ನೌಕರಿ ಕಳೆದುಕೊಂಡಾಗ ಆಗುವ ನೋವು ಅನುಭವಿಸಿದವರಿಗೆ ಗೊತ್ತು. ಇಲ್ಲಿ ಆರ್ಥಿಕ ಸಮಸ್ಯೆ ಮಾತ್ರವಲ್ಲ ಮನಸ್ಸು, ಸಮಾಜದಲ್ಲಿ ಸ್ಥಾನ ಸೇರಿದಂತೆ ಅನೇಕ ಸವಾಲು ಎದುರಾಗುತ್ತವೆ. ಮುಂದೇನು ಎಂಬ ಪ್ರಶ್ನೆಗೆ ಉತ್ತರ ಸಿಗದಂತಾಗುತ್ತದೆ.
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ನೌಕರಿ ಗಿಟ್ಟಿಸಿಕೊಳ್ಳೋದು ಸುಲಭದ ಕೆಲಸವಲ್ಲ. ಕಷ್ಟಪಟ್ಟು ನೌಕರಿ ಸಿಕ್ಕಿರುತ್ತದೆ. ಆದ್ರೆ ಯಾವುದೋ ಕಾರಣಕ್ಕೆ ಆ ಕೆಲಸ ಕಳೆದುಕೊಳ್ಳುವ ಸ್ಥಿತಿ ಬಂದಾಗ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಕೆಲಸವನ್ನು ಕಳೆದುಕೊಳ್ಳುವುದು ಅಥವಾ ನಿಮ್ಮನ್ನು ಕೆಲಸದಿಂದ ಕಿತ್ತು ಹಾಕಿದಾಗ, ಬಲವಂತವಾಗಿ ನಿವೃತ್ತಿ ಪಡೆದಾಗ ನಿಂತ ನೆಲ ಕುಸಿದು ಬಿದ್ದ ಅನುಭವವಾಗುತ್ತದೆ. ಹಣದ ಸಮಸ್ಯೆ ಮಾತ್ರ ಇಲ್ಲಿ ಕಾಡೋದಿಲ್ಲ. ಮಾನಸಿಕವಾಗಿ ಅನೇಕ ಸವಾಲುಗಳು ಎದುರಾಗುತ್ತವೆ. ನಮ್ಮ ಸಾಮರ್ಥ್ಯ ಹಾಗೂ ನಮ್ಮ ಕೆಲಸದ ಮೇಲೆ ನಮಗೆ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಅನೇಕರು ನಾವು ಮಾಡುವ ಕೆಲಸವನ್ನು ಪ್ರೀತಿಸುತ್ತಿರುವುದಿಲ್ಲ. ಆದ್ರೆ ಆ ಕೆಲಸ ಅವರಿಗೆ ಆರ್ಥಿಕ ಬಲ ನೀಡುವ ಜೊತೆಗೆ ಸಾಮಾಜಿಕ ಭದ್ರತೆ ನೀಡಿರುತ್ತದೆ. ಹಠಾತ್ ಉದ್ಯೋಗ ಕಳೆದುಕೊಂಡಾಗ ನೋವು, ಹತಾಷೆ ಎಲ್ಲರನ್ನೂ ಕಾಡುತ್ತದೆ. ಮುಂದೇನು ಎಂಬ ದೊಡ್ಡ ಪ್ರಶ್ನೆ ಎದುರಾಗುತ್ತದೆ. ಮತ್ತೊಂದು ನೌಕರಿ ಸಿಗುವವರೆಗೂ ಖಿನ್ನತೆ ಕಾಡುತ್ತದೆ. ಕೋಪ ಆವರಿಸುತ್ತದೆ. ನಿರಾಸಕ್ತಿ ಮೂಡುತ್ತದೆ.
ಕೆಲಸ (Job) ಕಳೆದುಕೊಳ್ಳುವುದು ಹಾಗೆ ಕೈನಲ್ಲಿ ಕೆಲಸವಿಲ್ಲದೆ ಹೋಗಾದ ಆಗುವ ನೋವು ಸಾಮಾನ್ಯ. ನೀವು ಅದ್ರಿಂದ ಹೊರ ಬಂದಾಗ ಮಾತ್ರ ಯಶಸ್ಸು (Success) ಸಾಧ್ಯ. ನಾವಿಂದು ಕೆಲಸ ಕಳೆದುಕೊಂಡ ನಂತ್ರ ನೀವು ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.
Benefits of Raisins: ಒಣದ್ರಾಕ್ಷಿ ಸೇವನೆಯಿಂದ ಆರೋಗ್ಯ, ಚರ್ಮ, ಕೂದಲಿಗಾಗುವ ಲಾಭ ಹಲವು
ನಿಮಗೆ ನೀವು ಸಮಯ ನೀಡಿ : ಕೆಲಸ ಕಳೆದುಕೊಂಡ ದುಃಖ ನಿಮ್ಮನ್ನು ದೊಡ್ಡ ಮಟ್ಟದಲ್ಲಿ ಬಾಧಿಸುತ್ತದೆ. ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನೀವು ಕೆಲಸ ಕಳೆದುಕೊಂಡವರು, ಅನರ್ಹರು, ಏಕಾಂಗಿ ಎಂದು ಭಾವಿಸಬೇಡಿ. ಮೊದಲು ವಾಸ್ತವವನ್ನು ಒಪ್ಪಿಕೊಳ್ಳಿ. ನಿಮ್ಮ ದುಃಖ ಕಡಿಮೆಯಾಗಲು ಸಮಯ ನೀಡಿ. ನಿಮ್ಮ ಭವಿಷ್ಯದ ಬಗ್ಗೆ ಸಕಾರಾತ್ಮಕ (Positive) ವಾಗಿ ಆಲೋಚನೆ ಮಾಡಿ.
