ನನ್ಗೆ ಮಾತ್ರ ಸೊಳ್ಳೆ ಯಾಕೆ ಜಾಸ್ತಿ ಕಚ್ಚುತ್ತೆ ಅನ್ನೋ ಡೌಟಾ, ಬ್ಲಡ್ ಗ್ರೂಪ್ ಯಾವ್ದು ಚೆಕ್ ಮಾಡ್ಕೊಳ್ಳಿ

By Vinutha Perla  |  First Published Aug 18, 2023, 2:43 PM IST

ಗುಂಪಲ್ಲಿ ನಿಂತಿರ್ತೇವೆ. ಆದ್ರೆ ಎಲ್ಲರೂ ಸುಮ್ಮನಿದ್ರೆ ನಮ್ಗೆ ಮಾತ್ರ ಸೊಳ್ಳೆ ಕಚ್ತಿರುತ್ತೆ. ವಿಚಿತ್ರವೆಂದ್ರೆ ಕೆಲವರ ಬಳಿ ಸೊಳ್ಳೆ ಸುಳಿಯೋದೆ ಇಲ್ಲ. ಮತ್ತೆ ಕೆಲವರನ್ನು ಸೊಳ್ಳೆ ಬಿಡೋದಿಲ್ಲ. ಆದ್ರೆ ಹೀಗೆ ಒಬ್ಬರಿಗೇ ಸೊಳ್ಳೆ ಕಚ್ಚಲು ಕಾರಣವೇನು ಗೊತ್ತಾ?


ಮನೆ, ಹಾದಿ-ಬೀದಿ, ಪಾರ್ಕ್ ಹೀಗೆ ಎಲ್ಲೆಂದರಲ್ಲಿ ಇರುವ ಸೊಳ್ಳೆಗಳು ಉಂಟುಮಾಡುವ ತೊಂದರೆಗಳು ಒಂದೆರಡಲ್ಲ. ಅದರಲ್ಲೂ ಜುಲೈ ಆಗಸ್ಟ್ ತಿಂಗಳಿನಲ್ಲಿ ಇವುಗಳ ಸಂಖ್ಯೆ ಇನ್ನೂ ಉಲ್ಬಣವಾಗುತ್ತೆ. ಸೊಳ್ಳೆ ಕಾಟಕ್ಕೆ ಅನೇಕರು ರಾತ್ರಿ ಸರಿಯಾಗಿ ನಿದ್ದೆ  ಮಾಡುವುದಿಲ್ಲ. ಕಿವಿ ಬಳಿ ಗುಂಯ್ ಗುಡುವ ಸೊಳ್ಳೆ ಅಲ್ಲಲ್ಲಿ ಕಚ್ಚಿ ಹಿಂಸೆ ನೀಡುತ್ತದೆ.  ಈ ಚಿಕ್ಕ ಸೊಳ್ಳೆ ಯಿಂದಾಗಿ ಡೆಂಗ್ಯೂ, ಚಿಕನ್ ಗುನ್ಯಾ ಮತ್ತು ಮಲೇರಿಯಾದಂತಹ ದೊಡ್ಡ ಕಾಯಿಲೆಗಳು ಮನುಷ್ಯನನ್ನು ಆವರಿಸುತ್ತವೆ. ಆದ್ರೆ ಎಲ್ಲರಿಗೂ ಸೊಳ್ಳೆ ವಿಪರೀತ ಕಚ್ಚೋದಿಲ್ಲ. 

