
ಮಾಂಸಹಾರ ಮತ್ತು ಸಸ್ಯಹಾರಕ್ಕೆ ಸಂಬಂಧಿಸಿದಂತೆ ಅನೇಕ ವಾದ – ವಿವಾದಗಳು ನಡೆಯುತ್ತಿರುತ್ತವೆ. ಕೆಲ ದಿನಗಳ ಹಿಂದೆ ಸಸ್ಯಹಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಧ್ಯಯನ ನಡೆದಿದೆ. ಮೂರು ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ವ್ಯಾಪಕ ಅಧ್ಯಯನದ ನಂತರ ಸಸ್ಯಹಾರದ ಬಗ್ಗೆ ಮಹತ್ವದ ವಿಷ್ಯವೊಂದನ್ನು ಹೇಳಿದ್ದಾರೆ. ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳಲ್ಲಿ ಕ್ಯಾನ್ಸರ್ ಅಪಾಯವು ಶೇಕಡಾ 14 ರಷ್ಟು ಕಡಿಮೆಯಾಗಿದೆ ಎಂದು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ರಕ್ತದ ಒತ್ತಡ, ಬೊಜ್ಜು ಮತ್ತು ಟೈಪ್ 2 ಡಯಾಬಿಟಿಸ್‌ನಂತಹ ಗಂಭೀರ ಕಾಯಿಲೆಗಳನ್ನು ದೂರವಿಡಲು ಸಸ್ಯಾಹಾರಿ (Vegetarian) ಆಹಾರವು ಸಹಾಯಕವಾಗಿದೆ ಎಂದು ಈ ಹಿಂದೆ ಅನೇಕ ಅಧ್ಯಯನ (Study) ಗಳು ಹೇಳಿದ್ದವು. ಈಗ ಅದರ ಬೆನ್ನಲ್ಲೆ ಕ್ಯಾನ್ಸರ್ (Cancer) ನಿಯಂತ್ರಣಕ್ಕೂ ಸಸ್ಯಹಾರ ಬೆಸ್ಟ್ ಎನ್ನಲಾಗಿದೆ.
ವರ್ಷದ ಹಿಂದೆ ನಡೆದ ಅಧ್ಯಯನದಲ್ಲಿ 4 ಲಕ್ಷ 72 ಸಾವಿರ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರ ಆಹಾರದ ಡೇಟಾವನ್ನು ಯುಕೆ ಬಯೋಬ್ಯಾಂಕ್‌ನಿಂದ ತೆಗೆದುಕೊಳ್ಳಲಾಗಿತ್ತು. ಮಾಂಸ ಮತ್ತು ಮೀನು ತಿನ್ನುವವರನ್ನು ಪ್ರತ್ಯೇಕ ವಿಭಾಗಗಳಲ್ಲಿ ಇರಿಸಲಾಗಿತ್ತು. ಎಲ್ಲಾ ಜನರ ಆಹಾರ ಪದ್ಧತಿಯನ್ನು 11.4 ವರ್ಷಗಳ ಕಾಲ ಗಮನಿಸಲಾಯಿತು.ಮೊದಲ ಗುಂಪಿನಲ್ಲಿ ವಾರದಲ್ಲಿ 5 ದಿನ ಅಥವಾ ಅದಕ್ಕಿಂತ ಹೆಚ್ಚು ದಿನ ಮಾಂಸಾಹಾರ ಸೇವಿಸುವವರು ಇದ್ದರು. ಈ ಜನರು ಕೆಂಪು ಮಾಂಸದಿಂದ ಕೋಳಿ ಮಾಂಸದವರೆಗೆ ಎಲ್ಲಾ ರೀತಿಯ ಮಾಂಸವನ್ನು ತಿನ್ನುತ್ತಿದ್ದರು. ಎರಡನೇ ಗುಂಪು ವಾರದಲ್ಲಿ 5 ಅಥವಾ ಅದಕ್ಕಿಂತ ಕಡಿಮೆ ದಿನ ಮಾಂಸವನ್ನು ಸೇವಿಸುವ ಜನರನ್ನು ಒಳಗೊಂಡಿತ್ತು. ಕೇವಲ ಮೀನು ತಿನ್ನುವವರನ್ನು ಮೂರನೇ ಗುಂಪಿನಲ್ಲಿ ಇರಿಸಲಾಯಿತು. ನಾಲ್ಕನೇ ಮತ್ತು ಕೊನೆಯ ಗುಂಪಿನಲ್ಲಿ ಸಸ್ಯಾಹಾರಿ ಜನರನ್ನು ಇರಿಸಲಾಗಿತ್ತು. ಅವರು ಎಂದಿಗೂ ಮಾಂಸ ಮತ್ತು ಮೀನುಗಳನ್ನು ತಿಂದಿರಲಿಲ್ಲ.
