ಇಂದು ವಿಶ್ವ ಏಡ್ಸ್ ದಿನ. ಬಹುತೇಕರಿಗೆ ಕೇವಲ ಲೈಂಗಿಕ ಸಂಬಂಧದಿಂದ ಮಾತ್ರ ಏಡ್ಸ್ ಹರಡುತ್ತೆ ಅನ್ನೋ ತಪ್ಪು ಕಲ್ಪನೆಯಿದೆ. ಆದರೆ ಸಮೀಕ್ಷೆಗಳ ಪ್ರಕಾರ, ಇತರ ಹಲವು ಸಣ್ಣಪುಟ್ಟ ಕಾರಣಗಳು ಏಡ್ಸ್ ಹರಡೋಕೆ ಕಾರಣವಾಗುತ್ತೆ. ಅದ್ಯಾವುದು ತಿಳಿಯೋಣ.
ಹೆಚ್ಐವಿ ಏಡ್ಸ್ ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಅನೇಕ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದರೂ ವರ್ಷಗಳ ನಂತರ ಅವರಿಗೆ ಈ ಕಾಯಿಲೆ ಇದೆ ಎಂಬುದು ತಿಳಿದುಬರುತ್ತದೆ. ಯಾಕೆಂದರೆ ಈ ರೋಗವು ಮೊದಲಿಗೆ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಹೆಚ್ಐವಿ ಪೀಡಿತ ವ್ಯಕ್ತಿಯು ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಸಹ ಇತರರಿಗೆ ವೈರಸ್ ಹರಡಬಹುದು. ಎಚ್‌ಐವಿ ಇರುವವರು ಸೋಂಕು ತಗುಲಿದ ವಾರಗಳಲ್ಲಿ ಇತರರಿಗೆ ಸುಲಭವಾಗಿ ವೈರಸ್ ಹರಡುತ್ತಾರೆ. ಡಿಸೆಂಬರ್ 1, ವಿಶ್ವ ಏಡ್ಸ್ ದಿನವಾದ ಇಂದು ಹೆಚ್‌ಐವಿ ಏಡ್ಸ್‌ನ ನಿಜವಾದ ಕಾರಣಗಳನ್ನು ತಿಳಿಯೋಣ.
ಯುಕೆಯಲ್ಲಿ ಹೆಚ್‌ಐವಿ ರೋಗನಿರ್ಣಯ ಮಾಡಿದ ಹೆಚ್ಚಿನ ಜನರು ಅಸುರಕ್ಷಿತ ಯೋನಿ ಅಥವಾ ಗುದ ಸಂಭೋಗದ ಮೂಲಕ ವೈರಸ್‌ಗೆ ತುತ್ತಾಗುತ್ತಾರೆ ಎಂದು ತಿಳಿದುಬಂದಿದೆ. ಅಸುರಕ್ಷಿತ ಮೌಖಿಕ ಸಂಭೋಗದ ಮೂಲಕವೂ ಹೆಚ್ಐವಿ ಹರಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಮೌಖಿಕ ಸಂಭೋಗದಲ್ಲಿ ಭಾಗವಹಿಸುವವರು ಎಚ್‌ಐವಿ ಏಡ್ಸ್‌ಗೆ ತುತ್ತಾಗುವ ಅಪಾಯ ಹೆಚ್ಚು. ಅವರು ಬಾಯಿ ಹುಣ್ಣುಗಳು ಅಥವಾ ಒಸಡುಗಳಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಇವುಗಳಿಂದ ಲೈಂಗಿಕ ಕ್ರಿಯೆ ನಡೆಸುವವರಿಗೆ ವೈರಸ್ ಬರುತ್ತದೆ.
21 ರ ಹುಡುಗಿ ಮೇಲೆ ಆಸೆ: ಗರ್ಭಿಣಿ ಪತ್ನಿಗೆ ಹೆಚ್‌ಐವಿ ರಕ್ತ ಇಂಜೆಕ್ಟ್ ಮಾಡಿಸಿದ ಪಾಪಿ ಪತಿ
ಹೆಚ್ಐವಿ ಹೇಗೆ ಹರಡುತ್ತದೆ?
