ನಿಮ್ಮವರ ನಿಮ್ಮ ಮಾನಸಿಕ ಆರೋಗ್ಯ ಕ್ಷೀಣಿಸಿದೆ ಎಂಬುದನ್ನು ಸೂಚಿಸುವ 5 ಲಕ್ಷಣಗಳು

Published : Jan 19, 2025, 12:25 PM IST
ನಿಮ್ಮವರ ನಿಮ್ಮ ಮಾನಸಿಕ ಆರೋಗ್ಯ ಕ್ಷೀಣಿಸಿದೆ ಎಂಬುದನ್ನು ಸೂಚಿಸುವ 5 ಲಕ್ಷಣಗಳು

ಸಾರಾಂಶ

ಮಾನಸಿಕ ಆರೋಗ್ಯ ಸರಿ ಇಲ್ಲವೆಂದಾದರೆ ಬದುಕಿಯೂ ಸತ್ತಂತೆ. ಆದರೆ ಬಹುತೇಕರು ಮಾನಸಿಕ ಆರೋಗ್ಯವನ್ನು ಕಡೆಗಣಿಸುತ್ತಾರೆ.  ತಮ್ಮ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರುವವರೆಗೆ ಅದನ್ನು  ನಿರ್ಲಕ್ಷಿಸುತ್ತಾರೆ. ನಿಮ್ಮ ಅಥವಾ ನಿಮ್ಮವರ ಮಾನಸಿಕ ಆರೋಗ್ಯ ಕ್ಷೀಣಿಸಿದೆ ಎಂಬುದನ್ನು ಸೂಚಿಸುವ ಕೆಲ ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ. 

ಮಾನಸಿಕ ಆರೋಗ್ಯವೂ ಬಹಳ ಮುಖ್ಯ. ಮಾನಸಿಕ ಆರೋಗ್ಯ ಸರಿ ಇಲ್ಲವೆಂದಾದರೆ ಬದುಕಿಯೂ ಸತ್ತಂತೆ. ಆದರೆ ಬಹುತೇಕರು ಮಾನಸಿಕ ಆರೋಗ್ಯವನ್ನು ಕಡೆಗಣಿಸುತ್ತಾರೆ.  ತಮ್ಮ ದೈನಂದಿನ ಜೀವನದ ಮೇಲೆ ತೀವ್ರ ಪರಿಣಾಮ ಬೀರುವವರೆಗೆ ಅದನ್ನು  ನಿರ್ಲಕ್ಷಿಸುತ್ತಾರೆ. ತೀವ್ರವಾದ ದು:ಖ, ಸರಿಯಾದ ನಿದ್ದೆ ಇಲ್ಲದಿರುವುದು, ತೀವ್ರವಾದ ಯೋಚನೆಗಳು, ವಿವರಿಸಲಾಗದಂತಹ ದೈಹಿಕ ಮಾನಸಿಕ ಸಮಸ್ಯೆಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತವೆ. ಆದರೆ ಇವುಗಳನ್ನು ಆರಂಭದಿಂದಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು, ಇಲ್ಲದಿದ್ದಲ್ಲಿ ಬುದ್ಧಿಭ್ರಮಣೆಯಾಗುವ ಸಾಧ್ಯತೆಗಳು ಹೆಚ್ಚು ಹೀಗಿರುವಾಗ ಕಳಪೆ ಮಾನಸಿಕ ಆರೋಗ್ಯದ ಆರಂಭಿಕ ಲಕ್ಷಣಗಳನ್ನು ಗುರುತಿಸುವುದರಿಂದ ಸವಾಲುಗಳು ಉಲ್ಬಣಗೊಳ್ಳುವ ಮೊದಲು ಸಹಾಯ ಮತ್ತು ಬೆಂಬಲವನ್ನು ತೊಂದರೆಯಿಂದ ಬಳಲುತ್ತಿರುವವರಿಗೆ ನೀಡಬಹುದಾಗಿದೆ. ನಿಮ್ಮ ಅಥವಾ ನಿಮ್ಮವರ ಮಾನಸಿಕ ಆರೋಗ್ಯ ಕ್ಷೀಣಿಸಿದೆ ಎಂಬುದನ್ನು ಸೂಚಿಸುವ ಕೆಲ ಲಕ್ಷಣಗಳನ್ನು ಇಲ್ಲಿ ನೀಡಲಾಗಿದೆ. 

1.ನಿರಂತರ ದುಃಖ ಅಥವಾ ಹತಾಶತೆಯ ಭಾವನೆಗಳು
ಪ್ರತಿಯೊಬ್ಬರಿಗೂ ಒಳ್ಳೆಯ ಹಾಗೂ ಕೆಟ್ಟ ದಿನಗಳಿರುತ್ತವೆ. ಹಾಗಂತ ತಮಗಾದ ಕೆಟ್ಟ ಅನುಭಗಳ ಕುರಿತೇ ಯೋಚಿಸುತ್ತಾ ದಿನಗಳೆದರೆ ಅಲ್ಲಿ ಹೊಸಬದುಕಿಗೆ ಅವಕಾಶವಿರುವುದಿಲ್ಲ, ಜೊತೆಗೆ ಈ ಕೊರಗೆ ನಿಮ್ಮನ್ನು ಹೊಸರೋಗಗಳಿಗೆ ದೂಡಬಹುದು, ಒಂದು ದಿನ ಒಂದು ವಾರ ದುಃಖಿಸಿದರೆ ಸಾಮಾನ್ಯ. ಆದರೆ ನಿರಂತರ ದುಃಖಿಸುತ್ತಿದ್ದರೆ ನೀವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇಬೇಕು. ನಿಷ್ಪ್ರಯೋಜಕವೆನಿಸುವ ಯಾವುದೇ ಉದ್ದೇಶವಿಲ್ಲದ ಈ ಭಾವನೆಗಳು ಧೀರ್ಘಾಕಾಲದ ಸಮಸ್ಯೆಗಳಿಗೆ ದಾರಿ ಮಾಡಿಕೊಡುವುದು. 

