ನಾವೆಲ್ಲ ಬಹುಶಃ ನಮಗೆ ತಿಳಿದಿರುವುದಕ್ಕಿಂತ ಹೆಚ್ಚು ಸಕ್ಕರೆಯನ್ನು (eating sugar) ಸೇವಿಸುತ್ತಿದ್ದೇವೆ. ನೀವು ಸಕ್ಕರೆ ತಿನ್ನುವುದನ್ನು ನಿಲ್ಲಿಸಿದಾಗ (sugar detox) ನಿಮ್ಮ ದೇಹಕ್ಕೆ ಏನಾಗುತ್ತದೆ ಎಂಬುದನ್ನು ಇಲ್ಲಿ ನೋಡಿ.
ಆಧುನಿಕ ಆಹಾರ ಸಂಸ್ಕೃತಿಯಲ್ಲಿ ಸಕ್ಕರೆ ಅನಿವಾರ್ಯ ಅಂಗವಾಗಿದೆ. ಆದರೆ ಇದು ಕ್ಲಾಸ್ ಎ ಡ್ರಗ್‌ನಂತೆ ವ್ಯಸನಕಾರಿ ಮತ್ತು ಮಾರಕ ಕೂಡ. ಸಕ್ಕರೆಯ ಅಂಶ ಇಲ್ಲದೇ ವ್ಯಕ್ತಿ ಬದುಕಲು ಸಾಧ್ಯವಿಲ್ಲ. ನಿಜ. ಆದರೆ ಆದರೆ ಇಂದು ಸಂಸ್ಕರಿಸಿದ ಸಕ್ಕರೆಗಳಿಂದ ತುಂಬಿದ ಸಂಸ್ಕರಿಸಿದ ಆಹಾರಗಳಲ್ಲಿ ಇರುವ ಸಕ್ಕರೆಯ ಪ್ರಮಾಣ ಆತಂಕಕಾರಿ. ಅಂದರೆ ನಾವೆಲ್ಲ ಬಹುಶಃ ನಮಗೆ ತಿಳಿದಿರುವುದಕ್ಕಿಂತ ಹೆಚ್ಚು ಸಕ್ಕರೆಯನ್ನು ಸೇವಿಸುತ್ತಿದ್ದೇವೆ. ಆದ್ದರಿಂದ ನಮ್ಮ ಆಹಾರದಿಂದ ಅದನ್ನು ಗರಿಷ್ಠ ಪ್ರಮಾಣದಲ್ಲಿ ತೆಗೆದುಹಾಕುವುದು ಒಳ್ಳೆಯದು. ನೀವು ಸಕ್ಕರೆ ತಿನ್ನುವುದನ್ನು ನಿಲ್ಲಿಸಿದಾಗ ನಿಮ್ಮ ದೇಹಕ್ಕೆ ಏನಾಗುತ್ತದೆ ಎಂಬುದನ್ನು ಇಲ್ಲಿ ನೋಡಿ.
ಮುಖ್ಯವಾಗಿ ಇದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಸಾಧ್ಯ. ಸಕ್ಕರೆ ಡಿಟಾಕ್ಸ್ ಅನ್ನು ಪ್ರಯತ್ನಿಸುವುದು ಒಳ್ಳೆಯದು. ಆದರೆ ಸಕ್ಕರೆಗಳು ನೈಸರ್ಗಿಕವಾಗಿ ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಕೆಲವು ಧಾನ್ಯಗಳಂತಹ ಆರೋಗ್ಯಕರ ಸಂಪೂರ್ಣ ಆಹಾರಗಳಲ್ಲಿ ಕಂಡುಬರುತ್ತವೆ. ಇವು ಪೌಷ್ಠಿಕಾಂಶದ ಆಹಾರ, ಆದರೆ ನೈಸರ್ಗಿಕವಾದ ಸಕ್ಕರೆ ಆಹಾರದಲ್ಲಿ ಇರಬೇಕು. ಸೇರಿಸಿದ ಸಕ್ಕರೆ ಹಾನಿಕರ. ಸಹಜವಾಗಿ, ವೈವಿಧ್ಯಮಯ ಮತ್ತು ಸಮತೋಲಿತ ಆಹಾರದ ಭಾಗವಾಗಿ ಎಲ್ಲಾ ಆಹಾರಗಳನ್ನು ಮಿತವಾಗಿ ಸೇವಿಸಬೇಕು. ಒಂದು ದಿನದಲ್ಲಿ 10 ಮಾವಿನಹಣ್ಣು ತಿನ್ನುವುದು ಒಳ್ಳೆಯದಲ್ಲ, ಕ್ಯಾಂಡಿ, ಸೋಡಾ ಮತ್ತು ಪ್ಯಾಕ್ ಮಾಡಲಾದ ಕುಕೀಗಳು ಸೇರಿಸಿದ ಸಕ್ಕರೆಗಳ ಸ್ಪಷ್ಟ ಮೂಲಗಳು. ಇವನ್ನು ಬಿಡಬೇಕು.
