
ಜಿನೇವಾ: ಪೂರ್ವರೋಗಗಳಿಂದ ಬಳಲುತ್ತಿರುವವರಿಗೆ, ಆರೋಗ್ಯ ಕಾರ್ಯಕರ್ತರಿಗೆ 6 ಅಥವಾ 12 ತಿಂಗಳ ಬಳಿಕ ಮತ್ತೊಂದು ಬೂಸ್ಟರ್ ಡೋಸ್ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯ ‘ಲಸಿಕಾಕರಣ ತಜ್ಞರ ಸಮಿತಿ’ ಸಲಹೆ ನೀಡಿದೆ.ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಹೆಚ್ಚುತ್ತಿರುವ ನಡುವೆಯೇ ಈ ಸಲಹೆ ಬಂದಿದೆ. ನಿರ್ದಿಷ್ಟಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಯುವಕರು, ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಬೂಸ್ಟರ್ ಡೋಸ್ ನೀಡಬೇಕು. ಒಂದು ವೇಳೆ ಇವರು ಕೋವಿಡ್‌ಗೆ ತುತ್ತಾದರೆ ಹೆಚ್ಚಿನ ತೊಂದರೆಗೆ ತುತ್ತಾಗಲಿದ್ದಾರೆ ಎಂದು ಸಮಿತಿ ಹೇಳಿದೆ.
ಅಲ್ಲದೇ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ಯುವಕರಿಗೆ ಈಗಾಗಲೇ ನೀಡಿರುವ ಬೂಸ್ಟರ್ ಡೋಸ್ ಸಾಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಹಾಗೆಯೇ 6 ತಿಂಗಳಿನಿಂದ 17 ವರ್ಷದೊಳಗಿನವರನ್ನು ಲಸಿಕೆ (Vaccine) ನೀಡಲು ಕೊನೆಯಲ್ಲಿ ಪರಿಗಣಿಸಹುದು ಎಂದು ಸಮಿತಿ ಹೇಳಿದೆ.
COVID-19 : ಆಪ್ತರನ್ನು ಗುರುತಿಸೋದೂ ಕಷ್ಟ! ಕೊರೊನಾದಿಂದ ಕಾಡ್ತಿದೆ ಮತ್ತೊಂದು ಸಮಸ್ಯೆ
ದೆಹಲಿಯಲ್ಲಿ 2994 ಹೊಸ ಕೋವಿಡ್ ಕೇಸು: 9 ಸೋಂಕಿತರ ಸಾವು
ಕೋವಿಡ್ ಸೋಂಕಿನ ಅಬ್ಬರ ಮುಂದುವರಿದಿದ್ದು, ಶನಿವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2994 ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ, ಕೇರಳದ 2 ಹಳೆಯ ಸಾವಿನ (Death) ಪ್ರಕರಣ ಸೇರಿ 9 ಮಂದಿ ಸಾವಿಗೀಡಾಗಿದ್ದಾರೆ. ಈ ನಡುವೆ, ಗುಣಮುಖರ ಸಂಖ್ಯೆ ಕಡಿಮೆ ಇರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 16,354ಕ್ಕೆ ಏರಿದೆ. ಪಾಸಿಟಿವಿಟಿ ದರ ಅಪಾಯಕಾರಿ (Dangerous) ಎನ್ನಬಹುದಾದ ಶೇ.2.09ರಷ್ಟು ದಾಖಲಾಗಿದ್ದು, ವಾರದ ಪಾಸಿಟಿವಿಟಿ ಕೂಡ ಶೇ.2.03ಕ್ಕೆ ಏರಿದೆ. ಸಕ್ರಿಯ ಪ್ರಕರಣ ಸಂಖ್ಯೆ ಒಟ್ಟು ಸೋಂಕಿನ ಶೇ.0.04ರಷ್ಟಿದೆ. ಶೇ.98.77 ಜನರು ಸೋಂಕಿನಿಂದ ಈವರೆಗೆ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 220.66 ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಿಸಲಾಗಿದೆ.
ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಕೊರೋನಾ ಸೋಂಕಿತ ಪ್ರಕರಣ
ನಗರದಲ್ಲಿ ಶನಿವಾರವೂ ನೂರಕ್ಕೂ ಹೆಚ್ಚು ಕೊರೋನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಕಳೆದ 24 ಗಂಟೆಗಳಲ್ಲಿ 146 ಜನರಲ್ಲಿ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ದರ ಶೇ.3.54 ದಾಖಲಾಗಿದೆ. ಸೋಂಕಿನಿಂದ 60 ಮಂದಿ ಗುಣಮುಖರಾಗಿದ್ದು, ಮೃತಪಟ್ಟ ವರದಿಯಾಗಿಲ್ಲ.
ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ: ಹೊಸ ಅಲೆಯ ಮುನ್ಸೂಚನೆಯಾ?
ಸದ್ಯ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 637ಕ್ಕೆ ಏರಿಕೆಯಾಗಿದೆ. ಈ ಪೈಕಿ 41 ಮಂದಿ ಆಸ್ಪತ್ರೆಯಲ್ಲಿದ್ದು, 2 ಐಸಿಯು ವೆಂಟಿಲೇಟರ್, 6 ಮಂದಿ ಐಸಿಯು ಮತ್ತು ಓರ್ವ ಎಚ್‌ಡಿಯು ಮತ್ತು 32 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3456 ಮಂದಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು 1,472 ರಾರಯಂಟಿಜನ್ ಮತ್ತು 1,984 ಆರ್‌ಟಿಪಿಸಿಆರ್ ಪರೀಕ್ಷೆಗಳು ನಡೆದಿವೆ.
ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡ 68 ಮಂದಿಯ ಪೈಕಿ 15 ಮಂದಿ ಮೊದಲ ಡೋಸ್, 11 ಮಂದಿ ಎರಡನೇ ಡೋಸ್ ಮತ್ತು 42 ಮಂದಿ ಬೂಸ್ಟರ್ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಶುಕ್ರವಾರ ದಾಖಲಾಗಿದ್ದ 170 ಸೋಂಕಿತ ಪ್ರಕರಣ ಪ್ರಸಕ್ತ ವರ್ಷದಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೋವಿಡ್ ಕಾರ್ಮೋಡ, ದೇಶದಲ್ಲಿ 3,00 ಪ್ರಕರಣ ಪತ್ತೆ!
ತಮಿಳುನಾಡಿನ ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯ
ದೇಶದಲ್ಲಿ ದಿನೇ ದಿನೇ ಕೋವಿಡ್ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಹಲವು ರಾಜ್ಯಗಳು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಏ.1ರಿಂದ ತಮಿಳುನಾಡು ಸರ್ಕಾರ ರಾಜ್ಯದ ಆಸ್ಪತ್ರೆಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದೆ. ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗೆ ಭೇಟಿ ನೀಡುವವರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ತಮಿಳುನಾಡಿನಲ್ಲಿ ಎಕ್ಸ್‌ಬಿಬಿ ಮತ್ತು ಬಿ.ಎ.2 ಹೆಚ್ಚಿನ ಪ್ರಮಾಣದಲ್ಲಿ ಹಬ್ಬುತ್ತಿದೆ. ಹಾಗಾಗಿ ಮಾಸ್ಕ್ ಧರಿಸುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸಲು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಕರೆ ನೀಡಿದ್ದಾರೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.