HIV ಪಾಲುದಾರರನ್ನು ಹೊಂದಿರುವವರು, ಪುರುಷರೊಂದಿಗೆ ಅಸುರಕ್ಷಿತ ಲೈಂಗಿಕತೆಯನ್ನು (Sex) ಹೊಂದಿರುವ ಪುರುಷರು, ಪುರುಷರೊಂದಿಗೆ ಅಸುರಕ್ಷಿತ ಸಂಭೋಗವನ್ನು ಹೊಂದಿರುವ ಮಹಿಳೆಯರು, ಡ್ರಗ್ಸ್ ಚುಚ್ಚುಮದ್ದು ಮತ್ತು ಉಪಕರಣಗಳನ್ನು ಹಂಚಿಕೊಳ್ಳುವ ಮಂದಿ, HIV-ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಆಟಿಕೆಗಳನ್ನು ಹಂಚಿಕೊಳ್ಳುವ ಜನರು, ಲೈಂಗಿಕವಾಗಿ ಹರಡುವ ಸೋಂಕುಗಳು, ಹೆಪಟೈಟಿಸ್ B ಅಥವಾ ಹೆಪಟೈಟಿಸ್ C ಇತಿಹಾಸ ಹೊಂದಿರುವ ಜನರು, ಬಹು ಲೈಂಗಿಕ ಪಾಲುದಾರರನ್ನು ಹೊಂದಿರುವ ಮಂದಿ, ಅತ್ಯಾಚಾರಕ್ಕೊಳಗಾದ ಮಹಿಳೆ, ಚಿಕಿತ್ಸೆ (Treatment) ಪಡೆಯದ HIV ಯೊಂದಿಗೆ ಪೋಷಕರಿಗೆ ಜನಿಸಿದ ಮಕ್ಕಳಿಗೆ ಹೆಚ್‌ಐವಿ ಸುಲಭವಾಗಿ ಬರುವ ಸಾಧ್ಯತೆಯಿದೆ.
ಹೆಚ್‌ಐವಿ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುವುದಿಲ್ಲ. ಇದು ಶೀತ ಮತ್ತು ಜ್ವರ ವೈರಸ್‌ಗಳಂತೆ ವಾಯುಗಾಮಿ ವೈರಸ್ ಅಲ್ಲ. ಹೆಚ್ಐವಿ ರಕ್ತ ಮತ್ತು ಕೆಲವು ದೇಹದ ದ್ರವಗಳಲ್ಲಿ ವಾಸಿಸುತ್ತದೆ. ವೈರಸ್ ದೇಹದ (Body) ಯಾವುದೇ ದ್ರವದ ಮೂಲಕ ಹರಡುತ್ತದೆ. ಇದು ವೀರ್ಯ, ಮುಟ್ಟಿನ ರಕ್ತ, ಯೋನಿ ದ್ರವಗಳು ಹೀಗೆ ಯಾವ ಮೂಲಕ ಸಹ ಆಗಿರಬಹುದು. ಆದರೆ, ಲಾಲಾರಸ, ಬೆವರು ಅಥವಾ ಮೂತ್ರದಂತಹ ಇತರ ದೈಹಿಕ ದ್ರವಗಳು ಇನ್ನೊಬ್ಬ ವ್ಯಕ್ತಿಗೆ ಸೋಂಕು (Virus) ತಗಲುವಷ್ಟು ವೈರಸ್ ಅನ್ನು ಹೊಂದಿರುವುದಿಲ್ಲ.
HIV ಸೋಂಕಿತರಿಗೆ ಇನ್ನು ಭಯ ಬೇಕಿಲ್ಲ, ಸಂಪೂರ್ಣವಾಗಿ ಗುಣಪಡಿಸಲು ಸಿದ್ಧವಾಗಿದೆ ಲಸಿಕೆ
ವೈರಸ್ ರಕ್ತವನ್ನು ಹೇಗೆ ಸೇರುತ್ತದೆ?
ಹೆಚ್ಐವಿ ಸೋಂಕಿತ ವ್ಯಕ್ತಿಯು ಬಳಸಿದ ಸೂಜಿಗಳು ಅಥವಾ ಇಂಜೆಕ್ಷನ್ ಉಪಕರಣಗಳನ್ನು ಬಳಸುವುದು. ಗುದದ್ವಾರ, ಯೋನಿಯ ಮೂಲಕ, ಜನನಾಂಗಗಳ ಮೇಲೆ ಅಥವಾ ಒಳಗಿನ ಲೋಳೆಯ ಪೊರೆಗಳ ಮೂಲಕ, ಬಾಯಿ, ಕಣ್ಣುಗಳ ಲೋಳೆಯ ಪೊರೆಗಳ ಮೂಲಕ, ಚರ್ಮದ ಕಡಿತ, ಹುಣ್ಣುಗಳ ಮೂಲಕ ವೈರಸ್ ಬೇಗನೇ ರಕ್ತವನ್ನು ಪ್ರವೇಶಿಸುತ್ತದೆ.
ಹೆಚ್ಐವಿ ಈ ರೀತಿ ಹರಡುವುದಿಲ್ಲ
ಉಗುಳುವುದು, ಚುಂಬನ, ಸೀನುವಿಕೆ, ಒಂದೇ ಟವೆಲ್ ಅಥವಾ ಬಾಚಣಿಗೆ ಬಳಸುವುದು, ಒಂದೇ ಶೌಚಾಲಯ,ಈಜುಕೊಳಗಳನ್ನು ಬಳಸುವುದರಿಂದ ಹೆಚ್‌ಐವಿ ಸೋಂಕು ಹರಡುವುದಿಲ್ಲ.