ರಾತ್ರಿ ಮಲಗೋದೇನೋ ಬೇಗ ಮಲಗ್ತೀರಾ? ಆದ್ರೆ ನಿದ್ದೆ ಮಾಡಲ್ಲ. ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ ಅಂತ ಸ್ಕ್ರಾಲ್ ಮಾಡ್ತಾ ಟೈಂ ಹೋಗಿದ್ದೇ ಗೊತ್ತಾಗಲ್ಲ. ಮೊಬೈಲ್ ನೋಡ್ತಾ ನೋಡ್ತಾನೇ ಅರ್ಧರಾತ್ರಿಯಾಗಿರುತ್ತೆ ಅಲ್ವಾ. ಹೀಗೆ ಮಾಡ್ತಿರೋದು ನೀವು ಮಾತ್ರ ಅಲ್ಲ ಬಿಡಿ. ಬೆಂಗಳೂರಿನಲ್ಲಿ ಬಹುತೇಕರಿಗೆ ಮಲಗೋ ಮುನ್ನ ಸ್ಮಾರ್ಟ್‌ಫೋನ್ ಬೇಕೇ ಬೇಕಂತೆ. ಅಧ್ಯಯನದಿಂದ ಈ ವಿಚಾರ ತಿಳಿದುಬಂದಿದೆ.
ಸ್ಮಾರ್ಟ್‌ಫೋನ್ ಬಂದ್ಮೇಲೆ ಜನರು ಸಹ ಹೆಚ್ಚು ಸ್ಮಾರ್ಟ್ ಆಗಿದ್ದಾರೆ. ಬೆರಳಂಚಿನಲ್ಲಿಯೇ ಎಲ್ಲಾ ಕೆಲಸ ನಡೆದುಹೋಗುತ್ತದೆ. ಮೊಬೈಲ್ ಒಂದಿದ್ದರೆ ಸಾಕು ದಿನಸಿ ಖರೀದಿ, ಶಾಪಿಂಗ್, ಲೈಟ್ ಬಿಲ್, ಕೇಬಲ್ ಬಿಲ್, ವಾಟರ್ ಬಿಲ್ ಎಲ್ಲವನ್ನೂ ಕುಳಿತಲ್ಲಿಯೇ ಕಟ್ಟಬಹುದು. ಆನ್‌ಲೈನ್ ಪೇಮೆಂಟ್‌ಗಳ ಜಮಾನವಾಗಿರುವ ಕಾರಣ ಬ್ಯಾಂಕ್‌ಗಳಿಗೆ ಅಲೆಯೋ ಕೆಲಸವೂ ಇಲ್ಲ. ಬುಕ್ ಮಾಡಿದರೆ ಸಾಕು. ಆಹಾರ, ಡ್ರೆಸ್, ಮೆಡಿಸಿನ್, ಫರ್ನೀಚರ್, ವೆಹಿಕಲ್ ಎಲ್ಲವೂ ಮನೆ ಬಾಗಲಿಗೆ ಬರುತ್ತದೆ. ಎಂಟರ್‌ಟೈನ್ ಮೆಂಟ್‌ಗೆ ಪ್ರತ್ಯೇಕವಾಗಿ ಟಿವಿ, ಲ್ಯಾಪ್‌ಟಾಪ್‌ಗಳೂ ಬೇಕಿಲ್ಲ. ಮೊಬೈಲ್‌ನಲ್ಲಿಯೇ ಬೇಕಾದ ಒಟಿಟಿ ಫ್ಲಾಟ್‌ಫಾರ್ಮ್ ಮೆಂಬರ್‌ಶಿಪ್ ಹಾಕಿಕೊಂಡರಾಯಿತು. ಒಟ್ನಲ್ಲಿ ಎಲ್ಲರಿಗೂ ಸ್ಮಾರ್ಟ್‌ಫೋನ್ ಕೈಯಲ್ಲಿ ಇಲ್ಲಾಂದ್ರೆ ಜೀವಾನೇ ನಿಂತಂಗೆ ಆಗುತ್ತೆ. ಅದರಲ್ಲೂ ಬೆಂಗಳೂರು ಮಂದಿ ಸ್ಮಾರ್ಟ್‌ಫೋನ್‌ಗೆ ಹೆಚ್ಚು ಅಡಿಕ್ಟ್ ಆಗಿದ್ದಾರಂತೆ.
