ಮನೆಯಲ್ಲಿ ಮೆಣಸಿನ ಪುಡಿ ಮಾಡಿದಾಗ ಮೂಗು ಮುಚ್ಚಿಕೊಂಡು ಅದನ್ನು ಬಾಕ್ಸ್ ಗೆ ಹಾಕ್ತೇವೆ. ಅದ್ರ ಘಾಟು ಮೂಗಿಗೆ ಹೋದ್ರೆ ಕೆಮ್ಮು ಬರಲು ಶುರುವಾಗುತ್ತೆ. ಉದ್ದೇಶಪೂರ್ವವಾಗಿ ಅದ್ರ ವಾಸನೆ ತೆಗೆದುಕೊಳ್ಳೋದಲ್ಲದೆ ಮೂಗಿಗೆ ಹಚ್ಚಿಕೊಂಡ್ರೆ ಏನಾಗ್ಬೇಡ?
ಪ್ರತಿಯೊಂದು ವಸ್ತುವಿನ ವಾಸನೆ ತೆಗೆದುಕೊಳ್ಳುವ ಅಭ್ಯಾಸ ಕೆಲವರಿಗಿರುತ್ತದೆ. ಕೈನಲ್ಲಿ ಆಹಾರವಿರಲಿ ಇಲ್ಲ ಬಟ್ಟೆ ಇರಲಿ, ಪುಸ್ತಕವಿರಲಿ, ಹೂ ಇರಲಿ ಅದನ್ನು ಮೂಗಿನ ಹತ್ತಿರಕ್ಕೆ ತಂದು ವಾಸನೆ ತೆಗೆದುಕೊಳ್ತಾರೆ. ಕೆಲವೊಂದು ವಸ್ತುಗಳ ವಾಸನೆ ಹಿತವೆನ್ನಿಸುತ್ತದೆ. ಮತ್ತೆ ಮತ್ತೆ ತೆಗೆದುಕೊಳ್ಳಬೇಕೆನ್ನಿಸುತ್ತದೆ. ಹಾಗಂತ ಎಲ್ಲ ವಸ್ತುಗಳ ವಾಸನೆ ತೆಗೆದುಕೊಂಡ್ರೆ ಯಡವಟ್ಟಾಗೋದು ಇದೆ. ನಮ್ಮ ದೇಹಕ್ಕೆ ಆ ವಸ್ತುವಿನ ವಾಸನೆ ಅಲರ್ಜಿಯಾಗಿದ್ದು, ಅದು ತಿಳಿಯದೇ ನಾವು ವಾಸನೆ ತೆಗೆದುಕೊಂಡ್ರೆ ಮುಂದೆ ಪಡಬಾರದ ಕಷ್ಟಪಡಬೇಕಾಗುತ್ತದೆ. ಬ್ರೆಜಿಲ್ ನ ಯುವತಿಗೂ ಇದೇ ಆಗಿದೆ. ತಮಾಷೆಗೆ ಆಕೆ ಮಾಡಿದ ಕೆಲಸ ಈಗ ಆರು ತಿಂಗಳಿಂದ ಆಸ್ಪತ್ರೆ ಬೆಡ್ ನಲ್ಲಿ ಸಾವು –ಬದುಕಿನ ಮಧ್ಯೆ ಹೋರಾಡುವಂತಾಗಿದೆ. ಅಷ್ಟಕ್ಕೂ ಆ ಯುವತಿ ಬಾಳಲ್ಲಿ ಆಗಿದ್ದೇನು ಎಂಬುದರ ವಿವರ ಇಲ್ಲಿದೆ.