undefined
ದೈಹಿಕ ಲಕ್ಷಣಗಳು: ದೇಹಕ್ಕೆ ಸಕ್ಕರೆ ಪೂರೈಕೆ ನಿಂತಾಗ ಅದು ಹಿಂತೆಗೆದುಕೊಳ್ಳುವ ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಬಹುದು. ಈ "ಸಕ್ಕರೆ ಹಿಂತೆಗೆದುಕೊಳ್ಳುವಿಕೆ" ದೈಹಿಕ ಮತ್ತು ಮಾನಸಿಕ ಲಕ್ಷಣಗಳಿಗೆ ಕಾರಣವಾಗಬಹುದು. ದೈಹಿಕ ಲಕ್ಷಣಗಳಲ್ಲಿ ನಿಶ್ಯಕ್ತಿ, ತಲೆನೋವು ಮತ್ತು ಜಠರಗರುಳಿನ ತೊಂದರೆಯೂ ಸೇರಿದೆ. ಬಲವಾದ ಮನಸ್ಸಿನೊತ್ತಡ ಅನುಭವಿಸುವ ಸಾಧ್ಯತೆಯಿದೆ. ಈ ಅಹಿತಕರ ಅನುಭವವು ಧೂಮಪಾನ ತ್ಯಜಿಸುವ ಆರಂಭಿಕ ದಿನಗಳಂತೆಯೇ ಹತಾಶೆ ಮತ್ತು ಕಿರಿಕಿರಿಯನ್ನೂ ಉಂಟುಮಾಡಬಹುದು.
ಶಕ್ತಿಯ ಮಟ್ಟ ಸುಧಾರಿಸುತ್ತದೆ: ಸಾಮಾನ್ಯವಾಗಿ ಒಂದು ವಾರ ಹೀಗಾಗುತ್ತದೆ. ಅದರ ನಂತರ, ನಿಮ್ಮ ಶಕ್ತಿಯ ಮಟ್ಟವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ನಂತರ ನಿಮ್ಮ ಆರೋಗ್ಯವನ್ನು ಸುಧಾರಿಸುವ ಅಸಂಖ್ಯಾತ ವಿಧಾನಗಳನ್ನು ನೀವು ಆನಂದಿಸಲು ಪ್ರಾರಂಭಿಸಬಹುದು.
ಹಲ್ಲಿನ ಆರೋಗ್ಯ: ಬಾಯಿಯಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳು ತಮ್ಮ ಆಹಾರದ ಮುಖ್ಯ ಮೂಲವಾಗಿ ಸಕ್ಕರೆಯನ್ನು ಬಳಸುತ್ತವೆ. ಹೆಚ್ಚು ಸಕ್ಕರೆ ಇದ್ದರೆ, ಅವು ಹೆಚ್ಚು ಬೆಳೆಯುತ್ತವೆ ಮತ್ತು ಹಲ್ಲಿನ ಕೊಳೆತ, ಕುಳಿಗಳು ಮತ್ತು ಸೋಂಕುಗಳಿಗೆ ಕಾರಣವಾಗಬಹುದು. ಸೇರಿಸಿದ ಸಕ್ಕರೆಗಳ ಸೇವನೆ ಕಡಿಮೆ ಮಾಡಿದಾಗ ಈ ಕೊಳೆಯುವಿಕೆ ನಿಲ್ಲಿಸಲು ಸಹಾಯ ಮಾಡುತ್ತದೆ.
ಉತ್ತಮ ಉಸಿರಾಟ: ಬಾಯಿಯಲ್ಲಿನ ಬ್ಯಾಕ್ಟೀರಿಯಾದಿಂದಲೂ ದುರ್ವಾಸನೆ ಉಂಟಾಗುತ್ತದೆ, ಈ ಬ್ಯಾಕ್ಟೀರಿಯಾವು ಆಹಾರಕ್ಕಾಗಿ ಸಾಕಷ್ಟು ಸಕ್ಕರೆ ಇರುವಾಗ ಬೆಳೆಯುತ್ತದೆ. ನಿಮ್ಮ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದರಿಂದ ನಿಮ್ಮ ಉಸಿರಾಟವನ್ನು ಗಮನಾರ್ಹವಾಗಿ ಸುಧಾರಿಸಬಹುದು.
