
ಮಧ್ಯಪ್ರದೇಶ: ಇಲ್ಲಿನ ಯುವಕನೊಬ್ಬ ತನ್ನ ದೇಹದಾದ್ಯಂತ ದಟ್ಟವಾದ ಕೂದಲನ್ನು (Hair) ಹೊಂದಿದ್ದಾನೆ. ಇದರಿಂದಾಗಿ ದಿನಪೂರ್ತಿ ಹಲವು ಸಮಸ್ಯೆಗಳನ್ನು ಎದುರಿಸುತ್ತಾನೆ. ಸಹಪಾಠಿಗಳು ಈತನು ಕಚ್ಚುತ್ತಾನೆ ಎಂದು ಹೆದರುತ್ತಾರೆ. 17 ವರ್ಷದ ನಂಡ್ಲೇಟಾ ಗ್ರಾಮದ ವಿದ್ಯಾರ್ಥಿ ಲಲಿತ್ ಪಾಟಿದಾರ್‌ಗೆ ಆರನೇ ವಯಸ್ಸಿನಲ್ಲಿಯೇ ಹೈಪರ್ಟ್ರಿಕೋಸಿಸ್ ಇರುವುದು ಗುರುತಿಸಲಾಯಿತು. ಇದಕ್ಕೆ ಕಾರಣ ‘ವೆರ್‌ವುಲ್ಫ್ ಸಿಂಡ್ರೋಮ್’ಎಂದು ತಿಳಿದುಬಂತು. ಅಪರೂಪದ 'ವೂಲ್ಫ್ ಸಿಂಡ್ರೋಮ್' ಹೊಂದಿರುವ ಮಧ್ಯಪ್ರದೇಶದ ಹುಡುಗನಿಗೆ ದೇಹದಾದ್ಯಂತ ಕೂದಲು ಬೆಳೆಯುತ್ತಿದೆ
ಇಲ್ಲಿಯವರಗೆ ಕೇವಲ 50 ಜನರಲ್ಲಿ ಕಾಣಿಸಿಕೊಂಡಿರುವ ಕಾಯಿಲೆ
ಹುಟ್ಟಿನಿಂದಲೇ ಪಾಟಿದಾರ್ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಈ ಸ್ಥಿತಿಯು ತುಂಬಾ ಅಪರೂಪವಾಗಿದ್ದು, ಇಲ್ಲಿಯವರಗೆ ಕೇವಲ 50 ಜನರು ಮಾತ್ರ ಇದನ್ನು ಹೊಂದಿದ್ದಾರೆಂದು ನಂಬಲಾಗಿದೆ. ಈತನ ದೇಹ (Body) ಪೂರ್ತಿಯಾಗಿ ಕೂದಲು ಆವರಿಸಿಕೊಂಡಿದೆ. ಸಹಪಾಠಿಗಳು ಇವನನ್ನು ಕೋತಿ ಹುಡುಗ ಎಂದು ಕರೆಯುತ್ತಾರೆ ಮತ್ತು ಅವನು ಕಚ್ಚುವ ಭಯವಿದೆ ಎಂದು ಹೇಳುತ್ತಾರೆ ಎಂಬುದಾಗಿ ಲಲಿತ್ ಬೇಸರದಿಂದ ಹೇಳುತ್ತಾನೆ.
Rare Disease: ಈಕೆಗೆ ಮೂರು ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ಲೋಕೆ ಆಗಲ್ಲ, ಇದೆಂಥಾ ವಿಚಿತ್ರ ಕಾಯಿಲೆ !
'ನಾನು ಬೇರೆಯವರಂತೆ ಸಾಮಾನ್ಯವಾದ ಜೀವನ ಅನುಭವಿಸಲು ಸಾಧ್ಯವಾಗಿಲ್ಲ. ನಾನು ಚಿಕ್ಕವನಿದ್ದಾಗ ಆಗಾಗ ಜನರು ನನ್ನತ್ತ ಕಲ್ಲು ಎಸೆಯುತ್ತಿದ್ದರು. ನಾನು ಹಿಂತಿರುಗಿ ಪ್ರಾಣಿಯಂತೆ ಕಚ್ಚುತ್ತೇನೆ ಎಂದು ಮಕ್ಕಳು (Children) ಹೆದರುತ್ತಿದ್ದರು. ನಾನು ಹುಟ್ಟಿನಿಂದಲೇ ವೈದ್ಯರಿಂದ ಕ್ಷೌರ ಮಾಡಿಸಿಕೊಂಡಿದ್ದೇನೆ. ಆದರೆ, ನನಗೆ ಸರಿಸುಮಾರು 6 ಅಥವಾ 7 ವರ್ಷ ವಯಸ್ಸಿನವರೆಗೂ ಈ ವ್ಯತ್ಯಾಸದ (Difference) ಬಗ್ಗೆ ನನಗೆ ತಿಳಿದಿರಲಿಲ್ಲ. ನಂತ್ರ, ಇನ್ನೂ ನನ್ನ ದೇಹದಾದ್ಯಂತ ಕೂದಲು ಬರಲು ಪ್ರಾರಂಭಿಸಿತು. ಎಂದು ಪಾಟಿದಾರ್ ಅಳಲು ತೋಡಿಕೊಂಡಿದ್ದಾರೆ.
