ಅಬ್ಬಬ್ಬಾ..ಮಹಿಳೆ ಕಣ್ಣಿನಿಂದ ಬರೋಬ್ಬರಿ 60 ಜೀವಂತ ಹುಳು ಹೊರ ತೆಗೆದ ವೈದ್ಯರು!

By Vinutha Perla  |  First Published Dec 9, 2023, 4:42 PM IST

ಮನುಷ್ಯನ ದೇಹವೇ ಒಂದು ಅಚ್ಚರಿ. ಆದರೆ ಕೆಲವೊಮ್ಮೆ ಆರೋಗ್ಯ ಹದಗೆಟ್ಟಾಗ ಮಾತ್ರ ವಿಚಿತ್ರವಾದ ಸಮಸ್ಯೆಗಳು ಎದುರಾಗುತ್ತವೆ. ಹಾಗೆಯೇ ಚೀನಾದಲ್ಲಿ ಮಹಿಳೆಯೊಬ್ಬಳು ಕಣ್ಣು ನೋವೆಂದು ಕಣ್ಣುಚ್ಚಿದರೆ ಕಣ್ಣಿಂದ ಹುಳುಗಳು ಬೀಳಲಾರಂಭಿಸಿದೆ. ವಿಚಿತ್ರ ಸಮಸ್ಯೆಯ ಬಗ್ಗೆ ತಿಳಿದು ವೈದ್ಯರೇ ಕಂಗಾಲಾಗಿದ್ದಾರೆ.


ಚೀನಾದಲ್ಲಿ ಇತ್ತೀಚಿಗೆ ಮಹಿಳೆಯೊಬ್ಬಳ ಕಣ್ಣುಗಳೊಳಗೆ ಹುಳುಗಳಿರೋದು ಪತ್ತೆಯಾಯಿತು. ವೈದ್ಯರೊಬ್ಬರು ಆಪರೇಷನ್‌ ನಡೆಸಿ ಮಹಿಳೆಯೊಬ್ಬರ ಕಣ್ಣುಗಳಿಂದ 60ಕ್ಕೂ ಹೆಚ್ಚು ಜೀವಂತ ಹುಳುಗಳನ್ನು ಹೊರತೆಗೆದಿದ್ದಾರೆ. ವರದಿಯ ಪ್ರಕಾರ, ಮಹಿಳೆ ಕಣ್ಣುಗಳಲ್ಲಿ ತುರಿಕೆ ಕಂಡು ಬಂದಿತ್ತು. ಈ ಸಂದರ್ಭದಲ್ಲಿ ಕಣ್ಣನ್ನು ಉಜ್ಜಿದಾಗ ನೋವಾಗಿದ್ದು, ಆ ನಂತರ ಹುಳುಗಳು ಉದುರಿ ಬೀಳಲು ಆರಂಭವಾಗಿದೆ. ಭಯಭೀತಳಾದ ಮಹಿಳೆಯನ್ನು ತಕ್ಷಣವೇ ಚೀನಾದ ಕುನ್ಮಿಂಗ್‌ನಲ್ಲಿರುವ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷೆಯ ನಂತರ, ವೈದ್ಯರು ಅವಳ ಕಣ್ಣುಗುಡ್ಡೆಗಳು ಮತ್ತು ಕಣ್ಣುರೆಪ್ಪೆಗಳ ನಡುವೆ ಜೀವಂತ ಹುಳುಗಳಿಂದ ಮುತ್ತಿಕೊಂಡಿರುವ ಜಾಗವನ್ನು ಕಂಡು ಆಘಾತಕ್ಕೊಳಗಾದರು. 

ಮಹಿಳೆಯ ಬಲಗಣ್ಣಿನಿಂದ 40ಕ್ಕೂ ಹೆಚ್ಚು ಮತ್ತು ಎಡಗಣ್ಣಿನಿಂದ 10ಕ್ಕೂ ಹೆಚ್ಚು ಜೀವಂತ ಹುಳುಗಳನ್ನು ವೈದ್ಯರು ಹೊರತೆಗೆದರು. ವರದಿಯ ಪ್ರಕಾರ,  ವೈದ್ಯರು ಮಹಿಳೆಯ ಕಣ್ಣಿನಿಂದ 60ಕ್ಕೂ ಹೆಚ್ಚು ಹುಳುಗಳನ್ನು ತೆಗೆದುಹಾಕಿದ್ದಾರೆ ಎಂದು ತಿಳಿದುಬಂದಿದೆ.

Latest Videos

undefined

ಡಿಪ್ರೆಶನ್‌ನಿಂದ ಬಳಲುತ್ತಿದ್ದ ಮಹಿಳೆ ಮೆದುಳಿನಲ್ಲಿತ್ತು 8 ಸೆಂಟಿ ಮೀಟರ್ ಉದ್ದದ ಜೀವಂತ ಹುಳ

ಮಹಿಳೆಗೆ ಫಿಲಾರಿಯೋಡಿಯಾ ಎಂಬ ಹೆಸರಿನ ಹುಳುಗಳಿಂದ ಸೋಂಕು
ಈ ರೀತಿ ಕಣ್ಣುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಳುಗಳು (Worm) ಕಂಡು ಬರೋದು ಅಪರೂಪದ ಪ್ರಕರಣವಾಗಿದೆ ಎಂದು ಸರ್ಜರಿ ನಡೆಸಿದ ವೈದ್ಯರಾ ಡಾ.ಗುವಾನ್ ಹೇಳಿದ್ದಾರೆ. ಮಹಿಳೆಯು (Woman) ಫಿಲಾರಿಯೋಡಿಯಾ ಎಂಬ ಹೆಸರಿನ ಹುಳುಗಳಿಂದ ಸೋಂಕಿಗೆ ಒಳಗಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಸಾಮಾನ್ಯವಾಗಿ ನೊಣ ಕಡಿತದ ಮೂಲಕ ಹರಡುತ್ತದೆ.