ಬೆಂಗಳೂರು ಮಹಾನಗರ..ಇತ್ತೀಚಿನ ವರ್ಷಗಳಲ್ಲಿ ಟ್ರಾಫಿಕ್ ಕಿರಿಕಿರಿ, ಸ್ಟ್ರೆಸ್‌ಫುಲ್ ಜೀವನಶೈಲಿಗೆ (Lifestyle) ಹೆಚ್ಚು ಫೇಮಸ್ ಆಗಿದೆ. ದಿನಬೆಳಗಾದರೆ ಟ್ರಾಫಿಕ್‌ನಲ್ಲಿ ಒದ್ದಾಡಿ ಬೇಗ ಆಫೀಸ್ ಸೇರುವ ತವಕವಾದರೆ, ಸಂಜೆಯಾದರೆ ಸಾಕು ಮತ್ತೆ ಬೇಗ ಮನೆ ಸೇರುವ ತವಕ. ದಿನವಸ್ತುಗಳ ಬಳಕೆ ಹೆಚ್ಚಳ, ಮನೆ ಬಾಡಿಗೆ ಹೆಚ್ಚಳ, ಇಎಂಐ, ವೆಹಿಕಲ್ ಲೋನ್, ಆಫೀಸ್ ಟಾರ್ಗೆಟ್ ಅಂತ ಟೋಟಲಿ ತಲೆ ಚಿಟ್ಟು ಹೋಗುತ್ತದೆ. ಹೀಗಾಗಿಯೇ ರಿಲ್ಯಾಕ್ಸ್ ಆಗೋಣ ಅಂತ ಎಲ್ಲರೂ ದಿನದ ಕೊನೆಯಲ್ಲಿ ಸೋಷಿಯಲ್ ಮೀಡಿಯಾಗಳನ್ನು ಬಳಸುತ್ತಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್, ಡೇಟಿಂಗ್ ಆಪ್‌ಗಳನ್ನು ತಡರಾತ್ರಿ ವರೆಗೂ (Late night) ನೋಡುತ್ತಿರುತ್ತಾರೆ. ಹೌದು..ಇದು ನೂರಕ್ಕೆ ನೂರು ನಿಜ. ಅಧ್ಯಯನದಲ್ಲಿ (Study) ಈ ಮಾಹಿತಿ ಬಹಿರಂಗಗೊಂಡಿದೆ.
undefined
'ಬಣ್ಣಬಣ್ಣದ ಹೂಗಳ ನನ್ನೂರು, ಬೆಂಗಳೂರು..' 'ಗಾರ್ಡನ್ ಸಿಟಿ' ಕುರಿತಾಗಿ ಅದ್ಭುತ ಥ್ರೆಡ್ ಹಂಚಿಕೊಂಡ ಪ್ರಧಾನಿ!
91% ಜನರಿಂದ ಮಲಗುವ ಮೊದಲು ಗಂಟೆಗಟ್ಟಲೆ ಮೊಬೈಲ್ ಬಳಕೆ
ಬೆಂಗಳೂರು ನಿವಾಸಿಗಳಿಗೆ ಮಲಗುವ ಮುನ್ನ ಸ್ಮಾರ್ಟ್‌ಫೋನ್ ಬೇಕೇ ಬೇಕಂತೆ. ಹೆಚ್ಚಿನ ಬೆಂಗಳೂರಿನ ನಿವಾಸಿಗಳು ತಮ್ಮ ಮೊಬೈಲ್ ಫೋನ್‌ಗಳಿಂದ ಹೆಚ್ಚು ಅಡಿಕ್ಟ್ ಆಗಿದ್ದಾರೆ ಅನ್ನುತ್ತದೆ ಇತ್ತೀಚಿನ ಸಮೀಕ್ಷೆ. ಈ ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ 91% ಜನರು ಮಲಗುವ ಮೊದಲು ಹಾಸಿಗೆಯಲ್ಲಿ ಗಂಟೆಗಟ್ಟಲೆ ಮೊಬೈಲ್ ಬಳಸುತ್ತಾರಂತೆ. ಸುಮಾರು 38% ಜನರು ಸಾಮಾಜಿಕ ಮಾಧ್ಯಮವನ್ನು (Social media) ಬ್ರೌಸ್ ಮಾಡುತ್ತಾರಂತೆ ಮತ್ತು 29% ಜನರು ಕೆಲಸದಿಂದ ವಜಾ (Suspend)ಗೊಳಿಸುವುದರ ಬಗ್ಗೆ ಚಿಂತಿತರಾಗಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಾರಂತೆ.
