
ಪಿಜ್ಜಾ (Fizza), ಬರ್ಗರ್ ಅಂತ ಫಾಸ್ಟ್ ಫುಡ್ (fast food) ಸೇವನೆ ಮಾಡಿದ ನಂತ್ರ ಎಲ್ಲರ ಕೈ ಹೋಗೋದು ಕೋಕ್ ಮೇಲೆ. ತಿಂದ ಆಹಾರ ಜೀರ್ಣವಾಗಲು ಸಹಾಯ ಮಾಡುತ್ತೆ ಎನ್ನುವ ಕಾರಣಕ್ಕೆ ಅನೇಕರು ಕೋಕ್ ಕುಡಿಯುತ್ತಾರೆ. ವಿಶ್ವದಲ್ಲಿ ಅತ್ಯಂತ ನೆಚ್ಚಿನ ಪಾನೀಯಗಳಲ್ಲಿ ಕೋಕ್ ಕೂಡ ಸೇರಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರ ಅಚ್ಚುಮೆಚ್ಚು ಈ ಪಾನೀಯ. ಬೇಸಿಗೆ ಕಾಲ ಶುರುವಾಗ್ತಿದ್ದಂತೆ ಬಹುತೇಕರ ಮನೆಯ ಪಿಜ್ ನಲ್ಲಿ ಈ ಕೋಲ್ಡ್ ಡ್ರಿಂಕ್ಸ್ ಜಾಗ ಪಡೆದಿರುತ್ತದೆ. ಬಾಯಾರಿಕೆ ಎಂದಾಗೆಲ್ಲ ಬಹುತೇಕರು ಕೋಕ್ ಕುಡಿತಾರೆ. ಕೋಕ್ (coke) ಪ್ರೇಮಿಗಳಲ್ಲಿ ನೀವೂ ಒಬ್ಬರಾಗಿದ್ರೆ ಇಂದೇ ಈ ಅಭ್ಯಾಸ ಬಿಡೋದು ಉತ್ತಮ. ಕೋಕ್ ಸೇವನೆ ಮಾಡುವ ಮುನ್ನ ಎರಡು ಬಾರಿ ಆಲೋಚನೆ ಮಾಡಿ. ಇದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ, ಆಯಸ್ಸನ್ನು ಕಡಿಮೆ ಮಾಡುತ್ತೆ. ಇದನ್ನು ನಾವು ಹೇಳ್ತಿಲ್ಲ, ವಿಜ್ಞಾನಿಗಳು ಹೇಳ್ತಿದ್ದಾರೆ.
ಕೋಕ್ ನಲ್ಲಿ ಸಕ್ಕರೆ ಅಂಶ ಹೆಚ್ಚಿರುವುದರಿಂದ ಮತ್ತು ಅನಾರೋಗ್ಯಕರ ಅಂಶಗಳು ಅದ್ರಲ್ಲಿ ಸೇರಿರುವ ಕಾರಣ ಕೋಕ್ ಆರೋಗ್ಯಕ್ಕೆ ಉತ್ತಮವಲ್ಲ. ಕೋಕ್ ಕುಡಿಯುವುದರಿಂದ ಮನುಷ್ಯನ ಜೀವಿತಾವಧಿ (life) ಸುಮಾರು 12 ನಿಮಿಷಗಳಷ್ಟು ಕಡಿಮೆಯಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಕೋಕ್ ನಲ್ಲಿ ಸೋಡಾ ಸೇರ್ಪಡೆಗೊಂಡಿರುತ್ತದೆ. ಸೋಡಾ ಒಳ್ಳೆಯದು ಎನ್ನುತ್ತ ಅದನ್ನು ಸೇವನೆ ಮಾಡುವ ಜನರು ಸಾಕಷ್ಟಿದ್ದಾರೆ. ಆದ್ರೆ ಒಂದು ಬಾಟಲ್ ಸೋಡಾ ತಕ್ಷಣಕ್ಕೆ ಹಾನಿ ಮಾಡದಿದ್ದರೂ, ನಿಯಮಿತ ಸೇವನೆ ಅನಾರೋಗ್ಯಕರ. ಇದು ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ಗಮನಾರ್ಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದು ಒಟ್ಟಾರೆಯಾಗಿ ಮನುಷ್ಯನ ದೀರ್ಘಾಯುಷ್ಯದ ಮೇಲೆ ಪರಿಣಾಮ ಬೀರುತ್ತದೆ.
