ಬೀಳ್ಕೊಡುಗೆಯಲ್ಲಿ ವಿದಾಯ ಭಾಷಣ ಮಾಡುತ್ತಿದ್ದಂತೆ ಕುಸಿದು ಬಿದ್ದು ಮೃತಪಟ್ಟ ವಿದ್ಯಾರ್ಥಿನಿ

ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ. ವಿದಾಯ ಭಾಷಣ ಮಾಡುತ್ತಿದ್ದ ವಿದ್ಯಾರ್ಥಿನಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಹಲವರ ಕಣ್ಣಾಲಿ ತೇವಗೊಳಿಸಿದೆ.


ಮುಂಬೈ(ಏ.06) ಕಾಲೇಜಿನಲ್ಲಿ ಕೊನೆಯ ದಿನ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಂದೆ ತರಗತಿಯಲ್ಲಿ ಕಲಿತು ಇದೀಗ ಅನಿವಾರ್ಯವಾಗಿ ಬೇರೆ ಬೇರಯಾಗುವ ಕಾರಣದಿಂದ ವಿದ್ಯಾರ್ಥಿಗಳು ಭಾವುಕರಾಗಿದ್ದರು. ಕಾರ್ಯಕ್ರಮ ಆರಂಭಗೊಂಡಿತ್ತು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಳೆದ ದಿನಗಳು, ಉಪನ್ಯಾಸಕರ ಜೊತೆಗಿನ ಒಡನಾಟ, ತರಗತಿ, ಸಹಪಾಠಿಗಳ ಜೊತೆಗಿನ ಸಂಬಂಧ ಸೇರಿದಂತೆ ಹಲವು ವಿಚಾರಗಳ ಕುರಿತು ವಿದಾಯ ಭಾಷಣ ಮಾಡಿದ್ದಾರೆ. ಇನ್ನು 20 ವರ್ಷದ ವಿದ್ಯಾರ್ಥಿನಿ ವರ್ಷಾ ಖಾರಟ್ ವಿದಾಯ ಭಾಷಣ ಮಾಡಲು ಆರಂಭಿಸಿದ್ದಾಳೆ. ಕೆಲವೇ ಹೊತ್ತಲ್ಲಿ ವರ್ಷಾ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾಳೆ. ತಕ್ಷಣವೇ ವಿದ್ಯಾರ್ಥಿನಿಯನ್ನು ಆಸ್ಪತ್ರೆ ದಾಖಲಿಸಿದರೂ ಬದುಕುಳಿಲಿಲ್ಲ. 

ಆರ್‌ಜಿ ಶಿಂಧೆ ಕಾಲೇಜಿನಲ್ಲಿ ಘಟನೆ
ಈ ಘಟನೆ ಮಹರಾಷ್ಟ್ರದ ಧಾರಾಶಿವ್ ಜಿಲ್ಲೆಯ ಆರ್‌ಜಿ ಶಿಂಧೆ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೊನೆಯ ದಿನವಾದ ಕಾರಣ ಎಲ್ಲಾ ವಿದ್ಯಾರ್ಥಿಗಳ ಮುಖದಲ್ಲಿ ಸಂಭ್ರಮದ ಜೊತೆಗೆ ಅನಿವಾರ್ಯವಾಗಿ ಬೇರೆಯಾಗುವ ನೋವು ಕೂಡ ಮುಖದಲ್ಲಿತ್ತು. 

Latest Videos

ಮೊದಲ ರಾತ್ರಿ ಸಂಭ್ರಮದಲ್ಲಿ ಬಾಗಿಲು ಮುಚ್ಚಿದ ಕೆಲ ಹೊತ್ತಲ್ಲೇ ಪ್ರಜ್ಞೆ ತಪ್ಪಿದ ವರ

ಕಾಲೇಜು ದಿನ ನೆನೆದ ವರ್ಷಾ
ಒಬ್ಬೊಬ್ಬ ವಿದ್ಯಾರ್ಥಿಗಳು ಭಾಷಣ ಮಾಡಿದ್ದಾರೆ. ತಮ್ಮ ಸಹಿ ಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಂತಿಮ ವರ್ಷದ ಬಿಎಸ್‌ಸಿ ವಿದ್ಯಾರ್ಥಿನಿ ವರ್ಷ ಖಾರಟ್ ತಮ್ಮ ಭಾಷಣದಲ್ಲಿ ತರಗತಿಯಲ್ಲಿ ನಡೆದ ಹಲವು ಹಾಸ್ಯ ಸನ್ನಿವೇಶಗಳನ್ನು ನೆನಪಿಸಿದ್ದಾರೆ. ಇನ್ನು ಕೆಲ ಘಟನೆಗಳನ್ನು ಹೇಳುತ್ತಿದ್ದಂತೆ ಉಪನ್ಯಾಸಕರು ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ನಗೆಗಡಲಲ್ಲಿ ತೇಲಿದ್ದಾರೆ. ಅಚ್ಚುಕಟ್ಟಾಗಿ ತಮ್ಮ ಭಾಷಣದಲ್ಲಿ ಕಾಲೇಜಿನ ದಿನಗಳನ್ನು ಮೆಲುಕು ಹಾಕಿದ್ದಾರೆ.  ಪ್ರತಿಯೊಂದು ಘಟನೆಗಳನ್ನು ಹೆಚ್ಚು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ವರ್ಷಾ ಮಾತುಗಳು ಸಹಪಾಠಿಗಳು ಹಾಗೂ ಉಪನ್ಯಾಸಕರಿಗೆ ರಿಫ್ರೆಶ್ ಕೊಟ್ಟಿತ್ತು.

ಮಾತನಾಡುತ್ತಲೇ ಕುಸಿದು ಬಿದ್ದ ವರ್ಷಾ
ವರ್ಷ ತಮ್ಮ ಮಾತುಗಳನ್ನಾಡುತ್ತಿದ್ದಂತೆ ಅಸ್ವಸ್ಥಗೊಂಡಿದ್ದಾರೆ. ನಗು ಮುಖದಿಂದಲೇ ಮಾತನಾಡುತ್ತಿದ್ದ ವರ್ಷಾ ಮಾತುಗಳು ತೊದಲಲು ಆರಂಭಿಸಿದೆ. ಕೆಲವೇ ಸೆಕೆಂಡ್‌‌ಗಳಲ್ಲಿ ಡಯಾಜ್ ಪಕ್ಕದಲ್ಲಿ ಕುಸಿದು ಬಿದ್ದಿದ್ದಾಳೆ. ಈ ವೇಳೆ ವೇದಿಕೆಯಲ್ಲಿದ್ದ ಉಪನ್ಯಾಸಕರು, ವಿದ್ಯಾರ್ಥಿಳು ವರ್ಷಾ ಬಳಿ ಧಾವಿಸಿದ್ದಾರೆ. ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ವರ್ಷಾ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ. ಉಪನ್ಯಾಸಕರು ಪರಿಸ್ಥಿತಿ ಗಂಭೀರವಾಗಿದೆ ಅನ್ನೋದು ಅರ್ಥವಾಗಿದೆ. ತಕ್ಷಣವೇ ವಾಹನದ ಮೂಲಕ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಧಾವಿಸಿದ್ದಾರೆ.

 

At RG Shinde College in Dharashiv, Maharashtra, a student, Varsha Kharat, collapsed and died during her farewell speech 😢😢https://t.co/O4Rx9pmtnp https://t.co/gPlhM9qaGh pic.twitter.com/fcCdm6PWFX

— Dee (@DeeEternalOpt)

 

ವರ್ಷಾ ಖಾರಟ್‌ನನ್ನು ಪರಂಡಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ವಿದ್ಯಾರ್ಥಿ ವರ್ಷಾ ಮತೃಪಟ್ಟರುವುದಾಗಿ ಖಚಿತಪಡಿಸಿದ್ದಾರೆ. ಎಲ್ಲರಿಗೂ ಆಘಾತವಾಗಿದೆ. ವರ್ಷಾ ಖಾರತ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಸಹಪಾಠಿಗಳು ದುಖದ ಮಡುವಿನಲ್ಲಿ ಮುಳುಗಿದ್ದಾರೆ. ಇತ್ತ ಉಪನ್ಯಾಸಕರಿಗೂ ಆಘಾತವಾಗಿದೆ.   ಮಾಹಿತಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 

8ನೇ ವಯಸ್ಸಿಗೆ ಹಾರ್ಟ್ ಸರ್ಜರಿ
ವರ್ಷಾ ಖಾರಟ್ 8ನೇ ವಯಸ್ಸಿಗೆ ಹೃದಯ ಸಂಬಂಧಿ ಸಮಸ್ಯೆಗೆ ತುತ್ತಾಗಿದ್ದಳು.  ಈ ವೇಳೆ ವರ್ಷಾ ಖಾರಟ್‌ಗೆ ಹಾರ್ಟ್ ಸರ್ಜರಿ ಮಾಡಲಾಗಿತ್ತು. ಬಳಿಕ ಯಾವತ್ತೂ ವರ್ಷಾ ಖಾರಟ್ ಅಸ್ವಸ್ಥಗೊಂಡಿಲ್ಲ, ಹೃದಯ ಸೇರಿದಂತೆ ಇತರ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಇದೀಗ ಏಕಾಏಕಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ. 

Viral Video: ಮದುವೆ 25ನೇ ವಾರ್ಷಿಕೋತ್ಸವದ ಸಂಭ್ರಮ; ಹೆಂಡ್ತಿ ಜೊತೆ ಡಾನ್ಸ್‌ ಮಾಡೋವಾಗಲೇ ಪ್ರಾಣಬಿಟ್ಟ ಪತಿ!
 

click me!