Oral Health: ವಯಸ್ಸಾಗೋ ಮೊದಲೇ ಹಲ್ಲು ಬೀಳ್ಬಾರದು ಅಂದ್ರೆ ಈ ಅಭ್ಯಾಸ ಬಿಡಿ

By Suvarna News  |  First Published Oct 19, 2022, 3:24 PM IST

ಬಾಯಿ ಆರೋಗ್ಯ ಬಹಳ ಮುಖ್ಯ. ಬಾಯಿ ಸರಿಯಾಗಿದ್ರೆ ಬಹುತೇಕ ರೋಗ ನಮ್ಮಿಂದ ದೂರವಿರುತ್ತದೆ. ಬಾಯಿ ಕ್ಲೀನಿಂಗ್ ಎಂಬ ವಿಷ್ಯ ಬಂದಾಗ ನಾವು ಹಲ್ಲುಜ್ಜೋದು ಮಾತ್ರವಲ್ಲ ಬಾಯಿಗೆ ಏನೇನ್ ಹಾಕ್ತೀವಿ ಎಂಬುದನ್ನು ಕೂಡ ನೋಡಬೇಕು. 
 


ಆರೋಗ್ಯ ಸರಿಯಾಗಿಲ್ಲ ಎಂದಾಗ ವೈದ್ಯರು ಮೊದಲು ಪರೀಕ್ಷೆ ಮಾಡೋದು ನಮ್ಮ ಬಾಯಿಯನ್ನು. ಅಂದ್ರೆ ನಮ್ಮ ಬಾಯಿ ನಮ್ಮ ಆರೋಗ್ಯವನ್ನು ಹೇಳುತ್ತೆ ಅಂದಾಯ್ತು. ಹಲ್ಲು, ಒಸಡು ಹಾಗೂ ನಾಲಿಗೆ ಶುಚಿತ್ವ ಬಹಳ ಮುಖ್ಯ. ಬಾಯಿ ಶುಚಿಯಾಗಿಲ್ಲ, ಅದ್ರ ಆರೋಗ್ಯ ಹದಗೆಟ್ಟಿದ್ರೆ ಅದು ನಮ್ಮ ಆಂತರಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬಾಯಿ ಆರೋಗ್ಯ ಕಾಪಾಡುವುದು ಅಂದ್ರೆ ಬಾಯಿ ತೊಳೆಯುವುದು, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮಾತ್ರವಲ್ಲ.

ಒಸಡಿನ ಆರೋಗ್ಯ ಕಾಪಾಡಿಕೊಳ್ಳುವುದು, ಬ್ಯಾಕ್ಟೀರಿಯಾದಿಂದ ಬಾಯಿಯನ್ನು ರಕ್ಷಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಬಾಯಿ ಆರೋಗ್ಯ ನಮ್ಮ ದೈನಂದಿನ ಜೀವನವನ್ನು ಅವಲಂಭಿಸಿದೆ. ನಮ್ಮ ಕೆಲ ಅಭ್ಯಾಸಗಳು ನಮ್ಮ ಬಾಯಿ ಆರೋಗ್ಯವನ್ನು ಹದಗೆಡಿಸುವ ಮೂಲಕ ನಮ್ಮ ಆಂತರಿಕ ಆರೋಗ್ಯವನ್ನು ಹಾಳು ಮಾಡುತ್ತವೆ. ನಾವಿಂದು ಯಾವ ನಮ್ಮ ಅಭ್ಯಾಸ ನಮ್ಮ ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಹೇಳ್ತೇವೆ.

Latest Videos

undefined

ಹಲ್ಲಿ (Tooth) ನ ಆರೋಗ್ಯ (Health) ಹದಗೆಡಿಸುತ್ತೆ ನಿಮ್ಮ ಈ ಅಭ್ಯಾಸ : 