ಬೆಂಗಳೂರಿನ ನಿವಾಸಿಗಳಿಗೆ ಮಲಗುವ ಮುನ್ನ ಸ್ಮಾರ್ಟ್‌ಫೋನ್ ಬೇಕು ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸ್ಕ್ರಾಲ್ ಮಾಡಿ ಸಮೀಕ್ಷೆ ಜಿಸಿಡಬ್ಲ್ಯು ಬಹಿರಂಗಪಡಿಸಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಬಹುಪಾಲು ಬೆಂಗಳೂರಿಗರು ಈಗ ತಮ್ಮ ಸ್ಮಾರ್ಟ್‌ಫೋನ್‌ಗಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಸಿಗೆ ತಯಾರಕ ವೇಕ್‌ಫಿಟ್ ಎಂಬ ಕಂಪೆನಿ ಫೆಬ್ರವರಿ 2022ರಿಂದ ಮಾರ್ಚ್ 2023ರ ವರೆಗೆ ಬೆಂಗಳೂರು ಮತ್ತು ರಾಷ್ಟ್ರದ ಉಳಿದ ಭಾಗಗಳಲ್ಲಿ ನಡೆಸಿದ "ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್" ಎಂಬ ನಿದ್ರೆಯ ಅಧ್ಯಯನದ ಫಲಿತಾಂಶಗಳಿಂದ ಈ ಅಂಕಿಅಂಶಗಳು ಬಂದಿವೆ. 10,000ಕ್ಕೂ ಹೆಚ್ಚು ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ನಮಗೇ ಗೊತ್ತಿಲ್ಲದ ನಮ್ಮ ಬೆಂಗಳೂರಿನ 10 ವಿಶೇಷತೆಗಳು, ನಿಮಗ್ಗೊತ್ತಿತ್ತಾ?
13 ತಿಂಗಳ ಸಮೀಕ್ಷೆಯು 61% ಮಂದ ರಾತ್ರಿ 11 ಗಂಟೆಯ ನಂತರ ಮಲಗಲು ಹೋಗುತ್ತಾರೆ ತೋರಿಸಿದೆ, ಆದರೆ ಸೂಕ್ತವಾದ ಮಲಗುವ ಸಮಯ ರಾತ್ರಿ 10 ಗಂಟೆಗೆ ಎಂದು ಹೇಳಲಾಗುತ್ತದೆ. 29% ರಷ್ಟು ಜನರು ಬೆಳಗ್ಗೆ 7ರಿಂದ 8ರ ಸಮಯದಲ್ಲಿ ಎಚ್ಚರಗೊಳ್ಳುತ್ತಾರೆ ಮತ್ತು 60%ರಷ್ಟು ತೂಕಡಿಕೆಯ ಸಮಸ್ಯೆಯನ್ನು ಅನುಭವಿಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ, ಸುಮಾರು 34% ರಷ್ಟು ಜನರು ಬೆಳಿಗ್ಗೆ ಉಿಲ್ಲಾಸವನ್ನು ಅನುಭವಿಸುವುದಿಲ್ಲ ಎಂದು ತಿಳಿದುಬಂದಿದೆ.
20% ರಷ್ಟು ಮಂದಿ ಉತ್ತಮ ಹಾಸಿಗೆ ತಮ್ಮ ನಿದ್ರೆಗೆ ಸಹಾಯ ಮಾಡುತ್ತದೆ ಎಂದು ಭಾವಿಸಿದರೆ, 40% ಪ್ರತಿಕ್ರಿಯಿಸಿದವರು ತಮ್ಮ ಮಲಗುವ ಕೋಣೆ ಸುತ್ತಮುತ್ತಲಿನ ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ವಿವಿಧ ಆರೋಗ್ಯ ತಜ್ಞರ ಪ್ರಕಾರ ವಯಸ್ಕರಿಗೆ ದಿನಕ್ಕೆ 6-7 ಗಂಟೆಗಳ ನಿದ್ದೆ ಬೇಕು.