ಕೆಲಸದ ಒತ್ತಡದಿಂದಾಗಿ 20 ಕೇಜಿ ತೂಕ ಹೆಚ್ಚಿಸಿಕೊಂಡ ಮಹಿಳೆ

By Suvarna News  |  First Published Sep 11, 2024, 4:30 PM IST

ಹಾಗೆಯೇ ಚೀನಾದ  ಔಯಾಂಗ್ ವೆನ್ಜಿಂಗ್ ಎಂಬ ಮಹಿಳೆ  ಈ ಕೆಲಸದ ಒತ್ತಡದಿಂದ ಆದ ಪರಿಣಾಮಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ  ಕಷ್ಟ ಹಂಚಿಕೊಂಡಿದ್ದಾರೆ,  ಸರಿಯಾದ ಸಮಯದಲ್ಲಿ ಊಟ ಮಾಡದ ಕಾರಣ ಅವರ ತೂಕ ಒಂದೇ ವರ್ಷದಲ್ಲಿ 60 ಕೆಜಿಯಿಂದ 80 ಕೆಜಿಗೆ ಹೆಚ್ಚಾಯ್ತು ಎಂದು ಅವರು ಹೇಳಿಕೊಂಡಿದ್ದಾರೆ.


ಇಂದಿನ ಜೀವನಶೈಲಿಯಲ್ಲಿ ಬಹುತೇಕ ಕಾರ್ಪೋರೇಟ್ ಸಂಸ್ಥೆಗಳಲ್ಲಿ ದುಡಿಯುವ ಬಹುತೇಕರು ಸರಿಯಾದ ಸಮಯಕ್ಕೆ ಆಹಾವನ್ನು ಸೇವಿಸುವುದು ತೀರಾ ಕಡಿಮೆ. ಯಾವಾಗಲೋ ಊಟ ಯಾವಾಗಲೋ ನಿದ್ದೆ ಮಾಡುವ ಈ ಬೇಡದ ಹವ್ಯಾಸಗಳಿಂದ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಚೀನಾ ಮಹಿಳೆಯೊಬ್ಬರು ಇತ್ತೀಚೆಗೆ ಸುದೀರ್ಘ ಕೆಲಸದ ಅವಧಿ ಹಾಗೂ ಆಹಾರವನ್ನು ಪೂರೈಸುವ ಆನ್‌ಲೈನ್ ಫುಡ್ ಅಪ್ಲಿಕೇಷನ್‌ ಮೇಲೆ ಹೆಚ್ಚು ಅವಲಂಬಿಸಿದ್ದರಿಂದ ತನ್ನ  ಜೀವನಶೈಲಿಯಲ್ಲಿ ಕೆಟ್ಟ ಬದಲಾವಣೆಯಾಗಿದ್ದು, ಇದರ ಪರಿಣಾಮ ತಾನು ಕೇವಲ ಒಂದು ವರ್ಷದಲ್ಲಿ 20 ಕೇಜಿ ತೂಕ ಹೆಚ್ಚಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. 

ಕೆಲಸದ ಒತ್ತಡದಿಂದಾಗಿ ಎಷ್ಟು ಸಲ ನೀವು ಆಹಾರವನ್ನು ಮಿಸ್ ಮಾಡಿದ್ದೀರಿ ಹಾಗೂ ಆಹಾರಕ್ಕಾಗಿ ಆನ್‌ಲೈನ್ ಫುಡ್ ಅಪ್ಲಿಕೇಷನ್‌ ಮೊರೆ ಹೋಗಿದ್ದೀರಿ ಎಂಬ ಸಮೀಕ್ಷೆ ಮಾಡಿದರೆ ಬಹುತೇಕ ಉದ್ಯೋಗಸ್ಥರಿಂದ ಹೌದು ಎನ್ನುವ ಉತ್ತರ ಬರುತ್ತದೆ. ಬಹಳಷ್ಟು ಉದ್ಯೋಗಿಗಳ ಜೀವನಶೈಲಿಯಲ್ಲಿ ಬದಲಾವಣೆಯಾಗಿದೆ ಆದರೆ ಅದು ಉತ್ತಮ ರೀತಿಯಲ್ಲಿ ಅಲ್ಲ, ಶಿಫ್ಟ್ ಸಮಯ ಮತ್ತು ದೀರ್ಘಾವಧಿಯ ಕೆಲಸದ ಸಮಯದಿಂದಾಗಿ ಅವರು ನಿಧಾನವಾಗಿ ಧೀರ್ಘಾವಧಿಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. 

