
Health Benefits of Psyllium Husk: ಬೆಳಗ್ಗೆ ಎದ್ದ ತಕ್ಷಣ ಹೊಟ್ಟೆ ಸ್ವಚ್ಛವಾಗಿಲ್ಲದಿದ್ದರೆ ಇಡೀ ದಿನ ಕಸಿವಿಸಿ. ಇದರಿಂದ ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಂಡರೆ, ಮತ್ತೆ ಕೆಲವರಿಗೆ ಹೊಟ್ಟೆ ಹಸಿವೇ ಆಗುವುದಿಲ್ಲ. ಆದ್ದರಿಂದ ಹೊಟ್ಟೆಯನ್ನು ಸ್ವಚ್ಛಗೊಳಿಸುವುದು ನಮ್ಮ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ಶಾಂತಿಗೂ ಸಹ ಮುಖ್ಯವಾಗಿದೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಹೊಟ್ಟೆಯನ್ನು ಸ್ವಚ್ಛಗೊಳಿಸದಿದ್ದರೆ ದೇಹವು ವಿಷಕಾರಿ ವಸ್ತುಗಳಿಗೆ ನೆಲೆಯಾಗುತ್ತದೆ. ಇಷ್ಟೆಲ್ಲಾ ಸಮಸ್ಯೆಯಾದಾಗ ನೀವು ಆಹಾರದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಅಗತ್ಯವೇನಿಲ್ಲ, ಬದಲಿಗೆ ಅಡುಗೆಮನೆಯಲ್ಲಿ ಇರಿಸಲಾಗಿರುವ ಒಂದು ಸಾಮಾನ್ಯ ಪದಾರ್ಥವು ಈ ಸಮಸ್ಯೆಯನ್ನು ಅದರ ಮೂಲದಿಂದಲೇ ನಿರ್ಮೂಲನೆ ಮಾಡಬಹುದು. ಹೌದು, ನಾವಿಂದು ಹೇಳುತ್ತಿರುವ ಆ ಪದಾರ್ಥದ ಹೆಸರು ಇಸಾಬ್ಗೋಲ್ (Isabgol). ಇದು ಫೈಬರ್‌ನಿಂದ ಸಮೃದ್ಧವಾಗಿರುವ ನೈಸರ್ಗಿಕ ಪರಿಹಾರವಾಗಿದೆ. ಅಷ್ಟೇ ಅಲ್ಲ, ನೀರಿನೊಂದಿಗೆ ಬೆರೆಸಿ ಸೇವಿಸಿದಾಗ ತಕ್ಷಣದ ಫಲಿತಾಂಶ ಸಿಗುತ್ತದೆ.
ನಮ್ಮಲ್ಲಿ ಕೆಲವರಿಗೆ ಪ್ರತಿದಿನ ಹೊಟ್ಟೆ ಉಬ್ಬರ ಉಂಟಾಗಿ ಬೆಳಗ್ಗೆ ತೊಂದರೆ ಉಂಟಾಗಬಹುದು. ಇಂತಹ ಪರಿಸ್ಥಿತಿ ಎದುರಾದಾಗ ಹೆಚ್ಚೇನು ಮಾಡುವ ಅಗತ್ಯವಿಲ್ಲ. ಈ ಬಿಳಿ ಪದಾರ್ಥ ನಮ್ಮ ಹೊಟ್ಟೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಅದನ್ನು ಬಳಸುವುದು ಹೇಗೆ ಮತ್ತು ಅದರಿಂದ ಯಾವ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ನೋಡೋಣ ಬನ್ನಿ...
ಇಸಾಬ್ಗೋಲ್ ಎಂದರೇನು?
ಇಸಾಬ್ಗೋಲ್ ಎಂಬುದು ಸಸ್ಯದ ಬೀಜಗಳಿಂದ ಪಡೆದ ನೈಸರ್ಗಿಕ ನಾರು. ಇದನ್ನು ಪ್ಲಾಂಟಾಗೊ ಓವಾಟಾ ಎಂಬ ಸಸ್ಯದ ಬೀಜಗಳಿಂದ ಹೊರತೆಗೆಯಲಾಗುತ್ತದೆ. ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಇದನ್ನು ಶತ ಶತಮಾನಗಳಿಂದ ಆಯುರ್ವೇದದಲ್ಲಿ ಬಳಸಲಾಗುತ್ತಿದೆ. ಇಂದಿಗೂ ಸಹ, ಇದು ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಬಹಳ ಜನಪ್ರಿಯವಾಗಿದೆ. ಇದು ದೇಹದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಜೆಲ್ ತರಹದ ಪದರವನ್ನು ರೂಪಿಸುತ್ತದೆ, ಇದು ಮಲವನ್ನು ಮೃದುಗೊಳಿಸುತ್ತದೆ, ಕರುಳಿನಿಂದ ಅದನ್ನು ಹೊರಹಾಕಲು ಸುಲಭವಾಗುತ್ತದೆ. ಇದರ ಸೇವನೆಯು ಮಲಬದ್ಧತೆಯಿಂದ ಪರಿಹಾರ ನೀಡುವುದಲ್ಲದೆ, ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ.