ನಿಮ್ಮನ್ನು ನೀವು ಸುಧಾರಿಸಿಕೊಳ್ಳಿ : ಕೆಲಸ ಎಂಬುದು ಜೀವನದ ಒಂದು ಭಾಗ. ಜೀವನವೇ ಕೆಲಸವಲ್ಲ. ಇದಿಲ್ಲವೆಂದ್ರೆ ಇನ್ನೊಂದು ಕೆಲಸ ನಿಮಗೆ ಸಿಗುತ್ತದೆ. ಅದು ನಿಮ್ಮ ಸಾಮರ್ಥ್ಯವನ್ನು ಅವಲಂಭಿಸಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಜೀವನದಲ್ಲಿ ಆನಂದ ಪಡೆಯಲು ಸಾಕಷ್ಟು ವಿಧಾನಗಳಿವೆ. ನೀವು ಹೊಸ ಕೆಲಸ ಹುಡುಕುವ ಜೊತೆಗೆ ನಿಮಗೆ ಇಷ್ಟವಾದ ಕ್ಷೇತ್ರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ನಿಮ್ಮಲ್ಲಿ ಯಾವ ನ್ಯೂನ್ಯತೆ ಇದೆ ಎಂಬುದನ್ನು ಪತ್ತೆ ಮಾಡಿ.
ಖರ್ಚು – ವೆಚ್ಚದ ಬಗ್ಗೆ ಗಮನಹರಿಸಿ : ನೀವು ಉದ್ಯೋಗ (Employment) ದಲ್ಲಿದ್ದಾಗ ಪ್ರತಿ ತಿಂಗಳು ಸಂಬಳ ಬರ್ತಿತ್ತು. ಆಗ ಕೈಬಿಚ್ಚಿ ಖರ್ಚು ಮಾಡ್ತಿದ್ದಿರಿ. ಈಗ ಸಂಬಳ ಬರ್ತಿಲ್ಲ. ಮುಂದೆ ಕೆಲಸ ಸಿಗುವವರೆಗೆ ನೀವು ಈ ಸತ್ಯ ತಿಳಿದಿರಬೇಕು. ಇರುವ ಹಣದಲ್ಲಿ ಅಚ್ಚುಕಟ್ಟಾಗಿ ಖರ್ಚು ಮಾಡೋದನ್ನು ನೀವು ರೂಢಿಸಿಕೊಳ್ಳಬೇಕು. ಕೆಲಸ ಕಳೆದುಕೊಂಡ ಆರಂಭದಿಂದಲೇ ನೀವು ಹಣದ ಮೇಲೆ ಹಿಡಿತ ಸಾಧಿಸಿದ್ರೆ ಮುಂದೆ ತೊಂದರೆಯಾಗುವುದಿಲ್ಲ. ಕೈ ಖಾಲಿಯಾದ್ಮೇಲೆ ಚಿಂತಿಸಿದ್ರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗುತ್ತದೆ.
ಕುಟುಂಬ – ಸ್ನೇಹಿತರ ಬೆಂಬಲ : ಕಷ್ಟದ ಸಂದರ್ಭಗಳಲ್ಲಿ ಕುಟುಂಬ ಮತ್ತು ಸ್ನೇಹಿತರ ಬೆಂಬಲ ಅತ್ಯಗತ್ಯ. ಆದ್ದರಿಂದ ನಿಮಗೆ ಅಗತ್ಯವಿರುವಾಗ ಸಹಾಯವನ್ನು ಕೇಳಲು ನಾಚಿಕೆಪಡಬೇಡ. ಈ ಕಷ್ಟದ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸುವುದು ನಿಮ್ಮ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ನಿಮ್ಮ ಮಾನಸಿಕ ಸ್ಥಿತಿ ವಿಪರೀತ ಹದಗೆಟ್ಟಿದೆ ಎನ್ನಿಸಿದ್ರೆ ನೀವು ವೃತ್ತಿಪರ ಚಿಕಿತ್ಸಕರ ಸಹಾಯವನ್ನು ಪಡೆಯಬಹುದು.
WINTER DRINKS: ಚಳಿಯಲ್ಲಿ ನಡುಗ್ಬೇಡಿ , ದೇಹ ಬೆಚ್ಚಗಿಡೋ ಈ ಪಾನೀಯ ಕುಡೀರಿ
ಆಗೋದೆಲ್ಲ ಒಳ್ಳೆಯದಕ್ಕೆ ಅಂದ್ಕೊಳ್ಳಿ : ನೀವು ಕೆಲಸ ಕಳೆದುಕೊಂಡಿದ್ದೀರಿ ಎನ್ನುವ ಬಗ್ಗೆ ಚಿಂತಿಸುವ ಬದಲು ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ. ಮುಂದೆ ಒಳ್ಳೆಯದಾಗಲಿದೆ ಎಂದು ಭಾವಿಸಿ. ಒಳ್ಳೆಯದಕ್ಕಾಗಿ ಪ್ರಯತ್ನಿಸಿ. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಕೌಶಲ್ಯ ವೃದ್ಧಿಸಿಕೊಳ್ಳಿ. ಬಿಡುವಿನ ಸಮಯದಲ್ಲಿ ನಿಮ್ಮ ಗಮನ ಜ್ಞಾನ ವೃದ್ಧಿಯ ಕಡೆಗೆ ತಿರುಗಿದ್ರೆ ಭವಿಷ್ಯ ಉಜ್ವಲವಾಗುತ್ತದೆ.