
ಹಣ್ಣುಗಳು ಆರೋಗ್ಯವೃದ್ಧಿ ತರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಪ್ರತಿಯೊಂದು ಹಣ್ಣಿನಲ್ಲಿಯೂ ಒಂದೊಂದು ಅಥವಾ ಹಲವಾರು ರೀತಿಯ ಆರೋಗ್ಯಕರ ಗುಣಗಳಿವೆ. ಕೆಲವೊಂದು ಹಣ್ಣುಗಳು ಕೆಲವು ಸಮಸ್ಯೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿದರೆ, ಕೆಲವೊಂದು ಸಮಸ್ಯೆ ಇರುವವರಿಗೆ ಕೆಲವೊಂದು ಹಣ್ಣುಗಳನ್ನು ತಿನ್ನುವುದು ಬೇಡ ಎನ್ನುತ್ತಾರೆ ವೈದ್ಯರು. ಆದರೆ ಇದನ್ನು ಹೊರತುಪಡಿಸಿದರೆ, ನಿಸರ್ಗದಲ್ಲಿ ಕಾಲಕಾಲಕ್ಕೆ ಸಿಗುವ ಹಣ್ಣುಗಳನ್ನು ಆ ಕಾಲದಲ್ಲಿ ತಿಂದರೆ, ಆಯಾ ಕಾಲದ ಅನಾರೋಗ್ಯ ಸಮಸ್ಯೆಗಳಿಗೆ ಅದು ರಾಮಬಾಣದಂತೆ ಕೆಲಸ ಮಾಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ದುಡ್ಡಿನ ಆಸೆಗೆ ಬಿದ್ದು ಎಲ್ಲಾ ಹಣ್ಣುಗಳಿಗೆ ರಾಸಾಯನಿಕ ಸಿಂಪಡಿಸುವ ಕಾರಣದಿಂದ ಆರೋಗ್ಯ ತರುವ ಹಣ್ಣುಗಳೇ ಅನಾರೋಗ್ಯಕ್ಕೆ ದಾರಿಯಾಗುತ್ತಿವೆ ಎನ್ನುವುದು ಮಾತ್ರ ನೋವಿನ ಸಂಗತಿಯೇ.
ಆದರೆ, ಹಣ್ಣುಗಳನ್ನು ಯಾವಾಗ ತಿನ್ನಬೇಕು ಎನ್ನುವ ಗೊಂದಲ ಹಲವರಿಗೆ ಇರುತ್ತದೆ. ಆಹಾರದ ಬಳಿಕ ತಿಂದರೆ ಒಳ್ಳೆಯದು ಎಂದು ಕೆಲವರು, ಆಹಾರಕ್ಕಿಂತ ಮೊದಲೇ ಇದರ ಸೇವನೆ ಮಾಡಬೇಕು ಎಂದು ಮತ್ತೆ ಹಲವರು... ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಆದರೆ, ಸರಿಯಾದ ಆರೋಗ್ಯಕ್ಕೆ, ಆರೋಗ್ಯ ಪ್ರಯೋಜನ ಪಡೆಯಲು ಹಣ್ಣುಗಳನ್ನು ಯಾವಾಗ ತಿನ್ನಬೇಕು ಎನ್ನುವ ಬಗ್ಗೆ ಡಾ.ಆರ್.ಆರ್.ಜೈನ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜಗತ್ತಲ್ಲಿ ವಿಷದಿಂದ ಮುಕ್ತವಾಗಿರೋ ಹಣ್ಣು ಎಂದ್ರೆ ಇವೆರಡೇ ನೋಡಿ! ಕಣ್ಮುಚ್ಚಿ ತಿನ್ಬೋದು...