Tap to resize

Latest Videos

undefined

ಕೋರಿಯನ್ನರಂತೆ ಸ್ಲಿಮ್ ಕಾಣಬೇಕಾ? ಈ ಡಯಟ್ ಆಹಾರ ಸೇವಿಸಿ ತೂಕ ಇಳಿಸಿ!

ಹಾಗೆಯೇ ಚೀನಾದ  ಔಯಾಂಗ್ ವೆನ್ಜಿಂಗ್ ಎಂಬ ಮಹಿಳೆ  ಈ ಕೆಲಸದ ಒತ್ತಡದಿಂದ ಆದ ಪರಿಣಾಮಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ  ಕಷ್ಟ ಹಂಚಿಕೊಂಡಿದ್ದಾರೆ,  ಕೆಲಸದ ಒತ್ತಡದಿಂದಾಗಿ ಸರಿಯಾದ ಸಮಯದಲ್ಲಿ ಊಟ ಮಾಡದ ಕಾರಣ ಅವರ ತೂಕ ಒಂದೇ ವರ್ಷದಲ್ಲಿ 60 ಕೆಜಿಯಿಂದ 80 ಕೆಜಿಗೆ ಹೋಯ್ತು. ಈ ತೂಕ ಹೆಚ್ಚಳದ ಹಿಂದೆ ಸುದೀರ್ಘ ಕೆಲಸದ ಸಮಯ ಮತ್ತು ಆಹಾರ ವಿತರಣಾ ಅಪ್ಲಿಕೇಶನ್‌ಗಳ ಮೇಲಿನ ಅತಿಯಾದ ಅವಲಂಬನೆ ಇದೆ ಎಂದು ಅವರು ಹೇಳಿದ್ದಾರೆ.. ಅವರ ಈ ಪೋಸ್ಟ್ ಕುಳಿತಲ್ಲೇ ಮಾಡುವ ಅತಿಯಾದ ಕೆಲಸದಿಂದ ಬರುವ ಬೊಜ್ಜಿನ ವಿಚಾರದ ಬಗ್ಗೆ ಚರ್ಚಿಸುವಂತೆ ಮಾಡಿದೆ. 

ಈ ಚೀನಾ ಮಹಿಳೆ ಸೆಕೆಂಡರಿ ಶಿಕ್ಷಣ ಪಡೆಯುತ್ತಿದ್ದ ಅವರು ಹೊಂದಿದ್ದ ತೂಕ 105 ಕೆಜಿ ಹೀಗಾಗಿ ಅವರು ಬಹಳ ಕಷ್ಟಪಟ್ಟು ತಮ್ಮ ದೇಹದ ತೂಕವನ್ನು 60 ಕೆಜಿಗೆ ತಂದಿದ್ದರು. ಆದರೆ ಈಗ ಕೆಲಸದ ಒತ್ತಡ, ಸಮಯವಲ್ಲದ ಸಮಯದಲ್ಲಿ ಆಹಾರ ಸೇವನೆಯಿಂದ ಅವರ ದೇಹದ ತೂಕ ಒಮ್ಮಿಂದೊಮ್ಮೆಲೆ ಏರುತ್ತಾ ಹೋಗಿದ್ದು, ಕೇವಲ ಒಂದು ವರ್ಷದಲ್ಲಿ ಅವರು 20 ಕೆಜಿ ಹೆಚ್ಚಿಸಿಕೊಂಡಿದ್ದಾರೆ. ಆದರೆ ಈಗ ಈ ಕೆಲಸದಿಂದಾಗಿ ತನ್ನ ಸಂಪೂರ್ಣ ಆರೋಗ್ಯವೇ ಹದಗೆಡುತ್ತಿದೆ ಎಂಬುದನ್ನು ತಿಳಿದ ಚೀನಾ ಮಹಿಳೆ ಈಗ ತಮ್ಮ ಆರೋಗ್ಯದ ಕಡೆ ಗಮನ ಕೊಡಲು ಕೆಲಸವನ್ನೇ ತೊರೆದಿದ್ದಾರೆ. ಪರಿಣಾಮ ಅವರು ಕೇವಲ ಒಂದು ತಿಂಗಳಲ್ಲಿ 6 ಕೆಜಿ ತೂಕ ಇಳಿಕೆ ಮಾಡಿಕೊಂಡಿದ್ದಾರಂತೆ. ಪರಿಣಾಮ ಅವರೀಗ ತೂಕ ಇಳಿಸುವ ಇನ್‌ಫ್ಲುಯೆನ್ಸರ್ ಆಗಿ ಬದಲಾಗಿದ್ದು, ಈಗಾಗಲೇ ಅವರು 41 ಸಾವಿರ ಫಾಲೋವರ್ಸ್‌ಗಳನ್ನು ಗಳಿಸಿದ್ದಾರೆ. 

