
ತಂಪು ಗಾಳಿ, ಶೀತ ವಾತಾವರಣ ನಾನಾ ಖಾಯಿಲೆಗೆ ದಾರಿ ಮಾಡ್ಕೊಡುತ್ತೆ. ಶೀತ, ಕೆಮ್ಮು, ಜ್ವರ, ಆಯಾಸ, ಗಂಟಲು ನೋವು, ನಾನಾ ಸೋಂಕು ಕಾಡುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗೋದಿಲ್ಲ. ಚಳಿಗಾಲದಲ್ಲಿ ಮಲಬದ್ಧತೆ ಸಮಸ್ಯೆ ಹೆಚ್ಚು. ಚಳಿಗಾಲದಲ್ಲಿ ಮಕ್ಕಳು ಬೇಗ ಅನಾರೋಗ್ಯಕ್ಕೆ ತುತ್ತಾಗ್ತಾರೆ. ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ರೋಗನಿರೋಧಕ ಶಕ್ತಿ ಹೆಚ್ಚಿದ್ರೆ ಅನಾರೋಗ್ಯದಿಂದ ದೂರ ಇರ್ಬಹುದು. ಚಳಿಗಾಲದಲ್ಲಿ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗ್ಬೇಕು ಅಂದ್ರೆ ನೀವು ಸೂಪರ್ ಫುಡ್ ಸೇವನೆ ಮಾಡ್ಬೇಕು.
ಚಳಿಗಾಲದಲ್ಲಿ ರೋಗ ನಿಮ್ಮಿಂದ ದೂರ ಇರ್ಬೇಕು ಅಂದ್ರೆ ನೀವು ಪೋಷಕಾಂಶವಿರುವ ಆಹಾರಕ್ಕೆ ಹತ್ತಿರ ಆಗ್ಬೇಕು. ದೈನಂದಿನ ಆಹಾರದಲ್ಲಿ ಪೌಷ್ಟಿಕ-ಭರಿತ ಆಹಾರ ಸೇವನೆ ಮಾಡ್ಬೇಕು. ಎಲ್ಲ ಕಡೆ ಸುಲಭವಾಗಿ ಸಿಗುವ, ಈ ಋತುವಿನಲ್ಲಿ ಮಾರ್ಕೆಟ್ ನಲ್ಲಿ ಹೆಚ್ಚಾಗಿ ಮಾರಾಟವಾಗುವ ನೆಲ್ಲಿಕಾಯಿ ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡಬಲ್ಲದು. ಇದನ್ನು ಚಳಿಗಾಲದ ಸೂಪರ್ಫುಡ್ ಎಂದೂ ಇದನ್ನು ಕರೆಯುತ್ತಾರೆ. ನೆಲ್ಲಿಕಾಯಿ ಅನೇಕ ಪೋಷಕಾಂಶಗಳ ನೈಸರ್ಗಿಕ ಮೂಲವಾಗಿದೆ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ.
ಚಳಿಗಾಲದಲ್ಲಿ ಮಲಬದ್ಧತೆಯೇ?, ಈ ಮನೆಮದ್ದು ಮಾಡಿ ಒಂದೇ ಬಾರಿಗೆ ಹೊಟ್ಟೆಯನ್ನ ಸ್ವಚ್ಛಗೊಳಿಸುತ್ತೆ!
ನೆಲ್ಲಿಕಾಯಿ (amla) ನಾರು, ಕಬ್ಬಿಣ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದು ಫೈಬರ್, ರಂಜಕ ಮತ್ತು ವಿಟಮಿನ್ ಎ, ಬಿ ಮತ್ತು ಇ ಸೇರಿದಂತೆ ಹಲವಾರು ಸೂಕ್ಷ್ಮ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ನೆಲ್ಲಿಕಾಯಿ ಚಳಿಗಾಲಕ್ಕೆ ಮಾತ್ರವಲ್ಲದೆ ವರ್ಷಪೂರ್ತಿ ಪ್ರಯೋಜನಕಾರಿ.
•ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ, ಸಾಮಾನ್ಯ ಸೋಂಕುಗಳ ಸಮಯದಲ್ಲಿ ದೇಹದ ರಕ್ಷಣೆಯನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿ ನಡೆಸುತ್ತದೆ ಮತ್ತು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ.