ಒಂದ್ಕಡೆ ನಾಲ್ಕೈದು ಜನರ ಜೊತೆ ನಿಂತಿರ್ತೇವೆ, ಅಲ್ಲಿರೋರಿಗೆ ಯಾರಿಗೂ ಸೊಳ್ಳೆ ಕಚ್ಚೋದಿಲ್ಲ, ನಿಮಗೆ ಮಾತ್ರ ಒಂದಾದ್ಮೇಲೆ ಒಂದ್ಕಡೆ ಸೊಳ್ಳೆ ಕಚ್ಚುತ್ತಿರುತ್ತದೆ. ಸಿಕ್ಕಾಪಟ್ಟೆ ಸೊಳ್ಳೆ (Mosquitoes) ಇಲ್ಲಿ ಅಂತಾ ನೀವು ಹೇಳಿದ್ರೆ ಅವರು ನಮಗೊಂದು ಕಚ್ಚಿಲ್ವಲ್ಲ ಅಂತಿರುತ್ತಾರೆ. ಈ ಅನುಭವ ಅನೇಕರಿಗೆ, ಅನೇಕ ಬಾರಿ ಆಗಿರುತ್ತದೆ. ಸೊಳ್ಳೆ ನನಗೊಬ್ಬನಿಗೆ ಕಚ್ಚೋದು ಯಾಕೆ ಎಂಬ ಪ್ರಶ್ನೆ ನಮ್ಮನ್ನು ಕಾಡೋದು ಸಹಜ ಕೂಡ. ಈ ಬಗ್ಗೆ ಸಂಶೋಧಕರು ಸಾಕಷ್ಟು ಬೆವರಿಳಿಸಿದ್ದಾರೆ. ಅನೇಕ ವರ್ಷಗಳ ಕಾಲ ಸೊಳ್ಳೆಯ ಬಗ್ಗೆ ಅಧ್ಯಯನ (Study) ನಡೆಸಿದ್ದಾರೆ ಕೊನೆಗೂ ಸಂಶೋಧಕರಿಗೆ ಸೊಳ್ಳೆ ಒಬ್ಬರಿಗೇ ಹೆಚ್ಚು ಕಚ್ಚಲು ಕಾರಣವೇನು ಎಂಬುದು ಗೊತ್ತಾಗಿದೆ. ಸೊಳ್ಳೆಗಳು ಯಾವ ರಕ್ತದ ಪ್ರಕಾರಗಳಿಗೆ (Blood group) ಹೆಚ್ಚು ಆದ್ಯತೆ ನೀಡುತ್ತವೆ ಎಂಬುದು ತಿಳಿದುಬಂದಿದೆ.

Latest Videos

undefined

ನಾವು ಬಳಸೋ ಸೋಪಿನ ಪರಿಮಳಕ್ಕೆ ಸೊಳ್ಳೆ ಆಕರ್ಷಿತವಾಗುತ್ತವೆಯಾ? ಸಂಶೋಧನೆ ಹೇಳೋದೇನು?

ಸೊಳ್ಳೆಗಳು ಯಾವ ರಕ್ತದ ಗುಂಪಿಗೆ ಹೆಚ್ಚು ಅಟ್ರ್ಯಾಕ್ಟ್ ಆಗುತ್ತವೆ?
ಕೆಲವೊಂದು ರಕ್ತದ ಗುಂಪುಗಳ ಜನರನ್ನು ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂಬುದು ಅಧ್ಯಯನ (Study)ದಿಂದ ತಿಳಿದುಬಂದಿದೆ. ಸೊಳ್ಳೆಗಳು ಬಿ ರಕ್ತ ಗುಂಪಿನ ಜನರನ್ನು ಬಹಳ ಹೆಚ್ಚಾಗಿ ಗುರುತಿಸುತ್ತದೆ. ಮತ್ತು ಅವರಿಗೆ ಹೆಚ್ಚು ಕಚ್ಚುತ್ತದೆ. ಏಕೆಂದರೆ ಈ ರಕ್ತ ಗುಂಪು ಇತರ ರಕ್ತ ಗುಂಪುಗಳಿಗಿಂತ ಹೆಚ್ಚು ಸೊಳ್ಳೆಗಳನ್ನು ಆಕರ್ಷಿಸುತ್ತದೆ ಎಂದು ತಿಳಿದುಬಂದಿದೆ. ಇನ್ನೊಂದು ಅಧ್ಯಯನದ ಪ್ರಕಾರ, ಕೆಲವು ಜಾತಿಯ ಸೊಳ್ಳೆಗಳು ಟೈಪ್ ಓ ರಕ್ತ ಹೊಂದಿರುವ ಜನರ ಚರ್ಮದ (Skin) ಮೇಲೆ ಹೆಚ್ಚು ಸಮಯ ಉಳಿಯುತ್ತದೆ ಎಂದು ತಿಳಿದುಬಂದಿದೆ.

ಇಂಥಾ ಬ್ಲಡ್‌ ಗ್ರೂಪ್‌ನವರು ತಮ್ಮ ಚರ್ಮದ ಮೂಲಕ ಕೆಲವು ರಾಸಾಯನಿಕಗಳನ್ನು (Chemical) ಸ್ರವಿಸುತ್ತಾರೆ. ಉತ್ಪಾದಿಸುವ ರಾಸಾಯನಿಕಗಳು ಅವರ ಡಿಎನ್ಎ ಮೇಲೆ ಅವಲಂಬಿತವಾಗಿರುತ್ತದೆ, ಅದು ರಕ್ತದ ಪ್ರಕಾರವನ್ನು ನಿರ್ಧರಿಸುತ್ತದೆ. ಫ್ಲೋರಿಡಾ ವಿಶ್ವವಿದ್ಯಾಲಯದ ವೈದ್ಯಕೀಯ ಕೀಟಶಾಸ್ತ್ರಜ್ಞ ಮತ್ತು ಸೊಳ್ಳೆ ತಜ್ಞ ಡಾ. ಜೋನಾಥನ್ ಡೇ, ಈ ಕೆಲವು ರಾಸಾಯನಿಕಗಳು ಅಂದರೆ ಲ್ಯಾಕ್ಟಿಕ್ ಆಮ್ಲದಂತಹವುಗಳು ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸಬಹುದು ಎಂದು ತಿಳಿಸಿದ್ದಾರೆ.