ಹಲ್ಲು ಕಡಿಯುವ ಅಭ್ಯಾಸ : ಅಮೆರಿಕನ್ ಡೆಂಟಲ್ ಅಸೋಸಿಯೇಷನ್‌ನ ವಕ್ತಾರ ಆಲಿಸ್ ಬೊಘೋಸಿಯನ್ ಪ್ರಕಾರ, ಹಲ್ಲು ಕಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅನೇಕರು ನಿದ್ದೆ ಮಾಡುವಾಗ ಹಲ್ಲು ಕಡಿಯುತ್ತಾರೆ. ಒಂದು ಹಲ್ಲಿಗೆ ಇನ್ನೊಂದು ಹಲ್ಲನ್ನು ತಿಕ್ಕುತ್ತಾರೆ. ಇದ್ರಿಂದ ಶಬ್ಧ ಬರುತ್ತದೆ. ಹೀಗೆ ಮಾಡುವುದರಿಂದ ಹಲ್ಲು ಹಾಳಾಗುತ್ತದೆ. ಹಲ್ಲಿನಲ್ಲಿ ಕ್ಯಾವಿಟಿ (Cavity) ಕಾಣಿಸಿಕೊಳ್ಳುತ್ತದೆ. ಹಾಗಾಗಿ ಹಲ್ಲು ಕಡಿಯುವ ಅಭ್ಯಾಸ ಬಿಡಿ ಎನ್ನುತ್ತಾರೆ ತಜ್ಞರು.

ಗಟ್ಟಿಯಾಗಿ ಹಲ್ಲುಜ್ಜಬೇಡಿ : ದಿನಕ್ಕೆ ಎರಡು ಬಾರಿ ಬ್ರೆಷ್ ಮಾಡುವುದು ಒಳ್ಳೆಯ ಅಭ್ಯಾಸ. ಇದ್ರಿಂದ ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಆದ್ರೆ ಹಲ್ಲನ್ನು ಪದೇ ಪದೇ ಉಜ್ಜಬಾರದು. ಹಾಗೆಯೇ ಗಟ್ಟಿಯಾಗಿ ಹಲ್ಲುಜ್ಜಬಾರದು. ಕೆಲವರು ಹಲ್ಲು ಕ್ಲೀನ್ ಆಗ್ಲಿ ಎನ್ನುವ ಕಾರಣಕ್ಕೆ ಅದಕ್ಕೆ ಒತ್ತಡ ಹಾಕ್ತಾರೆ. ಇದ್ರಿಂದ ಒಸಡಿಗೆ ಅಪಾಯವನ್ನುಂಟು ಮಾಡುತ್ತದೆ. ಹಲ್ಲಿನ ಬೇರು ಸಡಿಲವಾಗುತ್ತದೆ. ಇದ್ರಿಂದ ಹಲ್ಲಿನ ಸೂಕ್ಷ್ಮತೆ ಹೆಚ್ಚಾಗುತ್ತದೆ. ಬ್ಯಾಕ್ಟೀರಿಯಾ ದಾಳಿ ಸುಲಭವಾಗುತ್ತದೆ.

ಐಸ್ ತಿನ್ಬೇಡಿ : ಬೇಸಿಗೆ ಬಂತೆಂದ್ರೆ ಎಲ್ಲರೂ ಕೂಲ್ ಆಗಿರಲು ಇಷ್ಟಪಡ್ತಾರೆ. ಅನೇಕರು ಐಸ್ ಬಾಯಲ್ಲಿಟ್ಟುಕೊಳ್ತಾರೆ. ಇಲ್ಲವೆ ತಣ್ಣನೆಯ ವಸ್ತುಗಳನ್ನು ಬಾಯಲ್ಲಿ ಇಟ್ಟುಕೊಳ್ತಾರೆ. ಇದು ಕೂಡ ಒಳ್ಳೆ ಅಭ್ಯಾಸವಲ್ಲ. ಐಸ್ ಚೀಪುವುದ್ರಿಂದ ಹಲ್ಲು ದುರ್ಬಲವಾಗುತ್ತದೆ. ಹಲ್ಲಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ಹಲ್ಲಿಗೆ ಕ್ಯಾಪಿಂಗ್, ರೂಟ್ ಕೆನಾಲ್ ಅಥವಾ ಹಲ್ಲಿನ ಬೇರು ತೆಗೆದು ಚಿಕಿತ್ಸೆ ನೀಡಬೇಕಾಗುತ್ತದೆ.

