ಸ್ತನಪಾನ ಮಾಡೋ ತಾಯಂದಿರು ಅಪ್ಪಿ ತಪ್ಪಿಯೂ ಈ Skin care ಕ್ರೀಮ್ ಬಳಸಬೇಡಿ

By Suvarna News  |  First Published Oct 18, 2022, 5:22 PM IST

ಎದೆಹಾಲು ನೀಡುವ ಸಮಯದಲ್ಲಿ ಮಹಿಳೆಯರು ಕೆಲವು ರೀತಿಯ ಸ್ಕಿನ್ ಕೇರ್ ಉತ್ಪನ್ನಗಳ ಬಳಕೆಯನ್ನು ಕೈಬಿಡುವುದು ಸೂಕ್ತ. ಏಕೆಂದರೆ, ಅವುಗಳಲ್ಲಿರುವ ಕೆಲವು ರಾಸಾಯನಿಕಗಳು ಮಗುವಿನ ಸೂಕ್ಷ್ಮ ಚರ್ಮ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.
 


ಹೆರಿಗೆಯಾದ ಬಳಿಕ ಮಹಿಳೆಯರ ಏಕೈಕ ಗಮನ ತನ್ನ ಕಂದನ ಆರೈಕೆ ಮೇಲಿರುತ್ತದೆ. ಎದೆಹಾಲು ನೀಡುವ ಸಮಯದಲ್ಲಿ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಮಗುವಿಗೆ ಶೀತವಾಗದಂತೆ, ಸೋಂಕಾಗದಂತೆ ನೋಡಿಕೊಳ್ಳಲು ಆದ್ಯತೆ ನೀಡುತ್ತಾರೆ. ಇವೆಲ್ಲದರ ಜತೆ, ಮಹಿಳೆಯರು ತಾವು ಬಳಕೆ ಮಾಡುವ ಕಾಸ್ಮೆಟಿಕ್ಸ್ ಬಗ್ಗೆಯೂ ಹೆಚ್ಚು ಗಮನ ನೀಡಬೇಕಾಗುತ್ತದೆ. ಹೆರಿಗೆಯಾದ ಬಳಿಕವೂ ಬಹಳಷ್ಟು ಮಹಿಳೆಯರು ವಿವಿಧ ರೀತಿಯ ಸ್ಕಿನ್ ಕೇರ್, ಕಾಸ್ಮೆಟಿಕ್ಸ್ ಬಳಕೆ ಮಾಡುವುದನ್ನು ಮುಂದುವರಿಸುತ್ತಾರೆ. ಕೆಲವರು ಈ ಸಮಯದಲ್ಲಿ ಕಾಸ್ಮೆಟಿಕ್ಸ್ ಬಳಕೆ ಕೈ ಬಿಡುತ್ತಾರೆ. ಆದರೆ, ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ ಬಾಣಂತಿಯರ ಹಾಗೆ ಕಾಣುವುದು ಯಾರಿಗೂ ಇಷ್ಟವಾಗದ ಕಾರಣ ಚಿಕ್ಕಪುಟ್ಟ ಸ್ಕಿನ್ ಕೇರ್ ಬಳಕೆ ಸಾಮಾನ್ಯ. ಇವುಗಳಿಂದಲೂ ಪುಟ್ಟ ಮಗುವಿಗೆ ತೊಂದರೆಯಾಗಬಹುದು. ಮಗುವಿನ ಚರ್ಮ ಸೂಕ್ಷ್ಮವಾಗಿರುವ ಕಾರಣ ಕೆಲವು ರೀತಿಯ ಅಲರ್ಜಿ ತೊಂದರೆ ಶುರುವಾಗಬಹುದು. ಒಂದೊಮ್ಮೆ ಮಹಿಳೆಯರು ಸ್ಕಿನ್ ಕೇರ್ ಉತ್ಪನ್ನ ಬಳಕೆ ಮಾಡಿದರೂ  ಅವುಗಳಲ್ಲಿ ಕೆಲವು ಕೃತಕ ಅಂಶಗಳು ಇಲ್ಲದಂತೆ ನೋಡಿಕೊಳ್ಳಬೇಕಾಗುತ್ತದೆ. ಅವುಗಳಿಂದಾಗಿ ನವಜಾತ ಶಿಶುವಿನ ಎಳೆಯ, ಮೃದುವಾದ ಚರ್ಮಕ್ಕೆ ಹಾನಿಯಾಗಬಹುದು. ಹೀಗಾಗಿ, ಎಚ್ಚರಿಕೆ ವಹಿಸುವುದು ಸೂಕ್ತ. ಮಕ್ಕಳ ಮೃದು ಮೈಗೆ ತೊಂದರೆ ನೀಡುವ ಕೆಲವು ಹಾನಿಕಾರಕ ಅಂಶಗಳನ್ನು ಗುರುತಿಸಲಾಗಿದೆ. 