ಬೆಳಗಿನ ಜಾವ ಉತ್ತಮ
ಹಣ್ಣುಗಳನ್ನು ಯಾವಾಗ ತಿನ್ನಬೇಕು ಎನ್ನುವ ಗೊಂದಲ ಹಲವರಲ್ಲಿ ಇರುತ್ತದೆ. ಆದರೆ ಅವುಗಳನ್ನು ಬೆಳಗಿನ ಜಾಗ ಅಂದರೆ ವ್ಯಾಯಾಮ ಮಾಡಿದರೆ, ಅದರ ನಂತರ ಹಾಗೂ ಸ್ನಾನದ ಮೊದಲು ತಿನ್ನುವುದು ಒಳ್ಳೆಯದು ಎನ್ನುತ್ತಾರೆ ಅವರು. ಆಯುರ್ವೇದದ ಪ್ರಕಾರ ಇದು ತುಂಬಾ ಒಳ್ಳೆಯದು ಎನ್ನುತ್ತಾರೆ ವೈದ್ಯರು. ತುಂಬಾ ಪುಷ್ಟಿ ಕೊಡುತ್ತದೆ. ಇಡೀ ರಾತ್ರಿ ಉಪವಾಸ ಮಾಡಿದ್ದರಿಂದ ಗ್ಲುಕೋಸ್ ಮತ್ತು ನ್ಯೂಟ್ರೀಷನ್ ಲೆವೆಲ್ ಕಡಿಮೆ ಇರುವ ಕಾರಣ, ಬೆಳಿಗ್ಗೆ ಹಣ್ಣು ತಿಂದರೆ ಒಳ್ಳೆಯದು ಎನ್ನುವುದು ಒಳ್ಳೆಯದು, ಇದರಿಂದ ಎನರ್ಜಿ ಸಿಗುತ್ತದೆ ಎನ್ನುತ್ತಾರೆ ಡಾ.ಜೈನ್.
ವಿಷಮುಕ್ತ ಹಣ್ಣುಗಳು:
ಇನ್ನು ವಿಷವೇ ಇಲ್ಲದ ಹಣ್ಣುಗಳ ಕುರಿತು ಹೇಳುವುದಾದರೆ, ಭಾರತದ ಮಟ್ಟಿಗೆ ಎರಡೇ ಎರಡು ಹಣ್ಣುಗಳು ವಿಷಮುಕ್ತವಾಗಿವೆ. ಅವು ಎಂದರೆ ಬಾಳೆಹಣ್ಣು ಮತ್ತು ಪೇರಲೆ ಹಣ್ಣು. ಬಾಳೆ ಹಣ್ಣು ಎಲ್ಲಾ ಕಡೆ ಇದೇ ಹೆಸರಿನಿಂದ ಕರೆಯುತ್ತಾರೆ, ಆದರೆ ಪೇರಲೆ ಹಣ್ಣಿಗೆ, ಚೇಪೆಕಾಯಿ, ಸೀಬೇ ಹಣ್ಣು ಎಂದೆಲ್ಲಾ ಕರೆಯುತ್ತಾರೆ. ಇದನ್ನು ಬಡವರ ಸೇಬು ಎಂದೂ ಕರೆಯುತ್ತಾರೆ. ಆದರೆ ಸೇಬು ಬೆಳೆಯುವಾಗ ಕೂಡ ಸಿಕ್ಕಾಪಟ್ಟೆ ರಾಸಾಯನಿಕ ಸಿಂಪಡಣೆ ಮಾಡಿರುತ್ತಾರೆ ಎನ್ನುವುದು ನೆನಪಿರಲಿ. ಇದೇ ಕಾರಣಕ್ಕೆ ಸಿಪ್ಪೆ ಎಸೆದು ತಿನ್ನಿ ಎಂದೂ ಕೆಲವು ವೈದ್ಯರು ಹೇಳುತ್ತಾರೆ. ಆದ್ದರಿಂದ ಬಾಳೆ ಮತ್ತು ಸೀಬೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ.
ಇದನ್ನೂ ಓದಿ: Papaya Benefits: ಹಲವು ರೋಗಕ್ಕೆ ರಾಮಬಾಣ, ಮುಖವೂ ಫಳಫಳ... ಪಪ್ಪಾಯದ ಮ್ಯಾಜಿಕ್ ಹೇಳಿದ ಡಾ.ಸೋಮೇಶ್ವರ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.