ಲೋಷನ್, ಸನ್‌ಸ್ಕ್ರೀನ್‌ನಂತಹ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಮಕ್ಕಳ ಹಾರ್ಮೋನ್‌ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಅಧ್ಯಯನವೊಂದು ಹೇಳಿದೆ. ಈ ಉತ್ಪನ್ನಗಳ ಬಳಕೆ ಫಥಲೇಟ್‌ಗಳ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಮಕ್ಕಳಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅಧ್ಯಯನ ಎಚ್ಚರಿಸಿದೆ.
ನವದೆಹಲಿ: ಲೋಷನ್, ಸನ್ ಸ್ಕ್ರೀನ್ ಬಳಕೆ ಮಕ್ಕಳ ಹಾರ್ಮೋನ್‌ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಜಾರ್ಜ್ ಮೆಸನ್ ಯುನಿವರ್ಸಿಟಿ ಕಾಲೇಜ್ ಆಫ್ ಪಬ್ಲಿಕ್ ಹೆಲ್ತ್ ಅಧ್ಯಯನದ ಪ್ರಕಾರ, ಲೋಷನ್, ಹೇರ್ ಆಯಿಲ್, ಹೇರ್ ಕಂಡೀಷನರ್, ಮುಲಾಮು ಮತ್ತು ಸನ್ ಸ್ಕ್ರೀನ್ ಅಂತಹ ಉತ್ಪನ್ನಗಳ ಬಳಕೆ ಫಥಲೇಟ್ಸ್ (higher levels of phthalates) ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಈ ಅಧ್ಯಯನ ವಿವಿಧ ಜನಾಂಗ ಮತ್ತು ಸಮುದಾಯದ ಮೇಲೆ ಆಧರಿತವಾಗಿದೆ. ಈ ಉತ್ಪನ್ನಗಳ ಬಳಕೆ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತೆ ಎಂಬುದನ್ನ ಈ ಅಧ್ಯಯನ ವಿವರವಾಗಿ ಹೇಳಿದೆ.
ಈ ಉತ್ಪನ್ನಗಳಲ್ಲಿ ರಾಸಾಯನಿಕಗಳು ದೇಹದ ನೈಸರ್ಗಿಕ ಹಾರ್ಮೋನುಗಳಿಗೆ ಸಮಸ್ಯೆಯನ್ನುಂಟು ಮಾಡುತ್ತವೆ. ವಯಸ್ಕರು ಬಳಸುವ ತ್ವಚೆಯ ಉತ್ಪನ್ನಗಳನ್ನು ಬಳಸಬಾರದು. ಮಕ್ಕಳ ಮುಲಾಯಂ ತ್ವಚೆಗಾಗಿ ರಾಸಾಯನಿಕ ಉತ್ಪನ್ನಗಳನ್ನು ಬಳಕೆ ಮಾಡೋದರಿಂದ ಮಕ್ಕಳಿಗೆ ಬೇರೆ ಬೇರೆಯ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಂತ ಹಂತವಾಗಿ ಕಾಣಿಸಿಕೊಳ್ಳಲು ಆರಂಭವಾಗುವ ಸಾಧ್ಯತೆ ಇರುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
undefined
ಈ ಅಧ್ಯಯನದಲ್ಲಿ ಅಮೆರಿಕಾದ 10 ವಿಭಿನ್ನ ಪ್ರದೇಶಗಳ 4 ರಿಂದ 8 ವರ್ಷದೊಳಗಿನ 630 ಮಕ್ಕಳ ಚಿಕಿತ್ಸೆಯ ಅಂಕಿ ಅಂಶಗಳನ್ನು ಒಗ್ಗೂಡಿಸಲಾಗಿತ್ತು. ಇದರ ಜೊತೆಯಲ್ಲಿ ರೋಗ ನಿರ್ಣಯ ಮತ್ತು ಮೂತ್ರ ಪರೀಕ್ಷೆಯ ವರದಿಯ ಮಾಹಿತಿಯನ್ನು ಸೇರಿಸಿ ಸಮಗ್ರವಾಗಿ ಅಧ್ಯಯನ ನಡೆಸಲಾಗಿತ್ತು. ಸಮೀಕ್ಷೆಗೂ ಮೊದಲು ಅಂದ್ರೆ 24 ಗಂಟೆ ಮಗುವಿನ ಮೇಲೆ ನಿಗಾ ಇರಿಸಲು ಪೋಷಕರಿಗೆ ತಿಳಿಸಲಾಗಿತ್ತು. ಮಗುವಿನ ಸಾಮಾಜಿಕ ಮಾಹಿತಿ ಅಂದ್ರೆ ಜನಾಂಗ/ಜನಾಂಗೀಯ ಗುರುತು, ಜನನದ ಸಮಯದಲ್ಲಿ ನಿಯೋಜಿಸಲಾದ ಲಿಂಗ, ಇತ್ಯಾದಿ ಕುರಿತ ವಿವರವನ್ನು ಪಡೆದುಕೊಳ್ಳಲಾಗಿತ್ತು. ಲೋಷನ್‌ಗಳು, ಸೋಪ್‌ಗಳು, ಶಾಂಪೂಗಳು, ಎಣ್ಣೆಗಳು ಮತ್ತು ಸೌಂದರ್ಯವರ್ಧಕಗಳು ಸೇರಿದಂತೆ ಎಲ್ಲಾ ತ್ವಚೆಯ ಉತ್ಪನ್ನಗಳನ್ನು ಪಟ್ಟಿ ಮಾಡಿಸಲಾಗಿತ್ತು. ಮಗುವಿಗೆ ಈ ಉತ್ಪನ್ನಗಳನ್ನು ಹಚ್ಚಿದ ನಂತರ 24 ಗಂಟೆಯಲ್ಲಿ ಅವರಲ್ಲಾಗುವ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಲಾಗಿದೆ. ಪೋಷಕರು ಬಳಸಿದ ಉತ್ಪನ್ನಗಳ ಹೆಸರನ್ನು ದಾಖಲಿಸಿಕೊಳ್ಳಲಾಗಿತ್ತು.