ಮೆಣಸಿನ ಪುಡಿ (Chilli Powder) ವಾಸನೆ ತೆಗೆದುಕೊಂಡು ಆಸ್ಪತ್ರೆ ಸೇರಿದ ಯುವತಿ : ಘಟನೆ ನಡೆದಿರೋದು ಬ್ರೆಜಿಲ್ (Brazil) ನ ಅನ್ನಾಪೊಲಿಸ್‌ನಲ್ಲಿ. 25 ವರ್ಷದ ಥೈಸ್ ಆಸ್ಪತ್ರೆ (Hospital) ಗೆ ದಾಖಲಾಯ ಯುವತಿ. ಈ ವರ್ಷ ಫೆಬ್ರವರಿಯಲ್ಲಿ ಥೈಸ್ ಜೀವನದಲ್ಲಿ ವಿಚಿತ್ರ ಘಟನೆ ನಡೆದಿದೆ. ಮನೆಯಲ್ಲಿ ಬಾಯ್ ಫ್ರೆಂಡ್ ಜೊತೆ ಅಡುಗೆ ಮಾಡುತ್ತಿದ್ದಾಗ ಥೈಸ್, ಉಪ್ಪಿನಕಾಯಿಗೆ ಬಳಸುವ, ಹೆಚ್ಚು ಖಾರ ಹಾಗೂ ಕಟುವಾಗಿರುವ ಮೆಣಸಿನಕಾಯಿಯ ವಾಸನೆಯನ್ನು ತೆಗೆದುಕೊಂಡಿದ್ದಾಳೆ. ಥೈಸ್ ಗೆ ತಾನೆಂತ ತಪ್ಪು ಮಾಡ್ತಿದ್ದೇನೆ ಎಂಬುದು ಆಗ ಗೊತ್ತಾಗಲಿಲ್ಲ. ಥೈಸ್ ಮೆಣಸಿನಕಾಯಿಯ ವಾಸನೆಯನ್ನು ತೆಗೆದುಕೊಂಡಿದ್ದಲ್ಲದೆ ಅದನ್ನು ಮೂಗಿನ ಮೇಲೆ ಉಜ್ಜಿದ್ದಾಳೆ. ಆಕೆ ಹೀಗೆ ಮಾಡ್ತಿದ್ದಂತೆ ಗಂಟಲಿನಲ್ಲಿ ತೀವ್ರವಾಗಿ ತುರಿಕೆ ಕಾಣಿಸಿಕೊಂಡಿದೆ. ಥೈಸ್ ಳನ್ನು ತಕ್ಷಣ ಅನ್ನಾಪೊಲಿಸ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
HEALTH TIPS: ದಿನವಿಡೀ ಗಡಿಬಿಡಿ ಯಾಕ್ಮಾಡ್ತೀರಿ, ಬೆಳಗ್ಗೆ ಬೇಗ ಎದ್ದು ನೋಡಿ ಟೆನ್ಶನ್ನೇ ಇರಲ್ಲ
ಗಂಭೀರ ಕಾಯಿಲೆಗೆ ಗುರಿಯಾದ ಥೈಸ್ : ವೈದ್ಯರು ಥೈಸ್ ಅನ್ನು ಪರೀಕ್ಷಿಸಿದಾಗ, ಥೈಸ್ ಮೆದುಳು ಊದಿಕೊಂಡಿರುವುದು ಕಂಡುಬಂದಿದೆ. ಇದನ್ನು ಎಡಿಮಾ ಎಂದು ಕರೆಯಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಥೈಸ್ ಮೆಣಸಿನಕಾಯಿಗೆ ಅಲರ್ಜಿಯನ್ನು ಹೊಂದಿದ್ದರು. ಇದರಿಂದಾಗಿ ಅವರಿಗೆ ಎಡಿಮಾ ರೋಗ ಕಾಣಿಸಿಕೊಂಡಿದೆ. ಮೆಣಸಿನ ಕಾಯಿ ವಾಸನೆ ತೆಗೆದುಕೊಂಡು ಆಸ್ಪತ್ರೆ ಸೇರಿದ ಥೈಸ್ ಕೆಲ ದಿನ ಕೋಮಾದಲ್ಲಿದ್ದರು. ನಂತ್ರ ಎಚ್ಚರಗೊಂಡ ಥೈಸ್ ಗೆ ವೈದ್ಯರು ಚಿಕಿತ್ಸೆ ನೀಡಿದ್ದರು. ಕೆಲ ದಿನಗಳ ಚಿಕಿತ್ಸೆ ನಂತ್ರ ಥೈಸ್, ಜುಲೈ 31ರಂದು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದರು. ಆದ್ರೆ ಮರುದಿನವೇ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಅವರ ಮೂತ್ರದ ಬಣ್ಣ ಬದಲಾಗಿತ್ತು. ಹಾಗಾಗಿ ಮತ್ತೆ ಅವರನ್ನು ಆಸ್ಪತ್ರೆಗೆ ಸೇರಿಸಲಾಯ್ತು. ಥೈಸ್ ಗೆ ಮೊದಲೇ ಅಸ್ತಮಾ ಹಾಗೂ ಬ್ರಾಂಕೈಟಿಸ್ ಖಾಯಿಲೆ ಇತ್ತಂತೆ.
