ಮಹಿಳೆಯ ಹೊಟ್ಟೆಯಲ್ಲಿತ್ತು 8 ಕೆಜಿ ಗಡ್ಡೆ: ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

Published : Mar 08, 2023, 10:47 AM IST
ಮಹಿಳೆಯ ಹೊಟ್ಟೆಯಲ್ಲಿತ್ತು 8 ಕೆಜಿ ಗಡ್ಡೆ: ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಸಾರಾಂಶ

ತೆಲಂಗಾಣದ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 8 ಕೆಜಿ ತೂಕದ ಗಡ್ಡೆಯನ್ನು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಮೂಲಕ ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯ ಜೀವವನ್ನು ವೈದ್ಯರು ಉಳಿಸಿದ್ದಾರೆ. 

ಹೈದರಾಬಾದ್‌: ತೆಲಂಗಾಣದ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 8 ಕೆಜಿ ತೂಕದ ಗಡ್ಡೆಯನ್ನು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಮೂಲಕ ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯ ಜೀವವನ್ನು ವೈದ್ಯರು ಉಳಿಸಿದ್ದಾರೆ. 

ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಚಿವ್ವೆಮ್ಲಾ ಮಂಡಲದ ಕುಡಕುಡ ಗ್ರಾಮದ ನಿವಾಸಿಯಾದ ಪೊನ್ನೆಬೋಯಿನ ಶ್ರೀನಿವಾಸ್  (Ponneboyina Srinivas) ಎಂಬುವವರ ಪತ್ನಿ ಶಶಿರೇಖಾ ಅವರು ಬಹಳ ದಿನಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಆಕೆ ತನ್ನ ಪತಿ ಶ್ರೀನಿವಾಸ್ ಜೊತೆಗೆ ಸೂರ್ಯಪೇಟೆಯ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ಅವರಿಗೆ ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ. 

Health Tips: ಕಾಲು ನೋವು ನಿರ್ಲಕ್ಷ್ಯಿಸಬೇಡಿ: ದೇಹದಲ್ಲಿನ ಈ ಸಮಸ್ಯೆ ಲಕ್ಷಣವಿರಬಹುದು!

ಕೊನೆಗೆ ದಂಪತಿ  ಸೂರ್ಯಪೇಟೆಯ (Suryapet) ಶ್ರೀ ಸ್ವಾತಿ (Swathi Hospital) ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿ ವೈದ್ಯರು ಅವರನ್ನು ಕೂಲಂಕುಶವಾಗಿ ವೈದ್ಯಕೀಯ ಪರೀಕ್ಷೆಗೆ (medical tests)ಒಳಪಡಿಸಿದ್ದಾರೆ.  ಆಸ್ಪತ್ರೆಯ ವೈದ್ಯರು ಆಕೆಗೆ ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಯಿತು. ನಂತರ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಬಹಳ ಪರಿಶ್ರಮದಿಂದ ಆಕೆಯ ಹೊಟ್ಟೆಯಲ್ಲಿದ್ದ 7 ರಿಂ 8 ಕೆಜಿ ತೂಕದ ದೊಡ್ಡ ಗಡ್ಡೆಯನ್ನು ತೆಗೆದು ಹಾಕಲಾಯಿತು. ಇದಾದ ಬಳಿಕ ಅವರ ನೋವಿಗೆ ಪರಿಹಾರ ಸಿಕ್ಕಿದೆ. 

ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ಸೂರ್ಯಪೇಟೆಯ ಖಾಸಗಿ ಆಸ್ಪತ್ರೆಯ ನಿರ್ವಹಣೆಗೆ ಶಶಿರೇಖಾ (Sasirekha) ಮತ್ತು ಅವರ ಕುಟುಂಬ ಸದಸ್ಯರು ಕೃತಜ್ಞತೆ ಸಲ್ಲಿಸಿದರು. ಬೇರೆಲ್ಲೂ ಮಾಡದ ಅಪರೂಪದ ಶಸ್ತ್ರಚಿಕಿತ್ಸೆ (rare surgery) ಇದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಹಿಳೆ ಪಿತ್ತಕೋಶದಲ್ಲಿತ್ತು 2000 ಕ್ಕೂ ಹೆಚ್ಚು ಕಲ್ಲುಗಳು

