ಕೋವಿಡ್‌ನಿಂದ ವರ್ಷಾನುಗಟ್ಟಲೆ ಜನರು ಹೈರಾಣಾದ ನಂತರ ಚೀನಾದಲ್ಲಿ ಈಗ ಮತ್ತೊಂದು ವೈರಸ್ ಕಾಣಿಸಿಕೊಂಡಿದೆ. ಎಳೆಯ ವಯಸ್ಸಿನ ಮಕ್ಕಳಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸುತ್ತಿದೆ. ಸದ್ಯ ಅಮೇರಿಕಾದಲ್ಲೂ ಈ ಸಾಂಕ್ರಾಮಿಕದ ಭೀತಿ ಎದುರಾಗಿದೆ.
ಓಹಿಯೋ: ಅಮೆರಿಕದ ಓಹಿಯೋ ಮತ್ತು ಮಸಾಚ್ಯುಸೆಟ್ಸ್ ರಾಜ್ಯದ 3ರಿಂದ14ರ ವಯೋಮಾನದ ಮಕ್ಕಳಲ್ಲಿ ಏಕಾಏಕಿ ಭಾರೀ ಪ್ರಮಾಣದ ನ್ಯುಮೋನಿಯಾ ಸೋಂಕು ಕಾಣಿಸಿಕೊಂಡಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ಚೀನಾದಲ್ಲೂ ಎಳೆಯ ವಯಸ್ಸಿನ ಮಕ್ಕಳಲ್ಲಿ ಇದೇ ರೀತಿಯಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು ಕಾಣಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮತ್ತೊಂದು ಸಾಂಕ್ರಾಮಿಕ ಏಳುವ ಭೀತಿ ಕಾಣಿಸಿಕೊಂಡಿತ್ತು. ಅದರ ಬೆನ್ನಲ್ಲೇ ಅಮೆರಿಕದಲ್ಲೂ ಅಂಥದ್ದೇ ಬೆಳವಣಿಗೆ ಕಾಣಿಸಿಕೊಂಡಿದೆ.
ಓಹಿಯೋ ವೈದ್ಯಕೀಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಂತೆ ಗುರುವಾರ ಒಂದೇ ದಿನ 145 ಪ್ರಕರಣ ದಾಖಲಾಗಿದ್ದು, ವೈದ್ಯಕೀಯ ಇಲಾಖೆ ಇದನ್ನು ಸ್ಫೋಟ ಎಂದು ಪರಿಗಣಿಸಿ ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಮಾನ್ಯ ಜ್ವರ ಮತ್ತು ಶ್ವಾಸಕೋಶದಲ್ಲಿ ಅಲ್ಪ ಪ್ರಮಾಣದ ಉರಿ ಕಾಣಿಸಿಕೊಳ್ಳುವುದು ಇದರ ಲಕ್ಷಣಗಳಾಗಿದ್ದು, ವೈದ್ಯರು ರೋಗಿಗಳಿಗೆ ಔಷಧ ನೀಡಿ ಮನೆಯಲ್ಲೆ ಆರೈಕೆ ಮಾಡಿಕೊಳ್ಳುವಂತೆ ಸೂಚಿಸುತ್ತಿದ್ದಾರೆ.
undefined
ಕೊರೋನಾ ಬೆನ್ನಲ್ಲೇ ಹರಡುತ್ತಿದೆ ನ್ಯೂಮೋನಿಯಾ, ಮೋಸ್ಟ್ ಡೇಂಜರ್ ಎಂದ ಚೀನಾ ರಾಯಭಾರಿ ಕಚೇರಿ!
ಚೀನಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮಕ್ಕಳ ಸಾಲು
ವರ್ಷಗಳ ಹಿಂದೆ ಚೀನಾದ ವುಹಾನ್‌ನಿಂದ ಆರಂಭವಾಗಿದ್ದ ಪುಟ್ಟ ವೈರಸ್ ಕೋವಿಡ್, ಸಂಪೂರ್ಣ ಜಗತ್ತನ್ನೇ ತಲ್ಲಣಗೊಳಿಸಿತ್ತು. ತಿಂಗಳುಗಟ್ಟಲೆ ಲಾಕ್‌ಡೌನ್, ಮಾಸ್ಕ್ ಕಡ್ಡಾಯ ಹೀಗೆ ಹಲವು ನಿಯಮಗಳ ಮೂಲಕ ಸಾಂಕ್ರಾಮಿಕದ (Virus) ಹರಡುವಿಕೆಯನ್ನು ಕಡಿಮೆ ಮಾಡಲಾಗಿತ್ತು. ಈ ಸಾಂಕ್ರಾಮಿಕದಿಂದ ಉಂಟಾದ ಸಂಕಷ್ಟದಿಂದ ಇನ್ನೂ ಹೊರಬರದ ಚೀನಾ, ಈಗ ಹೊಸ ಸಾಂಕ್ರಾಮಿಕ ರೋಗದ ಭೀತಿಯಲ್ಲಿದೆ. ಚೀನಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನ್ಯುಮೋನಿಯಾ ಪ್ರಕರಣಗಳು ವರದಿಯಾಗುತ್ತಿವೆ. ಬೀಜಿಂಗ್ ಸೇರಿದಂತೆ ದೇಶದಾದ್ಯಂತದ ನಗರಗಳಲ್ಲಿ ನ್ಯುಮೋನಿಯಾ ಪ್ರಕರಣಗಳು ಉಲ್ಬಣಗೊಳ್ಳುತ್ತಿದೆ. ಚೀನಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ (Treatment) ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು (Kids) ಆಗಮಿಸುವುತ್ತಿರುವುದಾಗಿ ವರದಿಯಾಗಿದೆ.