ಆರೋಗ್ಯಕ್ಕೆ ಉತ್ತಮವಾದ ಮೆಣಸಿನಕಾಯಿ ತಳಿ ಯಾವುದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ
ಗಂಭೀರವಾಗಿದೆ ಥೈಸ್ ಪರಿಸ್ಥಿತಿ : ಚಿಕಿತ್ಸೆ ನಂತ್ರ ಥೈಸ್ ಮನೆಗೆ ಹೋಗಲು ಸಿದ್ಧ ಎಂದು ವೈದ್ಯರು ಹೇಳಿದ್ದರು. ಆದ್ರೆ ಆಗಸ್ಟ್ 10ರಂದು ಥೈಸ್ ಗೆ ಬ್ರಾಂಕೋಸ್ಪಾಸ್ಮ್ ಎಂಬ ಹೊಸ ಸಮಸ್ಯೆ ಕಾಣಿಸಿಕೊಂಡಿದೆ. ಬ್ರಾಂಕೋಸ್ಪಾಸ್ಮ್ ನಲ್ಲಿ ಶ್ವಾಸನಾಳದಲ್ಲಿ ಬಿಗಿತ ಕಾಣಿಸಿಕೊಳ್ಳುತ್ತದೆ. ಥೈಸ್ ಗೆ ಒಂದಾದ್ಮೇಲೆ ಒಂದರಂತೆ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗಿದೆ. ಆಕೆಗೆ ನಡೆದಾಡೋದು ಕಷ್ಟವಾಗ್ತಿದೆ. ಮಾತನಾಡಲು ಕಷ್ಟಪಡುವಂತಾಗಿದೆ. ಆಮ್ಲಜನಕದ ಕೊರತೆಯಿಂದ ಉಂಟಾಗುವ ನರಸಂಬಂಧಿ ಸಮಸ್ಯೆ ಆಕೆಯನ್ನು ಮತ್ತಷ್ಟು ಹೈರಾಣ ಮಾಡಿದೆ. ಆಕೆ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಲವಲವಿಕೆಯಿಂದ ಇದ್ದ ಥೈಸಳನ್ನು ತಾಯಿ ಮಿಸ್ ಮಾಡಿಕೊಳ್ತಿದ್ದಾರಂತೆ. ಮಗಳ ಸ್ಥಿತಿ ನೋಡಿ ಕಣ್ಣಿರು ಹಾಕ್ತಿರುವ ಅವರು ಆಕೆ ಸುಧಾರಿಸಲು ಇನ್ನಷ್ಟು ಕಾಲ ಆಸ್ಪತ್ರೆಯಲ್ಲಿ ಇರೋದು ಅನಿವಾರ್ಯ ಎನ್ನುತ್ತಾರೆ.