗೆ ಬೇರೆ ರಾಸಾಯನಿಕ ಬೆರೆಸಿರಲಾಗುತ್ತದೆ. ಅದೇ ನೀವು ನೇರವಾಗಿ ಉಪ್ಪನ್ನು ಬಳಸಿದ್ರೆ ಅದು ಘರ್ಷಣೆಯನ್ನುಂಟು ಮಾಡುವ ಜೊತೆಗೆ ನಿಮ್ಮ ದಂತಕವಚವನ್ನು ಹಾನಿಗೊಳಿಸುತ್ತದೆ.