• ನೆಲ್ಲಿಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳು ಸಾಮಾನ್ಯ ಅಪಧಮನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಬೆಂಬಲಿಸುತ್ತದೆ. ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ.
•ನೆಲ್ಲಿಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುತ್ತದೆ. ಕೂದಲಿನ ಬಲ ಹೆಚ್ಚಿಸುತ್ತದೆ. ಕೂದಲಿನ ನೈಸರ್ಗಿಕ ಹೊಳಪನ್ನು ಹೆಚ್ಚಿಸಲು ನೆಲ್ಲಿಕಾಯಿ ಉಪಯುಕ್ತವೆಂದು ಪರಿಗಣಿಸಲಾಗಿದೆ. •ನೆಲ್ಲಿಕಾಯಿ ವಿಟಮಿನ್ ಎ ಮತ್ತು ಸಿ ಹೊಂದಿದ್ದು,ದೃಷ್ಟಿ ಮತ್ತು ಸಾಮಾನ್ಯ ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ. ನಿಯಮಿತವಾಗಿ ಮಧ್ಯಮ ಪ್ರಮಾಣದಲ್ಲಿ ನೆಲ್ಲಿಕಾಯಿ ತಿನ್ನುವುದು ಕಣ್ಣುಗಳನ್ನು ಆರೋಗ್ಯವಾಗಿಡಲು ಸಹಾಯಕಾರಿ.
ಚಳಿಗಾಲದಲ್ಲಿ ಮಹಿಳೆಯರಲ್ಲಿ ಮೂತ್ರನಾಳದ ಸೋಂಕು (UTI) ಏಕೆ ಹೆಚ್ಚುತ್ತದೆ? ತಜ್ಞರ ಎಚ್ಚರಿಕೆ
ನಿತ್ಯ ನೆಲ್ಲಿಕಾಯಿ ಸೇವನೆ ಹೇಗೆ? :
ನೆಲ್ಲಿಕಾಯಿಯನ್ನು ಹಾಗೆಯೇ ಸೇವನೆ ಮಾಡ್ಬಹುದು. ನೆಲ್ಲಿಕಾಯಿ ಚಟ್ನಿ, ಜಾಮ್, ಪುಡಿ ಅಥವಾ ಜ್ಯೂಸ್ ಸೇರಿದಂತೆ ಹಲವು ವಿಧಗಳಲ್ಲಿ ಸೇವಿಸಬಹುದು. ಎರಡು ಅಥವಾ ಮೂರು ತಾಜಾ ನೆಲ್ಲಿಕಾಯಿಯನ್ನು ಕತ್ತರಿಸಿ ಅದಕ್ಕೆ ಜೀರಿಗೆ, ಕರಿಮೆಣಸು ಅಥವಾ ಶುಂಠಿಯಂತಹ ಮಸಾಲೆಗಳನ್ನು ಸೇರಿಸಿ, ನೀರು ಬೆರೆಸಿ ಮಿಕ್ಸಿ ಮಾಡಿ. ಬಂದ ರಸವನ್ನು ಸೋಸಿ, ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಇದು ನಿಮ್ಮ ದೇಹವನ್ನು ರಿಫ್ರೆಶ್ ಮಾಡುತ್ತದೆ. ದಿನದ ಆರಂಭಕ್ಕೆ ಚೈತನ್ಯ ನೀಡುತ್ತದೆ. ಪ್ರತಿ ದಿನ ನೆಲ್ಲಿಕಾಯಿ ಜ್ಯೂಸ್ ಸೇವನೆ ಸಾಧ್ಯವಿಲ್ಲ ಎನ್ನುವವರು ವಾರಕ್ಕೆ ಎರಡು ಬಾರಿ ಸೇವನೆ ಮಾಡ್ತಾ ಬನ್ನಿ. ನೆಲ್ಲಿಕಾಯಿ ಒಣಗಿಸಿ ಪುಡಿ ಮಾಡಿ ಅದನ್ನು ನೀರಿಗೆ ಬೆರಸಿ ಕುಡಿಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.