Ayurvedic Tips : ದೀಪಾವಳಿಯಲ್ಲಿ ಬೆಲ್ಲ ಯಾಕೆ ತಿನ್ಬೇಕು ಗೊತ್ತಾ?

By Suvarna News  |  First Published Oct 20, 2022, 4:22 PM IST

ದೀಪಾವಳಿ ಅಂದ್ರೆ ಸಿಹಿ.. ಸ್ವೀಟ್ ಇಲ್ಲದೆ ಹಬ್ಬವಿಲ್ಲ. ಆದ್ರೆ ಸಕ್ಕರೆ ತಿಂದ್ರೆ ಆರೋಗ್ಯಕ್ಕೆ ಹಾಳು. ಅದೇ ಸಕ್ಕರೆ ಬದಲು ಸ್ವಲ್ಪ ಬೆಲ್ಲ ಸೇವನೆ ಮಾಡಿದ್ರೆ ನಿಮ್ಮ ಆರೋಗ್ಯ ಫಿಟ್ ಆಂಡ್ ಫೈನ್ ಆಗಿರುತ್ತೆ. ದೀಪಾವಳಿಯಲ್ಲಿ ಬೆಲ್ಲ ಏಕೆ ಮತ್ತೆ ಹೇಗೆ ತಿನ್ಬೇಕು ಅನ್ನೋದನ್ನು ನಾವು ಹೇಳ್ತೇವೆ.
 


ದೀಪಾವಳಿ ಅಂದ್ರೆ ಮನೆಗೊಂದಿಷ್ಟು ಸಿಹಿ ತಿಂಡಿ ಬಂದಿರುತ್ತದೆ. ಒಂದಾದ್ಮೇಲೆ ಒಂದು ಸಿಹಿ ತಿನ್ನೋದು, ಮನೆ ತುಂಬ ದೀಪ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸೋದು ಸಾಮಾನ್ಯ ಸಂಗತಿ. ದೀಪಾವಳಿ ದಿನ ಸಕ್ಕರೆಯಿಂದ ಮಾಡಿದ ಸಿಹಿ ಬದಲು ಬೆಲ್ಲ ತಿನ್ನಿ ಅಂದ್ರೆ ನಿಮಗೆ ಅಚ್ಚರಿಯಾಗಬಹುದು. ಬೆಲ್ಲದ ಉಪಯೋಗ ಬಹುತೇಕ ಎಲ್ಲರಿಗೂ ತಿಳಿದಿದೆ. ಬೆಲ್ಲ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ದೀಪಾವಳಿಯಲ್ಲಿ ಬೆಲ್ಲ ಸೇವನೆ ಮಾಡೋದ್ರಿಂದ ಮತ್ತಷ್ಟು ಲಾಭವಿದೆ.

ದೀಪಾವಳಿ (Diwali) ಚಳಿಗಾಲದಲ್ಲಿ ಬರುವ ಹಬ್ಬ. ಈ ವೇಳೆ ವಾತಾವರಣ ಕೂಲ್ ಕೂಲ್ ಆಗಿರುತ್ತದೆ. ಹಾಗೆ ಹಬ್ಬ (Festival) ದಲ್ಲಿ ಪಟಾಕಿ ಸಿಡಿಸುವುದ್ರಿಂದ ವಾತಾವರಣ ಮತ್ತಷ್ಟು ಕಲುಷಿತಗೊಂಡಿರುತ್ತದೆ. ಇದ್ರಿಂದಾಗಿ ಅಸ್ತಮಾ (Asthma) ಸೇರಿದಂತೆ ಉಸಿರಾಟ (Breathing) ದ ಸಮಸ್ಯೆ ಅನೇಕರಿಗೆ ಕಾಡುತ್ತದೆ. ದೀಪಾವಳಿಯಲ್ಲಿ ಬೆಲ್ಲ ಸೇವನೆ ಮಾಡೋದ್ರಿಂದ ಅಸ್ತಮ ಹಾಗೂ ಉಸಿರಾಟಕ್ಕೆ ಸಂಬಂಧಿಸಿದ ರೋಗದಿಂದ ರಕ್ಷಣೆ ಪಡೆಯಬಹುದು. ನೀವು ಮಕ್ಕಳಿಗೆ ಕೂಡ ಈ ಸಂದರ್ಭದಲ್ಲಿ ಬೆಲ್ಲ ನೀಡಬಹುದು. ಬೆಲ್ಲ ಚಳಿಯಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ. ದೀಪಾವಳಿಯಲ್ಲಿ ಎಷ್ಟು ಬೆಲ್ಲ ತಿನ್ನಬೇಕು ಮತ್ತೆ ಹೇಗೆ ತಿನ್ನಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

