ಕೂದಲು ಬಹುಬೇಗನೆ ಬೆಳ್ಳಗಾಗಬಾರದೇ? ಈ ಆಹಾರಗಳಿಂದ ದೂರವಿರಿ!

Published : Apr 30, 2025, 09:15 PM ISTUpdated : May 02, 2025, 03:12 PM IST
ಕೂದಲು ಬಹುಬೇಗನೆ ಬೆಳ್ಳಗಾಗಬಾರದೇ? ಈ ಆಹಾರಗಳಿಂದ ದೂರವಿರಿ!

ಸಾರಾಂಶ

ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗಿ ಅಕಾಲಿಕವಾಗಿ ವೃದ್ಧರಂತೆ ಕಾಣುವವರನ್ನು ನೀವು ನೋಡಿರಬಹುದು. ನಿಮ್ಮ ಸಣ್ಣ ವಯಸ್ಸಿನಲ್ಲಿಯೇ ಕೂದಲು ನಿಧಾನವಾಗಿ ಬೆಳ್ಳಗಾಗುತ್ತಿದೆ ಎಂದನಿಸಿದರೆ, ಈ ಕೆಲವು ಆಹಾರಗಳಿಂದ ದೂರವಿರುವ ಮೂಲಕವೂ ನೀವು ಬೆಳ್ಳಗಾಗುವ ಪ್ರಕ್ರಿಯೆಯನ್ನು ಮುಂದೂಡಬಹುದು.

ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವುದು ನೋಡಲು ಅಂತಹ ದೊಡ್ಡ ಸಮಸ್ಯೆಯಾಗಿ ಕಾಣದಿದ್ದರೂ, ನಿಜವಾಗಿಯೂ ಬಹಳ ತೊಂದರೆ ಕೊಡುವ ಸಮಸ್ಯೆಯೇ. ತನ್ನ ನಿಜವಾದ ವಯಸ್ಸಿಗಿಂತ ಹೆಚ್ಚು ವಯಸ್ಸಿನಂತೆ ಕಾಣಲು ಯಾರು ತಾನೇ ಇಷ್ಪಡುತ್ತಾರೆ ಹೇಳಿ? ಎಲ್ಲರೂ ಸಣ್ಣ ವಯಸ್ಸಿನವರಂತೆಯೇ ಕಾಣಲು ಇಷ್ಟಪಡುತ್ತಾರೆ. ಸಾಲ್ಟ್‌ ಅಂಡ್‌ ಪೆಪ್ಪರ್‌ ಲುಕ್‌ ಟ್ರೆಂಡೀ ಆಗಿದ್ದರೂ, ಕಪ್ಪು ಬಣ್ಣದ ಸಹಜವಾಗಿ ದಕ್ಕಿದ ಕೂದಲನ್ನು ಕಳೆದುಕೊಳ್ಳಲು ಯಾರಿಗೂ ಮನಸ್ಸಿರುವುದಿಲ್ಲ. ಆಗಾಗ ಹೇರ್‌ ಡೈ ಮಾಡಿಕೊಂಡು, ಎಲ್ಲರ ಕಣ್ಣಿಗೆ ಚಿಕ್ಕ ವಯಸ್ಸಿನವರಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುವುದು ಕೆಲವೊಮ್ಮೆ ಮಾನಸಿಕವಾಗಿಯೂ ಹೈರಾಣು ಮಾಡುತ್ತದೆ. ಇಂದಿನ ನಗರದ ಧಾವಂತದ ಜೀವನ ಶೈಲಿ, ಆಹಾರ ಕ್ರಮ, ಒತ್ತಡ, ನೀರಿನ ಬದಲಾವಣೆ ಇತ್ಯಾದಿಗಳೆಲ್ಲವೂ ಕೂಡಾ ಇದಕ್ಕೆ ಕಾರಣವಾಗಿರುತ್ತದೆ. ಕೆಲವೊಮ್ಮೆ, ನಮ್ಮ ಆಹಾರ ಬದಲಾವಣೆಯಿಂದಲೂ ಕೂಡಾ, ಕೂದಲು, ಬೆಳ್ಳಗಾಗುವುದನ್ನು ತಡೆಯಬಹುದು. ನಿಮ್ಮ ಸಣ್ಣ ವಯಸ್ಸಿನಲ್ಲಿಯೇ ಕೂದಲು ನಿಧಾನವಾಗಿ ಬೆಳ್ಳಗಾಗುತ್ತಿದೆ ಎಂದನಿಸಿದರೆ, ಈ ಕೆಲವು ಆಹಾರಗಳಿಂದ ದೂರವಿರುವ ಮೂಲಕವೂ ನೀವು ಬೆಳ್ಳಗಾಗುವ ಪ್ರಕ್ರಿಯೆಯನ್ನು ಮುಂದೂಡಬಹುದು. ಬನ್ನಿ, ಯಾವೆಲ್ಲ ಆಹಾರಗಳು ನಿಮ್ಮ ಕೂದಲನ್ನು ಬೆಳ್ಳಗಾಗಿಸುವಲ್ಲಿ ಕಾರಣವಾಗಿದೆ ಎಂಬುದನ್ನು ನೋಡೋಣ.

