ಮನೆಯಲ್ಲಿ ವಯಸ್ಕರನ್ನು ಸುರಕ್ಷಿತರನ್ನಾಗಿಡಲು ಮಾರ್ಪಾಡು ಮಾಡಿ

By Megha MSFirst Published Oct 18, 2022, 5:37 PM IST
Highlights

ವಯಸ್ಸು ಎಂಬುದು ಕಾಲ ಎಂದು ಹೇಳಬಹುದು. ಅದು ನಿಲ್ಲುವುದಿಲ್ಲ ಗಡಿಯಾರದ ಮುಳ್ಳಿನಂತೆ ಮುಂದೆ ಸಾಗುತ್ತಲೇ ಇರುತ್ತದೆ. ಬೇಕು ಎಂದರೂ ಹಿಂತಿರುಗುವುದಿಲ್ಲ. ನಮ್ಮ ಹೆತ್ತವರು ವಯಸ್ಸಾದಂತೆ ಮನೆಯಲ್ಲಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯ. ವಯಸ್ಸಾದವರನ್ನು ಮನೆಯಲ್ಲಿ ಕಾಳಜಿಯಿಂದ ನೋಡಿಕೊಳ್ಳುವುದು ಹಾಗೂ ಅವರ ಅಗತ್ಯಗಳನ್ನು ಪೂರೈಸಲು ಮಾಡಬೇಕಾದ ಪ್ರಾಥಮಿಕ ಅಂಶಗಳ ಬಗ್ಗೆ ಇಲ್ಲಿದೆ ಕೆಲ ಟಿಪ್ಸ್.

ಮನೆಯಲ್ಲಿ ವಯಸ್ಸಾದವರು ಇದ್ದಾರೆ ಎಂದರೆ ಅವರನ್ನು ವೃದ್ಧಾಶ್ರಮಕ್ಕೋ ಅಥವಾ Care Taker ಅನ್ನು ಬಿಡುವುದು ಸರಿಯಲ್ಲ. ಅವರನ್ನು ಸರಿಯಾಗಿ ಮನೆಯಲ್ಲೇ ಆರೈಕೆ ಮಾಡುತ್ತಾ, ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವುದು ಮಕ್ಕಳ ಆದ್ಯ ಕರ್ತವ್ಯವಾಗಬೇಕು. ಮನೆಯಲ್ಲಿ ವಯಸ್ಸಾದವರು ಇದ್ದಾರೆ ಎಂದರೆ ಅವರನ್ನು ಗೌರವಿಸಬೇಕು ಹಾಗೂ ಮಗುವಿನಂತೆ ಅವರನ್ನು ನೋಡಿಕೊಳ್ಳಬೇಕು. ಏಕೆಂದರೆ ವಯಸ್ಸು ಆಗುತ್ತಿದ್ದಂತೆ ಮಕ್ಕಳಾಗುತ್ತಾರೆ. ದೇಹ ದಣಿದಿರುವುದರಿಂದ ವೃದ್ಧಾಪ್ಯದಲ್ಲಿ ಅವರ ಕೆಲಸ ಅವರಿಗೇ ಮಾಡಿಕೊಳ್ಳಲಾಗುವುದಿಲ್ಲ. 

ಅನೇಕ ಕುಟುಂಬಗಳಲ್ಲಿ ವಯಸ್ಸಾದ ಸದಸ್ಯರು ಮನೆಯಲ್ಲಿದ್ದಾರೆ ಎಂದರೆ ಅವರನ್ನು ನೋಡಿಕೊಳ್ಳಲು ಉತ್ತಮ ವಿಧಾನಕ್ಕಾಗಿ ಹೋರಾಡುತ್ತಾರೆ. ಏಕೆಂದರೆ ಅವರು ಹೆಚ್ಚು ಕಾಲ ಬದುಕುತ್ತಿದ್ದಾರೆ ಮತ್ತು ಹೆಚ್ಚಿನ ಕಾಳಜಿಯನ್ನು ಬಯಸುತ್ತಾರೆ. ಮನೆಯ ಹೊಂದಾಣಿಕೆಗಳು ನಿರ್ಣಾಯಕವಾಗಿವೆ. ನಮ್ಮ ಹಿರಿಯರು ಸ್ವಂತ ಮನೆಯಲ್ಲಿ ಹೆಚ್ಚು ಆರಾಮದಾಯಕವಾಗಿ ಮತ್ತು ಸ್ವತಂತ್ರವಾಗಿ ಬದುಕಲು ಸಹಾಯ ಮಾಡುತ್ತದೆ. ವಯಸ್ಸಾದವರಿಗೆ ಮನೆಯನ್ನು ಸುರಕ್ಷಿತಗೊಳಿಸುವುದು ಕಷ್ಟಕರ ಕೆಲಸವಾಗಿರಬಹುದು.  ಅವರನ್ನು ಜೊತೆಯಲ್ಲಿಯೇ ಇರಿಸಿಕೊಳ್ಳುವುದು ಉತ್ತಮ ಅವಕಾಶವಾಗಿದೆ. ಏಕೆಂದರೆ ನೀವು ಅವರನ್ನು ನೋಡಿಕೊಳ್ಳಬಹುದು ಮತ್ತು ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಬಹುದು. 

ಮತ್ತೊಂದೆಡೆ ಅವರು ಮನೆಯಲ್ಲಿ ಏಕಾಂಗಿಯಾಗಿ(Alone) ಉಳಿದಿರುವಾಗ ಅವರನ್ನು ಸುರಕ್ಷಿತವಾಗಿರಿಸುವುದು ಕಷ್ಟಕರ ಮತ್ತು ಸವಾಲಿನ ಸಂಗತಿಯಾಗಿದೆ. ವಯಸ್ಸಾದ ಪೋಷಕರಿಗೆ ಮನೆಯಲ್ಲಿ ಸುರಕ್ಷಿತವಾಗಿಸಲು ಮಾಡಬೇಕಾದ ಮಾರ್ಪಾಡುಗಳ ಬಗ್ಗೆ ಇಲ್ಲಿದೆ ಸಲಹೆಗಳು.  

ಮರೆಯುವ ರೋಗಕ್ಕೆ ಗುರಿಯಾಗುವ ಮುನ್ನ ನೀವು ಮಾಡಬೇಕಾಗಿರೋದೇನು?

1. ಹಾಸಿಗೆಯ ಮೇಲೆ ಟಾರ್ಚ್ ಇರಲಿ
ವಿದ್ಯುತ್ ಕಡಿತ ಎಂಬುದು ಸಾಮಾನ್ಯವಾಗಿ ಇರುತ್ತದೆ. ಅದರಲ್ಲೂ ನಿಮ್ಮ ಪೋಷಕರ ಮನೆಯು ಸಾಕಷ್ಟು ವಿದ್ಯುತ್ ಕಡಿತವನ್ನು ಅನುಭವಿಸುವ ಪ್ರದೇಶದಲ್ಲಿದ್ದರೆ ಪೋಷಕರಿಗೆ ಕಷ್ಟವಾಗಬಹುದು. ಹಾಗಾಗಿ ಪೋಷಕರ ಹಾಸಿಗೆಯ ಮೇಲೆ ಟಾರ್ಚ್(Torch) ಇರಿಸಿ. ಮನೆಯ ಸುತ್ತಲು ಚಲಿಸಲು ಹಾಗೂ ಅವರಿಗೆ ಬೇಕಾದಾಗ ಎಲ್ಲಿಗಾದರೂ ಹೋಗಬೇಕೆಂದರೆ ಈ ಸಂದರ್ಭಗಳಲ್ಲಿ ಕಷ್ಟವಾಗಬಹುದು. ಹಾಗಾಗಿ ಹ್ಯಾಂಡ್ ಟಾರ್ಚ್ಗಳು ಅವರಿಗೆ ಉತ್ತಮವಾಗಿವೆ. ಹಾಗಾಗಿ ಪೋಷಕರ ಬಳಿ ಇರಿಸಿಕೊಳ್ಳಲು ಅನುಕೂಲವಾಗುವ ಹಾಗೂ ಕತ್ತಲೆಯಲ್ಲಿ ಬೀಳುವುದು ಹಾಗೂ ಪ್ರಯಾಣಿಸುವುದು, ಅನಾಹುತಗಳನ್ನು ತಪ್ಪಿಸಲು ಟಾರ್ಚ್ ಇರಿಸಿ.

2. ಮ್ಯಾಟ್ ಹಾಗೂ ರಗ್ಗುಗಳನ್ನು ತೆಗೆದುಹಾಕಿ 
ಪೋಷಕರಿಗೆ ವೃದ್ಧಾಪ್ಯದಲ್ಲಿ ಮೆಟ್ಟಿಲು ಹತ್ತಿ ಇಳಿಯುವುದು ಕಷ್ಟ. ಅದರಲ್ಲೂ ವೃದ್ಧಾಪ್ಯದಲ್ಲಿ ಜಾರುವುದು, ಬೀಳುವುದು ಸಾಮಾನ್ಯ. ಹಾಗಾಗಿ ಕಾಲಿಗೆ ಸಿಗುವಂತಹ ಹಾಸುಗಳನ್ನು, ಜಾರುವ ಮ್ಯಾಟ್‌ಗಳನ್ನು ತೆಗೆದುಹಾಕಿ. ಅವರಿಗೆ Comfort ಹಾಗೂ ಓಡಾಡಲು ಆರಾಮಾಗುವ ತೇವಾಂಶವನ್ನು ಹೀರಿಕೊಳ್ಳುವ Cotton Mattಗಳನ್ನು ಹಾಕಿ. ಕಾಲುದಾರಿಗಳು ಸಾಧ್ಯವಾದಷ್ಟು ಸ್ಪಷ್ಟವಾಗಿರಬೇಕು. ಸಸ್ಯಗಳು, ಪುಸ್ತಕಗಳು ಮತ್ತು ಕಂಬಳಿಗಳAತಹ ವಸ್ತುಗಳಿಂದ ಮುಕ್ತವಾಗಿಡಿ.