Latest Videos

undefined

ಯಾರು ಬೆಲ್ಲ ಸೇವನೆ ಮಾಡ್ಬಾರದು ? : ಬೆಲ್ಲ ಎಷ್ಟು ತಿನ್ನಬೇಕು ಎನ್ನುವ ಮೊದಲು ಯಾರು ಬೆಲ್ಲ ತಿನ್ನಬಾರದು ಎಂಬುದನ್ನು ತಿಳಿಯೋಣ. ಮಧುಮೇಹಿ (Diabetic) ಗಳು ಮತ್ತು ಅಸಮತೋಲಿತ ಪಿತ್ತ ದೋಷವನ್ನು ಹೊಂದಿರುವ ವ್ಯಕ್ತಿಗಳು ಬೆಲ್ಲವನ್ನು ತಿನ್ನಬಾರದು. 

ತೂಕ ಇಳಿಸೋದ್ರಿಂದ, ಒತ್ತಡ ನಿವಾರಿಸೋವರೆಗೆ ಕಿಕ್ ಬಾಕ್ಸಿಂಗ್ ಬೆಸ್ಟ್

ಬೆಲ್ಲವನ್ನು ಯಾವಾಗ ಸೇವನೆ ಮಾಡಬೇಕು ? : ಮೇಲೆ ಹೇಳಿದ ಆರೋಗ್ಯ (Health) ಸಮಸ್ಯೆ ನಿಮಗಿಲ್ಲ ಎನ್ನುವುದಾದ್ರೆ ನೀವು ರಾತ್ರಿ ಮಲಗುವ ಮುನ್ನ ಬೆಲ್ಲವನ್ನು ತಿನ್ನಬೇಕು. ನೀವು ಪ್ರತಿ ದಿನ ರಾತ್ರಿ 10 ಗ್ರಾಂ ಬೆಲ್ಲವನ್ನು ಸೇವನೆ ಮಾಡಬೇಕು. ಇದನ್ನು ನೀವು ಹಾಲಿ (Milk) ನೊಂದಿಗೆ ಬೆರೆಸಿ ಕುಡಿಯುವುದು ಒಳ್ಳೆಯದು.

ಬೆಲ್ಲ ಸೇವನೆಯಿಂದ ಆಗುವ ಲಾಭಗಳು : 

1. ಮಾಲಿನ್ಯದಿಂದ ಕಾಡುವ ಅನಾರೋಗ್ಯಕ್ಕೆ ಮದ್ದು : ಬೆಲ್ಲ ನಮ್ಮ ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮಾಲಿನ್ಯದ ಕಣಗಳು ಹಾಗೂ ವಿಷವನ್ನು ದೇಹದಿಂದ ಹೊರಹಾಕಿ, ದೇಹವನ್ನು ನಿರ್ವಿಷಗೊಳಿಸುವ ಕೆಲಸವನ್ನು ಬೆಲ್ಲ ಮಾಡುತ್ತದೆ. ಮಾಲಿನ್ಯದಿಂದ ನಿಮ್ಮ ದೇಹ ಸುರಕ್ಷಿತವಾಗಿರಬೇಕೆಂದು ಬಯಸುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಜೊತೆ ಬೆಲ್ಲವನ್ನು ಸೇವಿಸಬೇಕು ಎನ್ನುತ್ತಾರೆ ಆಯುರ್ವೇದ ತಜ್ಞರು.