ಹೊಟ್ಟೆ ತುಂಬಾ ತಿಂದರೂ ಹಸಿವು ಆಗುತ್ತಾ? ಹಾಗಾದರೆ ಈ ಕಾರಣಗಳಿರಬಹುದು!
ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಈ ಅಲ್ಟ್ರಾ ಸಂಸ್ಕರಿಸಿದ ಆಹಾರದಲ್ಲಿ ಕೋಕ್ ಕೂಡ ಸೇರಿದೆ. ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಬೇಕು ಅಂದ್ರೆ ಬರೀ ವ್ಯಾಯಾಮ ಮಾಡಿದ್ರೆ ಸಾಲದು, ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡ್ಕೊಳ್ಳಬೇಕು. ನಿಮ್ಮ ಆಹಾರ ಕ್ರಮ ಬದಲಾಗಿಲ್ಲ, ಅಲ್ಟ್ರಾ ಸಂಸ್ಕರಿಸಿದ ಆಹಾರವನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಿದ್ದೀರಿ ಎಂದಾದ್ರೆ ಆ ಆಹಾರ ಹೃದ್ರೋಗ ಸಂಬಂಧಿತ ಸಾವಿನ ಅಪಾಯವನ್ನು ಶೇಕಡಾ 50 ರಷ್ಟು ಹೆಚ್ಚಿಸುತ್ತದೆ. ಆತಂಕ, ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಶೇಕಡಾ 48 ರಿಂದ 53ರಷ್ಟು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ, ಟೈಪ್ 2 ಮಧುಮೇಹ ಬರುವ ಅಪಾಯವು ಶೇಕಡಾ 12 ರಷ್ಟು ಹೆಚ್ಚಾಗುತ್ತದೆ. ಸಾವಿನ ಅಪಾಯ ಶೇಕಡಾ 21 ರಷ್ಟು ಹೆಚ್ಚಾಗುತ್ತದೆ. ಇದಲ್ಲದೆ ನಿದ್ರೆ ಸಮಸ್ಯೆ, ಖಿನ್ನತೆ, ಅಸ್ತಮಾ, ಅಧಿಕ ಕೊಲೆಸ್ಟ್ರಾಲ್ ಮತ್ತು ಜಠರಗರುಳಿನ ಸಮಸ್ಯೆಗಳಿಂದ ಜನರು ಬಳಲುತ್ತಾರೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ತಿನ್ನುವ ಆಹಾರದಲ್ಲೇ ಇದೆ ಎಲ್ಲವೂ: ಆತಂಕ, ಖಿನ್ನತೆ ಸಹಜವಾಗಿ ಕಡಿಮೆ ಮಾಡುವ 5 ಆಹಾರ
ಉತ್ತಮ ಆರೋಗ್ಯಕರ ಜೀವನ ಬಯಸುವವರು ಹಣ್ಣು, ತರಕಾರಿ ಮತ್ತು ಧಾನ್ಯಗಳಂತಹ ಆರೋಗ್ಯಕರ ಆಹಾರಗಳಿಗೆ ಆದ್ಯತೆ ನೀಡಬೇಕೆಂದು ಅವರು ಸೂಚನೆ ನೀಡಿದ್ದಾರೆ. ಹಿಂದೆ ನಡೆದ ಅಧ್ಯಯನವೊಂದು ಕೋಕ್ ಮಾತ್ರವಲ್ಲ ಹಾಟ್ ಡಾಗ್ ತಿನ್ನುವುದರಿಂದ ಜೀವಿತಾವಧಿ ಸಮಯ 36 ನಿಮಿಷ ಕಡಿಮೆಯಾಗಬಹುದು ಎಂದಿತ್ತು. ಅಲ್ಲದೆ ಬೆಳಗಿನ ಉಪಾಹಾರದಲ್ಲಿ ಸ್ಯಾಂಡ್‌ವಿಚ್‌ಗಳು ಮತ್ತು ಮೊಟ್ಟೆಗಳ ಸೇವನೆ ಶೇಕಡಾ 13 ನಿಮಿಷಗಳಷ್ಟು ನಿದ್ರೆಯನ್ನು ಕಡಿಮೆ ಮಾಡುತ್ತವೆ, ಚೀಸ್‌ಬರ್ಗರ್ 9 ನಿಮಿಷಗಳಷ್ಟು ನಿದ್ರೆಯನ್ನು ಕಡಿಮೆ ಮಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿತ್ತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.