ಪ್ರತಿದಿನ 10-12 ಗಂಟೆ ಕುರ್ಚಿ ಮೇಲೆ ಕುಳಿತು ಕೆಲಸ ಮಾಡುತ್ತೀರ? ಎಚ್ಚರ, ಈ ಅಂಗಗಳಿಗೆ ಹಾನಿ ತಪ್ಪಿದ್ದಲ್ಲ!

ಈ ಸುದ್ದಿಯನ್ನು ನಿದ್ದೆ, ಊಟ ಬಿಟ್ಟು ಕೆಲಸ ಮಾಡುವ ಉದ್ಯೋಗಿಗಳು ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ಈ ರೀತಿಯ ನಮ್ಮ ಜೀವನ ಶೈಲಿ ನಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೇ ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈ ರೀತಿಯ ಜೀವನಶೈಲಿ ಮುಂದುವರಿದರೆ ಇದಕ್ಕೆ ದೊಡ್ಡ ಬೆಲೆಯನ್ನೇ ತೇರಬೇಕಾದಿತು. ಆದರೂ ಕೆಲ ಅನಿವಾರ್ಯತೆಗಳಿಂದಾಗಿ ಉದ್ಯೋಗಿಗಳು ಕೆಲಸದಲ್ಲಿ ಮುಂದುವರೆಯುತ್ತಾರೆ.

 ಉದ್ಯೋಗಿಗಳು ಕೆಲಸ ತೊರೆಯಬೇಕು ಎಂದು ಸೂಚಿಸುವ ಕೆಲ ಚಿಹ್ನೆಗಳು ಇಲ್ಲಿವೆ ನೋಡಿ.

ಕೆಲಸಕ್ಕೆ ಹೋಗುವುದಕ್ಕೆ ಹೆದರುವುದು, ಯಾವುದಾದರು ಒಂದು ವಿಚಾರದ ಬಗ್ಗೆ ನಿರಂತರ ಒತ್ತಡದಲ್ಲಿರುವುದು. ಕೆಲಸದ ಒತ್ತಡದಿಂದಾಗಿ ಸರಿಯಾದ ಸಮಯದಲ್ಲಿ ಊಟ ಮಾಡುವುದನ್ನು ನಿಲ್ಲಿಸುವುದು. ಕೆಲಸದ ಹೊರತಾಗಿ ಬೇರೆ ಯಾವುದಕ್ಕೂ ಸಮಯ ನೀಡಲು ಸಾಧ್ಯವಾಗದೇ ಹೋದಾಗ, ಇಂತಹ ಕೆಲಸಗಳಲ್ಲಿ ನೀವು ಇದ್ದರೆ ನೀವು ಬೇರೆ ಉದ್ಯೋಗವನ್ನು ಹುಡುಕುವ ಬಗ್ಗೆ ಖಂಡಿತ ಯೋಚಿಸಲೇಬೇಕು.

click me!