ಮಕ್ಕಳಲ್ಲಿ ದಿಢೀರ್‌ ನ್ಯುಮೋನಿಯಾಕ್ಕೆ ಪರಿಚಿತ ವೈರಸ್‌ ಕಾರಣ ಎಂದ ಚೀನಾ

By Kannadaprabha News  |  First Published Dec 3, 2023, 9:30 AM IST

ಚೀನಾದಲ್ಲಿ ಇತ್ತೀಚೆಗೆ ಮಕ್ಕಳಲ್ಲಿ ವ್ಯಾಪಕವಾಗಿ ನ್ಯುಮೋನಿಯಾ ರೀತಿಯ ಉಸಿರಾಟ ಖಾಯಿಲೆಗಳು ಹರಡುತ್ತಿವೆ. ಇದಕ್ಕೆ ಗೊತ್ತಿರುವ ರೋಗಕಾರಕಗಳೇ ಕಾರಣವಾಗಿದ್ದು, ಅದು ಪ್ರಸರಣ ಸೋಂಕು ಅಲ್ಲ ಎಂದು ಚೀನಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅಧಿಕಾರಿ ಮಿ ಫೆಂಗ್‌ ಸ್ಪಷ್ಟಪಡಿಸಿದ್ದಾರೆ.


ಬೀಜಿಂಗ್‌: ಚೀನಾದಲ್ಲಿ ಇತ್ತೀಚೆಗೆ ಮಕ್ಕಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ನ್ಯುಮೋನಿಯಾ ರೀತಿಯ ಉಸಿರಾಟ ಖಾಯಿಲೆಗಳು ಗೊತ್ತಿರುವ ರೋಗಕಾರಕಗಳಿಂದಲೇ ಹರಡುತ್ತಿದ್ದು, ಅದು ಪ್ರಸರಣ ಸೋಂಕು ಅಲ್ಲ ಎಂದು ಚೀನಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅಧಿಕಾರಿ ಮಿ ಫೆಂಗ್‌ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈ ಸಂಬಂಧ ನಾವು ಹೆಚ್ಚುವರಿ ಚಿಕಿತ್ಸಾಲಯಗಳನ್ನು ತೆರೆದು ಮಕ್ಕಳು ಹಾಗೂ ಹಿರಿಯನಾಗರಿಕರಿಗೆ ಶೀಘ್ರವಾಗಿ ರೋಗನಿರೋಧಕ ಲಸಿಕೆಯನ್ನು ನೀಡುವ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಯೋಜಿಸಿದ್ದು, ಎಲ್ಲರೂ ಮಾಸ್ಕ್ ಧರಿಸಿ ಆಗಾಗ ತಮ್ಮ ಕೈ ತೊಳೆಯುವಂತೆ ಸೂಚಿಸುತ್ತೇವೆ’ ಎಂದು ತಿಳಿಸಿದರು. 

ಅಮೆರಿಕದಲ್ಲೂ ಚೀನಾ ಮಾದರಿಯಂತೆ ಮಕ್ಕಳಲ್ಲಿ ನ್ಯುಮೋನಿಯಾ ಪತ್ತೆ
ಅಮೆರಿಕದ ಓಹಿಯೋ ಮತ್ತು ಮಸಾಚ್ಯುಸೆಟ್ಸ್‌ ರಾಜ್ಯದ 3ರಿಂದ 14ರ ವಯೋಮಾನದ ಮಕ್ಕಳಲ್ಲಿ (Kids) ಏಕಾಏಕಿ ಭಾರೀ ಪ್ರಮಾಣದ ನ್ಯುಮೋನಿಯಾ ಸೋಂಕು ಕಾಣಿಸಿಕೊಂಡಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಚೀನಾದಲ್ಲೂ ಎಳೆಯ ವಯಸ್ಸಿನ ಮಕ್ಕಳಲ್ಲಿ ಇದೇ ರೀತಿಯಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು (Virus) ಕಾಣಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಏಳುವ ಭೀತಿ ಕಾಣಿಸಿಕೊಂಡಿತ್ತು. ಅದರ ಬೆನ್ನಲ್ಲೇ ಅಮೆರಿಕದಲ್ಲೂ ಅಂಥದ್ದೇ ಬೆಳವಣಿಗೆ ಕಾಣಿಸಿಕೊಂಡಿದೆ.

Tap to resize

Latest Videos

ಹೃದಯ, ನ್ಯುಮೋನಿಯಾ, ಅಸ್ತಮಾಕ್ಕೆ ಶೇ.42 ಸಾವು: ಶೇ.9ರಷ್ಟು ಸಾವಿಗೆ ಕೋವಿಡ್‌ ಕಾರಣ

ಓಹಿಯೋ ವೈದ್ಯಕೀಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಂತೆ ಗುರುವಾರ ಒಂದೇ ದಿನ 145 ಪ್ರಕರಣ ದಾಖಲಾಗಿದ್ದು, ವೈದ್ಯಕೀಯ ಇಲಾಖೆ ಇದನ್ನು ಸ್ಫೋಟ ಎಂದು ಪರಿಗಣಿಸಿ ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಮಾನ್ಯ ಜ್ವರ (Fever) ಮತ್ತು ಶ್ವಾಸಕೋಶದಲ್ಲಿ (Lungs) ಅಲ್ಪ ಪ್ರಮಾಣದ ಉರಿ ಕಾಣಿಸಿಕೊಳ್ಳುವುದು ಇದರ ಲಕ್ಷಣಗಳಾಗಿದ್ದು, ವೈದ್ಯರು ರೋಗಿಗಳಿಗೆ ಔಷಧ ನೀಡಿ ಮನೆಯಲ್ಲೆ ಆರೈಕೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ.

ಚೀನಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮಕ್ಕಳ ಸಾಲು
ವರ್ಷಗಳ ಹಿಂದೆ ಚೀನಾದ ವುಹಾನ್‌ನಿಂದ ಆರಂಭವಾಗಿದ್ದ ಪುಟ್ಟ ವೈರಸ್ ಕೋವಿಡ್, ಸಂಪೂರ್ಣ ಜಗತ್ತನ್ನೇ ತಲ್ಲಣಗೊಳಿಸಿತ್ತು. ತಿಂಗಳುಗಟ್ಟಲೆ ಲಾಕ್‌ಡೌನ್‌, ಮಾಸ್ಕ್ ಕಡ್ಡಾಯ ಹೀಗೆ ಹಲವು ನಿಯಮಗಳ ಮೂಲಕ ಸಾಂಕ್ರಾಮಿಕದ (Virus) ಹರಡುವಿಕೆಯನ್ನು ಕಡಿಮೆ ಮಾಡಲಾಗಿತ್ತು. ಈ ಸಾಂಕ್ರಾಮಿಕದಿಂದ ಉಂಟಾದ ಸಂಕಷ್ಟದಿಂದ ಇನ್ನೂ ಹೊರಬರದ ಚೀನಾ, ಈಗ ಹೊಸ ಸಾಂಕ್ರಾಮಿಕ ರೋಗದ ಭೀತಿಯಲ್ಲಿದೆ. ಚೀನಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನ್ಯುಮೋನಿಯಾ ಪ್ರಕರಣಗಳು ವರದಿಯಾಗುತ್ತಿವೆ. ಬೀಜಿಂಗ್ ಸೇರಿದಂತೆ ದೇಶದಾದ್ಯಂತದ ನಗರಗಳಲ್ಲಿ ನ್ಯುಮೋನಿಯಾ ಪ್ರಕರಣಗಳು ಉಲ್ಬಣಗೊಳ್ಳುತ್ತಿದೆ. ಚೀನಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ (Treatment) ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು (Kids) ಆಗಮಿಸುವುತ್ತಿರುವುದಾಗಿ ವರದಿಯಾಗಿದೆ. 

ಕೊರೋನಾ ಬೆನ್ನಲ್ಲೇ ಹರಡುತ್ತಿದೆ ನ್ಯೂಮೋನಿಯಾ, ಮೋಸ್ಟ್ ಡೇಂಜರ್ ಎಂದ ಚೀನಾ ರಾಯಭಾರಿ ಕಚೇರಿ!

ಮಕ್ಕಳಲ್ಲಿ ಮೈಕೋಪ್ಲಾಸ್ಮಾದಿಂದ ಉಂಟಾಗುವ ನ್ಯುಮೋನಿಯಾದ ಉಲ್ಬಣ ತೀವ್ರ ಹೆಚ್ಚಾಗಿದೆ. ವೈದ್ಯರ ಭೇಟಿ ಮಾಡಲು ಮಕ್ಕಳು ಗಂಟೆಗಟ್ಟಲೆ ಕಾಯಬೇಕಾಗಿದೆ. ಆಸ್ಪತ್ರೆಯಲ್ಲಿ ಒಂದು ಕೈಗೆ ಡ್ರಿಪ್ಸ್‌ ಹಾಕ್ಕೊಂಡು ಹೋಂ ವರ್ಕ್‌ ಮುಂತಾದ ಕೆಲಸಗಳನ್ನು ಮಕ್ಕಳು ಅಲ್ಲೇ ಮಾಡುತ್ತಿರುವ ವಿಡಿಯೋಗಳು ವೈರಲ್‌ ಆಗ್ತಿದೆ.  ಇದೆಲ್ಲದರ ಮಧ್ಯೆ ಚೀನಾದಲ್ಲಿ ಮಾಸ್ಕ್‌ ಕಡ್ಡಾಯ ನಿಯಮವನ್ನು ಸಹ ಮರಳಿ ತರಲಾಗಿದೆ. ಜನರು ಆಸ್ಪತ್ರೆಗಳಲ್ಲಿ ಮಾಸ್ಕ್‌ಗಳನ್ನು ಧರಿಸಿ ಓಡಾಡುತ್ತಿದ್ದಾರೆ. ಮಾತ್ರವಲ್ಲ ಸಾಮಾಜಿಕ ಅಂತರ ಪಾಲನೆ ಮಾಡುವುದು ಸಹ ಕಡ್ಡಾಯವಾಗಿದೆ.

click me!