ಉಗುರು ಕಚ್ಚಿದ್ರೆ ಹಾಳಾಗುತ್ತೆ ಬಾಯಿ ಆರೋಗ್ಯ : ಸುಮ್ಮನೆ ಕುಳಿತುಕೊಂಡಾಗ ಅಥವಾ ಆಲೋಚನೆ ಮಾಡ್ತಿರುವಾಗ ಅನೇಕರು ಉಗುರು ಕಚ್ಚುತ್ತಾರೆ. ಉಗುರು ಕಚ್ಚುವುದ್ರಿಂದ ಹಲ್ಲು ಹಾಳಾಗುವುದು ಮಾತ್ರವಲ್ಲದೆ ಉಗುರಿನಲ್ಲಿರುವ ಕೊಳಕು ಬಾಯಿ ಸೇರುತ್ತದೆ. ಕೈನಲ್ಲಿರುವ ಬ್ಯಾಕ್ಟೀರಿಯಾ ಬಾಯಿ ಸೇರಿ ಬಾಯಿ ಆರೋಗ್ಯ ಹಾಳು ಮಾಡುತ್ತದೆ.

ಜಿಮ್ನಲ್ಲಿ ಎಷ್ಟೇ ಬೆವರಿಳಿಸಿದ್ರು ಬೈಸೆಪ್ಸ್ ಬಿಲ್ಡ್ ಆಗ್ತಿಲ್ವಾ? ಇಲ್ಲಿದೆ ನೋಡಿ ರೀಸನ್!

ಸ್ಟ್ರಾ ಇಲ್ಲದೆ ಕೋಲ್ಡ್ ಡ್ರಿಂಕ್ಸ್ ಕುಡಿಬೇಡಿ : ನಿಮಗೆ ಇದು ಅಚ್ಚರಿ ಎನ್ನಿಸಬಹುದು ಆದ್ರೆ ಸತ್ಯ. ಸ್ಟ್ರಾ ಇಲ್ಲದೆ ನೀವು ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡಿದ್ರೆ ಹಲ್ಲು ಹಾಳಾಗುತ್ತದೆ. ಸೋಡಾ, ನಿಂಬೆ ಹಣ್ಣಿನ ಪಾನಕ, ಸಕ್ಕರೆ ಹೆಚ್ಚಿರುವ ಕೋಲ್ಡ್ ಡ್ರಿಂಕ್ಸ್ ಎಲ್ಲವನ್ನೂ ನೀವು ಸ್ಟ್ರಾ ಬಳಸಿ ಸೇವನೆ ಮಾಡಬೇಕು ಎನ್ನುತ್ತಾರೆ ತಜ್ಞರು. ನೀವು ಹಾಗೆಯೇ ಸೇವನೆ ಮಾಡಿದಾಗ ಅದ್ರ ಸಿಹಿ ಹಲ್ಲುಗಳನ್ನು ತಲುಪುತ್ತದೆ. ಇದ್ರಿಂದ ಹಲ್ಲು ಹಾಳಾಗುತ್ತದೆ.

ಪತಿಗೂ ಹೇಳಿರದ ಈ ವಿಷಯಗಳನ್ನ gynecologists ಹತ್ರ ಮುಚ್ಚಿಡ್ಲೇಬೇಡಿ !!

ಧೂಮಪಾನ ಬಾಯಿಯ ಆರೋಗ್ಯಕ್ಕೂ ಒಳ್ಳೆಯದಲ್ಲ : ಧೂಮಪಾನ ನಿಮ್ಮ ದೇಹದ ಆರೋಗ್ಯಕ್ಕೆ ಮಾತ್ರವಲ್ಲ ಬಾಯಿ ಆರೋಗ್ಯಕ್ಕೂ ಒಳ್ಳೆಯದಲ್ಲ. ಇದು ಹಲ್ಲುಗಳನ್ನು ಹಾನಿಗೊಳಿಸುತ್ತದೆ. ಧೂಮಪಾನದಿಂದ ಒಸಡಿನ ಖಾಯಿಲೆ ಹೆಚ್ಚಾಗುತ್ತದೆ. ಒಸಡಿನಿಂದ ರಕ್ತ ಬರುವ ಸಾಧ್ಯತೆಯಿರುತ್ತದೆ. 

click me!