ಮಾತ್ರವಲ್ಲ ಮಹಿಳೆಯು ನಾಯಿಗಳು ಮತ್ತು ಬೆಕ್ಕುಗಳನ್ನು ಮುಟ್ಟಿ ದೇಹ (Bpdy)ವನ್ನು ಸ್ಪರ್ಶಿಸಿರುವುದು ಈ ಸಮಸ್ಯೆ ಕಾರಣವಾಗಿದೆ ಎಂದಿದ್ದಾರೆ. ಪ್ರಾಣಿಗಳು, ದೇಹದ ಮೇಲೆ ಸಾಂಕ್ರಾಮಿಕ ಲಾರ್ವಾಗಳನ್ನು ಹೊತ್ತೊಯ್ಯುತ್ತದೆ. ಪ್ರಾಣಿಗಳನ್ನು ಸ್ಪರ್ಶಿಸುವುದು ಮತ್ತು ಅವಳ ಕಣ್ಣುಗಳನ್ನು ಉಜ್ಜುವುದು ಹುಳುಗಳು  ಮುತ್ತಿಕೊಳ್ಳುವಿಕೆಗೆ ಕಾರಣವಾಗಬಹುದು ಎಂದು ಅವರು ಶಂಕಿಸಿದ್ದಾರೆ. ಉಳಿದಿರುವ ಲಾರ್ವಾಗಳ ಸಾಧ್ಯತೆಯನ್ನು ಮೇಲ್ವಿಚಾರಣೆ ಮಾಡಲು ವೈದ್ಯರು ಆಗಾಗ್ಗೆ ತಪಾಸಣೆಗೆ ಒಳಗಾಗುವಂತೆ ಮಹಿಳೆಗೆ ಸೂಚಿಸಿದ್ದಾರೆ. ಸಾಕುಪ್ರಾಣಿ (Pet animals)ಗಳನ್ನು ಮುಟ್ಟಿದ ತಕ್ಷಣ ಕೈ ತೊಳೆಯುವಂತೆ ಹೇಳಿದ್ದಾರೆ.

ವಿಪರೀತ ಕೆಮ್ಮೆಂದು ಆಸ್ಪತ್ರೆಗೆ ಹೋದ ವ್ಯಕ್ತಿ, ಸ್ಕ್ಯಾನ್ ಮಾಡಿದಾಗ ದೇಹ ಪೂರ್ತಿ ಹುಳುಗಳು!

ಮನುಷ್ಯನ ಕರುಳಿನೊಳಗಿತ್ತು ನೊಣಗಳ ರಾಶಿ
ಇನ್ನೊಂದೆಡೆ ಮನುಷ್ಯನ ಕರುಳಿನೊಳಗೆ ನೊಣಗಳ ರಾಶಿಯನ್ನು ಕಂಡು USನಲ್ಲಿನ ವೈದ್ಯರು ದಿಗ್ಭ್ರಮೆಗೊಂಡರು. 63 ವರ್ಷದ ವ್ಯಕ್ತಿಯೊಬ್ಬರು ಮಿಸೌರಿಯಲ್ಲಿ ವಾಡಿಕೆಯಂತೆ ಕೊಲೊನ್ ಸ್ಕ್ರೀನಿಂಗ್‌ಗೆ ಹೋದಾಗ ಈ ಪತ್ತೆಯಾಯಿತು. ಸ್ವತಃ ವೈದ್ಯರು ರಿಪೋರ್ಟ್ ನೋಡಿ ದಿಗ್ಭ್ರಮೆಗೊಂಡರು ಮತ್ತು ಕೀಟವು ಅವನ ದೇಹಕ್ಕೆ ಹೇಗೆ ಪ್ರವೇಶಿಸಿತು ಎಂಬುದು ತಿಳಿಯದೆ ಕಂಗಾಲಾದರು. ನಂತರ ಕೂಲಂಕುಷವಾಗಿ ಪರಿಶೀಲಿಸಿದಾಗ ವ್ಯಕ್ತಿ ಎರಡು ದಿನಗಳ ಮೊದಲು ಪಿಜ್ಜಾ ಮತ್ತು ಲೆಟಿಸ್ ಅನ್ನು ಸೇವಿಸಿದ್ದಾರೆ ಎಂದು ತಿಳಿದು ಬಂತು. ಆದರೆ ಅವರು ಸೇವಿಸಿದ ಯಾವುದೇ ಆಹಾರದ ಮೇಲೆ ನೊಣ ಇರಲ್ಲಿಲ್ಲ ಎಂದು ವ್ಯಕ್ತಿ ಹೇಳಿದ್ದಾರೆ.

click me!