ಬೆಡ್ ಟೀ ಬದಲು ಹಾಸಿಗೆಯಲ್ಲೇ ಈ ಎಲೆ ತಿಂದ್ರೆ ಕೊಬ್ಬು ಹೋಗುತ್ತೆ, ಶುಗರ್ ದೂರ

Published : Apr 29, 2025, 04:54 PM ISTUpdated : Apr 29, 2025, 05:10 PM IST
ಬೆಡ್ ಟೀ ಬದಲು ಹಾಸಿಗೆಯಲ್ಲೇ ಈ ಎಲೆ ತಿಂದ್ರೆ ಕೊಬ್ಬು ಹೋಗುತ್ತೆ, ಶುಗರ್ ದೂರ

ಸಾರಾಂಶ

ಜಡ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಮಧುಮೇಹ, ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚುತ್ತಿದೆ. ನುಗ್ಗೆ, ಮೆಂತೆ, ಕರಿಬೇವು, ಬೇವು, ತುಳಸಿ ಮತ್ತು ನೇರಳೆ ಎಲೆಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಇವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಆರೋಗ್ಯ ವೃದ್ಧಿಸುತ್ತವೆ.

ಇಂದಿನ ಜೀವನ ಶೈಲಿ ಮನುಷ್ಯನ ಆರೋಗ್ಯ (health)ದ ಮೇಲೆ ಕೆಟ್ಟ  ಪರಿಣಾಮ ಬೀರಿದೆ. ಕೆಟ್ಟ ಆಹಾರ ಪದ್ಧತಿ, ಜಡ ಜೀವನಶೈಲಿ (lifestyle) ಯಿಂದ ಜನರು ಹೊಸ ಹೊಸ ಖಾಯಿಲೆಗೆ ತುತ್ತಾಗ್ತಿದ್ದಾರೆ. ಮಧುಮೇಹ, ಕೊಲೆಸ್ಟ್ರಾಲ್ ಹೆಚ್ಚಳ ಸಾಮಾನ್ಯ ಸಮಸ್ಯೆ ಎನ್ನುವಂತಾಗಿದೆ. ಖಾಯಿಲೆ ಶುರು ಆದ್ಮೇಲೆ ಇಲ್ಲವೆ ಪರಿಸ್ಥಿತಿ ಉಲ್ಬಣಿಸಿದ ಮೇಲೆ ಜನರಿಗೆ ಜ್ಞಾನೋದಯವಾಗುತ್ತೆ. ಆಗ ಔಷಧಿ ಅಂತ ವೈದ್ಯರ ಬಳಿ ಓಡ್ತಾರೆ. ಆದ್ರೆ ಖಾಯಿಲೆ ಬರದಂತೆ ತಡೆಯಲು ನಮ್ಮಲ್ಲೇ ಸಾಕಷ್ಟು ಔಷಧವಿದೆ. ಮನೆಯಲ್ಲೇ ಇರುವ ಮಸಾಲೆ ಪದಾರ್ಥದ ಜೊತೆ ಗಿಡಮೂಲಿಕೆಗಳನ್ನು ಬಳಸಿ ರೋಗದಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಬಹುದು. ಆಯುರ್ವೇದ ಮತ್ತು ಸಾಂಪ್ರದಾಯಿಕ ವಿಧಾನಗಳಲ್ಲಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರಕೃತಿಯಲ್ಲಿ ಕಂಡುಬರುವ ಕೆಲವು ಎಲೆಗಳನ್ನು ಅಗಿಯುವುದು ಅನೇಕ ಸಮಸ್ಯೆಗಳಿಗೆ ಪ್ರಯೋಜನಕಾರಿ.  

ನಮ್ಮ ಸುತ್ತಮುತ್ತ ಇರುವ ಕೆಲ ಎಲೆಗಳು ಪೋಷಕಾಂಶಗಳು ಮತ್ತು ಔಷಧೀಯ ಗುಣಗಳಿಂದ ಸಮೃದ್ಧವಾಗಿವೆ.  ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಅವು ಸಹಾಯ ಮಾಡುತ್ವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವ ಎಲೆ (Leaf)ಗಳನ್ನು ತಿಂದ್ರೆ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬ ಮಾಹಿತಿ ಇಲ್ಲಿದೆ. 