Home Remedies : ಸೊಳ್ಳೆ ಮನೆ ಹತ್ರನೂ ಬರಬಾರದು ಅಂದ್ರೆ ಈ ಸ್ಪ್ರೇ ಬಳಸಿ

ಸೊಳ್ಳೆ ಹೆಚ್ಚು ಆಕರ್ಷಿತವಾಗೋದು ಯಾವಾಗ ? 

ಪರಿಮಳಕ್ಕೆ ಆಕರ್ಷಿತವಾಗುತ್ತೆ ಸೊಳ್ಳೆ : ಒಬ್ಬ ವ್ಯಕ್ತಿ ಮೈಗೆ ಹಚ್ಚುವ ಸೋಪಿನ ಪರಿಮಳದಿಂದಲೂ ಸೊಳ್ಳೆ ಅವನನ್ನು ಹೆಚ್ಚು ಕಚ್ಚುತ್ತೆ ಎಂಬುದು ಇತ್ತೀಚಿನ ಹೊಸ ಅಧ್ಯಯನದಿಂದ ತಿಳಿದುಬಂದಿದೆ. ನಾವು ಮೈ ಗೆ ಹಚ್ಚಿಕೊಳ್ಳುವ ಸೋಪು ಸೊಳ್ಳೆಗಳನ್ನು ಹೇಗೆ ಆಕರ್ಷಿಸುತ್ತೆ ಎಂಬುದನ್ನು ತಿಳಿಯಲು ವರ್ಜೀನಿಯಾದ ತಜ್ಞರು ನಾಲ್ಕು ಜನಪ್ರಿಯ ಸೋಪುಗಳ ಮೇಲೆ ಪರೀಕ್ಷೆ ನಡೆಸಿದರು. ಇವುಗಳ ಪೈಕಿ ಮೂರು ಸೋಪು ಸೊಳ್ಳೆಗಳನ್ನು ಆಕರ್ಷಿಸುತ್ತೆ ಎಂಬುದು ತಿಳಿದುಬಂತು. 

ಹೂವು ಮತ್ತು ಹಣ್ಣಿನ ಪರಿಮಳ ಸೊಳ್ಳೆಗೆ ಇಷ್ಟವಾಗುತ್ತೆ : ಹಣ್ಣು ಮತ್ತು ಹೂವಿನ ಪರಿಮಳ ಹೊಂದಿರುವ ಸಾಬೂನಿನ ಪರಿಮಳವನ್ನು ಸೊಳ್ಳೆಗಳು ಹೆಚ್ಚು ಇಷ್ಟಪಡುತ್ತವೆ ಹಾಗೂ ತೆಂಗಿನ ಕಾಯಿಯ ಪರಿಮಳದಿಂದ ಸೊಳ್ಳೆಗಳು ದೂರ ಇರುತ್ತವೆ ಎಂಬುದು ಸಾಬೀತಾಗಿದೆ. ಆದ್ದರಿಂದ ವ್ಯಕ್ತಿ ಯಾವ ಸೋಪನ್ನು ಬಳಸುತ್ತಾನೆ ಎನ್ನುವುದರ ಮೇಲೆ ಸೊಳ್ಳೆಯ ಆಕ್ರಮಣ ಕೂಡ ಅವಲಂಬಿತವಾಗಿರುತ್ತೆ.

ಬಿಯರ್‌ಗೆ ಆಕರ್ಷಿತವಾಗುತ್ತೆ: ಸಂಶೋಧಕರು ಸೊಳ್ಳೆ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದಾರೆ. ಇನ್ನೂ ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಸದ್ಯದ ವರದಿ ಪ್ರಕಾರ, ಮಹಿಳೆಯರು ಗರ್ಭಿಣಿಯಾಗಿದ್ದಾಗ ಅಥವಾ ಜನರು ಬಿಯರ್ ಕುಡಿಯುವಾಗ ಸೊಳ್ಳೆಗಳು ಹೆಚ್ಚು ಆಕರ್ಷಕವಾಗಿವೆ ಎಂದು ತಜ್ಞರು ಕಂಡುಕೊಂಡಿದ್ದಾರೆ.

click me!