ಚರ್ಮದ ಆರೋಗ್ಯ: ಸಂಸ್ಕರಿಸಿದ ಸಕ್ಕರೆಯಲ್ಲಿ ಅಧಿಕವಾಗಿರುವ ಆಹಾರಗಳು ಇನ್ಸುಲಿನ್ ಸ್ಪೈಕ್‌ಗಳನ್ನು ಉಂಟುಮಾಡುತ್ತವೆ, ಇದು ಉರಿಯೂತವನ್ನು ಉಂಟುಮಾಡುತ್ತದೆ. ಉರಿಯೂತವು ದೇಹದಲ್ಲಿನ ಅನೇಕ ಕಾಯಿಲೆಗಳಿಗೆ ಕಾರಣ. ಇದು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು. ನಮ್ಮ ತ್ವಚೆಯಲ್ಲಿರುವ ಕಾಲಜನ್ ಅದನ್ನು ಕೊಬ್ಬಿದ ಮತ್ತು ಹೊಳೆಯುವಂತೆ ಮಾಡುತ್ತದೆ, ಆದರೆ ಉರಿಯೂತವು ಅದನ್ನು ಹಾನಿಗೊಳಿಸುತ್ತದೆ. ಇದು ಅಕಾಲಿಕ ಸುಕ್ಕುಗಳು, ಚರ್ಮ ಕುಗ್ಗುವಿಕೆ, ಮೊಡವೆಗೆ ಕಾರಣವಾಗಬಹುದು. ಸಕ್ಕರೆ ಬಿಡುವುದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಎಲಾಸ್ಟಿನ್ ಮತ್ತು ಕಾಲಜನ್ ಅನ್ನು ಬಲಪಡಿಸುತ್ತದೆ, ಆರೋಗ್ಯಕರ ಮೈಬಣ್ಣ ದೊರೆತು ಸುಕ್ಕುಗಳು ಕಡಿಮೆಯಾಗುತ್ತವೆ.
ನಿದ್ರೆ: ಸಂಸ್ಕರಿಸಿದ ಸಕ್ಕರೆಗಳು ನಿದ್ರೆಯ ಚಕ್ರದಲ್ಲಿ ಎರಡು ಪ್ರಮುಖ ಹಂತಗಳಿಗೆ ಅಡ್ಡಿಪಡಿಸುತ್ತವೆ: REM (ಕ್ಷಿಪ್ರ ಕಣ್ಣಿನ ಚಲನೆ) ಮತ್ತು SWS (ನಿಧಾನ ತರಂಗ ನಿದ್ರೆ). ಇವುಗಳು ಅತ್ಯಂತ ಪುನಶ್ಚೈತನ್ಯಕಾರಿ ಹಂತಗಳು. ಸಕ್ಕರೆ ಬಿಟ್ಟ ಕೆಲವು ವಾರಗಳ ನಂತರ, ಸಕ್ಕರೆಮುಕ್ತ ಆಹಾರದ ಪ್ರಯೋಜನಗಳು ನಿಮ್ಮ ನಿದ್ರೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಮೆದುಳಿನ ಕಾರ್ಯ: ಮೆದುಳಿನ ಕಾರ್ಯಚಟುವಟಿಕೆಗೆ ಸಂಬಂಧಿಸಿ ಮರೆಗುಳಿತನ, ಪಾರ್ಕಿನ್ಸನ್ ಮತ್ತು ಆಲ್ಝೈಮರ್‌ನಂತಹ ಕಾಯಿಲೆಗಳಿಗೆ ಸಕ್ಕರೆ ಹತ್ತಿರದ ಸಂಬಂಧಿ. ಸಕ್ಕರೆ ಮೆದುಳಿನ ಹಿಪೊಕ್ಯಾಂಪಸ್ ಮೇಲೆ ಪರಿಣಾಮ ಬೀರುತ್ತದೆ, ಇದು ಮೆಮೊರಿ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ.ಸಕ್ಕರೆ ಬಿಟ್ಟರೆ ಮೆಮೊರೆ ಚುರುಕಾಗುತ್ತದೆ
ತೂಕ ಇಳಿಕೆ: ಸೇರಿಸಿದ ಸಕ್ಕರೆಗಳನ್ನು ಹೊಂದಿರುವ ಆಹಾರವನ್ನು ಕಡಿತಗೊಳಿಸುವುದು ಸಾಮಾನ್ಯವಾಗಿ ತೂಕ ಇಳಿಕೆಗೆ ಕಾರಣವಾಗುತ್ತದೆ. ಅವು ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಸಕ್ಕರೆ ಸೇವನೆಯನ್ನು ನಿಧಾನವಾಗಿ ಕಡಿಮೆ ಮಾಡುವುದರಿಂದ ದೇಹದಲ್ಲಿ ಕೊಬ್ಬಿನ ಶೇಖರಣೆ ಕಡಿಮೆಯಾಗುತ್ತದೆ.