ಹೈಪರ್ಟ್ರಿಕೋಸಿಸ್ ಸ್ಥಿತಿಗೆ ಯಾವುದೇ ಚಿಕಿತ್ಸೆ ಇಲ್ಲ.
'ನಾನು ಸಾಮಾನ್ಯ ಕುಟುಂಬದಿಂದ ಬಂದವನು, ನನ್ನ ತಂದೆ ರೈತ. ಪ್ರಸ್ತುತ 12ನೇ ತರಗತಿಯಲ್ಲಿ ಓದುತ್ತೇನೆ. ತಂದೆಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡುತ್ತೇನೆ' ಎಂದು ಲಲಿತ್ ಹೇಳಿದ್ದಾರೆ. ಮಾಹಿತಿಯ ಪ್ರಕಾರ, ಪಾಟಿದಾರ್ ತನ್ನ ಇತರ ಕುಟುಂಬದ ಯಾವುದೇ ಸದಸ್ಯರು ಹೈಪರ್ಟ್ರಿಕೋಸಿಸ್ ಹೊಂದಿಲ್ಲ. ಲಲಿತ್ ಅವರು ತಮ್ಮ ದೇಹ ಸ್ಥಿತಿಯಿಂದ ಅಸಮಾಧಾನಗೊಂಡಿಲ್ಲ, ಆದರೆ ಅವರ ಪೋಷಕರು ಅವರ ಬಗ್ಗೆ ತುಂಬಾ ಚಿಂತಿಸುತ್ತಾರೆ.
ವಿಚಿತ್ರ ಕಾಯಿಲೆಯಿಂದ ಬಳಲ್ತಿರೋ ಮಹಿಳೆ, ಬಿಸ್ಕೆಟ್ ಬಿಟ್ಟು ಬೇರೇನೂ ತಿನ್ನೋ ಹಾಗಿಲ್ಲ..!
ಹೈಪರ್ಟ್ರಿಕೋಸಿಸ್‌ಗೆ ಯಾವುದೇ ಚಿಕಿತ್ಸೆ ಇಲ್ಲದಿರುವುದರಿಂದ, ಪಾಟಿದಾರ್ ಬ್ಲೀಚಿಂಗ್, ಕತ್ತರಿಸುವುದು, ಶೇವಿಂಗ್, ವ್ಯಾಕ್ಸಿಂಗ್, ಲೇಸರ್‌ಗಳು ಮತ್ತು ಇತರ ಕೂದಲು ತೆಗೆಯುವ ತಂತ್ರಗಳನ್ನು ಬಳಸುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. 'ಕೂದಲು ತುಂಬಾ ಉದ್ದವಾಗುತ್ತಿದೆ ಎಂದು ನಾನು ಭಾವಿಸಿದರೆ ನಾನು ಅದನ್ನು ಟ್ರಿಮ್ ಮಾಡುತ್ತೇನೆ. ಇದು ತಲೆ ಕೂದಲಿನಂತೆ, ಅದು ಬೆಳೆಯುತ್ತಲೇ ಇರುತ್ತದೆ, ಅದನ್ನು ನಿರ್ವಹಿಸಲು ನನಗೆ ಬೇರೆ ಮಾರ್ಗವಿಲ್ಲ' ಎಂದಿದ್ದಾರೆ.
ನಾನು ನಾನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ
'ನಾನು ಸಾಮಾನ್ಯ ಮನುಷ್ಯರಿಗಿಂತ ಉತ್ತಮ ರೀತಿಯಲ್ಲಿ ಭಿನ್ನವಾಗಿದ್ದೇನೆ. ನಾನು ಅನನ್ಯ. ನನ್ನ ಪ್ರಯಾಣದಲ್ಲಿ ನಾನು ಅನೇಕ ವಿಷಯಗಳನ್ನು ಕಲಿತಿದ್ದೇನೆ, ಮುಖ್ಯವಾಗಿ ನಾನು ಮಿಲಿಯನ್‌ನಲ್ಲಿ ಒಬ್ಬ ಎಂದು ಕಲಿತಿದ್ದೇನೆ. ಜೀವನ (Life)ವನ್ನು ಪೂರ್ಣವಾಗಿ ಬದುಕಲು ಮತ್ತು ಸಂತೋಷವಾಗಿರಲು ಬಯಸುತ್ತೇನೆ. ನಾನು ನಾನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ' ಎಂದು ಲಲಿತ್ ಪಾಟಿದಾರ್ ಹೇಳುತ್ತಾರೆ. ಅದೇನೆ ಇರ್ಲಿ, ದೇಹದ ಮೇಲೆಲ್ಲಾ ಕೂದಲು ಬೆಳೆಯುವ ಈ ವಿಚಿತ್ರ ಕಾಯಿಲೆ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿರುವುದಂತೂ ನಿಜ.
ದೇಹದ ಕೂದಲಲ್ಲಿ ಬದಲಾವಣೆಯಾದ್ರೆ ಅದು ಈ ರೋಗ ಲಕ್ಷಣವೂ ಇರಬಹುದು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.