3. ಚಲನೆಯ ಸಂವೇದಕ ಇರಿಸಿ 
Living Room ನಲ್ಲಿ ಚಲನೆ ಅಥವಾ ಕಿಟಕಿ, ಬಾಗಿಲುಗಳ ಹತ್ತಿರ ಹೋದರೆ Sensor ಮೂಲಕ ಅದು ತೆರೆಯುತ್ತದೆ. ಈ ರೀತಿಯ ಮಾರ್ಪಾಡುಗಳನ್ನು ಮನೆಯಲ್ಲಿ ಮಾಡಬಹುದು. ಇದು ವಯಸ್ಸಾದವರಿಗೆ ಬಹಳ ಅನುಕೂಲವಾಗುತ್ತದೆ. ಏಕೆಂದರೆ ಯಾವುದೇ ರೀತಿಯ ಶ್ರಮವಿಲ್ಲದೆ ಸೆನ್ಸಾರ್ ಮೂಲಕ ತೆರೆದುಕೊಳ್ಳುತ್ತದೆ ಹಾಗೂ ಅಪಾಯವನ್ನು ತಡೆಯುತ್ತದೆ. ಇದು ಪೋಷಕರನ್ನು ಸುರಕ್ಷಿತವಾಗಿ ಇಡಲು ಸಹಾಯ ಮಾಡುತ್ತದೆ.

ಅಯ್ಯಯ್ಯೋ..ಇಂಥಾ ಆಹಾರಗಳನ್ನು ತಿಂದ್ರೆ ಬೇಗ ವಯಸ್ಸಾಗುತ್ತಂತೆ !

4. ಬಾತ್ರೂಮ್ ಮಾರ್ಪಡಿಸಿ 
ಸುರಕ್ಷತೆ ಎಂಬುದು ವಯಸ್ಸಾದಾಗ ಬಹಳ ಮುಖ್ಯ. ಸ್ನಾನಗೃಹ ಕಡೆಗಣಿಸಲ್ಪಡುವ ಸ್ಥಳವಾಗಿದೆ. ಯಾವುದೇ ಚೂಪಾದ ಮೂಲೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಯಾವುದೇ ಪಾಚಿ ಜಾಗವಿದ್ದರೆ ತೆರೆವುಗೊಳಿಸಿ. ಬಾತ್ರೂಮ್ ಅನ್ನು ಎರಡು ದಿನಕ್ಕೊಮ್ಮೆ ತೊಳೆಯುವುದು ಒಳ್ಳೆಯದು.  

5. ಅಗತ್ಯ ವಸ್ತುಗಳ ಸ್ಥಳಾಂತರ
ನಮ್ಮಲ್ಲಿ ಹೆಚ್ಚಿನವರು ಔಷಧವನ್ನು ಮೇಲಿನ Shelfನಲ್ಲಿ ಇರಿಸಲು ಮತ್ತು ಲಾಕ್ ಮಾಡಿದ ಬೀರುಗಳಲ್ಲಿ ಸರಬರಾಜುಗಳನ್ನು ಸ್ವಚ್ಛಗೊಳಿಸಲು ಬಳಸುತ್ತಾರೆ. ವಯಸ್ಸಾದಂತೆ ಈ ಸ್ಥಳಗಳನ್ನು ಪ್ರವೇಶಿಸಲು ಕಷ್ಟವಾಗಬಹುದು. ವಯಸ್ಸಾದವರಿಗೆ ತಲುಪಲು ಏನು ತೊಂದರೆ ಎಂಬುದರ  ಕುರಿತು ಮಾತನಾಡಿ ಮತ್ತು ಯಾವುದನ್ನು ಸ್ಥಳಾಂತರಿಸಬಹುದು ಎಂಬುದನ್ನು ನೋಡಿ. ಎರಡು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದರೆ ಇಡೀ ಕೋಣೆಯನ್ನು ಕೆಳಕ್ಕೆ ಸ್ಥಳಾಂತರಿಸಲು ಪರಿಗಣಿಸಬಹುದು. ದಿನಕ್ಕೆ ಹಲವು ಬಾರಿ ಮಹಡಿ ಹತ್ತುವುದಕ್ಕಿಂತ ಎಲ್ಲಾ ಅಗತ್ಯ ವಸ್ತುಗಳನ್ನು ಒಂದೇ ಮಹಡಿಯಲ್ಲಿ ಇಡುವುದು ಒಳ್ಳೆಯದು.

click me!