
ಭಯ ಎನ್ನುವುದು ಮನುಷ್ಯನ ಸ್ವಾಭಾವಿಕ ಗುಣ. ಎಲ್ಲರೂ ಒಂದೊಂದು ವಿಷಯಕ್ಕೆ ಗಾಬರಿಗೊಳ್ಳುತ್ತಾರೆ. ಪುಟ್ಟ ಮಗವನ್ನು ನಾವು ಮೇಲಕ್ಕೆ ಹಾರಿಸಿ ಆಡಿಸಿದರೆ ಅದು ಕೂಡ ಭಯದಿಂದ ಅಳುತ್ತದೆ. ಕೆಲವರಿಗೆ ಹಾರರ್ ಮೂವಿಗಳನ್ನು ನೋಡಿ ಭಯವಾಗುತ್ತದೆ, ಕೆಲವರಿಗೆ ಎತ್ತರದ ಪ್ರದೇಶಗಳೆಂದರೆ ಭಯ, ಮಕ್ಕಳಿಗೆ ಪರೀಕ್ಷೆಯ ಭಯ, ಹಲವು ಮಂದಿ ಹಾವು ಮುಂತಾದವನ್ನು ಕಂಡರೆ ಹೆಚ್ಚು ಭಯಭೀತರಾಗುತ್ತಾರೆ. ರಾತ್ರಿ ಬೀಳುವ ಕೆಟ್ಟ ಕನಸಿಗೆ ಕೂಡ ಹೆದರುವ ಮಂದಿ ಇದ್ದಾರೆ. ಹಾಗಾಗಿ ಭಯ ಕೂಡ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ.
ಧೈರ್ಯ (Courage) ಕಡಿಮೆ ಇರುವ ಮಂದಿ ಚಿಕ್ಕ ಚಿಕ್ಕ ವಿಷಯಕ್ಕೂ ಟೆನ್ಶನ್ (Tension) ಆಗ್ತಾರೆ, ಹೆದರುತ್ತಾರೆ. ಹೀಗೆ ವ್ಯಕ್ತಿಗಳು ಚಿಕ್ಕ ವಿಷಗಳಿಗೆ ಪ್ಯಾನಿಕ್ ಅಟ್ಯಾಕ್ (Panic Attack) ಆಗುವುದರಿಂದ ಅವರು ತಮ್ಮನ್ನು ತಾವು ಹತೋಟಿಯಲ್ಲಿಡಲು ಸಾಧ್ಯವಾಗುವುದಿಲ್ಲ. ಇದರಿಂದ ಅವರಲ್ಲಿ ಹೆದರಿಕೆಯ ಮನೋಭಾವ ಬೆಳೆಯುತ್ತದೆ. ಇಂತಹ ಪ್ಯಾನಿಕ್ ಅಟ್ಯಾಕ್ ನಿಂದ ಜೀವಾಪಾಯ ಇಲ್ಲದೇ ಇದ್ದರು ಕೂಡ ಇದು ವ್ಯಕ್ತಿಯ ಜೀವನದ ಮೇಲೆ ದುಷ್ಪ್ರಭಾವ ಬೀರುತ್ತದೆ.
HEALTHY FOOD: ಬಹುಪಯೋಗಿ ಸಾಸಿವೆ ಮಾರಣಾಂತಿಕವೂ ಹೌದು
ಪ್ಯಾನಿಕ್ ಅಟ್ಯಾಕ್ ಹೇಗೆ ಆಗುತ್ತೆ? : ವೈಜ್ಞಾನಿಕವಾಗಿ ಹೇಳಬೇಕೆಂದರೆ ಪ್ಯಾನಿಕ್ ಅಟ್ಯಾಕ್ ಆದಾಗ ಶರೀರ ಪ್ಲೈಟ್ ಮೋಡ್ ಗೆ ಹೋಗುತ್ತದೆ. ವ್ಯಕ್ತಿಗೆ ಯಾವುದೋ ಅಹಿತಕರ ಘಟನೆಯ ಬಗ್ಗೆ ಆತಂಕವಿದ್ದಾಗ ಪ್ಯಾನಿಕ್ ಡಿಸಾರ್ಡರ್ ಅಥವಾ ಫೋಬಿಯಾ ರೂಪದಲ್ಲಿ ಕಾಣಿಸಿಕೊಳ್ಳುತ್ತೆ. ಇದು ಎಂಕ್ಸೈಟಿ ಡಿಸಾರ್ಡರ್ ನ ಒಂದು ಪ್ರಕಾರ ಕೂಡ ಆಗಿದೆ.
ಪ್ಯಾನಿಕ್ ಅಟ್ಯಾಕ್ ನ ಲಕ್ಷಣಗಳು : ಪ್ಯಾನಿಕ ಅಟ್ಯಾಕ್ ನ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಇದು ಹೆಚ್ಚು ಅಪಾಯಕಾರಿಯಲ್ಲ. ಇದು ಕೇವಲ 10 ರಿಂದ 15 ನಿಮಿಷಗಳು ಮಾತ್ರ ಇರುತ್ತದೆ. ಪ್ಯಾನಿಕ ಅಟ್ಯಾಕ್ ನ ಲಕ್ಷಣಗಳು ಹೀಗಿವೆ..
ಸಿಹಿತಿಂಡಿ ಮೇಲಿರುವ ಬೆಳ್ಳಿಯ ಲೇಪನ ಮಾಂಸಾಹಾರಿಯೇ?
