Kannada

ಆತಂಕ ಮತ್ತು ಖಿನ್ನತೆ ನಿವಾರಿಸುವ 5 ಆಹಾರಗಳು

Kannada

ಕಾಳುಗಳು

ಪಿಸ್ತಾ ಬಾದಾಮಿ ಮುಂತಾದ ಕಾಳುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ವಿಟಮಿನ್ ಬಿ ಸೇರಿದಂತೆ ಹಲವು ಪೋಷಕಾಂಶಗಳು ದೊರೆಯುತ್ತವೆ. ವಿಟಮಿನ್ ಬಿ ನಮ್ಮ ದೇಹದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Kannada

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್‌ನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಮೆಗ್ನೀಸಿಯಮ್ ಇರುತ್ತವೆ. ಇವು ಒತ್ತಡವನ್ನು ಕಡಿಮೆ ಮಾಡಿ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತವೆ.

Kannada

ಆವಕಾಡೊ

ಆವಕಾಡೊ ಮೆದುಳನ್ನು ಶಾಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಇರುತ್ತವೆ. ಒಮೆಗಾ-3 ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Kannada

ಕಪ್ಪು ದ್ರಾಕ್ಷಿ

ಕಪ್ಪು ದ್ರಾಕ್ಷಿ ನಮ್ಮ ಮೆದುಳಿಗೆ ತುಂಬಾ ಒಳ್ಳೆಯದು. ಕಪ್ಪು ದ್ರಾಕ್ಷಿಯ ಜೊತೆಗೆ ಬ್ಲೂಬೆರ್ರಿಗಳು ಕೂಡ ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

Kannada

ಹಸಿರು ತರಕಾರಿಗಳು

ಪಾಲಕ್ ಸೊಪ್ಪು, ಮೆಂತ್ಯ ಸೊಪ್ಪು ಮುಂತಾದ ಹಸಿರು ತರಕಾರಿಗಳಿಂದ ನಿಮ್ಮ ದೇಹಕ್ಕೆ ವಿಟಮಿನ್‌ಗಳು ಮತ್ತು ಖನಿಜಗಳು ಹೇರಳವಾಗಿ ದೊರೆಯುತ್ತವೆ. ಈ ತರಕಾರಿಗಳನ್ನು ತಿಂದರೆ, ನಿಮ್ಮ ಮೆದುಳು ಆರೋಗ್ಯವಾಗಿರುತ್ತದೆ.

ರಾತ್ರಿ ಊಟದ ಬದಲು ಪರೋಟ ತಿನ್ನುವ ಅಭ್ಯಾಸ ಇರೋರೇ ಎಚ್ಚರ, ತಿಂದ್ರೆ ಏನಾಗುತ್ತೆ?

ಬೆಂಡೆಕಾಯಿ ಲೋಳೆ ತೆಗೆಯುವ ಸಿಂಪಲ್ ವಿಧಾನಗಳು

ನಿಮ್ಮ ಆಯಸ್ಸು ಕಿತ್ತುಕೊಳ್ಳುವ 6 ಆಹಾರಗಳು; ಇವುಗಳನ್ನು ತಿನ್ನಲೇಬೇಡಿ!

ತೂಕ ಇಳಿಸಲು ಪ್ರೋಟೀನ್ ಭರಿತ 6 ಆಹಾರಗಳಿವು!