ಚೆನ್ನೈ: ಮಹಿಳೆಯೊಬ್ಬರ ಪಿತ್ತಕೋಶದಲ್ಲಿದ್ದ 2000 ಸಾವಿರಕ್ಕೂ ಹೆಚ್ಚು ಕಲ್ಲುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರ ತೆಗೆದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ 55 ವರ್ಷ ಪ್ರಾಯದ ಮಧುಮೇಹ ಕಾಯಿಲೆಯನ್ನು ಹೊಂದಿರುವ ಮಹಿಳೆಯೊಬ್ಬರು ಚೆನ್ನೈನಲ್ಲಿರುವ  ಮೋಹನ್ ಡಯಾಬಿಟಿಸ್ ಕ್ಲಿನಿಕ್‌ಗೆ ಅನಾರೋಗ್ಯದ ಕಾರಣಕ್ಕೆ ತಪಾಸಣೆಗೆ ಬಂದಿದ್ದರು, ಗ್ಯಾಸ್ಟಿಕ್ ಹಾಗೂ ಅಜೀರ್ಣದ ಸಮಸ್ಯೆಯ ಕಾರಣ ಹೇಳಿ ಆಸ್ಪತ್ರೆಗೆ ಬಂದಿದ್ದ ಅವರಿಗೆ ಸ್ಕ್ಯಾನಿಂಗ್ ಮಾಡಿದಾಗ ಮೊದಲಿಗೆ ಅವರ ಪಿತ್ತಕೋಶದಲ್ಲಿ 50ಕ್ಕೂ ಹೆಚ್ಚು ಕಲ್ಲುಗಳಿರುವುದು ಕಂಡು ಬಂತು. 

ಇದಾದ ನಂತರ ಆಸ್ಪತ್ರೆಯ ವೈದ್ಯರ ತಂಡ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿ ಕಲ್ಲುಗಳನ್ನು ತೆಗೆದು ಹಾಕಲು ನಿರ್ಧರಿಸಿದರು.  ಆದರೆ ಈ ಪ್ರಕ್ರಿಯೆ ವೇಳೆ ಅವರಿಗೆ , ಮಹಿಳೆಯ ಪಿತ್ತಕೋಶದಲ್ಲಿ 2,000 ಕ್ಕೂ ಹೆಚ್ಚು ಕಲ್ಲುಗಳು ಕಂಡು ಬಂದಿದ್ದು, ಇದನ್ನು ನೋಡಿ ವೈದ್ಯರೇ ಒಂದು ಕ್ಷಣ ದಂಗಾಗಿದ್ದರು.  ಈ 2 ಸಾವಿರ ಕಲ್ಲುಗಳಲ್ಲಿ  2 ಎಂಎಂಗಿಂತ ದೊಡ್ಡದಾದ 1,240 ಕಲ್ಲುಗಳಿದ್ದವು.  ಉಳಿದ ಕಲ್ಲುಗಳು ಈ ಗಾತ್ರಕ್ಕಿಂತ ಚಿಕ್ಕದಾಗಿದ್ದವು. 

ಬಲಭಾಗದಲ್ಲಿ ಹೃದಯ, ಎಡಭಾಗದಲ್ಲಿ ಯಕೃತ್‌; ಇದೆಂಥಾ ವಿಚಿತ್ರ?

ಈ ಬಗ್ಗೆ ಅಚ್ಚರಿಯಿಂದ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಸಹಾಯಕ ನಿರ್ದೇಶಕ, ಮಧುಮೇಹ ತಜ್ಞ ಬ್ರಿಜೇಂದ್ರ ಕುಮಾರ್ ಶ್ರೀವಾತ್ಸವ್ (Brijendra Kumar Srivatsav) ಮಾತನಾಡಿ 'ನನ್ನ 20 ವರ್ಷಗಳ ಅನುಭವದಲ್ಲಿ, ಪಿತ್ತಕೋಶದಲ್ಲಿ  ಇಷ್ಟೊಂದು  ಪಿತ್ತಗಲ್ಲುಗಳನ್ನು ಎಂದೂ ನೋಡಿರಲಿಲ್ಲ ಎಂದು ಹೇಳಿದ್ದಾರೆ.  ಸಾಮಾನ್ಯವಾಗಿ 40 ವರ್ಷಕ್ಕಿಂತ ಮೇಲ್ಪಟ್ಟ ಸ್ಥೂಲಕಾಯದ ಮಹಿಳೆಯರಲ್ಲಿ ಪಿತ್ತಗಲ್ಲು ಹೆಚ್ಚಾಗಿ ರೂಪುಗೊಳ್ಳುತ್ತದೆ. ಅದರಲ್ಲೂ ಸಕ್ಕರೆ ಕಾಯಿಲೆ ಹೊಂದಿರುವವರಲ್ಲಿ ಇದರ ಪ್ರಮಾಣ ಹೆಚ್ಚಿರುತ್ತದೆ. ಈಗ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರೋಗಿ 12 ವರ್ಷಗಳಿಂದಲೂ ಮಧುಮೇಹದಿಂದ ಬಳಲುತ್ತಿದ್ದರು ಎಂದು ಅವರು ಹೇಳಿದರು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