ಸೇವಿಸುವುದು ಹೇಗೆ?
* ಒಂದು ಲೋಟ ಬೆಚ್ಚಗಿನ ನೀರಿನಲ್ಲಿ 1-2 ಟೀ ಚಮಚ ಇಸಾಬ್ಗೋಲ್ ಮಿಶ್ರಣ ಮಾಡಿ.
* ಚೆನ್ನಾಗಿ ಬೆರೆಸಿದ ನಂತರ ಅದು ಬೇಗನೆ ದಪ್ಪಗೆ ಹರಡಿಕೊಳ್ಳುವುದರಿಂದ ತಕ್ಷಣ ಕುಡಿಯಿರಿ.
* ನಂತರ ನೀವು 1 ಗ್ಲಾಸ್ ಪ್ಲೇನ್ ನೀರನ್ನು ಕುಡಿಯಬಹುದು.
* ಇದನ್ನು ರಾತ್ರಿ ಮಲಗುವ ಮುನ್ನ ಅಥವಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬಹುದು.
ಇಸಾಬ್ಗೋಲ್ ಪ್ರಯೋಜನಗಳೇನು?
ಮಲಬದ್ಧತೆಯಿಂದ ಪರಿಹಾರ: ಕರುಳಿನ ಚಲನೆಯನ್ನು ಸರಾಗಗೊಳಿಸುತ್ತದೆ.
ವಿಷಕಾರಿ ವಸ್ತುಗಳ ನಿರ್ಮೂಲನೆ: ಕರುಳನ್ನು ಶುದ್ಧೀಕರಿಸುವುದರಿಂದ ದೇಹವು ವಿಷಮುಕ್ತವಾಗುತ್ತದೆ.
ತೂಕ ಇಳಿಸಿಕೊಳ್ಳಲು ಸಹಾಯಕ: ಫೈಬರ್ ಹೊಟ್ಟೆಯನ್ನು ತುಂಬಿರುವಂತೆ ಮಾಡುತ್ತದೆ, ಇದು ಹಸಿವನ್ನು ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆ ಸುಧಾರಣೆ: ಕರುಳಿನಲ್ಲಿರುವ ಕೊಳೆ ಶುದ್ಧವಾಗುವುದರಿಂದ, ಆಹಾರವು ಚೆನ್ನಾಗಿ ಜೀರ್ಣವಾಗುತ್ತದೆ.
ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ: ಇಸಾಬ್ಗೋಲ್ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಕ್ಯಾನ್ಸರ್ ಅಪಾಯ ಕಡಿಮೆ: ಕೆಲವು ಅಧ್ಯಯನಗಳು ಸೈಲಿಯಮ್ ಕೊಲೊನ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತವೆ.
ಸದಾ ಚೈತನ್ಯಶೀಲರಾಗಿ
ನೀವು ಪ್ರತಿದಿನ ಬೆಳಗ್ಗೆ ನಿಮ್ಮ ಹೊಟ್ಟೆಯನ್ನು ಸ್ವಚ್ಛಗೊಳಿಸುವ ಬಗ್ಗೆ ಚಿಂತೆ ಮಾಡುತ್ತಿದ್ದರೆ ಅಥವಾ ಅನೇಕ ಪರಿಹಾರಗಳನ್ನು ಪ್ರಯತ್ನಿಸಿಯೂ ಪರಿಹಾರ ಸಿಗದಿದ್ದರೆ ಖಂಡಿತವಾಗಿಯೂ ಈ ಸುಲಭ ಮತ್ತು ನೈಸರ್ಗಿಕ ಪರಿಹಾರವನ್ನು ಒಮ್ಮೆ ಪ್ರಯತ್ನಿಸಿ. ಇಸಾಬ್ಗೋಲ್ ಅನ್ನು ಪ್ರತಿದಿನ ನೀರಿನೊಂದಿಗೆ ಸೇವಿಸುವುದರಿಂದ ಕೆಲವು ದಿನಗಳಲ್ಲಿ ವ್ಯತ್ಯಾಸವನ್ನು ಗಮನಿಸಲು ಪ್ರಾರಂಭಿಸುತ್ತೀರಿ. ಜೊತೆಗೆ ನಿಮ್ಮ ದೇಹ ಹಗುರಾಗಿ ಚೈತನ್ಯಶೀಲರಾಗುವಿರಿ.
ಗಮನಿಸಿ: ಸುದ್ದಿಯಲ್ಲಿ ನೀಡಲಾದ ಕೆಲವು ಮಾಹಿತಿಯು ಮಾಧ್ಯಮ ವರದಿಗಳನ್ನು ಆಧರಿಸಿದೆ. ಯಾವುದೇ ಸಲಹೆಯನ್ನು ಕಾರ್ಯಗತಗೊಳಿಸುವ ಮೊದಲು, ನೀವು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.