ಮಕ್ಕಳಲ್ಲಿ ಮೈಕೋಪ್ಲಾಸ್ಮಾದಿಂದ ಉಂಟಾಗುವ ನ್ಯುಮೋನಿಯಾದ ಉಲ್ಬಣ ತೀವ್ರ ಹೆಚ್ಚಾಗಿದೆ. ವೈದ್ಯರ ಭೇಟಿ ಮಾಡಲು ಮಕ್ಕಳು ಗಂಟೆಗಟ್ಟಲೆ ಕಾಯಬೇಕಾಗಿದೆ. ಆಸ್ಪತ್ರೆಯಲ್ಲಿ ಒಂದು ಕೈಗೆ ಡ್ರಿಪ್ಸ್ ಹಾಕ್ಕೊಂಡು ಹೋಂ ವರ್ಕ್ ಮುಂತಾದ ಕೆಲಸಗಳನ್ನು ಮಕ್ಕಳು ಅಲ್ಲೇ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗ್ತಿದೆ. ಇದೆಲ್ಲದರ ಮಧ್ಯೆ ಚೀನಾದಲ್ಲಿ ಮಾಸ್ಕ್ ಕಡ್ಡಾಯ ನಿಯಮವನ್ನು ಸಹ ಮರಳಿ ತರಲಾಗಿದೆ. ಜನರು ಆಸ್ಪತ್ರೆಗಳಲ್ಲಿ ಮಾಸ್ಕ್‌ಗಳನ್ನು ಧರಿಸಿ ಓಡಾಡುತ್ತಿದ್ದಾರೆ. ಮಾತ್ರವಲ್ಲ ಸಾಮಾಜಿಕ ಅಂತರ ಪಾಲನೆ ಮಾಡುವುದು ಸಹ ಕಡ್ಡಾಯವಾಗಿದೆ.
ಹೃದಯ, ನ್ಯುಮೋನಿಯಾ, ಅಸ್ತಮಾಕ್ಕೆ ಶೇ.42 ಸಾವು: ಶೇ.9ರಷ್ಟು ಸಾವಿಗೆ ಕೋವಿಡ್ ಕಾರಣ
ರೋಗ ಪೀಡಿತ ಮಕ್ಕಳಿಂದ ತುಂಬಿದ ಬೀಜಿಂಗ್ ಆಸ್ಪತ್ರೆ
ಬೀಜಿಂಗ್‌ನಲ್ಲಿ ಆಸ್ಪತ್ರೆಗಳು (Hospitals) ಮಕ್ಕಳಿಂದ ತುಂಬಿವೆ. ಹೆಚ್ಚಿನ ಜ್ವರ, ಶ್ವಾಸಕೋಶದ ಉರಿಯೂತ ಮತ್ತು ಶೀತದ ಲಕ್ಷಣಗಳೊಂದಿಗೆ ಮಕ್ಕಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಬೀಜಿಂಗ್ ಮಕ್ಕಳ ಆಸ್ಪತ್ರೆಗೆ ಪ್ರತಿದಿನ ಕನಿಷ್ಠ 7,000 ರೋಗಿಗಳು ದಾಖಲಾಗುತ್ತಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಕಟ್ಟುನಿಟ್ಟಾದ COVID-19 ನಿರ್ಬಂಧಗಳನ್ನು (Rules) ತೆಗೆದುಹಾಕಿದ ನಂತರ ರಾಷ್ಟ್ರವು ತನ್ನ ಮೊದಲ ಪೂರ್ಣ ಚಳಿಗಾಲವನ್ನು ಪ್ರವೇಶಿಸುತ್ತಿದ್ದಂತೆ ಅನಾರೋಗ್ಯದ ಹರಡುವಿಕೆಗೆ ಸಂಬಂಧಿಸಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಮಕ್ಕಳಲ್ಲಿ ವರದಿಯಾದ ಉಸಿರಾಟದ ಕಾಯಿಲೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾಕ್ಕೆ ಅಧಿಕೃತ ವಿನಂತಿಯನ್ನು ಮಾಡಿದೆ. ಇದಕ್ಕೂ ಮೊದಲು, ಚೀನಾ ಒದಗಿಸಿದ ಡೇಟಾದಲ್ಲಿ ಯಾವುದೇ ಅಸಾಮಾನ್ಯ ರೋಗಕಾರಕಗಳು ಪತ್ತೆಯಾಗಿಲ್ಲ ಎಂದು ಪ್ರಧಾನ ಆರೋಗ್ಯ ಸಂಸ್ಥೆ ಹೇಳಿದೆ.