ಏನೇ ಮಾಡಿದ್ರೂ ತೂಕ ಕಡಿಮೆ ಆಗುತ್ತಿಲ್ಲವೇ? ಅದಕ್ಕೆ ಇದೇ ಕಾರಣ, ನಿಮ್ಮ ತಪ್ಪನ್ನ ಇಂದೇ ತಿದ್ದಿಕೊಳ್ಳಿ!
ಬ್ಲೂಮ್ ಹೇಳಿಕೆಯ ಪ್ರಕಾರ, ಗೆ ವಿವಿಧ ತ್ವಚೆ ಉತ್ಪನ್ನಗಳ ಬಳಕೆ ಮತ್ತು ಹೆಚ್ಚಿನ ಸಾಂದ್ರತೆಯ ಥಾಲೇಟ್ ಹಾಗೂ ಬದಲಿ ಸಂಯುಕ್ತಗಳ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳಲಾಗಿದೆ. ಅನೇಕ ತ್ವಚೆ ಉತ್ಪನ್ನಗಳು ಹೆಚ್ಚಿನ ಸಾಂದ್ರತೆಯ ಥಾಲೇಟ್‌ಗಳು ಮತ್ತು ಥಾಲೇಟ್ ಬದಲಿಯನ್ನು ತೋರಿಸುತ್ತದೆ. ಮಕ್ಕಳ ಮೇಲೆ ಬಳಸುವ ಚರ್ಮದ ಆರೈಕೆ ಉತ್ಪನ್ನಗಳಲ್ಲಿ ಅಂತಃಸ್ರಾವಕ-ವಿಚ್ಛಿದ್ರಕಾರಕ ರಾಸಾಯನಿಕಗಳ ಬಳಕೆ ಮತ್ತ ತ್ವಚೆಯ ರಕ್ಷಣೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡುವುದು ಈ ಅಧ್ಯಯನದ ಉದ್ದೇಶವಾಗಿದೆ.
ಅತ್ಯಧಿಕ ರಾಸಾಯನಿಕ ಉತ್ಪನ್ನಗಳನ್ನು ಬಳಕೆಮ ಮಾಡುವದರಿಂದ ಮಕ್ಕಳು ಅವುಗಳಿಗೆ ಅಡಿಕ್ಟ್ ಆಗುತ್ತವೆ. ಇದು ಭವಿಷ್ಯದಲ್ಲಿ ಕೆಲ ಸಂಭಾವ್ಯ ಸಮಸ್ಯೆಗಳಿಗೆ ಕಾರಣ ಆಗಬಹುದು. ಈ ಅಪಾಯಗಳ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಆರಂಭಿಕ ವರ್ಷಗಳಲ್ಲಿ ಆರೋಗ್ಯಕರ ಬೆಳವಣಿಗೆಗೆ ಹಾರ್ಮೋನ್ ಸಮತೋಲನವು ಮುಖ್ಯವಾಗಿದೆ ಎಂದು ಅಧ್ಯಯನ ಒತ್ತಿ ಹೇಳುತ್ತದೆ.
ಭಾರತಕ್ಕೂ ಮಂಕಿಪಾಕ್ಸ್ ಪ್ರವೇಶ; ಸನ್ನದ್ಧ ಸ್ಥಿತಿಗೆ ರಾಜ್ಯಗಳಿಗೆ ಕೇಂದ್ರ ಸೂಚನೆ