
ವರ್ಷ ಆರಂಭದಲ್ಲಿ ಬೇಸಿಗೆ ಸದಾ ಹೆಚ್ಚಿರುತ್ತದೆ. ಯುಗಾದಿ ಹಬ್ಬ ಆದ್ಮೇಲೆ ಸೂರ್ಯನ ಆರ್ಭಟ ಹೆಚ್ಚಾಗುತ್ತದೆ. ಅದಿಕ್ಕೆ ಈ ಸಮಯದಲ್ಲಿ ಸಿಟ್ರಿಕ್ (ನೀರಿನ ಅಂಶ) ಇರುವ ಹಣ್ಣುಗಳು ಹೆಚ್ಚಾಗಿ ಮಾರುಕೆಟ್ಟೆ ಬರಲಿದೆ. ಕಲ್ಲಂಗಡಿ, ತಾಟೆಲಿಂಗೂ, ಆರೇಂಜ್, ಕರ್ಬುಜಾ, ದ್ರಾಕ್ಷಿ ಸೇರಿದಂತೆ ಹಲವು ಹಣ್ಣುಗಳು ಗಗನ ಮುಟ್ಟುತ್ತದೆ. ಯಾವ ಹಣ್ಣ ಬರಲಿ ಬಿಡಲಿ ಜನರು ಮೊದಲು ಪ್ರಾಮುಖ್ಯತೆ ನೀಡುವುದು ಎಳನೀರಿಗೆ. ಮಳೆಗಾಲದಲ್ಲಿ 20 ಅಥವಾ 30 ರೂ. ಇರುವ ಎಳನೀರು ಬೇಸಿಗೆಯಲ್ಲಿ 60 ಅಥವಾ 70 ರೂಪಾಯಿ ಮುಟ್ಟುತ್ತದೆ. ದುಡ್ಡು ಎಷ್ಟೇ ಆಗಿರಲಿ ಆರೋಗ್ಯ ಮುಖ್ಯ ಅನ್ನೋದು ಇದ್ದಾರೆ. ಹಾಗಿದ್ರೆ ವಾರದಲ್ಲಿ ಎಷ್ಟು ದಿನ ಎಳನೀರು ಕುಡಿಯಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ....
'ಬೇಸಿಗೆ ಶುರುವಾಗುತ್ತಿದ್ದಂತೆ ದಿನನಿತ್ಯ ನೀರು ಕುಡಿಯುವ ರೀತಿಯಲ್ಲಿ ಜನರು ಎಳನೀರು ಕುಡಿಯಲು ಶುರು ಮಾಡಿದ್ದಾರೆ. ಮಕ್ಕಳಿಗೆ ದಿನದಲ್ಲಿ ಎರಡು ಮೂರು ಸಮಯ ಕೊಡುತ್ತಿದ್ದಾರೆ ಹಾಗೂ ದೊಡ್ಡವರು ಕೂಡ ಹಾಗೆ ಕುಡಿಯುತ್ತಿದ್ದಾರೆ. ಎಳನೀರಿನಲ್ಲಿ ಹೆಚ್ಚಾಗಿ ಪೊಟಾಶಿಯಂ,ಸೋಡಿಯಂ ಮತ್ತು ಗ್ಲುಕೋಸ್ ಅಂಶವಿರುತ್ತದೆ. ಸಕ್ಕರೆ ಕಾಯಿಲೆ, ಹೃಯದ ಸಮಸ್ಯೆ, ರಕ್ತದೊತ್ತಡ ಮತ್ತು ಕಿಡ್ನಿ ಸಮಸ್ಯೆ ಹೆಚ್ಚಾಗಿ ಪೊಟಾಶಿಯಂ ಅಂಶ ಇರುವ ಯಾವುದನ್ನೂ ಸೇವಿಸಬಾರದು. ಇಲ್ಲಿ ಹಾರ್ಟ್ ರಿಧಮ್ ಏರುಪೇರು ಮತ್ತು ಕಿಡ್ನಿ ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ ವಾರಕ್ಕೆ ಒಂದೆರಡು ಸಲ ಮಾತ್ರ ಎಳನೀರು ಕುಡಿಯುವಂತೆ ನೋಡಿಕೊಳ್ಳಿ. ಇದ್ದಕ್ಕಿದ್ದಂತೆ ವಾಂತಿ ಅಥವಾ ಲೂಸ್ ಮೋಷನ್ ಅಗುತ್ತಿದ್ದರೆ ಅವರು ಯಾವುದೇ ಕಾರಣಕ್ಕೂ ಎಳನೀರು ಕುಡಿಯಬಾರದು. ಬೇಸಿಗೆ ಕಾಲದಲ್ಲಿ ನೀವು ಎಳೆನೀರಿಗಿಂತ ನೀರು ಕುಡಿಯುವುದು ಬೆಸ್ಟ್' ಎಂದು ವೈದ್ಯರು ಮಾತನಾಡಿದ್ದಾರೆ.
ಏಳೇಳು ಜನ್ಮಕ್ಕೂ ಇದೇ ನಂಗೆ ಗಿಫ್ಟ್; ಅನುಪಮಾ ಗೌಡ ಮುಖದ ಹಚ್ಚೆ ಹಾಕಿಸಿಕೊಂಡ ತಾಯಿ!
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯುವವರೂ ಇದ್ದಾರೆ ಏಕೆಂದೆ ನಮ್ಮ ದೇಹಕ್ಕೆ ಅಗತ್ಯವಿರುವ ಎಲೆಕ್ಟ್ರೋಲೈಟ್‌ಗಳು ಲಭ್ಯವಿರುತ್ತದೆ. ಎಳನೀರಿನಲ್ಲಿ ಥೈರಾಯ್ಡ್ ಸಮಸ್ಯೆ ಇರುವವರಿಗೆ ಸಹಾಯವಾಗುತ್ತದೆ. ಮೂತ್ರದ ಸೋಂಕಿನ ಸಮಸ್ಯೆ ಹೆಚ್ಚಾದಾಗ ಮೂರ್ನಾಲ್ಕು ದಿನ ನಾನ್ ಸ್ಟಾಪ್ ಎಳನೀರು ಕುಡಿದರೆ ಸಮಸ್ಯೆ ಸರಿ ಆಗುತ್ತದೆ. ಇನ್ನು ಬ್ಯೂಟಿ ವಿಚಾರದಲ್ಲಿ ಎಳನೀರು ತ್ವಚ್ಛೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಚರ್ಮ್ ಸುಕ್ಕು ಗಟ್ಟುವುದು ಅಥವಾ ಮೊಡವೆಗಳು ಕಾಣಿಸಿಕೊಳ್ಳುವುದಿಲ್ಲ.
ಹೆಂಗಸ್ರು ತಮ್ಮ ದೇಹದ ಈ ಭಾಗವನ್ನು ಪದೇ ಪದೇ ಮುಟ್ಟಿಕೊಳ್ತಿದ್ದರೆ ಗಂಡಸರ ಎದೆ ಡವಡವ ಅನ್ನೋದು ಗ್ಯಾರಂಟಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.