• ಹೃದಯ ಬಡಿತ ಜೋರಾಗುವುದು
• ಉಸಿರಾಟದ ತೊಂದರೆ ಅಥವಾ ಯಾರೋ ನಿಮ್ಮ ಕುತ್ತಿಗೆಯನ್ನು ಹಿಡಿದು ಉಸಿರುಗಟ್ಟಿದಂತ ಅನುಭವ
• ಪ್ರಜ್ಞೆ ತಪ್ಪುವಂತೆ ಅನಿಸುವುದು
• ಕೈ ಕಾಲುಗಳು ಮರಗಟ್ಟಿದಂತಾಗುವುದು
• ಕೈ ಕಾಲುಗಳಲ್ಲಿ ಬೆವರು
• ಹಲ್ಲು ಕಡಿಯುವುದು ಮತ್ತು ಕಿವಿಯಲ್ಲಿ ಗಂಟೆಯ ತರಹ ಸಪ್ಪಳ ಕೇಳಿಸುವುದು
ಪ್ಯಾನಿಕ್ ಅಟ್ಯಾಕ್ ಲಕ್ಷಣಗಳು ಕಾಣಿಸಿಕೊಂಡಾಗ ಹೀಗೆ ಮಾಡಿ :
• ನಿಮಗೆ ಇಷ್ಟವಾಗುವ ಪುಸ್ತಕವನ್ನ ಓದಿ
• ನಿಮ್ಮ ಸುತ್ತಲು ಕೇಳಿಸುತ್ತಿರುವ ಟ್ರಾಫಿಕ್ ಗದ್ದಲ, ಹೆಡ್ ಫೋನ್ ಮ್ಯೂಸಿಕ್, ಫೋನ್ ರಿಂಗ್ ಟೋನ್ ಮುಂತಾದವುಗಳ ಕಡೆ ಗಮನ ಕೊಡಿ
• ಇಷ್ಟವಾದ, ಮನಸ್ಸಿಗೆ ಖುಷಿಕೊಡುವ ಸಂಗೀತ ಕೇಳಿ
• ದೀರ್ಘವಾದ ಉಸಿರನ್ನು ತೆಗೆದುಕೊಂಡು ನಿಧಾನವಾಗಿ ಬಿಡಿ. ಇದರಿಂದ ಹೃದಯಬಡಿತ ಸಾಮಾನ್ಯವಾಗುತ್ತೆ.
• ಪ್ಯಾನಿಕ್ ಲಕ್ಷಣ ಕಂಡುಬಂದ ಸಮಯದಲ್ಲಿ ಮೊದಲು ಒಂದು ಗ್ಲಾಸ್ ತಣ್ಣನೆಯ ನೀರು ಕುಡಿಯಿರಿ. ಇದರಿಂದಲೂ ಶರೀರ ಸುಸ್ಥಿತಿಗೆ ಬರುತ್ತದೆ.
• ಯಾವುದೋ ಒಂದು ವಿಚಾರದ ಬಗ್ಗೆ ನಿರಂತರವಾಗಿ ವಿಚಾರ ಮಾಡಿದಾಗಲೂ ಕೂಡ ಪ್ಯಾನಿಕ ಅಟ್ಯಾಕ್ ಆಗುತ್ತೆ. ಅಂತಹ ಸಮಯದಲ್ಲಿ ಉಸಿರನ್ನು ಬಿಗಿಹಿಡಿದುಕೊಂಡು ನಿಮ್ಮ ವಿಚಾರವನ್ನು ಕ್ರಮೇಣ ಕಡಿಮೆ ಮಾಡುತ್ತಾ ನಕಾರಾತ್ಮಕ ವಿಚಾರದಿಂದ ಹೊರಬನ್ನಿ.
• ಸುತ್ತ ಮುತ್ತಲಿರುವ ಜನರ ಕಡೆಗೆ ಗಮನ ಕೊಡಿ. ಇದರಿಂದ ನೀವು ನಿಮ್ಮ ವಿಚಾರದಿಂದ ಹೊರಬರಲು ಸಹಾಯವಾಗುತ್ತೆ ಮತ್ತು ನಿಮಗೆ ನಾರ್ಮಲ್ ಪೀಲ್ ಉಂಟಾಗುತ್ತೆ.
ಮಾನಸಿಕ ಒತ್ತಡದಿಂದ ಹೊರಬರಲು ಈ ಆಹಾರ ಸೇವಿಸಿ
• ಬಾದಾಮಿ ಸೇವನೆಯಿಂದ ಪ್ಯಾನಿಕ್ ಅಟ್ಯಾಕ್ ಅನ್ನು ನಿಲ್ಲಿಸಬಹುದು.
• ಗ್ರೀನ್ ಟೀಯಲ್ಲಿರುವ ಎಂಟಿ ಆಕ್ಸಿಡೆಂಟ್ ಮತ್ತು ಪಾಲಿಫಿನಿಕ್ ಒತ್ತಡವನ್ನು ದೂರಮಾಡುತ್ತೆ.
• ಪ್ಯಾನಿಕ್ ಅಟ್ಯಾಕ್ ಸಮಯದಲ್ಲಿ ಕಿತ್ತಳೆ ಹಣ್ಣು ತಿನ್ನುವುದು ಬಹಳ ಪ್ರಯೋಜನಕಾರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.