ಹೃದಯ ಎಡಗಡೆ ಇರೋದ್ರಿಂದ, ಅಲ್ಲಿ ನೋವು ಕಾಣಿಸಿಕೊಂಡ್ರೆ ಹಾರ್ಟ್‌ಅಟ್ಯಾಕ್ ಆಗುತ್ತಾ?

By Vinutha Perla  |  First Published Apr 8, 2023, 4:35 PM IST

ಕೆಲವೊಬ್ಬರು ಹಾರ್ಟ್‌ಅಟ್ಯಾಕ್ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದಾರೆ. ಹಾರ್ಟ್‌ ಅಟ್ಯಾಕ್ ಆಗೋ ಮೊದಲು ಹೃದಯ ಎಡಗಡೆ ಇರೋ ಕಾರಣ ಅಲ್ಲೇ ನೋವು ಬರುತ್ತದೆ ಅನ್ನುತ್ತಾರೆ. ಆ ಬಗ್ಗೆ ಕಾರ್ಡಿಯಾಕ್ ಸರ್ಜನ್‌, ಡಾ.ರಾಜೇಶ್‌ ಟಿ.ಆರ್ ಮಾಹಿತಿ ನೀಡಿದ್ದಾರೆ.


ಹಾರ್ಟ್‌ ಅಟ್ಯಾಕ್‌ ಇತ್ತೀಚಿಗೆ ವಯಸ್ಸಿನ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಕಾಡುತ್ತಿರುವ ಆರೋಗ್ಯ ಸಮಸ್ಯೆ.ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ, ಡ್ಯಾನ್ಸ್‌ ಮಾಡುವಾಗ, ವಾಕಿಂಗ್‌ ಮಾಡುವಾಗ ಹೀಗೆ ಎಲ್ಲೆಂದರಲ್ಲಿ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವಾಗಲೇ ಕುಸಿದು ಬಿದ್ದು, ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಾರೆ.  ಹೃದಯಾಘಾತ ಆಗುವ ಮೊದಲು ದೇಹವೇ ಕೆಲವು ಸೂಚನೆಗಳನ್ನು ನೀಡುತ್ತದೆ. ಆದರೆ ಕೆಲವೊಬ್ಬರು ಈ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದಾರೆ. ಆ ಬಗ್ಗೆ ಕಾರ್ಡಿಯಾಕ್ ಸರ್ಜನ್‌, ಡಾ.ರಾಜೇಶ್‌ ಟಿ.ಆರ್ ಮಾಹಿತಿ ನೀಡಿದ್ದಾರೆ.

ಹೃದಯಾಘಾತ ಎಂದರೇನು?
ಹೃದಯ (Heart), ದೇಹದ ನರಗಳಿಗೆ ರಕ್ತವನ್ನು ಕಳುಹಿಸುವ ಕೆಲಸವನ್ನು ಮಾಡುತ್ತದೆ. ಹೃದಯ ಸ್ತಂಭನ ಎಂದರೆ ಹೃದಯವು ಇದ್ದಕ್ಕಿದ್ದಂತೆ ದೇಹಕ್ಕೆ ಹೃದಯ ರಕ್ತ ಸಂಚಲನ ಮಾಡುವುದನ್ನು ನಿಲ್ಲಿಸುತ್ತದೆ. ಹೃದಯದ ಒಂದು ಭಾಗದಲ್ಲಿ ರಕ್ತ ಸಂಚಾರಕ್ಕೆ ಅಡಚಣೆಯಾಗುತ್ತದೆ. ಇದರಿಂದ ರಕ್ತನಾಳಗಳು ಹಾಗೂ ಸ್ನಾಯುಗಳಿಗೆ ಹಾನಿಯುಂಟಾಗುತ್ತದೆ. ಹೃದಯ ತನ್ನ ಕಾರ್ಯವನ್ನು ನಿಲ್ಲಿಸಿದ ತಕ್ಷಣ ಉಸಿರಾಟ ಕ್ರಿಯೆ ಸ್ತಬ್ಧವಾಗುತ್ತದೆ. ಹೃದಯ ಸ್ನಾಯುವಿಗೆ ಆಮ್ಲಜನಕವನ್ನು (Oxygen) ತರುವ ರಕ್ತದ ಹರಿವು ತೀವ್ರವಾಗಿ ಕಡಿಮೆಯಾದಾಗ ಅಥವಾ ಸಂಪೂರ್ಣವಾಗಿ ಕಡಿತಗೊಂಡಾಗ ಹೃದಯಾಘಾತ (Heartattack) ಸಂಭವಿಸುತ್ತದೆ

Latest Videos

undefined

ಆಗಾಗ ಹೃದಯ ತಪಾಸಣೆ ಮಾಡಿಕೊಳ್ಳೋದ್ರಿಂದ ಹಾರ್ಟ್‌ಅಟ್ಯಾಕ್ ತಪ್ಪಿಸಬಹುದಾ?