2. ಅಸ್ತಮಾ ರೋಗಕ್ಕೆ ಒಳ್ಳೆಯ ಔಷಧಿ ಬೆಲ್ಲ : ಬೆಲ್ಲದಲ್ಲಿ ಅಲರ್ಜಿ ಕಡಿಮೆ ಮಾಡುವ ಗುಣವಿದೆ. ದೀಪಾವಳಿ ಸಂದರ್ಭದಲ್ಲಿ ವಾತಾವರಣ ಹದಗೆಡುತ್ತದೆ. ಇದ್ರಿಂದ ಅಸ್ತಮಾ ಕಾಡುತ್ತದೆ. ಅಸ್ತಮ ಕೂಡ ಒಂದು ಅಲರ್ಜಿಯಾಗಿದೆ. ಹಾಗಾಗಿ ಅಸ್ತಮ ರೋಗಿಗಳು ಪ್ರತಿ ದಿನ ಬೆಲ್ಲವನ್ನು ಸೇವನೆ ಮಾಡ್ಬೇಕು.

3. ಚಳಿಯಿಂದ ರಕ್ಷಣೆ ನೀಡುತ್ತೆ ಬೆಲ್ಲ : ಚಳಿಗಾಲದಲ್ಲಿ ಶೀತದ ಸಮಸ್ಯೆ ಹೆಚ್ಚಾಗುತ್ತದೆ. ಮಕ್ಕಳು ಹಾಗೂ ವೃದ್ಧರಿಗೆ ಶೀತ ಕಾಡುವುದು ಹೆಚ್ಚು. ರಕ್ತದೊತ್ತಡ ಹೊಂದಿರುವ ಜನರಿಗೆ ಹೆಚ್ಚು ಶೀತ ಕಾಡುತ್ತದೆ. ಈ ಸಂದರ್ಭದಲ್ಲಿ ಬೆಲ್ಲ ಸೇವನೆ ಮಾಡಿದ್ರೆ ಅದು ರಕ್ತದ ಪೂರೈಕೆಯನ್ನು ಹೆಚ್ಚು ಮಾಡುತ್ತದೆ. ಇದ್ರಿಂದ ದೇಹ ಬೆಚ್ಚಗಾಗುತ್ತದೆ.  

Health Care: ತೂಕ ಇಳಿಬೇಕಂತ ಸಿಕ್ಕಾಪಟ್ಟೆ ಗ್ರೀನ್ ಟೀ ಕುಡಿಬೇಡಿ

4. ಕೆಮ್ಮು – ನೆಗಡಿ ಕಾಡ್ತಿದ್ದರೆ ಬೆಲ್ಲ ಬಳಸಿ : ಆಯುರ್ವೇದದ ಪ್ರಕಾರ ಕೆಮ್ಮು ಮತ್ತು ಶೀತಕ್ಕೆ ಬೆಲ್ಲ ಅತ್ಯುತ್ತಮ ಔಷಧಿಯಾಗಿದೆ. ನೆಗಡಿ ಹಾಗೂ ಕೆಮ್ಮಿನ ಸಂದರ್ಭದಲ್ಲಿ ನಿಮಗೆ ವಾಕರಿಕೆ ಕಾಣಿಸಿಕೊಂಡರೆ ಉಗುರುಬೆಚ್ಚನೆಯ ನೀರಿಗೆ ಬೆಲ್ಲವನ್ನು ಸೇರಿಸಿ ಸೇವನೆ ಮಾಡಬೇಕು ಎನ್ನುತ್ತಾರೆ ತಜ್ಞರು. 

click me!