
ಸಾರಾ ತೆಂಡೂಲ್ಕರ್ ಅವರು ತಮಗಿದ್ದ ಕಾಯಿಲೆಯೊಂದನ್ನು ಬಹಿರಂಗಪಡಿಸಿರುವ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಸಾರಾ ಚಿಕ್ಕ ವಯಸ್ಸಿನಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಥವಾ ಪಿಸಿಓಎಸ್ ಎದುರಿಸಿದ ಬಗ್ಗೆ ಮಾತನಾಡಿದ್ದು, ಏಳನೇ ತರಗತಿಯಲ್ಲಿದ್ದಾಗ ಪಿಸಿಓಎಸ್ ಇರುವುದು ಪತ್ತೆಯಾಯಿತು ಎಂದು ಹೇಳಿದ್ದಾರೆ.
ನಾವೆಲ್ಲಾ ಸಾರಾ ತೆಂಡೂಲ್ಕರ್‌ರನ್ನು ಸಾಮಾಜಿಕ ಮಾಧ್ಯಮದಲ್ಲಿ ನೋಡಿದಾಗ ಆಕೆಯ ಆಕರ್ಷಕ ನೋಟ ಮತ್ತು ಫಿಟ್‌ನೆಸ್ ಕಣ್ಮನ ಸೆಳೆಯುತ್ತದೆ. ಆದರೆ ಸಾರಾ ಅವರ ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಜೀವನಶೈಲಿಯ ಹಿಂದಿನ ರಹಸ್ಯ ಅವರ ಆರೋಗ್ಯಕರ ಲೈಫ್‌ಸ್ಟೈಲ್. ಹೌದು, ಸಾರಾ ತಮ್ಮ ಹದಿಹರೆಯದಲ್ಲಿ ಪಿಸಿಓಎಸ್ (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್) ನಿಂದ ಬಳಲುತ್ತಿದ್ದರು. ಮೊಡವೆಗಳು, ಬೇಡದ ಕೂದಲು, ತೂಕದ ಏರಿಳಿತಗಳು ಆಕೆಯ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಿತ್ತು. ಇದರಿಂದ ಆಕೆಯ ಸ್ನೇಹಿತರೊಂದಿಗೆ ಮಾತನಾಡಲು, ಮನೆ ಬಿಟ್ಟು ಹೊರಹೋಗಲು ಸಹ ನಾಚಿಕೆಪಡುತ್ತಿದ್ದಳು.
ಕೈ ಹಿಡಿದ ಆರೋಗ್ಯಕರ ಜೀವನಶೈಲಿ
ಸಾರಾ ಶಾಲೆಯಲ್ಲಿದ್ದಾಗ, ಮುಖದಲ್ಲಿ ತುಂಬಾ ಮೊಡವೆಗಳಿದ್ದವು. ಇದಕ್ಕೆ ಕಾರಣವೇನೆಂದು ತಿಳಿದುಕೊಂಡಾಗ ಪಿಸಿಓಎಸ್ ಇರುವುದು ಪತ್ತೆಯಾಗಿದೆ. ಆಕೆಗೆ ಚಿಕಿತ್ಸೆ ನೀಡಿದ ತಜ್ಞರು ಮಧ್ಯಂತರ ಉಪವಾಸ ಮತ್ತು ತೂಕ ತರಬೇತಿಯನ್ನು ಪ್ರಾರಂಭಿಸಲು ಶಿಫಾರಸು ಮಾಡಿದ್ದಾರೆ. ಪಿಸಿಓಎಸ್ ನಿಂದ ಉಂಟಾದ ಕೂದಲು ಬೆಳವಣಿಗೆ, ಎಣ್ಣೆಯುಕ್ತ ಚರ್ಮ ಮತ್ತು ಮೊಡವೆಗಳು ಸಾರಾ ಆತ್ಮವಿಶ್ವಾಸವನ್ನು ಕುಗ್ಗಿಸಿದ್ದವು. ಆರಂಭಿಕ ಹಂತಗಳಲ್ಲಿ ಇದನ್ನೆಲ್ಲಾ ಮರೆಮಾಡಲು ಮೇಕಪ್ ಬಳಸುತ್ತಿದ್ದೆ ಎಂದು ಸಾರಾ ಹೇಳಿದ್ದಾರೆ. ಆದರೆ ಅವರು ಈ ಹಂತವನ್ನು ಸಹಿಸಿಕೊಂಡರು. ಅಷ್ಟೇ ಅಲ್ಲ, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಅದನ್ನು ನಿಯಂತ್ರಿಸಿದರು. ವೋಗ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಸಾರಾ, ತನ್ನ ದಿನವು ನೀರು, ಕೆಲವು ಡ್ರೈ ಫ್ರೂಟ್ಸ್ ಮತ್ತು ಕಪ್ಪು ಕಾಫಿಯೊಂದಿಗೆ ಪ್ರಾರಂಭವಾಗುತ್ತದೆ ಎಂದು ಹೇಳಿದರು. ಈ ಕಾಂಬಿನೇಶನ್ ಹೈಡ್ರೇಟ್, ಶಕ್ತಿ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು PCOS ನಂತಹ ಸಮಸ್ಯೆಗಳಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.