1. ಕೆಫೀನ್‌: ಅತಿಯಾಗಿ ಚಹಾ, ಕಾಫಿ, ಚಾಕೋಲೇಟು ಸೇರಿದಂತೆ ಕೆಫೀನ್‌ಯುಕ್ತ ಪೇಯಗಳನ್ನು ಸೇವಿಸುತ್ತಿದ್ದೀರಾ? ಆಫೀಸ್‌ನಲ್ಲಿ ಆಗಾಗ ಚಹಾ ಕಾಫಿ ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದೀರಾ? ಹಾಗಾದರೆ ಎಚ್ಚರ. ಕೆಫೀನ್‌ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅರಿವು ನಿಮಗೆ ಇರಬಹುದು. ಆದರೆ, ನಿಮ್ಮ ಕೂದಲ ಆರೋಗ್ಯಕ್ಕೂ ಇದು ಒಳ್ಳೆಯದಲ್ಲ. ಕೆಫೀನ್‌ ಕಬ್ಬಿಣಾಂಶದ ಹೀರಿಕೆಯ ಮೇಲೆ ಪರಿಣಾಮ ಬೀರುವುದೂ ಅಲ್ಲದೆ, ಕೂದಲು ಬುಡವನ್ನೇ ದುರ್ಬಲವನ್ನಾಗಿಸಿ ಕೂದಲನ್ನು ಬಿಳಿಯಾಗಿಸುತ್ತದೆ.

2. ಅತಿಯಾದ ಸಿಹಿತಿಂಡಿಗಳು: ಸಿಹಿತಿಂಡಿಗಳ ಸೇವನೆ ಒಳ್ಳೆಯದಲ್ಲ ಎಂಬುದು ಗೊತ್ತಿರಬಹುದು. ಆದರೆ, ಇವು ಕೂದಲ ಆರೋಗ್ಯಕ್ಕೂ ಒಳ್ಳೆಯದನ್ನು ಮಾಡವು. ಇವು ಕೊಲಾಜೆನ್‌ ಅನ್ನು ಹಾಳು ಮಾಡುವ ಮೂಲಕ ಚರ್ಮ ಹಾಗೂ ಕೂದಲಿಗೆ ಹಾನಿಯುಂಟು ಮಾಡುತ್ತವೆ. ಪೋಷಕಾಂಶಗಳ ಏರುಪೇರು ಸಂಭವಿಸಿ ಕೂದಲು ಬಿಳಿಯಾಗುತ್ತವೆ.

3. ಕಾರ್ಬೋನೇಟೆಡ್‌ ಡ್ರಿಂಕ್‌ಗಳು: ಸಕ್ಕರೆ ಹಾಗೂ ರಾಸಾಯನಿಕಗಳೇ ಹೇರಳವಾಗಿರುವ ಕಾರ್ಬೋನೇಟೆಡ್‌ ಡ್ರಿಂಕ್‌ಗಳೂ ಕೂಡಾ ಪೋಷಕಾಂಶಗಳ ಹೀರಿಕೆಯ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ, ಇವುಗಳ ಸೇವನೆಯೂ ಕೂಡಾ ಕೂದಲು ಬಿಳಿಯಾಗಲು ಕಾರಣವಾಗುತ್ತವೆ.

4. ಕರಿದ ತಿನಿಸುಗಳು: ಕರಿದ ತಿನಿಸುಗಳಲ್ಲಿ ಹೇರಳವಾಗಿ ಆನಾರೋಗ್ಯಕರ ಕೊಬ್ಬು ಇದ್ದು, ಇದು ಇದರ ಅತಿಯಾದ ಸೇವನೆಯಿಂದ ಮೆಲನಿನ್‌ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಕೂದಲು ಬೇಗನೆ ಬಿಳಿಯಾಗುತ್ತವೆ.

5. ರಿಫೈನ್ಡ್‌ ಕಾರ್ಬೋಹೈಡ್ರೇಟ್‌ಗಳು: ಬ್ರೆಡ್‌, ಪಾಸ್ತಾ, ಅಕ್ಕಿ ಮತ್ತಿತರ ಆಹಾರಗಳಲ್ಲಿ ಅತಿಯಾಗಿ ಕಾರ್ಬೋಹೈಡ್ರೇಟ್‌ ಇದ್ದು, ಇತರ ಪೋಷಕಾಂಶಗಳು ಕಡಿಮೆ ಪ್ರಮಾಣದಲ್ಲಿರುತ್ತವೆ. ಇದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಏರಿಸುವ ಮೂಲಕ ಕೂದಲ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.

