ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಅವಳಿಗಳಿಗೆ ಜನ್ಮ ನೀಡಿದ ತಾಯಿ

By Anusha Kb  |  First Published Sep 10, 2024, 7:15 PM IST

ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 22 ವರ್ಷದ ಮಹಿಳೆಯೊಬ್ಬರು ಇಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ  ಅಪರೂಪದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ವೈದ್ಯರು ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಹೇಳಿದ್ದಾರೆ. 


ಇಂದೋರ್‌: ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 22 ವರ್ಷದ ಮಹಿಳೆಯೊಬ್ಬರು ಇಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ  ಅಪರೂಪದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ವೈದ್ಯರು ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಹೇಳಿದ್ದಾರೆ. 

ಈ ಕುರಿತಾಗಿ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಇಂದೋರ್‌ನ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕ್ಲಿನಿಕಲ್ ಹೆಮಟಾಲಜಿ ( clinical haematology department) ವಿಭಾಗದ ಸಹಾಯಕ ಪ್ರಾಧ್ಯಾಪಕ ಅಕ್ಷಯ್ ಲಹೋಟಿ, ಮಹಿಳೆಗೆ ದೀರ್ಘಕಾಲದಿಂದಲೂ ಮೈಲೋಯ್ಡ್ ಲ್ಯುಕೇಮಿಯಾ (myeloid leukaemia) ಎಂದು ಕರೆಯಲ್ಪಡುವ ಮಾರಣಾಂತಿಕ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಸುರಕ್ಷಿತವಾಗಿ ಹೆರಿಗೆ ಮಾಡುವುದು ದೊಡ್ಡ ಸವಾಲಿನ ವಿಚಾರವಾಗಿತ್ತು ಎಂದಿದ್ದಾರೆ.

Latest Videos

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ನಗರದ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ವ್ಯಾಪ್ತಿಗೆ ಬರುತ್ತದೆ. ಗರ್ಭಿಣಿಯಾದ ಬಳಿಕ ಈ  ಆಸ್ಪತ್ರೆಗೆ ಮಹಿಳೆ ದಾಖಲಾದಾಗ ಅವರ ದೇಹದಲ್ಲಿ ಬಿಳಿ ರಕ್ತಕಣಗಳ ಸಂಖ್ಯೆ ಸಾಮಾನ್ಯಕ್ಕಿಂತಲೂ ಹಲವು ಬಾರಿ ತುಂಬಾ ಅಧಿಕವಾಗಿತ್ತು. ಹೀಗಾಗಿ ನಾವು ಅವರಿಗೆ ಸಹಜವಾಗಿ ನೀಡುವ ಕ್ಯಾನ್ಸರ್‌ ಔಷಧಿಗಳನ್ನಾಗಲಿ ನೀಡಲಾಗುತ್ತಿರಲಿಲ್ಲ, ಗರ್ಭಿಣಿಯಾಗಿದ್ದರಿಂದ ಕಿಮೋಥೆರಪಿಯನ್ನು ಮಾಡಲಾಗುತ್ತಿರಲಿಲ್ಲ.

ಬ್ಲಡ್‌ ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದ ಭಾರತದ ಮಾಜಿ ಕ್ರಿಕೆಟಿಗ ಅನ್ಶುಮನ್‌ ಗಾಯಕ್ವಾಡ್‌..!

ಹೀಗಾಗಿ ನಾವು ಭಾರತದಲ್ಲಿರುವ ಹಾಗೂ ವಿದೇಶದಲ್ಲಿರುವ ತಜ್ಞರ ಸಲಹೆ ಪಡೆದು ಆಕೆಗೆ ಹಾಗೂ ಆಕೆಯ ಗರ್ಭದಲ್ಲಿರುವ ಅವಳಿಗಳ ಆರೋಗ್ಯಕ್ಕೆ ಯಾವುದೇ ಹಾನಿಯಾಗಬಾರದು ಎಂಬುದನ್ನು ಖಚಿತಪಡಿಸಿಕೊಂಡು ಆಕೆಗೆ ವಿಶೇಷ ಔ‍ಷಧಿಯನ್ನು ನೀಡಲಾರಂಭಿಸಿದೆವು ಎಂದು ವೈದ್ಯ ಡಾ. ಅಕ್ಷಯ್ ಲಹೋಟಿ ಹೇಳಿದ್ದಾರೆ. 

ಹೆರಿಗೆ ಹಾಗೂ ಸ್ತ್ರೀರೋಗ ತಜ್ಞೆ ಸುಮಿತ್ರಾ ಯಾದವ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮಹಿಳೆಗೆ ರಕ್ತದ ಕ್ಯಾನ್ಸರ್ ಇದೆ ಎಂಬುದನ್ನು ಹೇಳಿರಲಿಲ್ಲ, ಗರ್ಭಾವಸ್ಥೆಯ ಸಮಯದಲ್ಲಿ ಆಕೆಯ ಮಾನಸಿಕ ಆರೋಗ್ಯ ಸಂಪೂರ್ಣವಾಗಿ ಸರಿಯಾಗಿ ಇರಬೇಕು ಎಂಬುದನ್ನು ನಾವು ಬಯಸಿದ್ದೆವು. ಈಗ ಮಹಿಳೆ ಒಂದು ಗಂಡು ಹಾಗೂ ಒಂದು ಹೆಣ್ಣು ಇಬ್ಬರು ಮಕ್ಕಳಿಗೆ ಸಹಜ ಹೆರಿಗೆಯ ಮೂಲಕ ಜನ್ಮ ನೀಡಿದ್ದಾರೆ. ಅಮ್ಮ ಹಾಗೂ ಮಕ್ಕಳಿಬ್ಬರು ಆರೋಗ್ಯವಾಗಿದ್ದಾರೆ. ಇದು ಮಹಿಳೆಯ ಮೊದಲ ಹೆರಿಗೆಯಾಗಿದ್ದು, ಅವಳಿ ಮಕ್ಕಳ ಜನನ ಕುಟುಂಬದಲ್ಲಿ ಸಂತಸ ತಂದಿದೆ ಎಂದು ವೈದ್ಯ ಸುಮಿತ್ರಾ ಯಾದವ್ ಹೇಳಿದರು. 

ಬಾಲಕಿಯ ಜೀವ ಉಳಿಸಲು ಸಲ್ಮಾನ್​ ಖಾನ್​ ಅಸ್ಥಿಮಜ್ಜೆ ದಾನ: ಭಾರತದ ಮೊದಲ ದಾನಿ ಎಂಬ ಹೆಗ್ಗಳಿಕೆ!

ಆಸ್ಪತ್ರೆಯ ವೈದ್ಯರ ಪ್ರಕಾರ, ದೀರ್ಘಕಾಲದ ಮೈಲೋಯ್ಡ್ ಲ್ಯುಕೇಮಿಯಾ ಹೊಂದಿರುವ ಮಹಿಳೆಯರಿಗೆ ಸುರಕ್ಷಿತವಾಗಿ ಹೆರಿಗೆಯಾದ ಪ್ರಕರಣಗಳು ಜಗತ್ತಿನಲ್ಲಿ ಎಲ್ಲೂ ವರದಿಯಾಗಿಲ್ಲ.

click me!