ಸಾರಾ ಬೆಳಗ್ಗೆ ಬೇಗನೆ ವ್ಯಾಯಾಮ ಮಾಡಲು ಇಷ್ಟಪಡುತ್ತಾರೆ. ಪ್ರತಿದಿನವೂ ಒಂದೇ ರೀತಿ ಇರುವುದಿಲ್ಲ, ಆದ್ದರಿಂದ ದಿನಚರಿಯಲ್ಲಿ ನಮ್ಯತೆ ಇರಬೇಕು, ಆದರೆ ಸಕ್ರಿಯವಾಗಿರುವುದು ಬಹಳ ಮುಖ್ಯ, ವಿಶೇಷವಾಗಿ ಹಾರ್ಮೋನುಗಳ ಆರೋಗ್ಯಕ್ಕೆ ಎಂದು ಅವರು ನಂಬುತ್ತಾರೆ.
ಪಿಸಿಓಎಸ್‌ನಲ್ಲಿ ಚರ್ಮವು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಸಾರಾ ಚರ್ಮದ ಆರೈಕೆಯಲ್ಲಿ ಸಹ ಕಡಿಮೆ ಹೆಚ್ಚು ಎಂದು ವಿಶೇಷ ಸೂತ್ರವನ್ನು ಅನುಸರಿಸುತ್ತಾರೆ. ಚರ್ಮದ ಅಗತ್ಯಗಳನ್ನು ಅರ್ಥಮಾಡಿಕೊಂಡು ಕನಿಷ್ಠ ಕಾಳಜಿಯನ್ನು ತೆಗೆದುಕೊಳ್ಳಿ ಎಂದು ಅವರು ಸೂಚಿಸುತ್ತಾರೆ.
ಪಿಸಿಓಎಸ್ ಎಂದರೇನು?
ಇದು ಅಂಡಾಶಯಗಳು ಸಣ್ಣ ಚೀಲಗಳಿಂದ ತುಂಬಿರುವ ಸ್ಥಿತಿಯಾಗಿದೆ. ಅಂಡಾಶಯಗಳಲ್ಲಿ ಪುರುಷ ಹಾರ್ಮೋನುಗಳು ಅಧಿಕವಾಗಿ ಉತ್ಪತ್ತಿಯಾಗುವುದರಿಂದ, ಅಂಡಾಣುಗಳು ಬೆಳೆಯುವುದನ್ನು ನಿಲ್ಲಿಸಿ ಕೋಶಕಗಳಿಂದ ತುಂಬುತ್ತವೆ. ರಾಸಾಯನಿಕ ಅಂಶಗಳು ಮತ್ತು ಇತರ ಹಾರ್ಮೋನುಗಳ ಕಾರ್ಯನಿರ್ವಹಣೆಯಲ್ಲಿನ ಬದಲಾವಣೆಗಳ ಪರಿಣಾಮವಾಗಿ ಪಿಸಿಓಎಸ್ ಸಂಭವಿಸುತ್ತದೆ.
ಕಾರಣಗಳು
ಅನುವಂಶಿಕ ಕಾರಣಗಳು
ತಪ್ಪಾದ ಆಹಾರ ಪದ್ಧತಿ ಮತ್ತು ಜೀವನಶೈಲಿ
ಹಾರ್ಮೋನು ಕಾಯಿಲೆಗಳ ಲಕ್ಷಣ (Symptoms of hormonal disorders)
ಲಕ್ಷಣಗಳು
ಪಿಸಿಓಎಸ್ ನ ಆರಂಭಿಕ ಲಕ್ಷಣವೆಂದರೆ ಸಮಯಕ್ಕೆ ಸರಿಯಾಗಿ ಮುಟ್ಟಾಗದಿರುವುದು. ಪಿಸಿಓಎಸ್ ನ ಲಕ್ಷಣಗಳು ರಕ್ತಸ್ರಾವದಲ್ಲಿ ಏರಿಳಿತಗಳು, ಮುಟ್ಟಿನ ದಿನಗಳ ಸಂಖ್ಯೆಯಲ್ಲಿ ಹೆಚ್ಚಳ ಅಥವಾ ಇಳಿಕೆ, ವಿಳಂಬವಾದ ಮುಟ್ಟು, ಭಾರೀ ರಕ್ತಸ್ರಾವ, ಮುಟ್ಟಿನ ನಿಲುಗಡೆ, ಬೊಜ್ಜು, ಕೂದಲು ಬೆಳವಣಿಗೆ ಮತ್ತು ಮೊಡವೆಗಳನ್ನು ಒಳಗೊಂಡಿದೆ.
ಆಹಾರ
ತಜ್ಞರು ಹೇಳುವ ಪ್ರಕಾರ, ನೀವು ಪಿಷ್ಟ, ಸಿಹಿತಿಂಡಿಗಳು, ಕೊಬ್ಬುಗಳು, ಮಾಂಸ, ಕರಿದ ಆಹಾರಗಳು, ಜಂಕ್ ಫುಡ್, ಫಾಸ್ಟ್ ಫುಡ್, ಚಾಕೊಲೇಟ್, ತಂಪು ಪಾನೀಯಗಳು, ಹಿಟ್ಟು ಇತ್ಯಾದಿಗಳ ಸೇವನೆಯನ್ನು ಕಡಿಮೆ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.