ರೋಗಿ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ವೈದ್ಯರಿಂದ ಯಶಸ್ವಿ ಮೆದುಳು ಶಸ್ತ್ರ ಚಿಕಿತ್ಸೆ

By Ravi Janekal  |  First Published Sep 20, 2024, 11:16 AM IST

ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ವೈದ್ಯರು ಮೆದುಳು ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾದ ಘಟನೆ ಕೊಲ್ಲಾಪುರದ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆಯಲ್ಲಿ ನಡೆದಿದೆ.


ಬೆಳಗಾವಿ (ಸೆ.20): ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿ ವೈದ್ಯರು ಮೆದುಳು ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾದ ಘಟನೆ ಕೊಲ್ಲಾಪುರದ ಕನ್ಹೇರಿ ಮಠದ ಸಿದ್ಧಗಿರಿ ಆಸ್ಪತ್ರೆಯಲ್ಲಿ ನಡೆದಿದೆ.

ಕನ್ಹೇರಿ ಮಠದ ನರಶಸ್ತ್ರಚಿಕಿತ್ಸಕ ಡಾ.ಶಿವಶಂಕರ ಮರಜಕ್ಕೆ ಹಾಗೂ ಅರಿವಳಿಕೆ ತಜ್ಞ ಪ್ರಕಾಶ ಭರಮಗೌಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಶಿವಶಂಕರ್ ಮರಜಕ್ಕೆ ಅವರು, ಇಸ್ರೇಲ್‌ನಿಂದ ಬಂದಿದ್ದ ರೈತನಿಗೆ ಮೆದುಳಿನಲ್ಲಿ ಗಡ್ಡೆ ಬೆಳೆದಿತ್ತು. ಅದನ್ನು ಟ್ಯೂಮರ್ ಆಪರೇಷನ್ ಮಾಡಿ ಹೊರ ತೆಗೆಯಬೇಕಿತ್ತು. ಈ ಸಂದರ್ಭದಲ್ಲಿ ವೈದ್ಯರು ರೋಗಿಯ ಕೈಗೆ ಕೊಳಲು ಕೊಟ್ಟು ಊದಲು ಹೇಳಿದರು. ಸುಮಾರು 5 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ ಎಂದರು. 

Latest Videos

BMTC ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಎದೆನೋವು; ಜಸ್ಟ್ ಮಿಸ್ 45 ಪ್ರಯಾಣಿಕರು!

ಅವೇಕ್ ಕ್ರೇನಿಯೊಟಮಿ ಶಸ್ತ್ರಚಿಕಿತ್ಸೆಗೆ ಹೆಸರಾಗಿರುವ ಸಿದ್ದಗಿರಿ ಆಸ್ಪತ್ರೆಯ ವೈದ್ಯರು ಈ ಹಿಂದೆ ರೋಗಿಗೆ ಐಸ್‌ಕ್ರೀಮ್ ಕೊಟ್ಟು ಆಪರೇಷನ್ ಮಾಡಿದ್ದರು. ವೈದ್ಯರ ತಂಡ ಈವರೆಗೂ ಒಟ್ಟು 103 ಮೆದುಳು ಶಸ್ತ್ರಚಿಕಿತ್ಸೆ ಮಾಡಿದೆ. ಗಡ್ಡೆ ಬೆಳೆದ ಜಾಗದ ಪಕ್ಕದಲ್ಲಿ ಮಾತ್ರ ಅರಿವಳಿಕೆ ನೀಡಿ ಆಪರೇಷನ್ ಮಾಡಲಾಗಿದೆ. ಕೇವಲ ₹1.20 ಲಕ್ಷ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ಸೇರಿ ಆಸ್ಪತ್ರೆ ಸಂಪೂರ್ಣ ವೆಚ್ಚ ಆಗಿದೆ ಎಂದರು. ವೈದ್ಯರ ಸಾಧನೆಗೆ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಶ್ಲಾಘಿಸಿದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ ಜಗಜಂಪಿ ಇದ್ದರು.

click me!