ಸಂತೋಷ: ಸಕ್ಕರೆ ಮೆದುಳಿನಲ್ಲಿನ ರಾಸಾಯನಿಕಗಳಲ್ಲಿ ಅಸಮತೋಲನವನ್ನು ಪ್ರಚೋದಿಸುತ್ತದೆ. ಆತಂಕ ಮತ್ತು ಖಿನ್ನತೆಗೆ ಇದು ಸಂಬಂಧಿಸಿದೆ. ನೀವು ಸೇವಿಸುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿದರೆ, ಅಂತಿಮವಾಗಿ ನಿಮ್ಮ ಮನಸ್ಥಿತಿ ಮತ್ತು ಯೋಗಕ್ಷೇಮದ ಒಟ್ಟಾರೆ ಪ್ರಜ್ಞೆಯು ಸುಧಾರಿಸುತ್ತದೆ.
ತೂಕ ನಿಯಂತ್ರಣಕ್ಕೆ ಸದ್ಗುರು ಹೇಳಿದ ಬೆಸ್ಟ್ ಟಿಪ್ ಇದು, ಬೆಳಗ್ಗೆ ತಿಂಡಿಯೊಟ್ಟಿಗೆ ತಿಂದ್ರೆ ಸರಿ!
ರೋಗನಿರೋಧಕ ಶಕ್ತಿ: ಅಧಿಕ ಸಕ್ಕರೆಯ ಆಹಾರದಿಂದ ಉಂಟಾಗುವ ದೀರ್ಘಕಾಲದ ಉರಿಯೂತ ನಿಮ್ಮ ರೋಗಪ್ರತಿರೋಧ ಶಕ್ತಿಯನ್ನು ಕಡಿತಗೊಳಿಸುತ್ತದೆ. ನೀವು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಸೇರಿಸಿದ ಸಕ್ಕರೆಗಳನ್ನು ಕಡಿತಗೊಳಿಸಿದರೆ, ಶೀತ ಮತ್ತಿತರ ಕಾಯಿಲೆ ಇಲ್ಲವಾಗುತ್ತದೆ. ಸಕ್ಕರೆಯನ್ನು ಕಡಿಮೆ ಮಾಡುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಏನೇ ಮಾಡಿದ್ರೂ ಹೆಣ್ಣು ಮಕ್ಕಳು ತೂಕ ಇಳಿಸೋದು ಕಷ್ಟವೇಕೆ?
ಹೃದಯರೋಗ: ಹೆಚ್ಚಿನ ಸಕ್ಕರೆ ಸೇವನೆ ಕೊಬ್ಬಿನ ಶೇಖರಣೆಗೆ ಸಂಬಂಧಿಸಿದೆ, ಇದು ಅಂತಿಮವಾಗಿ ಹೃದ್ರೋಗದಂತಹ ಗಂಭೀರ ಸಮಸ್ಯೆಗೆ ಕಾರಣವಾಗಬಹುದು. ಆರೋಗ್ಯಕರ ತೂಕ ಹೊಂದಿರುವವರು ಸಹ ತಮ್ಮ ದೈನಂದಿನ ಕ್ಯಾಲೊರಿಗಳಲ್ಲಿ 20% ಕ್ಕಿಂತ ಕಡಿಮೆ ಸಕ್ಕರೆ ಹೊಂದಿದ್ದರೆ ಹೃದ್ರೋಗದ ಅಪಾಯ ಕಡಿಮೆ.
ಮಧುಮೇಹ ನಿಯಂತ್ರಣ: ಸಂಸ್ಕರಿಸಿದ ಆಹಾರಗಳು ಮತ್ತು ಸಂಸ್ಕರಿಸಿದ ಸಕ್ಕರೆಗಳಲ್ಲಿ ಹೆಚ್ಚಿನ ಆಹಾರವು ಟೈಪ್ 2 ಡಯಾಬಿಟಿಸ್‌ಗೆ ಪ್ರಮುಖ ಕಾರಣಗಳಲ್ಲಿ ಒಂದು. ಆದ್ದರಿಂದ ಸೇರಿಸಿದ ಸಕ್ಕರೆಗಳನ್ನು ಕಡಿಮೆ ಮಾಡುವುದು ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಈ ರೋಗದ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡಬಹುದು.