ದೊಡ್ಡ ವೃಷಣ ಇದೆಯೆಂದು ಬೀಗಬೇಡಿ, ಅಂಥವರಿಗೆ ಹೃದಯ ತೊಂದರೆ ಖಚಿತ!

By Suvarna NewsFirst Published Dec 7, 2023, 12:55 PM IST
Highlights

ದೊಡ್ಡ ವೃಷಣಗಳನ್ನು ಹೊಂದಿರುವವರು ಹೃದಯದ ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂಬುದು ನಿಮಗೆ ಗೊತ್ತೆ? ವೃಷಣಗಳ ಬಗ್ಗೆ ಇಂಥ ಇನ್ನಷ್ಟು ಸೋಜಿಗದಾಯಕ ವಿವರಗಳು ಇಲ್ಲಿವೆ.

ಪುರುಷನಲ್ಲಿರುವ ವೃಷಣಗಳು ಆತನ ಪುರುಷತ್ವದ ಪ್ರತೀಕ, ಅವು ಇರುವುದು ವೀರ್ಯ ಸೃಷ್ಟಿಸುವುದಕ್ಕಾಗಿ ಎಂಬುದು ನಿಮಗೆ ಗೊತ್ತೇ ಇದೆ. ಆದರೆ ವೃಷಣಗಳ ಗಾತ್ರದ ಬಗ್ಗೆ, ಅವುಗಳ ಆರೋಗ್ಯದ ಬಗ್ಗೆ ಇನ್ನೂ ಬಹುಮುಖ್ಯವಾದ ಸಂಗತಿಗಳು ಇವೆ. ಅವು ನಿಮಗೆ ಗೊತ್ತಿರಲಾರದು. ಅವು ಇಲ್ಲಿವೆ. ಮುಖ್ಯವಾಗಿ ಅದರ ಗಾತ್ರ ಕೆಲವು ಸಂಗತಿಗಳನ್ನು ತಿಳಿಸುತ್ತದೆ. 

ದೊಡ್ಡ ವೃಷಣಗಳಿದ್ದರೆ ಹೃದ್ರೋಗ 
ದೊಡ್ಡ ವೃಷಣಗಳನ್ನು ಹೊಂದಿರುವವರು ಹೃದಯದ ತೊಂದರೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂಬುದು ನಿಮಗೆ ಗೊತ್ತೆ? ಹೌದು. 2,800 ಪುರುಷರ ಮೇಲೆ ನಡೆಸಿದ 2013ರ ಅಧ್ಯಯನದಲ್ಲಿ ಇದು ಕಂಡುಬಂದಿದೆ. ಏಳು ವರ್ಷಗಳ ಕಾಲ ಅಧ್ಯಯನ ನಡೆಯಿತು. ನಂತರ, ದೊಡ್ಡ ವೃಷಣಗಳನ್ನು ಹೊಂದಿರುವವರು ಹೆಚ್ಚಿನ ಹೃದ್ರೋಗದ ಅಪಾಯವವನ್ನು ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಪುರುಷರು ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ. ದೊಡ್ಡ ವೃಷಣಗಳನ್ನು ಹೊಂದಿರುವ ಪುರುಷರು ಹೃದಯದ ಸಮಸ್ಯೆಗಳನ್ನು ಹೆಚ್ಚಾಗಿ ಹೊಂದಲು ಕಾರಣವೆಂದರೆ ಟೆಸ್ಟೋಸ್ಟೆರಾನ್ ಮಟ್ಟ. ಇದು ಟೆಸ್ಟೋಸ್ಟೆರಾನ್ ಉತ್ಪಾದನೆಯನ್ನು ಉತ್ತೇಜಿಸಲು ಕಾರಣ ಎಂದು ಸಂಶೋಧಕರು ಸೂಚಿಸಿದ್ದಾರೆ. ಹೆಚ್ಚಿನ ಮಟ್ಟದ ಟೆಸ್ಟೋಸ್ಟೆರಾನ್ ಹೃದಯ ಕಾಯಿಲೆಗೆ ಸಂಬಂಧಿಸಿದೆ ಎಂದು ಅಧ್ಯಯನಗಳು ತೋರಿಸಿವೆ.

Latest Videos

ಸಣ್ಣ ವೃಷಣಗಳಿದ್ದರೆ ನಿದ್ರೆ ಕಡಿಮೆ
ಸದರ್ನ್ ಡೆನ್ಮಾರ್ಕ್ ವಿಶ್ವವಿದ್ಯಾನಿಲಯದ ಸಂಶೋಧಕರ ಅಧ್ಯಯನವು ಮನುಷ್ಯನ ನಿದ್ರೆಯ ಗುಣಮಟ್ಟ ಮತ್ತು ಅವನ ವೃಷಣ ಗಾತ್ರದ ನಡುವಿನ ಆಸಕ್ತಿದಾಯಕ ಸಂಬಂಧವನ್ನು ಕಂಡುಹಿಡಿದಿದೆ. ಅವರು ಸುಮಾರು 1,000 ಪುರುಷರ ನಿದ್ರೆಯ ವೇಳಾಪಟ್ಟಿಗಳು, ನಿದ್ರೆಯ ಅಡಚಣೆಗಳು ಮತ್ತು ನಿದ್ರೆಯ ಅಭ್ಯಾಸಗಳ ಬಗ್ಗೆ ಸಮೀಕ್ಷೆ ನಡೆಸಿದರು ಮತ್ತು ನಂತರ ಅವರ ವೃಷಣ ಗಾತ್ರಗಳು ಮತ್ತು ವೀರ್ಯ ಎಣಿಕೆಗಳನ್ನು ಪರೀಕ್ಷಿಸಿದರು. ನಿದ್ರಾಹೀನತೆ ಇದ್ದವರು, ತಡವಾಗಿ ಮಲಗುವವರು, ಅಥವಾ ಕಳಪೆ ನಿದ್ರೆಯ ಅಭ್ಯಾಸ ಇರುವ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯು 29 ಪ್ರತಿಶತದಷ್ಟು ಕಡಿಮೆ ಎಂದು ಅವರು ಕಂಡುಕೊಂಡರು. ಜೊತೆಗೆ, ಅವರ ವೃಷಣಗಳು 1.6 ಪ್ರತಿಶತದಷ್ಟು ಚಿಕ್ಕದಾಗಿದ್ದವು ಮತ್ತು ವಿರೂಪಗೊಂಡಿದ್ದವು. ಸಣ್ಣ ವೃಷಣಗಳನ್ನು ಹೊಂದಿರುವ ವ್ಯಕ್ತಿ ಸಾಕಷ್ಟು ನಿದ್ರೆಯನ್ನು ಹೊಂದುವುದಿಲ್ಲ ಎಂದು ಅಧ್ಯಯನವು ತೋರಿಸಿದೆ. ಕಳಪೆ ನಿದ್ರೆ ಹೊಂದಿರುವ ಜನರು ಇತರ ಅಭ್ಯಾಸಗಳ ನಡುವೆ ಕೊಬ್ಬಿನ ಆಹಾರಗಳು, ಆಲ್ಕೋಹಾಲ್ ಮತ್ತು ಧೂಮಪಾನದಿಂದ ತುಂಬಿದ ಅನಾರೋಗ್ಯಕರ ಜೀವನವನ್ನು ನಡೆಸುತ್ತಾರೆ ಎಂದು ಸಂಶೋಧಕರು ಗಮನಿಸಿದ್ದಾರೆ. ಆದ್ದರಿಂದ, ಸಣ್ಣ ವೃಷಣಗಳು ಇತರ ರೀತಿಯಲ್ಲಿಯೂ ಸಹ ಅನಾರೋಗ್ಯಕರ.

ಸಣ್ಣ ವೃಷಣ ಇದ್ದವರು ಉತ್ತಮ ಅಪ್ಪಂದಿರಾಗುತ್ತಾರೆ!
ಹೌದು! ತಮ್ಮ ಮಕ್ಕಳನ್ನು ಹೆಚ್ಚು ಲಾಲಿಸುವ ಅಪ್ಪಂದಿರು ಚಿಕ್ಕ ವೃಷಣಗಳನ್ನು ಹೊಂದಿರುವವರಂತೆ. ಎಮೋರಿ ವಿಶ್ವವಿದ್ಯಾನಿಲಯದ ಅಧ್ಯಯನವು 1- ಅಥವಾ 2 ವರ್ಷದ ಮಕ್ಕಳೊಂದಿಗೆ 70 ಅಪ್ಪಂದಿರನ್ನು ಸಂದರ್ಶಿಸಿದೆ. ಮಕ್ಕಳ ಪಾಲನೆಯಲ್ಲಿ ತಂದೆಯ ಪಾಲ್ಗೊಳ್ಳುವಿಕೆಯ ಬಗ್ಗೆ ಸಂದರ್ಶಿಸಲಾಯಿತು. ಇದು ತಂದೆಯ ಟೆಸ್ಟೋಸ್ಟೆರಾನ್ ಮಟ್ಟವನ್ನು ಅಳೆಯುತ್ತದೆ. ಮಕ್ಕಳೊಂದಿಗೆ ಹೆಚ್ಚು ತೊಡಗಿಸಿಕೊಂಡಿರುವ ಅಪ್ಪಂದಿರು ಕಡಿಮೆ ಟೆಸ್ಟೋಸ್ಟೆರಾನ್ ಮತ್ತು ಸಣ್ಣ ವೃಷಣಗಳನ್ನು ಹೊಂದಿರುತ್ತಾರೆ ಎಂದು ಅವರ ಫಲಿತಾಂಶಗಳು ತೋರಿಸಿವೆ. "ಪುರುಷರು ಆರೈಕೆದಾರರಾಗಿ ಹೆಚ್ಚು ತೊಡಗಿಸಿಕೊಂಡಾಗ, ಅವರ ವೃಷಣಗಳು ಕುಗ್ಗುತ್ತವೆ" ಎಂದು ಅಧ್ಯಯನಕಾರರು ಹೇಳಿದ್ದಾರೆ. ಅಂದರೆ ಇಂಥ ಪುರುಷರು ತಮ್ಮ ಮಕ್ಕಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ. ಇದು ಅವರಿಗೆ ಉತ್ತಮ ಮಾನಸಿಕ ಆರೋಗ್ಯವನ್ನು ಉಂಟುಮಾಡುತ್ತದೆ ಎಂದೂ ಅರ್ಥ ಮಾಡಿಕೊಳ್ಳಬಹುದು.

ದೇಹದ ಉಳಿದೆಡೆಗಿಂತ 5 ಡಿಗ್ರಿ ತಣ್ಣಗೆ
ವೃಷ್ಣಗಳು ದೇಹದ ಹೊರಗೆ ಯಾಕಿವೆ? ಯಾಕೆಂದರೆ ಅವುಗಳಿಗೆ ತಂಪು ಬೇಕು; ದೇಹದೊಳಗಿನ ಶಾಖ ಅವುಗಳಿಗೆ ಬೇಡ. ಇವು ವೀರ್ಯಕ್ಕೆ ರೆಫ್ರಿಜರೇಟರ್‌ನಂತೆ ಕೆಲಸ ಮಾಡಬೇಕು. ವೃಷಣಗಳು ದೇಹದ ಹೊರಗೆ ಇರುವುದು ಕಡಿಮೆ ತಾಪಮಾನವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ವೀರ್ಯವನ್ನು ಸರಿಯಾಗಿ ಸೃಷ್ಟಿಸಲು ಮತ್ತು ಸಂರಕ್ಷಿಸಲು ವೃಷಣ ತಾಪಮಾನವು ದೇಹದ ಉಳಿದ ಭಾಗಕ್ಕಿಂತ ಸುಮಾರು 5 ಡಿಗ್ರಿ ಫ್ಯಾರನ್‌ಹೀಟ್ (3 ಡಿಗ್ರಿ ಸೆಲ್ಸಿಯಸ್) ಕಡಿಮೆ ಇರಬೇಕು. ದೇಹವು ಸಾಮಾನ್ಯವಾಗಿ 98.6 ಡಿಗ್ರಿ ಫ್ಯಾರನ್‌ಹೀಟ್ (37 ಡಿಗ್ರಿ ಸೆಲ್ಸಿಯಸ್) ಇರುತ್ತದೆ. ವೃಷಣ ಸ್ನಾಯುಗಳು ವೃಷಣಗಳ ತಾಪಮಾನ ನಿಯಂತ್ರಕವಾಗಿ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ವಾತಾವರಣ ತುಂಬಾ ತಂಪಾಗಿರುವಾಗ, ವೃಷಣ ಸಂಕುಚಿತಗೊಂಡು ಉಷ್ಣತೆಗಾಗಿ ದೇಹಕ್ಕೆ ಹತ್ತಿರಕ್ಕೆ ಎಳೆಯುತ್ತದೆ. ವಾತಾವರಣದ ಶಾಖ ಹೆಚ್ಚಿದಾಗ, ವೃಷಣ ಸಡಿಲಗೊಂಡು ದೇಹದಿಂದ ಆಚೆ ತೂಗುತ್ತದೆ.