•    ರೆಟಿನಾಲ್ (Retinol)
ವಿಟಮಿನ್ ಎ (Vitamin A) ಮಾದರಿಯ ಅಂಶವನ್ನು ರೆಟಿನಾಲ್ ಹೊಂದಿರುತ್ತದೆ. ಆಂಟಿಆಕ್ಸಿಡಂಟ್ (Antioxidant) ಆಗಿದ್ದು, ಹಲವು ಸ್ಕಿನ್ ಕೇರ್ (Skincare) ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುತ್ತದೆ. ಹೈಪರ್ ಪಿಗ್ಮೆಂಟೇಷನ್ (Pigmentation) ಮತ್ತು ಮೊಡವೆ ಸಮಸ್ಯೆಗೆ ಬಳಕೆ ಮಾಡುವ ಉತ್ಪನ್ನದಲ್ಲಿ ಈ ಅಂಶ ಸಾಮಾನ್ಯ. ಕೊಲಾಜನ್ ಉತ್ಪಾದನೆ ಹೆಚ್ಚಿಸುವ ಮೂಲಕ ಆರೋಗ್ಯಕರ ಚರ್ಮ ನಿಮ್ಮದಾಗಲು ಇದು ಕಾರಣವಾಗುತ್ತದೆ. ಆದರೆ, ಎದೆಹಾಲು (Breastfeed) ನೀಡುವ ಸಮಯದಲ್ಲಿ ಇದರ ಬಳಕೆ ಸಲ್ಲದು. ಏಕೆಂದರೆ, ಈ ಅಂಶ ಚರ್ಮವನ್ನು ಕೆಂಪಗಾಗಿಸಿ, ಕಿರಿಕಿರಿ ಉಂಟುಮಾಡಬಹುದು ಹಾಗೂ  ಶುಷ್ಕವನ್ನಾಗಿಸಬಹುದು. ತುರಿಕೆಯೂ ಆಗಬಹುದು. ಮಗುವಿನ ಜತೆಗೆ ನಿಕಟ ಸಂಪರ್ಕ ಉಂಟಾಗುವ ಸಮಯದಲ್ಲಿ ಇದರ ಬಳಕೆಗೆ ಬೈ ಹೇಳಿ.

Latest Videos

undefined

ತಾಯಿಯ ಎದೆಹಾಲನ್ನು ಹೆಚ್ಚಿಸುವ ಎಂಟು ಸೂಪರ್ ಆಹಾರಗಳು

•    ಸ್ಯಾಲಿಸಿಲಿಕ್ ಆಸಿಡ್ (Salicytic Acid)
ಬಹಳಷ್ಟು ಒಟಿಸಿ ಕಾಸ್ಮೆಟಿಕ್ಸ್ (Cosmetics) ಉತ್ಪನ್ನಗಳು ಸ್ಯಾಲಿಸಿಲಿಕ್ ಆಸಿಡ್ ಅನ್ನು ಹೊಂದಿರುತ್ತವೆ. ಇದನ್ನು ಸಹ ಮೊಡವೆ ಸಮಸ್ಯೆಗೆ ಬಳಕೆ ಮಾಡಲಾಗುತ್ತದೆ. ಬೆವರು ರಂಧ್ರಗಳ ಸ್ವಚ್ಛತೆ ಮಾಡುವ ಜತೆಗೆ, ಚರ್ಮದ ಉರಿಯೂತವನ್ನು ಇದು ತಪ್ಪಿಸುತ್ತದೆ. ಇದನ್ನು ದೇಹವು ಹೀರಿಕೊಳ್ಳುವುದಿಲ್ಲ ಅಥವಾ ರಕ್ತದೊಳಗೆ (Blood) ಇದು ಸೇರ್ಪಡೆ ಆಗುವುದಿಲ್ಲ. ಸಣ್ಣ ಮಗುವಿನ (Baby) ಚರ್ಮದಲ್ಲಿ ಇದು ಸೋಂಕನ್ನು ಉಂಟು ಮಾಡಬಹುದು.