2.ನಿದ್ದೆ ಬರದಿರುವುದು ಅಥವಾ ಅತೀಯಾದ ನಿದ್ದೆ
ನಿದ್ದೆ ದೇಹಕ್ಕೆ ಹಾಗೂ ನಿಮ್ಮ ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ, ಮಾನಸಿಕ ಆರೋಗ್ಯ ಸರಿ ಇಲ್ಲದಿದ್ದರೆ ಒಂದೋ ನಿಮಗೆ ನಿದ್ದೆಯೇ ಬಾರದು ಅಥವಾ ನಡುನಡುವೇ ಬೆಚ್ಚಿ ಬೀಳುವುದು, ಅಥವಾ ಹಗಲು ರಾತ್ರಿಯೆನ್ನದೇ ನಿರಂತರ ನಿದ್ರೆಯೂ ಬರುವುದು, ನಿದ್ರಾಹೀನತೆ, ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಅಸಮರ್ಥತೆ ಅಡಚಣೆಗಳು ಭಾವನಾತ್ಮಕ ಸ್ಥಿತಿಗಳನ್ನು ಉಲ್ಬಣಗೊಳಿಸಬಹುದು.

3.ಹಠಾತ್ ಆಗಿ ಎಲ್ಲರಿಂದ ದೂರಾಗುವುದು
ಸ್ನೇಹಿತರು, ಕುಟುಂಬ ಅಥವಾ ಸಾಮಾಜಿಕ ಚಟುವಟಿಕೆಗಳಿಂದ ಹಠಾತ್ ಅಥವಾ ಕ್ರಮೇಣ ದೂರಾಗುತ್ತಿದ್ದರೆ ಮಾನಸಿಕ ಆರೋಗ್ಯ ಸಮಸ್ಯೆಗಳು ಸ್ಪಷ್ಟವಾಗಿ ಕಂಡುಬರಬಹುದು. ಒಂಟಿತನವು ಹೆಚ್ಚಾಗಿ ಆತಂಕ ಅಥವಾ ಖಿನ್ನತೆಯ ಪರಿಸ್ಥಿತಿಗೆ ಸಂಬಂಧಿಸಿದೆ, ಏಕೆಂದರೆ  ಯಾರೂ ತಮ್ಮ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಭಾವಿಸುವ ಸಾಧ್ಯತೆಗಳಿವೆ.

4. ಗಮನಹರಿಸಲು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಲು ತೊಂದರೆ
ಮಾನಸಿಕ ಆರೋಗ್ಯ ಸಮಸ್ಯೆಗಳು ವ್ಯಕ್ತಿಯನ್ನು ಒಂದು ವಿಚಾರದ ಬಗ್ಗೆ ಗಮನಹರಿಸಲು ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳಲು ದುರ್ಬಲರನ್ನಾಗಿಸಬಹುದು. ಇದು ಅವರ ಕೆಲಸ ಅಥವಾ ಚಟುವಟಿಕೆಯ ಮೇಲೆ ಪರಿಣಾಮ ಬೀರಬಹುದು. ದಿನನಿತ್ಯದ ಕೆಲಸಗಳೂ ಅವರಿಗೆ ಅಸಾಧ್ಯವಾಗಬಹುದು. ಒತ್ತಡ, ಆತಂಕ ಅಥವಾ ಖಿನ್ನತೆಯು ಈ ಮಾನಸಿಕ ಸ್ಥಿತಿಗೆ ಕಾರಣವಾಗಿರಬಹುದು.

5. ಸ್ಪಷ್ಟ ಕಾರಣವಿಲ್ಲದೆ ದೈಹಿಕ ಲಕ್ಷಣಗಳು
ಮನಸ್ಸಿಗೂ ದೇಹಕ್ಕೂ ಇರುವ ಅನುಬಂಧದ ಬಗ್ಗೆ ನಿಮಗೆ ಬೇರೆಯದಾಗಿ ಹೇಳಬೇಕಾಗಿಲ್ಲ,  ತಲೆನೋವು, ಹೊಟ್ಟೆ ನೋವು, ಸ್ನಾಯು ಸೆಳೆತ ಅಥವಾ ದೀರ್ಘಕಾಲದ ಆಯಾಸದಂತಹ ದೈಹಿಕ ಸಮಸ್ಯೆಗಳು ಕೂಡ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.  ಹಲವಾರು ವೈದ್ಯಕೀಯ ಚಿಕಿತ್ಸೆಗಳ ನಂತರವೂ ಈ ಲಕ್ಷಣಗಳು ಮುಂದುವರಿದರೆ, ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸುವುದು ಸೂಕ್ತವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