ಪಿರಿಯಡ್ಸ್ ತಪ್ಪಿಸಿಕೊಂಡರೆ ಲೈಂಗಿಕಾಸಕ್ತಿ ಕುಂದುತ್ತಾ? ಏನು ಮಾಡಿದ್ರೆ ಸೇಫ್?

ಎಡ ವೃಷಣ ಸ್ವಲ್ಪ ಕೆಳಗೆ ನೇತಾಡುತ್ತದೆ
ಎಡ ವೃಷಣವು ಸಾಮಾನ್ಯವಾಗಿ ಬಲಭಾಗಕ್ಕಿಂತ ಸ್ವಲ್ಪ ಕೆಳಕ್ಕೆ ತೂಗಾಡುತ್ತದೆ. ಇದು ಆಕಸ್ಮಿಕವಲ್ಲ. ಇದು ಒಂದು ವೃಷಣದ ತಾಪಮಾನವು ಮತ್ತೊಂದು ವೃಷಣಕ್ಕೆ ಆ ಶಕ್ತಿಯನ್ನು ಕಳುಹಿಸದೆಯೇ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಅವು ಪಕ್ಕದಲ್ಲಿದ್ದರೆ ಅಥವಾ ಸ್ಪರ್ಶಿಸುತ್ತಿದ್ದರೆ ದೇಹವು ಒಂದು ವೃಷಣದ ತಾಪಮಾನವನ್ನು ಇನ್ನೊಂದರ ತಾಪಮಾನವನ್ನು ಬಾಧಿಸದೆ ಹೆಚ್ಚಿಸಲಾರದು ಅಥವಾ ಕಡಿಮೆ ಮಾಡಲಾರದು. ಕೆಲವೊಮ್ಮೆ ಒಂದು ವೃಷಣವು ಇನ್ನೊಂದಕ್ಕಿಂತ ಸ್ವಲ್ಪ ದೊಡ್ಡದಾಗಿರುವುದು ಸಹಜ. ಬಲವು ಎಡಕ್ಕಿಂತ ದೊಡ್ಡದಾಗಿರಬಹುದು.

ವೃಷಣಕ್ಕೆ ಒದ್ದರೆ ಜೀವವೇ ಹೋದಂತಾಗುತ್ತದೆ ಯಾಕೆ? 
ವೃಷಣಗಳು ಸಂತಾನೋತ್ಪತ್ತಿಗೆ ನಿರ್ಣಾಯಕವಾಗಿವೆ. ಆದರೆ ಅವು ದೇಹದ ಹೊರಗಿರುವುದರಿಂದ ಅವು ದುರ್ಬಲವಾಗಿರುತ್ತವೆ. ವೃಷಣಗಳು ನೋವಿನ ಸಂವೇದನೆಯನ್ನು ಹೊಂದಿರುವ ಲಕ್ಷಾಂತರ ನರಗಳನ್ನು ಹೊಂದಿ ವಿಕಸನಗೊಂಡಿವೆ. ಆದ್ದರಿಂದ ಗಂಡಸರು ಅವುಗಳನ್ನು ರಕ್ಷಿಸಿಕೊಳ್ಳಬೇಕಾದ ಅಗತ್ಯ ಹೆಚ್ಚು ಇದೆ. 

ಮುಂಜಾವಿನಲ್ಲಿ ಇಂಥ ಕೆಲಸ ಮಾಡಿದ್ರೆ ಲೈಫ್ ಬರ್ಬಾದ್ ಆಗುತ್ತೆ, ಲೈಂಗಿಕ ಕ್ರಿಯೆಯಂತೂ ನಿಷಿದ್ಧ!
 

click me!