ಹಾರ್ಟ್‌ ಅಟ್ಯಾಕ್ ಆಗೋ ಮೊದಲು ಹೃದಯ ಎಡಗಡೆ ಇರೋ ಕಾರಣ ಅಲ್ಲೇ ನೋವು ಬರುತ್ತದೆ ಅನ್ನುತ್ತಾರೆ. ಆದರೆ ಹೃದಯ ಎಡಗಡೆಯಿರೋದ್ರಿಂದ ಎಡಗಡೆ ಮಾತ್ರ ನೋವು ಬರಬೇಕು ಅಂತಿಲ್ಲ. ದೇಹದ (Body) ಯಾವ ಭಾಗದಲ್ಲಿ ಬೇಕಾದರೂ ನೋವು ಬರುತ್ತದೆ. ಬಲಗಡೆ, ಬೆನ್ನಿನಲ್ಲಿ ಸಹ ನೋವು ಕಾಣಿಸಿಕೊಳ್ಳುತ್ತದೆ ಎಂದು ಕಾರ್ಡಿಯಾಕ್ ಸರ್ಜನ್‌, ಡಾ.ರಾಜೇಶ್‌ ಟಿ.ಆರ್ ಮಾಹಿತಿ ನೀಡಿದ್ದಾರೆ.

ಹೃದಯಾಘಾತದ ಲಕ್ಷಣಗಳೇನು ?
ಹೃದಯಾಘಾತವಾಗುವ ಮೊದಲು ದೇಹದಲ್ಲಿ (Body) ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೃದಯಾಘಾತಕ್ಕೂ ಮೊದಲು ರೋಗಿಗಳ ಎದೆಯ ಎಡಭಾಗದಲ್ಲಿ ತೀಕ್ಷ್ಣ ನೋವು (severe Pain) ಕಂಡು ಬರುತ್ತದೆ. ಎದೆಯ ಮೇಲೆ ಏನೋ ಭಾರವಾದ ವಸ್ತ ಕುಳಿತುಕೊಂಡ ಅನುಭವವಾಗುತ್ತದೆ. ನೋವು ಕ್ರಮೇಣ ಭುಜಗಳತ್ತ ವ್ಯಾಪಿಸಿ ಕೈ, ಬೆನ್ನು, ಕುತ್ತಿಗೆ, ಕೆಳ ದವಡೆ, ಹಲ್ಲು ಹಾಗೂ ಹೊಟ್ಟೆಯ (Stomach) ಮೇಲ್ಭಾಗಕ್ಕೂ ವಿಸ್ತರಿಸುತ್ತದೆ. ತಂಪು ವಾತಾವರಣದಲ್ಲೂ ಬೆವರಬಹುದು. ಉಸಿರಾಡಲು ಕಷ್ಟ, ವಾಕರಿಕೆ, ತಲೆ ಸುತ್ತುವುದು, ವೇಗದ ಎದೆಬಡಿತ (Heartbeat) ಮೊದಲಾದ ಲಕ್ಷಣಗಳು (Symptoms) ಕಂಡು ಬರಬಹುದು.

ಹಾರ್ಟ್ ಅಟ್ಯಾಕ್‌ ಆಗ್ಬಾರ್ದು ಆದ್ರೆ ಮೊದ್ಲೇ ಈ ಟೆಸ್ಟ್ ಮಾಡಿಸ್ಕೊಳ್ಳಿ

ಯಾರಿಗೆ ಹೃದಯಾಘಾತವಾಗುವ ಅಪಾಯ ಹೆಚ್ಚು

*ಯಾವುದೇ ದೈಹಿಕ ವ್ಯಾಯಾಮ ಮಾಡದೇ ಇರುವವರಿಗೆ
* ಅತ್ಯಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಹೆಚ್ಚಿನ ಅಪಾಯ
* ಮಧುಮೇಹಿಗಳಿಗೆ
* ಅತ್ಯಧಿಕ ಕೊಲೆಸ್ಟ್ರಾಲ್ ಇದ್ದಾಗ
* ಬೊಜ್ಜು ಸಹ ಹಾರ್ಟ್‌ಅಟ್ಯಾಕ್‌ಗೆ ಕಾರಣವಾಗುತ್ತದೆ

ಹೃದಯಾಘಾತ ತಡೆಯಲು ಏನು ಮಾಡಬಹುದು ?
• ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನ ಬಗ್ಗೆ ಗಮನಹರಿಸಿ
• ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ
• ಹೃದಯ-ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡಿ
• ಧೂಮಪಾನ ಮಾಡುತ್ತಿದ್ದರೆ ಬಿಟ್ಟುಬಿಡಿ

ಎಲ್ಲಾ ದುಶ್ಚಟಗಳನ್ನು ಬಿಟ್ಟು ಕಾಲ ಕಾಲಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ (Health checkup) ನಡೆಸಿದಾಗ ಮಾತ್ರ ದಿಢೀರ್ ಹೃದಯಾಘಾತದಿಂದ ದೂರವಿರಬಹುದು.

Exercise ಅತಿಯಾದ್ರೆ ಹಾರ್ಟ್ ಅಟ್ಯಾಕ್ ಗ್ಯಾರಂಟಿ, ಅತಿಯಾಗ್ತಿದೆ ಅಂತ ತಿಳ್ಕೊಳ್ಳೋದು ಹೇಗೆ ?

click me!