6. ಜಂಕ್‌ ಫುಡ್‌: ಪಿಜ್ಜಾ, ಬರ್ಗರ್‌ ಸೇರಿದಂತೆ ಎಲ್ಲ ಬಗೆಯ ಜಂಕ್‌ ಫುಡ್‌ಗಳಲ್ಲೂ ಅನಾರೋಗ್ಯಕರ ಕೊಬ್ಬು ಹೆಚ್ಚಿರುತ್ತವೆ. ಇದು ವಯಸ್ಸಾಗುವಿಕೆಯನ್ನು ಎಚ್ಚು ಮಾಡುತ್ತದೆ. ಬೇಗನೆ ವಯಸ್ಸಾಗುವ ಲಕ್ಷಣಗಳು ಕಾಣಿಸುತ್ತವೆ.

7. ಹೆಚ್ಚು ಉಪ್ಪು: ಅತಿ ಹೆಚ್ಚು ಉಪ್ಪಿನ ಪದಾರ್ಥಗಳ ಸೇವನೆಯಿಂದ ದೇಹ ಡಿಹೈಡ್ರೇಟ್‌ ಆಗುತ್ತದೆ ಹಾಗೂ ಇದು ಪೋಷಕಾಂಶಗಳ ಹೀರಿಕೆಯನ್ನು ನಿಷ್ಕ್ರಿಯಗೊಳಿಸುತ್ತದೆ. ಇದರಿಂದಲೂ ಕೂದಲು ಬಹುಬೇಗನೆ ಬೆಳ್ಳಗಾಗುತ್ತದೆ.

30 ವರ್ಷದ ಮಹಿಳೆಯರ ಗಮನಕ್ಕೆ:  ಈ 7 ಆಹಾರ ಸೇವನೆ ಕಡಿಮೆಗೊಳಿಸಿ, ಇಲ್ಲಾಂದ್ರೆ ಅಪಾಯ ಕಟ್ಟಿಟ್ಟಬುತ್ತಿ!

8. ಕ್ಯಾನ್ಡ್‌ ಆಹಾರಗಳು: ಕ್ಯಾನ್ಡ್‌ ಹಾಗೂ ಪ್ಯಾಕೇಜ್ಡ್‌ ಆಹಾರಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಪ್ರಿಸರ್ವೇಟಿವ್‌ಗಳಿರುತ್ತವೆ. ಇವೂ ಕೂಡಾ ವಯಸ್ಸಾಗುವಿಕೆಯನ್ನು ಹೆಚ್ಚಿಸುತ್ತವೆ ಹಾಗೂ ಕೂದಲೂ ಬಹುಬೇಗನೆ ಬೆಳ್ಳಗಾಗುವಂತೆ ಮಾಡುತ್ತವೆ.

ಈ ಎಲ್ಲ ಆಹಾರಗಳ ಅತಿಯಾದ ಸೇವನೆ ಬಹುಬೇಗನೆ ವಯಸ್ಸಾಗುವ ಪ್ರಕ್ರಿಯೆಯನ್ನು ಚುರುಕುಗೊಳಿಸಬಹುದು. ಚರ್ಮ ಸುಕ್ಕಾಗುವುದು, ಕೂದಲು ಬೇಗನೆ ನೆರೆಯುವುದು ಇತ್ಯಾದಿಗಳಿಗೂ ಇವೇ ಕಾರಣವೂ ಆಗುತ್ತವೆ. ಹಾಗಾಗಿ, ಇಂತಹ ಆಹಾರಗಳ ಸೇವನೆ ಮಾಡುವುದಿದ್ದರೂ, ಅಪರೂಪಕ್ಕೆ ಮಾಡಿದರೆ ಅಂತಹ ಪರಿಣಾಮಗಳು ಬರಲಿಕ್ಕಿಲ್ಲವಾದರೂ, ಅತಿಯಾದ ಸೇವನೆ ಕೇವಲ ಕೂದಲ ಆರೋಗ್ಯವಷೇ ಅಲ್ಲ, ಹಲವು ದುಷ್ಪರಿಣಾಮಗಳನ್ನು ಎದುರಿಸುವಂತೆ ಮಾಡುವುದರಲ್ಲಿ ಸಂದೇಹವೇ ಇಲ್ಲ.

ನಿಮಿರುವಿಕೆ ಸಮಸ್ಯೆ ಇದ್ದರೆ ಹೃದಯದ ಆರೋಗ್ಯವೇ ಢವಢವ!
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