•    ಆಕ್ಸಿಬೆಂಜೋನ್ (Oxibenzone)
ಸ್ಕಿನ್ ಕೇರ್ ಉತ್ಪನ್ನಗಳಲ್ಲಿ ಕೆಲವು ಹೆಸರುಗಳನ್ನು ಸಾಮಾನ್ಯವಾಗಿ ನಾವ್ಯಾರೂ ಕೇಳಿರುವುದಿಲ್ಲ. ಏಕೆಂದರೆ, ಉತ್ಪನ್ನಗಳ ಮೇಲೆ ನಮೂದಿಸಿರುವ ಇನ್ ಗ್ರೇಡಿಯಂಟ್ಸ್ ಹೆಸರುಗಳನ್ನು ನಾವು ಓದುವುದಿಲ್ಲ. ಆದರೆ, ಎದೆಹಾಲು ನೀಡುವ ಸಮಯದಲ್ಲಿ ಇವುಗಳ ಬಳಕೆ ಮಗುವಿಗೆ ಅಪಾಯ ತಂದೊಡ್ಡುವುದರಿಂದ ಮುನ್ನೆಚ್ಚರಿಕೆ ಅನಿವಾರ್ಯ. ಸನ್ ಸ್ಕ್ರೀನ್ ಲೋಷನ್ ನಲ್ಲಿ ಆಕ್ಸಿಬೆಂಜೋನ್ ಇರುತ್ತದೆ. ಇದು ಸೂರ್ಯನ ಅತಿನೇರಳೆ ಕಿರಣಗಳಿಂದ ಚರ್ಮಕ್ಕೆ (Skin) ರಕ್ಷಣೆ ನೀಡುತ್ತದೆ. ಅನೇಕ ಅಧ್ಯಯನಗಳು ಹೇಳುವಂತೆ ಈ ರಾಸಾಯನಿಕ (Chemical) ಮಗುವಿಗೆ ಅನೇಕ ರೀತಿಯಲ್ಲಿ ಸಮಸ್ಯೆ ಉಂಟುಮಾಡಬಹುದು. ಇದು ಎದೆಹಾಲಿನೊಂದಿಗೆ ಸೇರಿ ಮಗುವಿನ ದೇಹದ ಮೇಲೆ ಗುಳ್ಳೆ (Rashes) ಹಾಗೂ ದದ್ದುಗಳು (Hives) ಏಳಬಹುದು. ಇದರ ಬದಲು ಮಿನರಲ್ ಸನ್ ಸ್ಕ್ರೀನ್ ಬಳಕೆ ಸೂಕ್ತ ಎನ್ನುತ್ತಾರೆ ತಜ್ಞರು. 

Breast Feeding, ಕ್ಯಾನ್ಸರ್ ಬಗ್ಗೆ ಇರಲಿ ತುಸು ಎಚ್ಚರ, ಮರೀಬೇಡಿ ಆರೋಗ್ಯದ ಕಾಳಜಿ

•    ಹೈಡ್ರೊಕ್ವಿನೊನ್ (Hydroquinone)
ಕಪ್ಪು ಕಲೆ (Black Spot) ಮತ್ತು ಪಿಗ್ಮೆಂಟೇಷನ್ ಗೆ ಪರಿಹಾರ ನೀಡಲು ಬಳಕೆ ಮಾಡುವ ಲೋಷನ್ ನಲ್ಲಿ ಈ ಅಂಶ ಇರುತ್ತದೆ. ಆಕ್ಸಿಬೆಂಜೋನ್ ನಂತೆಯೇ ಇದು ಸಹ ರಕ್ತದೊಂದಿಗೆ ಬೆರೆತು ಮಗುವಿನ ಆರೋಗ್ಯದ (Health) ಮೇಲೆ ಪರಿಣಾಮ ಬೀರುತ್ತದೆ. ಮಗು ಸೂರ್ಯನ ಬೆಳಕಿಗೆ ಬಂದಾಗ ಸೂಕ್ಷ್ಮವಾಗಿ ವರ್ತಿಸುವಂತೆ Sun Sensitivity) ಆಗುತ್ತದೆ. ಇದು ಸ್ವಲ್ಪ ಅಪಾಯಕಾರಿ ಸಮಸ್ಯೆ. 

click me!