ಅಧ್ಯಯನ ಹೇಳಿದ್ದೇನು? : ಸಸ್ಯಾಹಾರಿ ಆಹಾರವು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಶೇಕಡಾ 22 ರಷ್ಟು ಕಡಿಮೆ ಮಾಡುತ್ತದೆ. ಅಲ್ಲದೆ, ಇದು ಯಾವುದೇ ಕ್ಯಾನ್ಸರ್ ಬರುವ ಒಟ್ಟು ಅಪಾಯವನ್ನು ಶೇಕಡಾ 10 ರಿಂದ 12 ರಷ್ಟು ಕಡಿಮೆ ಮಾಡುತ್ತದೆ ಎಂದು ಅಧ್ಯಯನದ ವರದಿ ಹೇಳಿದೆ. ಇದೇ ಕಾರಣಕ್ಕೆ ಸಸ್ಯಾಹಾರವು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬೆಳಗ್ಗೆ ತಿಂಡಿ ಏನೂಂತ ತಲೆಕೆಡಿಸಿಕೊಳ್ಬೇಡಿ, ಈ ಹೆಲ್ದೀ ಸ್ಯಾಂಡ್‌ವಿಚ್ ಮಾಡಿ
ಕಡಿಮೆ ಮಾಂಸ ತಿನ್ನುವವರಲ್ಲಿ ಅಪಾಯ ಕಡಿಮೆ : ವಾರಕ್ಕೆ ನಾಲ್ಕೈದು ಬಾರಿ ಮಾಂಸ ಸೇವನೆ ಮಾಡುವವರಿಗೆ ಹೋಲಿಕೆ ಮಾಡಿದ್ರೆ ಅಪರೂಪಕ್ಕೆ ಅಥವಾ ಕಡಿಮೆ ಪ್ರಮಾಣದಲ್ಲಿ ಮಾಂಸ ತಿನ್ನುವವರಿಗೆ ಕ್ಯಾನ್ಸರ್ ಬರುವ ಅಪಾಯ ಶೇಕಡಾ 2ರಷ್ಟು ಕಡಿಮೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಉಳಿದ ಮಾಂಸವನ್ನು ಹೊರತುಪಡಿಸಿ ಬರೀ ಮೀನು ತಿನ್ನುವವರಲ್ಲಿ ಶೇಕಡಾ 10 ರಷ್ಟು ಕ್ಯಾನ್ಸರ್ ಬರುವ ಅಪಾಯ ಕಡಿಮೆ ಇರುತ್ತದೆ. ಅದೇ ಸಂಪೂರ್ಣ ಸಸ್ಯಾಹಾರಿಗಳಲ್ಲಿ ಕ್ಯಾನ್ಸರ್ ಅಪಾಯ ಶೇಕಡಾ 14 ರಷ್ಟು ಕಡಿಮೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಡಿಮೆ ಮಾಂಸವನ್ನು ಸೇವಿಸುವವರಲ್ಲಿ ಕರುಳಿನ ಕ್ಯಾನ್ಸರ್ ಅಪಾಯ ಶೇಕಡಾ 9 ರಷ್ಟು ಕಡಿಮೆ ಎಂಬ ವಿಷ್ಯವನ್ನು ಸಂಶೋಧಕರು ಇದೇ ವೇಳೆ ಹೇಳಿದ್ದಾರೆ.
ಇನ್ನು ಋತುಬಂಧಕ್ಕೊಳಗಾದ ನಂತರದ ಸ್ತನ ಕ್ಯಾನ್ಸರ್ ಅಪಾಯವು ಸಸ್ಯಾಹಾರಿ ಮಹಿಳೆಯರಲ್ಲಿ ಶೇಡಕಾ 18 ರಷ್ಟು ಕಡಿಮೆಯಾಗಿದೆ ಎಂಬ ಸಂಗತಿಯನ್ನೂ ಅವರು ಪತ್ತೆ ಮಾಡಿದ್ದಾರೆ. ಕ್ಯಾನ್ಸರ್ ಅಪಾಯ ಕಡಿಮೆಯಾಗಲು ಕಾರಣ ಸಾಮಾನ್ಯ ತೂಕ ಎಂದು ಪರಿಗಣಿಸಲಾಗಿದೆ. ಮಾಂಸಾಹಾರಿಗಳಿಗೆ ಹೋಲಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಮೀನು ತಿನ್ನುವವರಲ್ಲಿ ಶೇಕಡಾ 20 ರಷ್ಟು ಕಡಿಮೆಯಾದ್ರೆ ಸಸ್ಯಾಹಾರಿಗಳಲ್ಲಿ ಶೇಕಡಾ 31 ಶೇಕಡಾ ಕಡಿಮೆ ಇತ್ತು.
ಸಾಮಾಜಿಕ ಜಾಲತಾಣದಲ್ಲಿ ಇದ್ರ ಪೋಸ್ಟನ್ನು ಹಂಚಿಕೊಳ್ಳಲಾಗಿದೆ. ಇದು ಮಾಂಸಹಾರಿಗಳ ಕೋಪಕ್ಕೆ ಕಾರಣವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.