ಗುಡ್ ನ್ಯೂಸ್ ಕೊಡುವ ಮೊದಲು ತಿಳಿದಿರಲಿ, ಈಗಿನ ಕಾಲದಲ್ಲಿ ಅಪ್ಪನಾಗಲು ಸೂಕ್ತ ವಯಸ್ಸೆಷ್ಟು?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಎಲೆ ತಿನ್ನಿ  : 

ನುಗ್ಗೆ ಸೊಪ್ಪು : ನುಗ್ಗೆ ಸೊಪ್ಪನ್ನು ಪೋಷಕಾಂಶಗಳ ಉಗ್ರಾಣವೆಂದು ಪರಿಗಣಿಸಲಾಗುತ್ತೆ. ಅವು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ವೆ.ಇದ್ರಲ್ಲಿರುವ ಉತ್ಕರ್ಷಣ ನಿರೋಧಕ ಗುಣಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಕೆಲವು  ನುಗ್ಗೆ ಸೊಪ್ಪಿನ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಅಗಿಯುವುದು ಬಹಳ ಪ್ರಯೋಜನಕಾರಿ.

ಮೆಂತೆ ಸೊಪ್ಪು :  ಮೆಂತೆ ಸೊಪ್ಪು, ಫೈಬರ್ ಮತ್ತು ಇತರ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಇದು ಸಹಾಯ ಮಾಡುತ್ತೆ. ಅವು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಮೆಂತೆ ಸೊಪ್ಪು ಸೇವನೆ ಮಾಡ್ತಾ ಬಂದ್ರೆ ಕೆಲವೇ ದಿನಗಳಲ್ಲಿ ನೀವು ಫಲಿತಾಂಶ ಕಾಣ್ಬಹುದು. 

ಕರಿಬೇವು : ಕರಿಬೇವು ಕೂಡ  ಉತ್ತಮ ಪ್ರಮಾಣದ ಫೈಬರ್   ಹೊಂದಿದೆ.  ಇದು ರಕ್ತದಲ್ಲಿನ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ.  ಇದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯಕವೆಂದು ಪರಿಗಣಿಸಲಾಗಿದೆ. ಖಾಲಿ ಹೊಟ್ಟೆಯಲ್ಲಿ 4 ರಿಂದ 5 ಕರಿಬೇವು ಎಲೆಗಳನ್ನು ಅಗಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. 

ಲಿವರ್ ಡ್ಯಾಮೇಜ್ ನಿಂದ-ಕ್ಯಾನ್ಸರ್ ತನಕ: ವೈರಲ್ ಆಗಿರುವ ದುಬೈ ಚಾಕೊಲೇಟ್ ತಿನ್ನೋ ಮುನ್ನ ಎಚ್ಚರ!

ಬೇವಿನ ಎಲೆ : ಬೇವಿನ ಎಲೆ ಕಹಿಯಾಗಿದ್ರೂ ಖಾಯಿಲೆಗಳನ್ನು ದೂರವಿಡಲು ಅದು ನೆರವಾಗುತ್ತದೆ. ಬೇವು ರಕ್ತವನ್ನು ಶುದ್ಧೀಕರಿಸಲು ಮತ್ತು ಇನ್ಸುಲಿನ್ ಬಳಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕೊಲೆಸ್ಟ್ರಾಲ್  ನಿಯಂತ್ರಿಸುವಲ್ಲಿ ಸ್ವಲ್ಪ ಮಟ್ಟಿಗೆ ಪರಿಣಾಮಕಾರಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 3-5 ಬೇವಿನ ಎಲೆಗಳನ್ನು ಅಗಿಯುವುದು ಉತ್ತಮ.

ತುಳಸಿ ಎಲೆಗಳು : ತುಳಸಿಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪ್ರತಿದಿನ ಬೆಳಿಗ್ಗೆ ತುಳಸಿ ಎಲೆಗಳನ್ನು ಅಗಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತುಳಸಿ ಎಲೆಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. 

ನೇರಳೆ ಎಲೆ : ನೇರಳೆ ಎಲೆಗಳನ್ನು ಮಧುಮೇಹಕ್ಕೆ ಸಾಂಪ್ರದಾಯಿಕ ಔಷಧವಾಗಿ ಬಳಸಲಾಗುತ್ತದೆ. ನೇರಳೆ ಎಲೆಗಳು ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಗಳನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೇರಲೆ ಎಲೆಗಳನ್ನು ಅಗೆದು ತಿನ್ನುವುದು ಪ್ರಯೋಜನಕಾರಿ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